ಪರಿಸರ ಅಧ್ಯಯನ

ಇದು ಖ್ಯಾತ ಕನ್ನಡ ವಿಜ್ಞಾನ ಲೇಖಕರಾದ ಪ್ರೊ|| ಜಿ.ಟಿ.ನಾರಾಯಣ ರಾವ್ ಅವರ ಕೃತಿ. ಅತ್ರಿ ಪ್ರಕಾಶನ ದವರ ಅನುಮತಿ ಪಡೆದು ಇಲ್ಲಿ ಇದರ ಕೊಂಡಿಯನ್ನು ತಮ್ಮ ಓದಿಗಾಗಿ ನೀಡಲಾಗಿದೆ.

 

ಪ್ರೊ|| ಜಿ.ಟಿ.ನಾರಾಯಣ ರಾವ್ ಅವರ ಕಿರುಪರಿಚಯ ಇಲ್ಲಿದೆ

ಮಕ್ಕಳಿಗೆ ಅವರವರ ಕುಟುಂಬ ವೃಕ್ಷದ ಬಗ್ಗೆ ತಿಳಿವಳಿಕೆ ಅವರ ಕುಟುಂಬದ ಸಂಬಂಧಗಳ ನಿಜ ಸ್ವರೂಪವನ್ನು ಅರಿಯಲು ಸಹಾಯ ಮಾಡುತ್ತದೆ. ಇದು ಹೆಮ್ಮೆಯ ವಿಷಯವೂ ಹೌದು.

ಕನ್ನಡ

ಸಮುದ್ರ ಗರ್ಭದಲ್ಲಿ ಅನೇಕ ಜೀವರಾಶಿಗಳಿವೆ.ಸಾಗರದ ಅನೇಕ ಮೃದು ದೇಹಿಪ್ರಾಣಿಗಳು ತಮ್ಮದೇಹದ ರಕ್ಷಣೆಗಾಗಿ ದಪ್ಪನೆಯ ಕವಚಗಳನ್ನು ರಚಿಸಿಕೊಂಡಿರುತ್ತವೆ. ಅವೇ ಚಿಪ್ಪುಗಳು ಮತ್ತು ಶಂಖುಗಳು.ಸಮುದ್ರ ತೀರದ ಶಂಖು ಕವಡೆ,ಚಿಪ್ಪುಗಳನ್ನು ಆಯುವುದೆಂದರೆ ಮಕ್ಕಳಿಗೇನು ದೊಡ್ಡವರಿಗೂ ಆಸಕ್ತಿಯ ವಿಷಯ.

ಹಕ್ಕಿಗಳನ್ನು ಹಾರುವ ಹೂಗಳು ಎಂದೇ ಕವಿಗಳು ವರ್ಣಿಸಿದ್ದಾರೆ. ನಗುವ ಹೂಗಳಷ್ಟೆ ಹಾರುವ ಹಕ್ಕಿಗಳು ಮಕ್ಕಳ ಮನಸ್ಸನ್ನು ಗೆಲ್ಲುತ್ತವೆ. ಅವುಗಳ ಮಧುರ ಗಾನ ,ಕಣ್ಣಾಮುಚ್ಚಾಲೆ ಆಟ ಗೂಡು ಕಟ್ಟುವ ಚಟುವಟಿಕೆ ಎಲ್ಲವೂ ಮಕ್ಕಳ ವಿಸ್ಮಯವನ್ನು ಪ್ರಚೋದಿಸುತ್ತವೆ. ಚಿಕ್ಕಂದಿನಿಂದಲೆ ಮಕ್ಕಳಲ್ಲಿ ನಿಸರ್ಗದ ಬಗ್ಗೆ ಕೌತುಕ ಮತ್ತು ಆಸಕ್ತಿಯನ್ನು ಬೆಳೆಸಿದರೆ ಅದು ಜೀವನ ಪೂರ್ತಿ ಮುಗಿಯದ ಆಸಕ್ತಿಯಾಗಿರುತ್ತದೆ.
ಇಲ್ಲೊಂದು ಚಟುವಟಿಕೆಯನ್ನು ನಿಮಗಾಗಿ ಕೊಡಲಾಗಿದೆ.

  ಮಕ್ಕಳ ದೈನಂದಿನ  ಜೀವನದಲ್ಲಿ ಒಂದೊಂದು ಘಟನೆಯೂ ಮಧುರ ನೆನಪೇ. ಮಕ್ಕಳಲ್ಲಿ ಬಣ್ಣ ಬಣ್ಣದ ಪುಸ್ತಕ ಕೊಳ್ಳುವ ಹವ್ಯಾಸ ಮೈಗೂಡಿಸಲು "ಪುಸ್ತಕ ಕೊಳ್ಳಲು ಹೋದೆವು ನಾವು" ಕೃತಿ ಪ್ರಯತ್ನ ಪಡುತ್ತದೆ ಇಲ್ಲಿ ಪುಟ್ಟು ಮತ್ತು ಪುಟ್ಟಿ ಪುಸ್ತಕದಂಗಡಿಗೆ ಹೋಗಿ ಪುಸ್ತಕ ಕೊಂಡ ಕಥೆ ಇದೆ.

