ಪರಿಸರ ಅಧ್ಯಯನ

ಬೆಳೆಯುತ್ತಿರುವ ಜೀವ ನೋಡಲು ಬಲು ವಿಸ್ಮಯ ಮತ್ತು ಮೋಜಿನ ಸಂಗತಿ ಆಗಿರುತ್ತದೆ. ಇದು ಎಲ್ಲಾ ತರಗತಿಗೂ ಸೂಕ್ತವಾದ ಆಸಕ್ತಿದಾಯಕ ಚಟುವಟಿಕೆಯಾಗಿದೆ.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಇದಕ್ಕಾಗಿ ನಾವು ನಮ್ಮ ನಿಕಟ ಪರಿಸರದಲ್ಲಿನ ಜೀವಿಸಂಪತ್ತಿನ ಬಗ್ಗೆ ಅರಿತುಕೊಳ್ಳ ಬೇಕಾದ ಅಗತ್ಯವಿದೆ. ಕರ್ನಾಟಕದ ಮಾಹಿತಿ ಸಂಪನ್ಮೂಲವಾಗಿ ಕರ್ನಾಟಕ ಅರಣ್ಯ ಇಲಾಖೆ ಪ್ರಕಟಿಸಿರುವ ಈ ಮಾಹಿತಿಯನ್ನು ಇ -ಪುಸ್ತಕವಾಗಿ ನೀಡುತ್ತಿದ್ದೇವೆ.

ನಮಗೆ ಬೆಳಗಾಗುವುದೇ ಕೋಳಿ ಕೂಗುವುದರಿಂದ, ಹಕ್ಕಿಗಳ ಕಲರವದಿಂದ." ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳ ಹಾಡು" ಎಂದು ಕವಿ ಬೇಂದ್ರೆಯವರು ಬೆಳಗನ್ನು ವರ್ಣಿಸಿದ್ದಾರೆ .ಹಕ್ಕಿಗಳ ಕಲರವವಿಲ್ಲದ ಹಗಲನ್ನು ಕೀಟಗಳ ಕರಕರವಿಲ್ಲದ ನೀರವ ಜಗತ್ತನ್ನು ಊಹಿಸುವುದೂ ಅಸಾಧ್ಯ ಹಕ್ಕಿಗಳು ಕಿವಿಗೆ ಮಾತ್ರವಲ್ಲ ಕಣ್ಣಿಗೂ ತಂಪು ಅವುಗಳ ವರ್ಣ ವೈವಿಧ್ಯ ಅಪಾರ. ಮಕ್ಕಳಿಗೆ ಜೀವ ಜಗತ್ತಿನ ಬಗ್ಗೆ ಮತ್ತು ಪರಿಸರದ ಬಗ್ಗೆ ಒಲವು ಬರಿಸಬೇಕಾದರೆ ಅವರಿಗೆ ಹಕ್ಕಿಗಳನ್ನು ವಾರಕ್ಕೆ ಒಮ್ಮೆಯಾದರು ಕುಳಿತು ಗಮನಿಸುವ ಆಭ್ಯಾಸ ಚಿಕ್ಕಂದಿನಿಂದಲೇ ಮಾಡಿಸಬೇಕು. ಯಾವ ಹಕ್ಕಿ ಏನನ್ನು ತಿನ್ನುತ್ತವೆ.ಸಸ್ಯಾಹಾರಿಯೇ ? ಕೀಟಾಹಾರಿಯೇ? ಮಾಂಸಾಹಾರಿಯೇ?

ನಾವು ತರಗತಿಯಲ್ಲಿ ಪಾಠ ಮಾಡುವ ಸಿದ್ಧಾಂತ, ವಿಜ್ಞಾನ ಮತ್ತು ಯಾವುದೇ ವಿಷಯವಾಗಲಿ ಹೊರಜಗತ್ತಿನಿಂದ ಹೊರತಾದುದಲ್ಲ.ಅದಕ್ಕೂತರಗತಿಯ ಪಾಠಕ್ಕೂ ಸಂಬಂಧ ಕಲ್ಪಿಸಿ ಪಾಠಮಾಡಿದಾಗ ಮಕ್ಕಳಿಗೆ ವಿಷಯ ಹೆಚ್ಚು ಮನದಟ್ಟಾಗುತ್ತದೆ. ಅಂಥ ಒಂದು ಪ್ರಯತ್ನವನ್ನು ಈ ವಿಡಿಯೋದಲ್ಲಿ ಕಾಣಬಹುದು.

ಪುಟಗಳು(_e):

18461 ನೊಂದಾಯಿತ ಬಳಕೆದಾರರು
7223 ಸಂಪನ್ಮೂಲಗಳು