ಈ ಅಂಕಣಕ್ಕೆ ಕುಡುಗೆ ನೀಡಿ ಶಾಲಾ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯತಿಯ ಪಾತ್ರ.

ನಾನು  2005ನೇ  ಸಾಲಿನಲ್ಲಿ  ಅಜೀಂ  ಪ್ರೇಮ್‍ಜೀ  ಪೌಂಡೇಷನ್ನಿಗೆ  ಸೇರಿಕೊಂಡು ನಾರಾಯಣಪೂರ ವ್ಯಾಪ್ತಿಯಲ್ಲಿನ 13 ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದೆ. ಪ್ರಾರಂಭದಲ್ಲಿ ಶಾಲೆಗಳಿಗೆ ಭೇಟಿ ನೀಡುವುದು ಶಾಲಾ ಅಭಿವೃದ್ಧಿಗೆ ಸಂಭಂಧಿಸಿದಂತೆ 214 ಸಂಕೇತಗಳ ಅಭಿವೃದ್ಧಿಯಲ್ಲಿ ಶಿಕ್ಷಕರ ಜೊತೆಗೆ, ಸಮುದಾಯದೊಂದಿಗೆ, ಹಾಗು ಮಕ್ಕಳು ಮತ್ತು ಇಲಾಖಾ ಅಧಿಕಾರಿಗಳೊಂದಿಗೆ ಕೆಲಸ ಮಾಡತ್ತಿದ್ದೆ. ಹೀಗೆ ಕೆಲಸ ಮಾಡುತ್ತಿರುವಾಗಲೇ 2012 ರಲ್ಲಿ ನಾರಾಯಣಪೂರದಿಂದ ಮುದನೂರ ಕ್ಲಸ್ಟರಗೆ ವರ್ಗಾವಣೆಗೊಂಡು 11 ಶಾಲೆಗಳ ಜೊತೆಗೆ ಕೆಲಸ ಮಾಡಲು ಪ್ರಾರಂಭಿಸಿದೆನು. ಮೊದಲು ಮಾಡಿತ್ತಿದ್ದ ಕೆಲಸದ ಜೊತೆಗೆ ಗ್ರಾಮ ಪಂಚಾಯತಿಯ   ಕೆಲಸ   ಮಾಡುವುದಾಗಿ   8  ಪಂಚಾಯತಿಗಳನ್ನು   ಆಯ್ಕೆಮಾಡಿಕ್ಕೊಳ್ಳಲಾಯಿತು.

ಮುದನೂರ ಕ್ಲಸ್ಟರಿನ 7 ಶಾಲೆಗಳಲ್ಲಿ ಶಾಲಾಭಿವೃದ್ಧಿ ಯೋಜನೆ ಮಾಡುತ್ತಿರುವ ಸಂಧರ್ಭಗಳಲ್ಲಿ ಮುಖ್ಯವಾಗಿ ಪಂಚಾಯತಿ ಮಾಡುವ ಸುಮಾರು 8 ಕ್ಕಿಂತ ಹೆಚ್ಚು ಕೆಲಸಗಳು ಕಂಡುಬಂದವು. ಈ ಕೆಲಸಗಳನ್ನು ಅಭಿವೃದ್ಧಿಗೊಳಿಸಲು ಪಂಚಾಯತಿಯಲ್ಲಿ ಯಾರು ಸೂಕ್ತವಾದ ವ್ಯಕ್ತಿ ಎಂದು ಶಿಕ್ಷಕರ ಮತ್ತು ಸಮುದಾಯದಿಂದ ಕೇಳಿ ತಿಳಿದುಕೊಂಡೆನು. ಆ ವ್ಯಕ್ತಿಯೇ ಶ್ರೀ ಶಾಂತರೆಡ್ಡಿ, ಚೌಧರಿ ಗ್ರಾಮ ಪಂಚಾಯತಿಯ ಉತ್ತಮ ಸದಸ್ಯರು. ಅವರನ್ನು ಭೇಟಿಮಾಡಿ ಶಾಲಾ ಅಭಿವೃದ್ಧಿಗೆ ಸಂಭಂಧಿಸಿದಂತೆ ಮುಖ್ಯವಾಗಿ ಗ್ರಾಮ ಪಂಚಾಯತಿ ಮಾಡುವ ಕೆಲಸಗಳನ್ನು ಅವರ ಜೊತೆಗೆ ಚರ್ಚಿಸಿದೆನು. ಅವು ಈ ಕೆಳಗಿನಂತಿವೆ,

1. ಎಸ್,ಡಿ, ಎಮ್,ಸಿ, ಯ ರಚನೆ.