ಕಲಿಕೆಗೆ ಅವಕಾಶಗಳು ಎಲ್ಲೆಡೆ ಇವೆ.ಅದನ್ನು ಗುರುತಿಸಿ ಬಳಸಿಕೊಂಡರೆ ಅವುಗಳ ಆಧಾರದ ಮೇಲೆ ಚಟುವಟಿಕೆಗಳನ್ನು ರಚಿಸಬಹುದು.
ಪ್ರತಿ ಚಟುವಟಿಕೆಯು ವಿದ್ಯಾರ್ಥಿಗಳಿಗೆ ಪರಿಸರದ ಒಂದು ಸಣ್ಣ ಭಾಗದ ಒಂದು ಅನುಭವ ನೀಡುತ್ತದೆ. ಆದರೆ ಅನುಭವದ ಈ ಸಣ್ಣ ತುಂಡುಗಳೇ ಜ್ಞಾನದ ದೊಡ್ಡ ಕಲಾಚಿತ್ರ ನಿರ್ಮಿಸಬಲ್ಲವು ಚಟುವಟಿಕೆಗಳನ್ನು ಶಾಲಾ ಮಟ್ಟದಲ್ಲಿ ಎಷ್ಟು ವೈವಿಧ್ಯ ಪೂರ್ಣ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಬಹುದು ಎಂಬುದನ್ನು ತೋರಿಸಲು ಈ ಕಲಾಚಿತ್ರದ ವಿಭಿನ್ನ ಭಾಗಗಳಿಂದ ಆರಿಸಲಾಗಿದೆ.

ಮಕ್ಕಳಲ್ಲಿ ಪರಿಸರದ ಬಗ್ಗೆ ನಿಜವಾದ ಕಾಳಜಿ ಮತ್ತು ಪ್ರೇಮ ಬರಬೇಕಾದರೆ ಅವರು ಕಲ್ಲು ಮಣ್ಣು ,ಗಿಡಮರಗಳನ್ನು ನೇರವಾಗಿ ಕಣ್ಣಿಂದ ನೋಡಿ ಕೈನಿಂದ ಮುಟ್ಟಿ, ಕಿವಿಯಾರೆ ಗಾಳಿಯ ಆರ್ಭಟ ಹಕ್ಕಿಯ ಕಲರವ,ಹೂಗಳ ಸುಗಂಧ ಮುಂತಾದವನ್ನು ಅನುಭವಿಸಬೇಕು, ಕುತೂಹಲಕ್ಕಿಂತ ಪ್ರೇರಣೆಯಿಲ್ಲ.ಅನುಭವಕ್ಕಿಂತ ಗುರುವಿಲ್ಲ.

ಕ್ಷಣ ಕ್ಷಣವೂ ಹೊಸಹೊಸತಿದು ಘನ ಗಗನ ವಿತಾನ
ದಿನದಿನ ಗ್ರಹಮಾಲೆಯ ರಿಂಗಣ ಗುಣಿತದ ತಾನ
ತಿರುತಿರುಗಿರಿ ಹೊಸತಾಗಿರಿ ಎನುತಿದೆ ಋತುಗಾನ
ಈ ಹಾಡಿಗೆ ಶ್ರುತಿ ಹಿಡಿದಿದೆ ಬ್ರಹ್ಮಾಂಡದ ಮೌನ

ನಿಸರ್ಗಕ್ಕೆ ಹೊಸತನ ತರುವುದು ಋತುಗಳು ಅವುಗಳ ಬಗ್ಗೆ ಮಕ್ಕಳಿಗೆ ಮನದಟ್ಟು ಮಾಡಿಸಲು ಈ ಅಭ್ಯಾಸಪತ್ರ ರಚಿಸಲಾಗಿದೆ.

ಕಾಲದ ಅಸೀಮ ಪರಿಧಿಯನ್ನು ವಿವರಿಸುತ್ತಾ ಕವಿ ದ.ರಾ ಬೇಂದ್ರೆಯವರು "ತಿಂಗಳಿನೂರಿನ ನೀರನು ಹೀರಿ ಮಂಗಳ ಲೋಕದ ಅಂಗಳಕ್ಕೇರಿ ಹಕ್ಕಿ ಹಾರುತಿದೆ ನೋಡಿದಿರಾ!"ಎಂದು ಹಾಡಿದರು. ಕವಿ ಕಂಡ ಸತ್ಯ ಇಂದು ನನಸಾಗುತ್ತಿದೆ.ಮಂಗಳಾಯನ ವ್ಯೋಮ ನೌಕೆ ಮಂಗಳನ ಅಂಗಳ ವನ್ನು ಸಮೀಪಿಸುತ್ತಿದೆ.

ಪುಟಗಳು(_e):

18468 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು