ಕಾಲ ಮತ್ತು ಆಕಾಶ, ಭೌತದ್ರವ್ಯ ಮತ್ತು ಶಕ್ತಿ ಇವುಗಳ ಉಗಮ ಅಥವಾ ಸ್ವತಃ ನಮ್ಮ ಭೂಮಿ ಮತ್ತು ಜೀವದ ಅಸ್ತಿತ್ವ - ಇವೇ ಮುಂತಾದುವುಗಳಿಗೆ ಸಂಬಂಧಿಸಿದ ಮೂಲಭೂತ ಪ್ರಶ್ನೆಗಳಿಗೆ ಸಂಭವನೀಯ ಎನ್ನಬಹುದಾದ ಎಲ್ಲ ಉತ್ತರಗಳೂ ವಿಜ್ಞಾನದ ಸಹಯೋಗ ಸ್ವರೂಪದಿಂದ ಲಾಭ ಪಡೆದಿವೆ. ಒಟ್ಟಾಗಿ ಬೃಹತ್ ಚಿತ್ರಣವನ್ನು ಸಂಪೂರ್ಣವಾಗಿ ಅನಾವರಣಗೊಳಿಸುವಲ್ಲಿ ನೆರವಾಗುವ ಪ್ರತ್ಯೇಕ ತುಣುಕುಗಳ ಆವಿಷ್ಕಾರದಲ್ಲಿ ಪ್ರಪಂಚದಾದ್ಯಂತದ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಉಗಮಗಳು (ಔಡಿigiಟಿs) ಎಂಬ ಭಾಗದಲ್ಲಿ ಇದನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದೇವೆ. ಅಂತಿಮವಾಗಿ ಹೊರಹೊಮ್ಮುವ ಚಿತ್ರಣವನ್ನು ಎಷ್ಟು ಶ್ಲಾಘಿಸುವರೋ ಅಷ್ಟೇ ಈ ನೂರಾರು ತುಣುಕುಗಳನ್ನು ವಿಜ್ಞಾನದ ಯಾವುದೇ ವಿದ್ಯಾರ್ಥಿ ಶ್ಲಾಘಿಸದೇ ಇರಲಾರ.
ಪರಿಸರ ಮಾಲಿನ್ಯದ ಬಗ್ಗೆ ಬಹಳ ತಿಳಿವಳಿಕೆ ನೀಡುವಂತಹ ಅನೇಕ ಲೇಖನಗಳು ಮತ್ತು ವಾಡಿಕೆಯ ಕವಿತೆ, ಚಿತ್ರಗಳು, ಲಲಿತ ಪ್ರಬಂಧಗಳೊಂದಿಗೆ ಬಯಲು ಸಂಚಿಕೆ ಹೊರಬಂದಿದೆ.
ಅಜೀಂ ಪ್ರೇಂಜಿ ಫೌಂಡೇಷನ್ನಿನ ಯಾದಗಿರಿ ಜಿಲ್ಲಾ ಸಂಸ್ಥೆಯಿಂದ ಹೊರಡುತ್ತಿದ್ದ ಬಯಲು ಮ್ಯಾಗಜೀನ್ ವಿಶಾಲವಾಗಿ ಗರಿಗೆದರಿದೆ.ಈ ಸಂಚಿಕೆಯಿಂದ ಎಲ್ಲಾ ರಾಜ್ಯ ಘಟಕಗಳು ಒಳಗೊಂಡ ಸಂಪಾದಕರು ತಮ್ಮ ಅಭಿವ್ಯಕ್ತಿ ಮಾಡಲು ಒಂದು ರಾಜ್ಯ ಮಟ್ಟದ ವಿಶಾಲ ಸದವಕಾಶವನ್ನು ಕಲ್ಪಿಸಲಾಗಿದೆ. ಪ್ರತಿ ತಿಂಗಳ 15 ರಂದು ಬಿಡುಗಡೆಯಾಗುವಂತೆ ಯೋಜಿಸಲಾಗಿದೆ.ಮುಕ್ತ ಅವಕಾಶವಾದ್ದರಿಂದ ಇದಕ್ಕೆ ಬಯಲು(open space ) ಎಂಬ ಹೆಸರನ್ನು ಇಡಲಾಗಿದೆ.ಇದರಲ್ಲಿ ವಿವಿಧ ವಿಷಯಗಳನ್ನು ಒಳಗೊಂಡ ಲೇಖನಗಳು ಕನ್ನಡ ಇಂಗ್ಲಿಷ್, ಉರ್ದು ಭಾಷೆಗಳಲ್ಲಿ ಇವೆ.
19821 ನೊಂದಾಯಿತ ಬಳಕೆದಾರರು
7791 ಸಂಪನ್ಮೂಲಗಳು