2. ಶಾಲಾ ಕಂಪೌಂಡು ನಿರ್ಮಾಣ.
3. ಆಟದ ಮೈಧಾನ ಸಮತಟ್ಟು ಮಾಡುವುದು.
4. ಕುಡಿಯುವ ನೀರಿನ ವ್ಯವಸ್ಥೆ.
5. ಶಾಲೆಗಳಲ್ಲಿ ಸಸಿಗಳನ್ನು ನೆಡಿಸುವುದು ಮತ್ತು ಕೈ ತೋಟಗಳ ನಿರ್ಮಾಣ.
6. ಮುಖ್ಯ ಗುರುಗಳ ಸಭೆಮಾಡುವುದು.
7. ಮಕ್ಕಳ ಹಾಜರಾತಿ ಮತ್ತು ಕಲಿಕೆ ಹೆಚ್ಚಿಸುವುದು.
8. ಮಕ್ಕಳ ಕಲಿಕಾ ಮೇಳ.
ಮಕ್ಕಳ ಪ್ರತಿಭೆಗಳನ್ನು ಗುರ್ತಿಸಿ ಪ್ರೋತ್ಸಾಹಿಸುವುದು. ಹೀಗೆ ಈ ಎಲ್ಲಾ ವಿಷಯಗಳನ್ನು ಚರ್ಚಿಸುವಾಗ ಮೊದಲು ಬಂದ ಪ್ರಶ್ನೆ ಎಸ್.ಡಿ.ಎಮ್.ಸಿ ರಚನೆ ಮಾಡುವುದು ನಮ್ಮ ಕೆಲಸವೇ ಎಂಬುದು, ಇದನ್ನು ಸರಕಾರದ ನಿಯಮಾನುಸಾರ ಪಂಚಾಯತಿಯೇ ಮಾಡಬೇಕಾಗುವುದೆಂದು ಮತ್ತು ಶಾಲೆಗಳ ಸಮಸ್ತ ಅಭಿವೃದ್ಧಿಗೆ ಮೂಲ ಅಡಿಪಾಯ ಪಂಚಾಯತಿ ಎಂಬುದನ್ನು ಸಮಕ್ಷಮ ಪುಸ್ತಕದಲ್ಲಿನ ಎಸ್.ಡಿ.ಎಮ್.ಸಿ ರಚನೆಯ ಮಾಹಿತಿಯನ್ನು ತೋರಿಸಿ ಚರ್ಚಿಸಿದೆನು. ಇದನ್ನು ಪರೀಕ್ಷಿಸಲು ಮೊದಲಿಗೆ ಎಸ್.ಡಿ.ಎಮ್.ಸಿ ರಚನೆಯ ಬಗ್ಗೆ  ವಿಷಯವನ್ನು ತೆಗೆದುಕೊಂಡು ನನ್ನಿಂದಲೇ ಎಲ್ಲಾ ಮುಖ್ಯಗುರುಗಳ ಮೋಬೈಲ್ ಸಂಖೈಗಳನ್ನು ತೆಗೆದುಕೊಂಡು ಎಲ್ಲಾ ಶಾಲೆಗಳ, ಎಸ್.ಡಿ.ಎಮ್.ಸಿ.ಗಳ ಸ್ಥಿತಿಗಳ ಬಗ್ಗೆ ಮತ್ತು ಶಾಲಾ  ಸಮಸ್ಯೆಗಳನ್ನು  ಮನವಿ  ಮೂಲ ಅರ್ಜಿಗಳನ್ನು  ಕೊಡುವಂತೆ  ಸೂಚಿಸಿತು.  ಅವರ  ಸೂಚನೆಯಂತೆ  ಎಲ್ಲಾ ಶಾಲೆಗಳು ಎಸ್.ಡಿ.ಎಮ್.ಸಿ.ಯ ರಚನೆಯ ಬಗ್ಗೆ ಮತ್ತು ಶಾಲೆಯ ಸಮಸ್ಯೆಗಳ ಬಗ್ಗೆ ಮನವಿಗಳನ್ನು ನೀಡಿದರು. ಈ ಮನವಿಗಳನ್ನು ಗ್ರಾಮ ಪಂಚಾಯತಿಯು ಪರಿಶೀಲಿಸಿ ಮೊದಲಿಗೆ ಎಸ್.ಡಿ.ಎಮ್.ಸಿ. ರಚನೆಯ ಬಗ್ಗೆ ಎಲ್ಲಾ ಶಾಲೆಗಳಿಗೂ ದಿನಾಂಕಗಳನ್ನು ನಿಗದಿಪಡಿಸಿತು. ನಿಗದಿ
