ಅಭಿಪ್ರಾಯಗಳು ಮತ್ತು ಚಿಂತನೆಗಳು

ಅಭಿವ್ಯಕ್ತಿ ಸ್ವಾತಂತ್ರ್ಯದ  ವಸ್ತು ವಿಷಯವನ್ನಿಟ್ಟು ಕೊಂಡು ಈ ಸ್ವಾತಂತ್ರ್ಯ ದಿನಾಚರಣೆಯಂದು ಬಯಲು ಬಳಗದವರು ತಮ್ಮ 60 ನೇ ಸಂಚಿಕೆಯನ್ನು ಹೊರ ತಂದಿದ್ದಾರೆ.ಓದಿ ಆನಂದಿಸಿರಿ.

೨೦೧೪ರ ಶೈಕ್ಷಣಿಕ ವರ್ಷದವರೆಗೆ ಕರ್ನಾಟಕ ಪಠ್ಯ ಪುಸ್ತಕ ಸಮಿತಿ ಕನ್ನಡ ಕಸ್ತೂರಿ ಎಂಬ ಪಠ್ಯಪುಸ್ತಕದ ೯ನೇತರಗತಿಯಲ್ಲಿ ಪರಿಚಯಿಸಿದ ಮೊದಲ ಪಾಠ ಮನಃ ಪರಿವರ್ತನೆ ಇದನ್ನು ಸದಾಶಿವ ಜಂಬಯ್ಯ ನಾಗಲೋಟಿಮಠರವರು ಬರೆದಿದ್ದರು. ಈ ಪಾಠವು ’ಒಬ್ಬ ಶಿಕ್ಷಕರು, ತಡವಾಗಿ ಶಾಲೆಗೆ ಬರುವ ಮಗುವನ್ನು ಬಡಿದು ಬುದ್ಧಿ ಹೇಳುವ ಶಿಕ್ಷಕ ಒಂದು ಕಡೆ, ಮಗು ತನ್ನ ಸಮವಸ್ತ್ರವನ್ನು ಬಿಚ್ಚಿಟ್ಟು ತನ್ನ ಬೆತ್ತಲೆ ಮೈಗೆ ಶಿಕ್ಷಕರಿಂದ ಹೊಡೆಸಿಕೊಳ್ಳುವ ಪ್ರಸಂಗ ಮತ್ತೊಂದು ಕಡೆ. ಇವುಗಳ ಮಧ್ಯೆ ಶಿಕ್ಷಕನಿಗೆ ಬಡತನದ ಪಾಠ ಕಲಿಸುವ ಮಗು, ಆ ಮಗುವಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಶಿಕ್ಷಕ ಮುಂದೆ ತಾನೇ ಸ್ವ-ಇಚ್ಚೆಯಿಂದ ಆ ಮಗುವಿಗೆ ಶಿಕ್ಷಣವನ್ನು ಕೊಡಿಸುತ್ತಾನೆ. ಆ ಹುಡುಗ ಇಂದು ದೊಡ್ಡ ಅಧಿಕಾರಿಯಾಗಿದ್ದಾನೆ’.

ನನ್ನ ವೃತ್ತಿಯ ದೈನಂದಿನ ಕೆಲಸ ಕಾರ್ಯದಲ್ಲಿ ನಾನು ನಿಯತವಾಗಿ  ಶಾಲಾ ಪೂರ್ವಮಕ್ಕಳ ಜೊತೆ ಕೆಲಸ ಮಾಡುವ  ಅಂಗನವಾಡಿ ಶಿಕ್ಷಕರ ಸಂಸರ್ಗದಲ್ಲಿರುತ್ತೇನೆ  ಮತ್ತು ಆ ಮಕ್ಕಳ ಚಟುವಟಿಕೆಯನ್ನು  ನಿಕಟವಾಗಿ ವೀಕ್ಷಿಸಲು ಅವಕಾಶ ನನಗೆ ದೊರೆಯುತ್ತದೆ. ಎಲ್ಲಾ ಮಕ್ಕಳು ಮಾತಿನಿಂದಲೇ ಸಂಭಾಷಣೆ ಮಾಡಲಾರರು. ಈ ಪುಟಾಣಿ ಮಕ್ಕಳು  ಕೆಲವೊಮ್ಮೆ  ಪದಗಳ ಮೂಲಕ ಹೇಳಬಹುದು, ಅಥವಾ ಕೆಲವೊಮ್ಮೆ  ತಾವೇನು ಹೇಳಲು ಬಯಸುತ್ತಾರೋ ಅದರೆಡೆ ಸುಮ್ಮನೆ ನಿಟ್ಟಿಸಿ ನೋಡುತ್ತಿರುತ್ತಾರೆ.ಅದರಿಂದ ಅವರ ಮನಸ್ಸಿನಲ್ಲೇನಿದೆ ಎಂದು ಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ನಮಗೆ ಸಾಧ್ಯವಿಲ್ಲದೇ ಹೋಗಬಹುದು.

