ಗೋಪ್ಯತಾ ಕಾರ್ಯನೀತಿ

     ಈ ದಾಖಲೆಯಲ್ಲಿ ತಾವು  www.teachersofindia.org  ಪೋರ್ಟಲ್ಗೆ ಸಲ್ಲಿಸುವ ವೈಯುಕ್ತಿಕ ಮಾಹಿತಿ ಕುರಿತು ನಮ್ಮ ನೀತಿಯನ್ನು ಸ್ಪಷ್ಟ ಪಡಿಸಲಾಗಿದೆ.

ನೋಂದಣಿ ಮತ್ತು ಕಿರು ಪರಿಚಯದ ಮಾಹಿತಿ.

     ಈ ಅಂತರ್ಜಾಲ ವೇದಿಕೆಯ ಕೆಲವೊಂದು ಅಂಶಗಳನ್ನು ಬಳಸಿಕೊಳ್ಳುವ ಸಲುವಾಗಿ ನೀವು ಈ ತಾಣದಲ್ಲಿ ನೋಂದಣಿ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ.  ನೋಂದಾಯಿಸಿ ಕೊಳ್ಳುವ ಕಾಲದಲ್ಲಿ ನೀವು ನಿಮ್ಮ ಇ ಮೇಲ್ ವಿಳಾಸ, ಮುಂತಾದ ಸಂಪರ್ಕ ಮಾಹಿತಿಯನ್ನು ಒದಗಿಸಬೇಕಾಗುತ್ತದೆ ಮತ್ತು ಪೋರ್ಟಲ್ಲಿಗಾಗಿ ಒಂದು ಪ್ರವೇಶ ಪದವನ್ನು ರಚಿಸಬೇಕಾಗುತ್ತದೆ.  ನಿಮ್ಮ ಭದ್ರತೆಯ ಉದ್ದೇಶಕ್ಕಾಗಿ ಹೇಳುವುದೇನೆಂದರೆ, ಈ ಪ್ರವೇಶ ಪದವು ನಿಮ್ಮ ಇಮೇಲ್ ಪ್ರವೇಶ ಪದವಾಗಿರಬಾರದು.  ಬೇರೆಯದ್ದೇ ಆಗಿರಬೇಕು.

     ಪೋರ್ಟಲ್ಲಿನಲ್ಲಿ ನೀವು ನಿಮ್ಮ ಹಿನ್ನೆಲೆ, ಒಲವುಗಳು, ಚಟುವಟಿಕೆಗಳು ಮುಂತಾದ ವಿವರವಿರುವ ಕಿರುಪರಿಚಯವನ್ನು ಸಿದ್ಧಪಡಿಸಬಹುದು.  ಈ ಮಾಹಿತಿಯು ಪೋರ್ಟಲ್ಲಿನ ಸಮುದಾಯದ ಇದೇ ರೀತಿಯಲ್ಲಿ ಆಲೋಚಿಸುವ ಇತರ ವ್ಯಕ್ತಿಗಳೊಂದಿಗೆ ನಿಮಗೆ ಸಂಪರ್ಕ  ಒದಗಿಸುತ್ತದೆ.  ನೀವು ನಿಮ್ಮ ಆಯ್ಕೆಯ ಮೇರೆಗೆ ನಿಮ್ಮ ಕಿರು ಪರಿಚಯವನ್ನು ಖಾಸಗಿಯಾಗಿಸಬಹುದು ಅಥವಾ ಸಾರ್ವಜನಿಕವನ್ನಾಗಿಸಬಹುದು.   ಖಾಸಗಿ ಕಿರಿಪರಿಚಯವನ್ನು ನೀವು ಅದನ್ನು ಯಾರೊಂದಿಗೆ ಹಂಚಿಕೊಳ್ಳುತೀರೋ ಅವರು ಮಾತ್ರ ನೋಡಬಹುದು.  ಸಾರ್ವಜನಿಕ ಕಿರುಪರಿಚಯಗಳನ್ನು  ಎಲ್ಲರೂ ನೋಡಬಹುದು.

     ನಾವು ನಿಮ್ಮ ಮಾಹಿತಿಯನ್ನು ಯಾರೇ ಮೂರನೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವುದಿಲ್ಲ ಆದರೂ, ಕಾನೂನುದ್ವಾರಾ ಅದನ್ನು ಹಂಚಿಕೊಳ್ಳಬೇಕೆಂದು ಬೇಡಿಕೆ ಬಂದರೆ ಮತ್ತು ಬಂದಾಗ ಮತ್ತು ಹಾಗೆ ಪ್ರಕಟ ಪಡಿಸುವುದು ನಮ್ಮ ಹಕ್ಕನ್ನು ರಕ್ಷಿಸಿಕೊಳ್ಳುವುದಕ್ಕೆ ಅಥವಾ ನ್ಯಾಯಿಕ ಅಥವಾ ಕಾನೂನು ಪ್ರಕ್ರಿಯೆಯನ್ನು ಪಾಲಿಸುವುದಕ್ಕೆ ಅವಶ್ಯಕ ಎಂದು ನಂಬಿದಾಗ  ಅದನ್ನು ಪ್ರಕಟಿಸಲು ನಮಗಿರುವ ಹಕ್ಕನ್ನು ನಾವು ಮೀಸಲಿಟ್ಟುಕೊಳ್ಳುತ್ತೇವೆ.

ಸಂಪನ್ಮೂಲಗಳ ಜೊತೆ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ದಾಖಲಿಸಿದ ಮಾಹಿತಿ:-

     ನೀವು ನಿಮ್ಮ ಕಿರುಪರಿಚಯವನ್ನು ಖಾಸಗಿಯಾಗಿ ಇರಿಸಲು ಪ್ರಯತ್ನಿಸಿದರೂ ನಿಮ್ಮ ಹೆಸರು, ನೀವು ನಮ್ಮ ಪೋರ್ಟಲ್ಲಿನಲ್ಲಿ  ಪ್ರಕಟಿಸುವ ಎಲ್ಲಾ ಸಂಪನ್ಮೂಲಗಳ ಜೊತೆ ಪ್ರಕಟವಾಗುತ್ತದೆ.

     ನೀವು ಸಾರ್ವಜನಿಕವಾಗಿ (ಟೀಕೆಗಳು, ಚರ್ಚೆಗಳು, ಫೋಟೋ, ವಿಡಿಯೋ ಇತ್ಯಾದಿ) ಪ್ರಕಟಿಸುವ ಯಾವುದೇ ಮಾಹಿತಿಯು ಪೋರ್ಟಲ್ ಅನ್ನು ಬಳಸುವ ಎಲ್ಲರಿಗೂ ಕಾಣಸಿಗುತ್ತದೆ.

ಬಾಹ್ಯ ಅಂತರ್ ಜಾಲ ತಾಣಗಳು (ವೆಬ್ ಸೈಟ್ಗಳು):

     ಈ ವೆಬ್ ಪೋರ್ಟಲ್ ನಾವು ಮಾಲೀಕತ್ವವನ್ನು ಹೊಂದಿರದ ಅಥವಾ ನಾವು ನಿಯಂತ್ರಿಸಲಾಗದ ಹಲವಾರು ಬಾಹ್ಯ ಸೈಟುಗಳಿಗೆ ಕೊಂಡಿ(ಲಿಂಕ್) ಹೊಂದಿದೆ.  ಅವರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೇಳಿದರೆ ದಯವಿಟ್ಟು ತಪ್ಪದೇ ಆ ವೆಬ್ ಸೈಟುಗಳ ಗೋಪ್ಯತಾ ನೀತಿಗಳನ್ನು ಓದಿರಿ.  ಅಂತಹ ಇತರ ಸೈಟುಗಳ ಗೋಪ್ಯತಾ  ಆಚರಣೆಗಳ ಬಗ್ಗೆ ನಾವು ಹೊಣೆಗಾರರಲ್ಲ ಎಂಬುದನ್ನೂ ತಾವು ದಯವಿಟ್ಟು ಗಮನಿಸಿ.

ಟೀಚರ್ಸ್ ಪೋರ್ಟಲ್ ನಿಂದ ಪತ್ರ ವ್ಯವಹಾರ ಇತ್ಯಾದಿ:

 www.teachersofindia.org ನಿಂದ ನೀವು ಇಮೇಲ್ ನ್ಯೂಸ್ ಲೆಟರ್ ಗಳು, ಮತ್ತು ಇತರೆ ನಿಯತಕಾಲಿಕ ನೋಟೀಸುಗಳನ್ನು  ಸ್ವೀಕರಿಸುತ್ತೀರಿ.  ಅವುಗಳನ್ನು ಸ್ವೀಕರಿಸಲು ನಿಮಗೆ ಇಷ್ಟವಿಲ್ಲದಿದ್ದಲ್ಲಿ ಆ ಇ ಮೇಲ್ ನಲ್ಲಿರುವ "unsubscribe" ಎಂಬ  ಅದರಲ್ಲಿನ ಕೊಂಡಿಗೆ ಕ್ಲ್ಲಿಕ್ ಮಾಡಿರಿ.  "unsubscribe " ಎಂಬ ಕೊಂಡಿಯು ನಿಮ್ಮ ಪೋರ್ಟಲ್ಲಿನ  ಕಿರುಪರಿಚಯ ವಿಭಾಗದಲ್ಲೂ  ಲಭ್ಯವಿದೆ.

     ಅವಶ್ಯಕತೆ ಬಂದಾಗಲೆಲ್ಲಾ  ನಮ್ಮ ಗೋಪ್ಯತಾ ನೀತಿಯನ್ನು ತಿದ್ದಿ ಬದಲಾಯಿಸಲು ನಮ್ಮ ಹಕ್ಕುಗಳನ್ನು ನಾವು ಕಾಯ್ದಿರಿಸಿರುತ್ತೇವೆ.  ನಾವು ಆ ಬದಲಾವಣೆಗಳನ್ನು ಈ ಕಾರ್ಯನೀತಿ ಹೇಳಿಕೆ ಮತ್ತಿತರ ಸೂಕ್ತ ಸ್ಥಳಗಳಲ್ಲಿ ಸೇರಿಸುತ್ತೇವೆ.

     ನೀವು ಕಿರುಪರಿಚಯ ಪುಟದಲ್ಲಿ ನಿಮ್ಮ ಖಾತೆಯನ್ನು ತಿದ್ದಬಹುದು, ಇಂದೀಕರಿಸಬಹುದು, ನಿಷ್ಕ್ರಿಯಗೊಳಿಸಬಹುದು ಅಥವಾ ರದ್ದುಗೊಳಿಸಬಹುದು ಅಥವಾ teachers@azimpremjifoundation.org ಗೆ ಇಮೇಲ್ ಕಳುಹಿಸಿ ಹಾಗೆ ಮಾಡಬಹುದು.

 

19833 ನೊಂದಾಯಿತ ಬಳಕೆದಾರರು
7793 ಸಂಪನ್ಮೂಲಗಳು