ಪಡಿಸಿದ ದಿನಾಂಕದಂತೆ ಮೊದಲಿಗೆ ಹೆಚ್.ಪಿ.ಎಸ್. ಮುದನೂರ ಬಿ. ಶಾಲೆಯಲ್ಲಿ ಎಸ್.ಡಿ.ಎಮ್.ಸಿ. ರಚನೆಯನ್ನು ಮಾಡಲು ನಿರ್ಧರಿಸಿದರು. ರಚನೆ ಮಾಡುವಾಗ ನನ್ನನ್ನು ಕರೆದಿದ್ದರು.
ನನಗೂ ಎಸ್.ಡಿ.ಎಮ್.ಸಿ. ರಚನೆ ಮಾಡುವ ಬಗ್ಗೆ ತುಂಬಾ ಆತಂಕವಿತ್ತು, ಕಾರಣ ಈ ಸ್ಥಳ ಹೊಸದಾಗಿರುವುದು. ಆದರೂ ದೈರ್ಯಗೆಡದೆ ಆ ಶಾಲೆಗೆ 2 ಗಂಟೆಗಳ ಮುಂಚಿತವಾಗಿಯೇ ಹೋಗಿ ಎಲ್ಲಾ ಶಿಕ್ಷಕರು, ಗ್ರಾಮ ಪಂಚಾಯತಿ ಸದಸ್ಯರು, ಹಾಗು ಅಧಿಕಾರಿಗಳೊಂದಿಗೆ ಚರ್ಚಿಸಿದೆನು. ಆ ಚರ್ಚೆಗೂ ಮುನ್ನ ಹಿಂದಿನ ದಿನ ಎಲ್ಲಾ ಸಮುದಾಯದವರ ಮನೆಮನೆ ಬೇಟಿ ಮಾಡಿ ಎಸ್.ಡಿ.ಎಮ್‍ಸಿ. ರಚನೆಗಾಗಿ ಪಾಲಕರ ಮನವೋಲಿಸಿದೆವು. ಆ ಸಂದರ್ಭದಲ್ಲಿಯೇ ನನಗೆ ಸ್ವಲ್ಪ ಧೈರ್ಯ ಬಂದಿತು. ಈ ದಿನ ಎಸ್.ಡಿ.ಎಮ್.ಸಿ ರಚನೆಗೂ ಮುನ್ನ ರಚನೆಗೆ ಬೇಕಾದ ಎಲ್ಲಾ ದಾಖಲೆಗಳನ್ನು ಸಿದ್ದಪಡಿಸಿಕೊಂಡಿದ್ದೆನು. ಎಸ್.ಡಿ.ಎಮ್.ಸಿ. ಎಂದರೇನು? ಎಸ್.ಡಿ.ಎಮ್.ಸಿ. ಶಾಲೆಗೆ ಏಕೆ ಬೇಕು? ಅದರ ಕರ್ತವ್ಯಗಳೇನು? ಅದನ್ನು ಹೇಗೆ ರಚಿಸಬೇಕು? ಈ ಎಲ್ಲಾ ವಿಷಯಗಳನ್ನು ತಿಳಿದುಕೊಂಡಿದ್ದೆನು. ಇದು ಈ ಶಾಲೆಯ ಎಸ್.ಡಿ.ಎಮ್.ಸಿ. ರಚನೆ ಮಾಡಲು ತುಂಬಾ ಸಹಕಾರಿಯಾಯಿತು. ಎಸ್.ಡಿ.ಎಮ್.ಸಿ. ರಚನೆ ಪ್ರಾರಂಬಿಸುವುದಕ್ಕಿಂತ ಮುಂಚೆಯೇ ಹಿಂದಿನ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ರಮೇಶ ಕೊಳ್ಳಿಯವರು ಸಿಟ್ಟಿನಿಂದ ಏನು ಮಾಡುತ್ತಿದ್ದೀರಿ ಮೇಷ್ಟ್ರೇ ಎಂದರು. ಅದಕ್ಕೆ ಪ್ರಧಾನ ಗುರುಗಳು ಎಸ್.ಡಿ.ಎಮ್.ಸಿ. ರಚನೆಯನ್ನು ಗ್ರಾಮ ಪಂಚಾಯತಿ ಸೂಚನೆ ಮೇರೆಗೆ ಮಾಡುತ್ತಿರುವುದಾಗಿ ಹೇಳಿದರು. ಅದಕ್ಕೆ ಅವರು ಇಷ್ಟು ವರ್ಷ ಇಲ್ಲದ್ದು ಈಗ ಎಸ್.ಡಿ.ಎಮ್.ಸಿ. ರಚನೆ ಎಲ್ಲಿಂದ ತಂದಿರಿ? ಎಂದು ಪ್ರಶ್ನಿಸಿದಾಗ ಮದ್ಯ ಪ್ರವೇಶಿಸಿದ ನಾನು ಎಸ್.ಡಿ.ಎಮ್.ಸಿ. ಯ ರಚನೆ ಪ್ರತೀ ಮೂರು ವರ್ಷಕ್ಕೊಮ್ಮೆ ರಚಿಸುವ ಸರಕಾರದ ನಿಯಮಗಳನ್ನು ಅತೀ ಸೂಕ್ಷ್ಮತೆಯಿಂದ ತಿಳಿಸಿದೆನು. ಅದಕ್ಕೆ ಏನು ದಾಖಲೆಗಳಿವೆ ಎಂದು ಪುನಃ ಪ್ರಶ್ನಿಸಿದರು. ನಾನು ಸಂಗ್ರಹಿಸಿದ ಎಸ್.ಡಿ.ಎಮ್.ಸಿ. ರಚನೆ ಹಾಗು ಕರ್ತವ್ಯಗಳನ್ನು ದಾಖಲೆಗಳನ್ನು ಅವರಿಗೆ ತೋರಿಸಿದೆನು. ಅದನ್ನು ಓದಿಕೊಂಡ ಮೇಲೆ ಅವರು ಎಸ್.ಡಿ.ಎಮ್.ಸಿ. ರಚನೆಗೆ ಒಪ್ಪಿಗೆ ಸೂಚಿಸಿದರು. ಆಗ ನನಗಾದ ಸಂತೋಷ ಅಷ್ಟಿಷ್ಟಲ್ಲ. ಸ್ವರ್ಗವೇ ನನ್ನ ಕೈಯಲ್ಲಿದೆ ಎಂದು ಭಾವಿಸಿದೆನು. ನಂತರ  ಸಮುದಾಯದ ಜೊತೆಗೆ  ಎಸ್.ಡಿ.ಎಮ್.ಸಿ.  ರಚನೆ  ಹೇಗಿರಬೇಕು? ಅದರ ಕರ್ತವ್ಯಗಳೇನು? ಹಾಗು ಶಾಲಾಭಿವೃದ್ದಿಯಲ್ಲಿ ಎಸ್.ಡಿ.ಎಮ್.ಸಿ. ಯವರ ಪಾತ್ರ ಹೇಗೆ ಕೆಲಸ ಮಾಡುತ್ತದೆ ಎಂಬುವದರ ಬಗ್ಗೆ ಪ್ರತಿಯೊಂದು ವಿಷಯಗಳನ್ನು ಅವರೊಂದಿಗೆ ಹಂಚಿಕೊಂಡೆನು.ಪ್ರಾಸ್ತಾವಿಕವಾಗಿ ಎಸ್.ಡಿ.ಎಮ್.ಸಿ. ಯ ರಚನೆ ಬಗ್ಗೆ ಮಾತನಾಡಲು ಬಿಟ್ಟದ್ದು ನನಗೆ ಬಹಳ ಒಳ್ಳೆಯದಾಗಿತ್ತು. ಇದಾದ ನಂತರ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗು ಅಧ್ಯಕ್ಷರು ಸಮುದಾಯಕ್ಕೆ ನಾನು ಹೇಳಿದ ನಿಯಮದ ಅನುಸಾರ ತಮ್ಮಲ್ಲಿಯೇ 13 ಜನ ಸದಸ್ಯರನ್ನುಹಾಗು ಅದರಲ್ಲಿರುವ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. ಕೊನೆಗೆ ಹಳೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷರನ್ನು ಗೌರವದೊಂದಿಗೆ ಹಿಂದೆ ಅವರು ಮಾಡಿದ ಕೆಲಸಗಳ ಬಗ್ಗೆ ಹೊಗಳುತ್ತಾ ಮುಂದೆ ಆಯ್ಕೆಗೊಂಡ ಅಧ್ಯಕ್ಷರು ಹಾಗು ಸದಸ್ಯರು ಶಾಲಾ ಅಭಿವೃದ್ದಿಗಾಗಿ ಚೆನ್ನಾಗಿ ಕೆಲಸ ಮಾಡುವಂತೆ ಹೇಳಿ ಮುಕ್ತಾಯಗೊಳಿಸಲಾಯಿತು. ಇಲ್ಲಿಂದ ಶುರುವಾಯಿತು ನೋಡಿ ಪಂಚಾಯತಿಯೊಂದಿಗಿನ ಒಡನಾಟ ಈ ಶಾಲೆಯ ಎಸ್.ಡಿ.ಎಮ್.ಸಿ. ರಚನೆ ವiಡಿದ 15 ದಿನಗಳ ಒಳಗಾಗಿ ಪಂಚಾಯತಿಯು ಎಲ್ಲಾ ಶಾಲೆಗಳಲ್ಲಿ ಎಸ್.ಡಿ.ಎಮ್.ಸಿ. ರಚನೆ ಮಾಡಿಯೇ ಬಿಟ್ಟಿತು. ಅದರ  ಜೊತೆಗೆ  ಶಾಲಾ  ಸಮಸ್ಯಗಳನ್ನು  ಪಂಚಾಯತಿಯ  ಸಭೆಗಳಲ್ಲಿ  ಮುಖ್ಯಗುರುಗಳು  ಹಾಗು  ಸಿಆರಪಿ  ಯವರನ್ನು  ಕರೆಯಿಸಿ ಚರ್ಚಿಸಲಾರಂಭಿಸಿತು.ಈ ವಿಷಯಗಳನ್ನು ಎಲ್ಲಾ ಸದಸ್ಯರು ಬ್ಲಾಕ್ ಮೀಟಿಂಗನಲ್ಲಿ ಚರ್ಚಿಸಿದಾಗ ಶ್ರೀ ರುದ್ರೇಶರವರು ಪಂಚಾಯತಿಯವರನ್ನು ಕೇರಳಕ್ಕೆ ಎಕ್ಷಪೋಸರ್ ವಿಸಿಟ್‍ಗಾಗಿ ಕರೆದುಕೊಂಡು ಹೋಗಲು ಹೇಳಿದರು. ಅವರು ಹೇಳಿದಂತೆ ಒಬ್ಬರು ಪಿ.ಡಿ.ಓ, ಒಬ್ಬರು ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಒಬ್ಬ ಕ್ರಿಯಾಶೀಲ ಸದಸ್ಯರನ್ನು ಕರೆದುಕೊಂಡು ಎಕ್ಷಪೋಜರ ವಿಜಿಟಗೆ ಹೋದೆವು. ಅಲ್ಲಿ ಗ್ರಾಮ ಪಂಚಾಯಿತಿಯ ಉತ್ತಮ ಕೆಲಸಗಳ ಬಗ್ಗೆ ಮತ್ತು ಉತ್ತಮ ಶಾಲೆಗಳನ್ನು ತೋರಿಸಿಕೊಂಡು ಬಂದೆವು.

ಕೇರಳದಲ್ಲಿ ತಾವು ನೋಡಿದ ಶಾಲೆಗಳು ಹಾಗು ಮಕ್ಕಳ ಕಲಿಕೆಯನ್ನು ನಮ್ಮ ಪಂಚಾಯತಿಯ ಪಿ.ಡಿ.ಓ ಅಧ್ಯಕ್ಷರು ಹಾಗು ಶಾಂತರೆಡ್ಡಿ ಚೌದ್ರಿ ಸದಸ್ಯರು ಪಂಚಾಯತಿಯಲ್ಲಿನ ಉಳಿದೆಲ್ಲಾ ಸದಸ್ಯರಿಗೆ ಈ ವಿಷಯವನ್ನು ಹಂಚಿಕೊಳ್ಳುತ್ತಾ ತಮ್ಮ ಪಂಚಾಯತಿ ಕಡೆಯಿಂದ ಮೇಳ ಮಾಡಲು ನಿರ್ಧರಿಸಿದರು ಆ ಮೇಳದ ಪರಿಕಲ್ಪನೆಯ ಬಗ್ಗೆ ನಾನು ಪೂರ್ಣ ಚಿತ್ರಣ ನೀಡಿದೆನು. ಹಾಗೆಯೇ ಅವರ ಜೊತೆಗೆ ಎಲ್ಲಾ ಶಾಲೆಗಳಿಗೆ ಗ್ರಾಮ ಪಂಚಾಯತಿ ತಂಡದೊಂದಿಗೆ ಭೇಟಿ ನೀಡುತ್ತಾ ಈ ಕೆಳಕಂಡ ವಿಷಯಗಳನ್ನು ಗ್ರಾಮ ಪಂಚಾಯಿತಿಯವರು ಶಿಕ್ಷಕರೊಂದಿಗೆ ಚರ್ಚಿಸಿದರು.
1. ಎಸ್.ಡಿ.ಎಮ್.ಸಿ. ಹೇಗೆ ಕಾರ್ಯನಿರ್ವಹಿಸುತ್ತದೆ
2. ಮಕ್ಕಳ ಕಲಿಕೆ ಮತ್ತು ಹಾಜರಾತಿ ಹೇಗಿರಬೇಕು
3. ಗೈರು ಹಾಜರಾದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಬಗ್ಗೆ
4. ಶಿಕ್ಷಕರ ಸಮಸ್ಯಗಳು ಮತ್ತು ಕೊರತೆಗಳ ಬಗ್ಗೆ
5. ತರಗತಿ ಕೊಠಡಿಗಳ ಬಗ್ಗೆ
6. ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳಿಗೆ ಸನ್ಮಾನಿಸುವುದರ ಬಗ್ಗೆ
7. ಉತ್ತಮ ಪಾಠಬೋಧನೆ ಮಾಡಿದ ಶಿಕ್ಷಕರಿಗೆ ಪ್ರಶಸ್ತಿ ಮತ್ತು ಸನ್ಮಾನಿಸುವುದು
8. ಶಾಲಾ ಆಟದ ಮೈದಾನವನ್ನು ಸಮತಟ್ಟಾಗಿಸುವುದು
9. ಕಂಪೌಂಡ ವ್ಯವಸ್ಥೆ
10.ಕುಡಿಯುವ ನೀರು
ಹೀಗೆ ಅನೇಕ ವಿಷಯಗಳ ಬಗ್ಗೆ ಮಾತನಾಡುತ್ತಾ ಮುಂದಿನ ವಾರದಲ್ಲಿ ಪಂಚಾಯತಿ ಆಯೋಜಿಸಿರುವ ಮೇಳಕ್ಕೆ ಪ್ರತೀ ಶಾಲೆಯಿಂದ 5 ಕ್ಕೂಹೆಚ್ಚು ವಿಷಯಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಮಕ್ಕಳಿಂದ ತಯಾರಿಸಿಕೊಂಡು ಬಂದು ಮೇಳದಲ್ಲಿ ಪ್ರದರ್ಶಿಸಲು ಸೂಚಿಸಿದರು. ಅವರು ಸೂಚಿಸಿದ ದಿನಾಂಕ 31 -12- 2013 ಮೇಲವನ್ನು ಹಮ್ಮಿಕೊಂಡು ಪ್ರತೀ ಶಾಲೆಯಿಂದ ಬಂದಂತ ಮಕ್ಕಳಿಗೆ ಮೇಳದಲ್ಲಿ ಭಾಗವಹಿಸಲು ಎಲ್ಲಾ ವ್ಯವಸ್ತೆಯನ್ನು ಮಾಡಿಕೊಟ್ಟರು. ನಂತರ ಸಾಯಂಕಾಲ ತಾವು ಹೇಳಿದ ಹಾಗೆ ಪ್ರತಿ ಶಾಲೆಯ ತರಗತಿಗೊಬ್ಬ ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳಿಗೆ ಸನ್ಮಾನಿಸಿ ಪ್ರಶಸ್ತಿ ನೀಡಿದರು. ಹಾಗೆಯೇ ಪ್ರತೀ ಶಾಲೆಯಿಂದ ಉತ್ತಮ ಪಾಠಬೋಧನೆ ಮಾಡಿದ ಶಿಕ್ಷಕರಿಗೆ ಸನ್ಮಾನಿಸಿ ಪ್ರಶಸ್ತಿಯನ್ನು ವಿತರಿಸಿದರು. ಈ ಮೇಳಕ್ಕೆ ಪಂಚಾಯಿತಿಯು ಸುಮಾರು 60,000 ರೂಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡಿ ಈ ಮೇಳವನ್ನುಯಶಸ್ವಿಗೊಳಿಸಿತ
ನಂತರದ ದಿನಗಳಲ್ಲಿ ಪಂಚಾಯತಿಯು ತಾವು ಶಾಲೆಗಳಿಂದ ಪಡೆದ ಮನವಿಗಳನ್ನು ಗಮನಿಸುತ್ತಾ ಅವಶ್ಯಕತೆಗನುಸಾರವಾಗಿ ಪ್ರತೀ ಶಾಲೆಗಳಲ್ಲಿ
ಕಾಮಗಾರಿಗಳನ್ನು ಹಮ್ಮಿಕೊಂಡರು. ಅವು ಈ ಕೆಳಗಿನಂತಿವೆ.
1. ಆಟದ ಮೈದಾನ ಸಮತಟ್ಟಾಗಿಸುವುದು (ಸ.ಹಿ.ಪ್ರಾ.ಶಾಲೆ ರಾಂಪೂರ ಮತ್ತು ಪ್ರೌಡ ಶಾಲೆ ಮುದನೂರ)
2. ಕುಡಿಯುವ ನೀರು (ಸ.ಕಿ.ಪ್ರಾ.ಶಾಲೆ ಮುದನೂರ, ಸ.ಹಿ.ಪ್ರಾ.ಶಾಲೆ ರಾಂಪೂರ, ಸ.ಕಿ.ಪ್ರಾ.ಶಾಲೆ ಕನ್ಯಾ ಮುದನೂರ)
3. ಕಂಪೌಂಡ ವ್ಯವಸ್ತೆ (ಸ.ಹಿ.ಪ್ರಾ.ಶಾಲೆ ರಾಂಪೂರ, ಸ.ಹಿ.ಪ್ರಾ.ಶಾಲೆ ಜೆ.ಸಿ.ಮುದನೂರ, ಸ.ಹಿ.ಪ್ರಾ.ಶಾಲೆ ಮುದನೂರ.ಬಿ)
4. ವಿದ್ಯುತ್ ಕಂಬ ಹಾಕಿಸುವುದು (ಸ.ಕಿ.ಪ್ರಾ.ಶಾಲೆ ಕನ್ಯಾ ಮುದನೂರ)
ಲೇಖಕರು:ಮಲ್ಲೇಶಿ ವಗ್ಗರ(ಬಯಲು ಅಗಸ್ಟ್ 2015 ನಿಂದ)

19203 ನೊಂದಾಯಿತ ಬಳಕೆದಾರರು
7451 ಸಂಪನ್ಮೂಲಗಳು