ಹಳ್ಳಿ ಹೈದನ ಮುದ್ದಿನ ಶಾಲೆ ಗ್ರಾಮದ ಜನರಿಗೆ ನಲ್ಮೆಯ ಶಾಲೆ  ಅಕ್ಷರ ಕಲಿಕೆಯ ಪಾಠದ ಶಾಲೆ ಮಕ್ಕಳಿಗೊಲಿದ ಜೀವದ ಶಾಲೆ ||
ಹಸಿರನು ಚಾಚಿ ನಿಂತ ಶಾಲೆ  ಉಸಿರಿನ ಪಾಠವ ಮಾಡುವ ಶಾಲೆ ಚಿತ್ರವ ಬಿಡಿಸುವ ಚಪ್ಪರ ಶಾಲೆ  ಓಟವ ಕಲಿಸಿದ ಆಟದ ಶಾಲೆ
ಜೀವನ ಕಲಿಸಿದ ಮುದ್ದಿನ ಶಾಲೆ ||

ಆತ್ಮಸಾಕ್ಷಿ ಮೆಲ್ಲಮೆಲ್ಲನೆ ಉಸುರುವ ಹಸಿ ಹಸಿಯಾದ ಸತ್ಯದ ತುಣುಕು, ಧುತ್ತೆಂದು ಹೊಳೆಯುತ್ತಲೇ ಮಾಯವಾಗುವ ಮಂದಹಾಸದ ಕೋಲ್ಮಿಂಚು, ನನ್ನೊಳಗನ್ನು ನಾ ಬಗೆದು ನೋಡಿದಾಗ ಕೋಶಾವಸ್ಥೆಯಲ್ಲಿರುವ ಹೊಂಗಿರಣ,
ಅಡಿಯಿಂದ ಮುಡಿಯವರೆಗೆ ಎರಕ ಹೊಯ್ದಿಟ್ಟ ಸ್ವಂತಿಕೆಯ ಅಪ್ಪಟ ಛಾಯೆ, ಕೆಣಕುತ್ತಲೇ ಜೂಟಾಟವಾಡುವ ಅಂತರಂಗದ ಕನ್ನಡಿಯ ಪ್ರತಿಬಿಂಬ,,ಅಸ್ತಿತ್ವದ ಹುಡುಕಾಟಕ್ಕೆ, ಅಸ್ಮಿತೆಯ ಮಿಸುಕಾಟಕ್ಕೆ ದೊರೆತ ಅನನ್ಯ ಉತ್ತರ
ಹೆಸರಿಟ್ಟೆ ನಾ ತಣ್ಣಗೆ ಅದಕೆ ಅಭಿವ್ಯಕ್ತಿ !

ನಾವೆಲ್ಲರೂ ವರ್ತಮಾನ ಹಾಗೂ ಭವಿಷ್ಯತ್ತಿನ ನೆಲೆಯಲ್ಲಿ ಮಕ್ಕಳನ್ನು ಬಹು ನಿರೀಕ್ಷಿತ ಶೋಭಾಯಮಾನ ಕೂಸುಗಳು ಭವಿತವ್ಯದ ಸತ್ಪ್ರಜೆಗಳು ಎಂಬಂತೆ ಬುದ್ದಿಜೀವಿಗಳು ಮಾತನಾಡುವುದು, ಆ ನೆಲೆಯಲ್ಲಿ ಬೇಕಾದ ಸರ್ವ ಸಿದ್ಧತೆಗಳನ್ನು ಮಗುವಿನ ಬಾಲ್ಯ / ಬುನಾದಿಯಿಂದಲೇ ಮಾಡುತ್ತೇವೆ. ಹಾಗಾದರೆ ಸತ್ಪ್ರಜೆಗಳು ಎಲ್ಲಿ ರೂಪುಗೊಳ್ಳುತ್ತಾರೆ ?, ಹೇಗೆ ತಯಾರಾಗುತ್ತಾರೆ ? ಅವರನ್ನು ರೂಪಿಸುವವರು ಯಾರು ? ಎಂಬಂತಹ ಮೂಲಭೂತ ಪ್ರಶ್ನೆಗಳನ್ನು ಕಂಡುಕೊಳ್ಳುವ ಮಾಗಿ ಕಾಲ ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯ ಮೇಲಿರುವ ಜವಬ್ದಾರಿ. ಇದು ಕೇವಲ ಶಿಕ್ಷಣ ಇಲಾಖೆಯದ್ದೇ? ಅಥವ ಪ್ರತಿಯೊಬ್ಬ ನಾಗರೀಕನ ಮೂಲಭೂತ ಕರ್ತವ್ಯವೇ? ಈ ನೆಲೆಯಲ್ಲಿ ಯೋಚಿಸುತ್ತಿರುವಾಗ ಹತ್ತು ಹಲವು ಯೋಚನೆಗಳು ನಮ್ಮೊಳಗೆ ಮಿಂಚಿನಂತೆ ಸಂಚರಿಸುತ್ತವೆ.

