ಪರಿಸರ ಅಧ್ಯಯನ

ಕನ್ನಡ

ಉಡದ ಪಟ್ಟು ಎನ್ನುವುದು ಕನ್ನಡದ ನಾಣ್ಣುಡಿ. ಉಡ ಒಮ್ಮೆ ಮರವನ್ನು ಗಟ್ಟಿಯಾಗಿ ಹಿಡಿಯಿತೆಂದರೆ ಅದನ್ನು ಬಿಡಿಸಲು ಆಗುವುದಿಲ್ಲ. ಉಡದ ಈ ಗುಣವನ್ನು ಅರಿತೇ ಹಿಂದೆ ರಾಜಮಹಾರಾಜರು ಉಡಗಳನ್ನು ಸಾಕುತ್ತಿದ್ದರು ಅದರ ಸೊಂಟಕ್ಕೆ ಹಗ್ಗ ಕಟ್ಟಿ ಅದನ್ನು ಶತ್ರು ಕೋಟೆಯನ್ನು ಹತ್ತಿಸುತ್ತಿದ್ದರು ತರುವಾಯ ತಾವೂ ಕೋಟೆ ಹತ್ತುತ್ತಿದ್ದರು. ಕರ್ನಾಟಕದಲ್ಲಿ ಈ ತಂತ್ರವನ್ನು ಬಳಸಿ ವಿಜಯಿಗಳಾದ ರಾಜ ವಂಶ ಇನ್ನೂಇದೆ.

ಸೊಳ್ಳೆಗೆ ಹೆದರದವರಾರು?ನಿತ್ಯ ಸೊಳ್ಳೆ ಬತ್ತಿಯ ಜಾಹೀರಾತನ್ನು ನೀವು ನೋಡುತ್ತಲೇ ಇರುತ್ತೀರಿ.ಸೊಳ್ಳೆ ತರುವ ಮಹಾ ಪಿಡುಗಾದ ಮಲೇರಿಯಾ ಕುರಿತ ಹೋರಾಟದ ಕಥೆ ಇಲ್ಲಿದೆ.

 

 

ಭೂಮಿ ಒಂದು ಸ್ಥಿರತೆಯನ್ನು ತಲುಪಿದೆ. ಜಲಚಕ್ರ, ವಾಯುಚಕ್ರ,ಜೀವಿವಲಯದ ವಿದ್ಯಮಾನಗಳ ನಡುವೆಯೂ ಭೂಮಿಯ ದ್ರವ್ಯರಾಶಿ ಬದಲಾಗದೆ ಅದೇ ಮಟ್ಟವನ್ನು ಹೊಂದಿರುತ್ತದೆ.

ವಿನಾಶಕಾಲೇ ವಿಪರೀತ ಬುದ್ಧಿ ಎಂಬುದು ನಾಣ್ಣುಡಿ. ಮನುಷ್ಯನ ಹೊಣೆಗೇಡಿತನ ಮತ್ತು ಆಸೆಬುರುಕತನ ಹೇಗೆ ಪ್ರಪಂಚದ ವಿನಾಶಕ್ಕೆ ನಾಂದಿ ಹಾಡಬಹುದು ಎಂಬುದನ್ನು ಈ ಚಿತ್ರರೂಪಕದಲ್ಲಿ ನಿರೂಪಿಸಲಾಗಿದೆ.

ನವಿಲಿನ ಅಂದ ಮೆಚ್ಚದವರಾರು? ಮುಂಗಾರು  ಮೋಡ ಮುಸುಕಿದೊಡನೆ ನವಿಲು ಗರಿಬಿಚ್ಚಿ ಕುಣಿಯುತ್ತವೆ. ಮೋಹಕ ದೃಶ್ಯ. ಇದನ್ನೇ ಕಾಗದದಲ್ಲಿ ಮಾಡಿದರೆ ಹೇಗೆ ? ಅದರಲ್ಲಿ ಎಷ್ಟು  ಜ್ಯಾಮಿತಿಯ ಲೆಕ್ಕಾಚಾರ ಇದೆ ಗೊತ್ತೆ ?

ನಾವು  ನಮ್ಮ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಡಲೆಕಾಯಿ ಸಿಪ್ಪೆ, ಹಣ್ಣಿನ ಸಿಪ್ಪೆ ಎಸೆದು ಕೊಳಕೆಬ್ಬಿಸುವುದನ್ನು ನೋಡಿರುತ್ತೇವೆ.ಒಪ್ಪ ಓರಣಗಳನ್ನು ನಾವು ಮನೆಯಲ್ಲೇ ಕಲಿಯಬೇಕು .ಪರಿಸರ ರಕ್ಷಣೆಗೊಂದು ಸಣ್ಣ ಪ್ರಯತ್ನ

Star of Bethlahem ಎಂದು ಕರೆಯುವ ಬ್ರಹ್ಮಕಮಲದ ಕಥೆ ನೋಡಿ. ಈ ಲೇಖನವನ್ನು.vidyaonline ಅವರ  ಸಂಪನ್ಮೂಲದಿಂದ ಪಡೆದು ಇಲ್ಲಿ ಪ್ರಕಟಿಸಲಾಗಿದೆ.

 ಒಂದು ತಟ್ಟೆಯಲ್ಲಿ ಮೂರು ಮೇಣದಬತ್ತಿಗಳನ್ನು ಇರಿಸಿ - ಎತ್ತರ, ಮಧ್ಯಮ ಮತ್ತು ಗಿಡ್ಡ.. ಅವುಗಳ ಬತ್ತಿಗೆ ಬೆಂಕಿ ಹತ್ತಿಸಿ ಉರಿಸಿರಿ  ಮತ್ತು ಜಾರ್ ಒಂದನ್ನು ಅವುಗಳ ಮೇಲೆ ಬೋರಲು ಹಾಕಿ.ಎತ್ತರದ ದೀಪ ಮೊದಲು ನಂದುತ್ತದೆ ನಂತರ ಮಧ್ಯದ ದೀಪ ನಂದುತ್ತದೆ. . ಗಿಡ್ಡ ದೀಪ ಬಹಳ ಹೊತ್ತು ಉರಿಯುತ್ತದೆ. ಏಕೆ?

ಪುಟಗಳು(_e):

18468 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು