ಐ ವಂಡರ್… ಸಂಚಿಕೆ 3

Description: 
ಕಾಲ ಮತ್ತು ಆಕಾಶ, ಭೌತದ್ರವ್ಯ ಮತ್ತು ಶಕ್ತಿ ಇವುಗಳ ಉಗಮ ಅಥವಾ ಸ್ವತಃ ನಮ್ಮ ಭೂಮಿ ಮತ್ತು ಜೀವದ ಅಸ್ತಿತ್ವ - ಇವೇ ಮುಂತಾದುವುಗಳಿಗೆ ಸಂಬಂಧಿಸಿದ ಮೂಲಭೂತ ಪ್ರಶ್ನೆಗಳಿಗೆ ಸಂಭವನೀಯ ಎನ್ನಬಹುದಾದ ಎಲ್ಲ ಉತ್ತರಗಳೂ ವಿಜ್ಞಾನದ ಸಹಯೋಗ ಸ್ವರೂಪದಿಂದ ಲಾಭ ಪಡೆದಿವೆ. ಒಟ್ಟಾಗಿ ಬೃಹತ್ ಚಿತ್ರಣವನ್ನು ಸಂಪೂರ್ಣವಾಗಿ ಅನಾವರಣಗೊಳಿಸುವಲ್ಲಿ ನೆರವಾಗುವ ಪ್ರತ್ಯೇಕ ತುಣುಕುಗಳ ಆವಿಷ್ಕಾರದಲ್ಲಿ ಪ್ರಪಂಚದಾದ್ಯಂತದ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಉಗಮಗಳು (ಔಡಿigiಟಿs) ಎಂಬ ಭಾಗದಲ್ಲಿ ಇದನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದೇವೆ. ಅಂತಿಮವಾಗಿ ಹೊರಹೊಮ್ಮುವ ಚಿತ್ರಣವನ್ನು ಎಷ್ಟು ಶ್ಲಾಘಿಸುವರೋ ಅಷ್ಟೇ ಈ ನೂರಾರು ತುಣುಕುಗಳನ್ನು ವಿಜ್ಞಾನದ ಯಾವುದೇ ವಿದ್ಯಾರ್ಥಿ ಶ್ಲಾಘಿಸದೇ ಇರಲಾರ.

ವಿಜ್ಞಾನದಿಂದ ಪ್ರಚೋದನೆಗೊಂಡು ಮಾನವ ಸಮುದಾಯವು ಬಾಹ್ಯಾಕಾಶ ಯಾನದ ಆಸಕ್ತಿಯ ತುಟ್ಟತುದಿಯನ್ನೇರಲು ಉದ್ಯುಕ್ತವಾಗಿರುವ ನಾಗರಿಕತೆಯಾಗಿ ರೂಪುಗೊಳ್ಳುತ್ತಿದೆ. ತನ್ನ ದೃಷ್ಟಿಯನ್ನು ಅತಿದೂರದ ನಕ್ಷತ್ರಗಳತ್ತ ನೆಟ್ಟು ಸೌರವ್ಯೂಹದ ಇತರ ಗ್ರಹಗಳತ್ತ ಅಂಬೆಗಾಲನ್ನು ಇಡುತ್ತಿರುವಂತಿದೆ. ಈ ಸಂದರ್ಭದಲ್ಲಿ ವಿಜ್ಞಾನ ಶಿಕ್ಷಣ ಎಂದರೆ ವಿದ್ಯಾರ್ಥಿಗಳಿಗೆ ಅಗಾಧ ಮಟ್ಟದ ಮಾಹಿತಿಯನ್ನು (ಯಾರೋ ಕೊಟ್ಟಿದ್ದು ಎನ್ನುವಂತೆ) ಒದಗಿಸುವುದಷ್ಟಕ್ಕೇ ಸೀಮಿತವಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಸಿರಿಕೊಳ್ಳುವುದು ಮುಖ್ಯವಾಗಿದೆ. ಇದಕ್ಕಿಂತ ಹೆಚ್ಚಾಗಿ, ವಿಜ್ಞಾನದ ಪ್ರಾಮುಖ್ಯತೆ ಏನು? ಎಂಬ ಲೇಖನದಲ್ಲಿ ಒತ್ತಿಹೇಳಿರುವಂತೆ ಅತಿ ಸಮರ್ಪಕ ಅನುಮಾನಿತ ಸಿದ್ಧಾಂತಗಳನ್ನು ನಿಖರ ದತ್ತಾಂಶಗಳಿಂದ ಪ್ರಮಾಣೀಕರಿಸುತ್ತಿರುವ ಹಾಗೂ ಅಂತಹ ಅನುಮಾನಿತ ಸಿದ್ಧಾಂತಗಳು ನಂತರ ಸಿದ್ಧಾಂತಗಳ ರೂಪದಲ್ಲಿ ಮಂಡಿಸಲು ಸಾಧ್ಯವಾಗಿಸುತ್ತಿರುವ ವೈಜ್ಞಾನಿಕ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಂಡು ಸರಿಯಾದ ರೀತಿಯಲ್ಲಿ ಗ್ರಹಿಸಲು ವಿದ್ಯಾರ್ಥಿಗಳನ್ನು ಸಮರ್ಥರನ್ನಾಗಿಸುವುದು ವಿಜ್ಞಾನ ಶಿಕ್ಷಣದ ಪಾತ್ರವಾಗಿದೆ. ವೈಜ್ಞಾನಿಕ ಅನ್ವೇಷಣೆಯಲ್ಲಿ ಮಾತ್ರವಲ್ಲದೆ ದಿನನಿತ್ಯದ ಜೀವನದಲ್ಲಿಯೂ ಈ ಪ್ರಕ್ರಿಯೆಯನ್ನು ಬಳಸಿಕೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸುವುದು ಒಂದು ಪ್ರಮುಖ ಅಂಶವಾಗಿದೆ. ಪರಿಣಾಮಕಾರಿ ವಿಜ್ಞಾನ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಈ ಪ್ರಕ್ರಿಯೆಯ ಸೊಗಸನ್ನು ತಲುಪಿಸ ಬಲ್ಲರು ಅಲ್ಲದೆ ಇದರಿಂದ ಹೊಮ್ಮುವ ಅದ್ಭುತವನ್ನು ಹಂಚಿಕೊಳ್ಳಬಲ್ಲರು. ಏಕೆಂದರೆ, ಸಾಧಾರಣವಾಗಿ ಪ್ರತಿಯೊಂದು ವಾಸ್ತವಾಂಶಗಳು ದಶಕಗಳ, ಕೆಲವು ವೇಳೆ ಶತಮಾನಗಳ ಅವಧಿಯ ಉದ್ದಕ್ಕೂ ಹಲವಾರು ವಿಜ್ಞಾನಿಗಳು ಕೈಗೊಂಡ ಪರಿಶ್ರಮಗಳನ್ನು ಒಟ್ಟುಗೂಡಿಸಿ ಮಂಡಿಸಿದವುಗಳೇ ಆಗಿವೆ. ಬಹುತೇಕ, ಹಲವು ವಿಜ್ಞಾನಿಗಳು - ಅದರಲ್ಲಿ ಕೆಲವರು ತಮ್ಮ ಅನುಮಾನಿತ ಸಿದ್ಧಾಂತವನ್ನು ಪ್ರಮಾಣೀಕರಿಸುವ ಪ್ರಯತ್ನದಲ್ಲಿ ವಿಫಲಗೊಂಡವರೂ ಇದ್ದಾರೆ - ಮಾಡಿದ ಕಾರ್ಯಗಳಿಂದ ಇವು ಪ್ರಯೋಜನ ಪಡೆದಿವೆ. ಎಲ್ಲಕ್ಕಿಂತ ಹೆಚ್ಚಾಗಿ - ಈ ವಿಜ್ಞಾನಿಗಳಲ್ಲಿ ಹಲವರು ಬಹುಶಃ ಸಂಬಂಧವಿಲ್ಲದಂತೆ ಕಾಣುವ ಪ್ರಶ್ನೆಗಳಿಗೆ ಉತ್ತರವನ್ನು ಅರಸುತ್ತಾ ಸಂಬಂಧವಿಲ್ಲದಿರುವಂತೆ ತೋರುತ್ತಿದ್ದ ವಿಜ್ಞಾನ ಶಾಖೆಗಳ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ!

19210 ನೊಂದಾಯಿತ ಬಳಕೆದಾರರು
7451 ಸಂಪನ್ಮೂಲಗಳು