ರಾಷ್ಟ್ರೀಯ ಜ್ಞಾನ ಆಯೋಗ

ರಾಷ್ಟ್ರೀಯ ಜ್ಞಾನ ಆಯೋಗ:

ರಾಷ್ಟ್ರೀಯ ಜ್ಞಾನ ಆಯೋಗ(NKC)ವನ್ನು13ನೇ ಜೂನ್ 2005 ರಲ್ಲಿ ರಚಿಸಲಾಯಿತು.ಭಾರತದ ಪ್ರಧಾನಮಂತ್ರಿಗಳಿಗೆ ಉನ್ನತ ಮಟ್ಟದ ಸಲಹಾ ಸಂಸ್ಥೆಯಾದ ರಾಷ್ಟ್ರೀಯ ಜ್ಞಾನ ಆಯೋಗಕ್ಕೆ ಪ್ರಮುಖ ಅಭಿವೃದ್ಧಿ ಕ್ಷೇತ್ರಗಳಾದ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಕೃಷಿ, ಕೈಗಾರಿಕೆ, ವಿದ್ಯುನ್ಮಾನ ಆಡಳಿತ ಮುಂತಾದವುಗಳ ಬಗ್ಗೆ ಗಮನ ಕೇಂದ್ರೀಕರಿಸಿ ಕಾರ್ಯನೀತಿಗಳಿಗೆ ಮಾರ್ಗದರ್ಶನ ನೀಡುವುದು ಮತ್ತು ಸುಧಾರಣೆಗೆ ನಿರ್ದೇಶನ ನೀಡುವುದು ಮುಂತಾದ ಜವಾಬ್ದಾರಿಗಳನ್ನು ವಹಿಸಿಕೊಡಲಾಗಿದೆ. ಜ್ಞಾನಕ್ಕೆ ಸುಲಭಗಮ್ಯ ಮಾರ್ಗಗಳನ್ನು ರಚಿಸಿಕೊಡುವುದೇ ಅಲ್ಲದೆ, ಜ್ಞಾನದಾಯಿ ವ್ಯವಸ್ಥೆ ಗಳನ್ನು ಸೃಷ್ಟಿಮಾಡಿ ರಕ್ಷಿಸಿಕೊಂಡುಬರುವುದು, ಜ್ಞಾನ ಪ್ರಸಾರ ಹಾಗು ಉತ್ತಮ ಜ್ಞಾನ ವಿತರಣಾ ಸೇವೆಯನ್ನು ನಿರ್ವಹಿಸಿಕೊಂಡುಬರುವುದು ಈ ಆಯೋಗವು ನಿರ್ವಹಿಸುತ್ತಿರುವ ಪ್ರಮುಖ ಕರ್ತವ್ಯಗಳು.

ಟೀಚರ್ಸ್ ಪೋರ್ಟಲ್ ಗೆ ರಾಷ್ಟ್ರೀಯ ಜ್ಞಾನ ಆಯೋಗದ ಕೊಡುಗೆ:
ರಾಷ್ಟ್ರೀಯ ಜ್ಞಾನ ಆಯೋಗವು ಅಭಿವೃದ್ಧಿವಲಯ ಮುಂತಾದ ಕ್ಷೇತ್ರಗಳಲ್ಲಿ ಜ್ಞಾನ ಸಂಚಯ ಮತ್ತು ವಿತರಣೆಯ ದೃಷ್ಟಿಯಿಂದ ಇಂಧನ, ಪರಿಸರ, ಶಿಕ್ಷಣ, ಜೀವಿವೈವಿಧ್ಯ ಮತ್ತು ನೀರು ಮುಂತಾದ ಕೆಲವೊಂದು ಅಭಿವೃದ್ಧಿ ಕ್ಷೇತ್ರಗಳನ್ನು ಗುರುತಿಸಿದೆ. ತದನಂತರ ಅವರು ಆಯಾ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕಾರ್ಯನಿರತವಾಗಿರುವಂತಹ ಸಂಘ ಸಂಸ್ಥೆಗಳಿಗೆ ಆಹ್ವಾನ ನೀಡಿ, ಸದರಿ ಕ್ಷೇತ್ರಗಳಿಗಾಗಿ ಅಂತರ್ಜಾಲವೇದಿಕೆಗಳನ್ನು ರೂಪಿಸಿ ನಿರ್ವಹಿಸಿಕೊಂಡುಬರಲು ಕೇಳಿಕೊಂಡರು. ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರಿಗಾಗಿಯೇ ಒಂದು ಅಂತರ್ಜಾಲವೇದಿಕೆಯನ್ನು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಜ್ಞಾನ ಆಯೋಗವು ಅಜೀಂ ಪ್ರೇಂಜಿ ಫೌಂಡೇಷನ್ನಿಗೆ ಆಹ್ವಾನ ನೀಡಿತು. ಶಿಕ್ಷಕರು  ನಿರಂತರವಾಗಿ  ಸಂವಾದ ನಡೆಸುತ್ತಾ ತಮ್ಮ ಅತ್ಯುತ್ತಮ ಬೋಧನಾಭ್ಯಾಸವನ್ನು ಹಂಚಿಕೊಳ್ಳುವಂತೆ ಮತ್ತು ಶಿಕ್ಷಕರು ಪರಸ್ಪರ ಸಂಪರ್ಕಿಸಿ ಲಭ್ಯ ಜ್ಞಾನವನ್ನು ಅನ್ವಯಿಸುವುದೇ ಅಲ್ಲದೆ ಅದಕ್ಕೆ ತಮ್ಮ ದಟ್ಟ ಅನುಭವದಿಂದ ಮೌಲ್ಯವನ್ನು ಬೆರಸುವಂತೆ ಶಿಕ್ಷಕರನ್ನು ಪ್ರೇರೇಪಿಸುವಂತಹ ಒಂದು ಜ್ಞಾನ ಬಂಢಾರವನ್ನು ರೂಪಿಸುವ ವೇದಿಕೆಯನ್ನಾಗಿ ಶಿಕ್ಷಕರ ಈ ಅಂತರ್ಜಾಲ ವೇದಿಕೆಯನ್ನು  ರೂಪಿಸುವ ಗುರಿಯನ್ನಿಟ್ಟುಕೊಂಡು ಟೀಚರ್ಸ್ ಪೋರ್ಟಲ್ ಅನ್ನು ಸ್ಥಾಪಿಸುವ ಸಲುವಾಗಿ ರಾಷ್ಟ್ರೀಯ ಜ್ಞಾನ ಆಯೋಗವು ಅನೇಕ ಕಾರ್ಯಶಿಬಿರಗಳನ್ನು/ಸಭೆಗಳನ್ನು ಏರ್ಪಡಿಸಿತ್ತು. ರಾಷ್ಟ್ರೀಯ ಜ್ಞಾನ ಆಯೋಗ ಮತ್ತು

 ಅಜೀಂ ಪ್ರೇಂಜಿ ಫೌಂಡೇಷನ್ ಗಳು ಸಂಯುಕ್ತ ವಾಗಿ ಈ ಪೋರ್ಟಲ್ಲಿನ ದರ್ಶನವನ್ನು ಪರಿಕಲ್ಪಿಸಿದುವು.  ಈಗ ಈ ಪೋರ್ಟಲ್ ಅನ್ನು ಅಜೀಂ ಪ್ರೇಂಜಿ ಫೌಂಡೇಷನ್ ಅವರು ನಿರ್ವಹಿಸಿಕೊಂಡುಬರುತ್ತಿದ್ದಾರೆ.

19821 ನೊಂದಾಯಿತ ಬಳಕೆದಾರರು
7791 ಸಂಪನ್ಮೂಲಗಳು