ಶಾಲೆ ಪ್ರಾರಂಭವಾಗಿ ಒಂದು ತಿಂಗಳು ಕಳೆದಿತ್ತು, ಎಸ್ ಎನ್ನುವ ವಿದ್ಯಾರ್ಥಿನಿಗೆ ತಾನು ಹೇಳುತ್ತಿರುವ ಯಾವುದೇ ವಿಷಯವೂ ಅರ್ಥವಾಗುತ್ತಿಲ್ಲ, ಅವಳಿಗೆ ಹೇಳಿಕೊಡುವುದು ಹೇಗೆ ಎಂದು ನನಗೆ ತಿಳಿಯುತ್ತಿಲ್ಲ ಎಂದು ಯುಕೆಜಿ ಶಿಕ್ಷಕರಾದ ಶೀಮತಿ ಜಿ, ಬಹಳ ಚಿಂತೆಗೆ ಒಳಗಾಗಿದ್ದರು.

Iಜೀವನದಲ್ಲಿ ಯಾವುದೇ ಪರಿಸ್ಥಿತಿ ಇರಲಿ  ಇತರರು ತಮ್ಮನ್ನು ಅದರಲ್ಲಿ ಒಬ್ಬರನ್ನಾಗಿ ಸೇರಿಸಿಕೊಳ್ಳ ಬೇಕೆಂದು ಬಯಸುವುದು ಮನುಜ ಸಹಜ ಗುಣ. ಮಕ್ಕಳುತಮ್ಮ ಸುತ್ತಲ  ಜಗತ್ತಿನಲ್ಲಿ ಸಮಾಜದೊಡನೆ ಬೆರೆತು ಬಾಳಲು  ತಾತ್ಕಾಲಿಕ  ಹೆಜ್ಜೆ ಇಡುವಾಗ ಆಟದ ಮೈದಾನದಲ್ಲಿ  ಇದು ಪ್ರಾರಂಭವಾಗುತ್ತದೆ. ಕೆಲವೊಮ್ಮೆ ಇತರೆ ಮಕ್ಕಳು ಒಂದು ಚಟುವಟಿಕೆ ಅಥವಾ ಆಟದಲ್ಲಿ ಮುಳುಗಿಹೋಗಿದ್ದಾಗ  ಒಂದು ಮಗು ಅಥವಾ ಮಕ್ಕಳು ಅಂಚಿನಲ್ಲಿ  ನಿಂತು ತಮ್ಮನ್ನು ಸೇರಿಸಿಕೊಂಡಿಲ್ಲ ಎಂಬ  ಬೇಸರದಿಂದ ನಿಂತಿರುವುದು ತಮ್ಮನ್ನೂ ಸೇರಿಸಿಕೊಂಡಾಗ ಖು಼ಷಿಯಿಂದ ಆಡುವುದನ್ನು ನೀವು ನೋಡಿದ್ದೀರಿ.

ಹಾಂಗ್‌ಕಾಂಗ್‌ನಲ್ಲಿ ಕಂಡ ಒಂದು ಮೀನಿನ ಕಥೆ
ಅನುರಾಧ ನಾಯ್ಡು

ಹಳ್ಳಿ ವಾತಾವರಣ ಯಾರಿಗೆ ಇಷ್ಟವಾಗಲ್ಲ ತಾನೆ? ಅದರಲ್ಲೂ ಎಳೆ ವಯಸ್ಸಲ್ಲಿ ಮತ್ತು ಇಳಿ ವಯಸ್ಸಲ್ಲಿ ತುಂಬಾನೆ ನೆನಪಾಗುವ ಮತ್ತು ಒಂದಷ್ಟು ಸಮಯ ವಿನಿಯೋಗಿಸಬೇಕು ಅನ್ನುವ ಸುಂದರವಾದ ಜಾಗ ಅದು. ನಾನು ಹುಟ್ಟಿ ಬೆಳೆದಿದ್ದು ಹಳ್ಳಿಯಲ್ಲೇ ಆದರೂ ನನಗೇಕೂ ಇತ್ತೀಚೆಗೆ ಅತ್ತ ಕಡೆ ಹೋಗಬೇಕೆಂದು ತುಂಬಾನೆ ಹಾತೊರೆಯುವಂತಾಗುತ್ತಿಲ್ಲ.. ಅದಕ್ಕೆ ನಾನಿರುವ ಪಟ್ಟಣ ಕಾರಣವೇ ಅಥವಾ ಆ ಹಳ್ಳಿ ವಾತಾವರಣ ನನ್ನ ಕರೆಯುತ್ತಿಲ್ಲವೇ ಒಂದಷ್ಟುಯೋಚಿಸುತ್ತಿದ್ದೇನೆ.

ಪುಟಗಳು(_e):

18484 ನೊಂದಾಯಿತ ಬಳಕೆದಾರರು
7228 ಸಂಪನ್ಮೂಲಗಳು