ಹಂಚಿ ಓದುವ ಚಿಣ್ಣ-ರಾಹುಲ್

ಮನೆಯಲ್ಲಿ ಗ್ರಂಥಾಲಯ ನಿರ್ಮಿಸಿ ಓದುವ ವಿಧ್ಯಾರ್ಥಿ – ರಾಹುಲ್
         ಯಾದಗಿರಿ ತಾಲೂಕಿನ ವೆಂಕಟೇಶನಗರ ತಾಂಡ ಜನಸಂಖ್ಯೆಯಲ್ಲಿ ಚಿಕ್ಕದಾದರೂ ಮಕ್ಕಳ ಓದಿನಲ್ಲಿ ಮುಂದೆಯಿದೆ. ಯಾದಗಿರಿ ನಗರದಿಂದ ಸುಮಾರು ಹತ್ತು ಕಿ.ಮೀ. ದೂರವಿರುವ ಈ ತಾಂಡಾದಲ್ಲಿ ಸುಮಾರು 300ಕ್ಕೂ ಹೆಚ್ಚು ಮಕ್ಕಳು ವಿವಿಧ ತರಗತಿಗಳಲ್ಲಿ ಓದುತ್ತಿದ್ದಾರೆ. ಇದೇ ಗ್ರಾಮಕ್ಕೆ ನಾನು ಮೊನ್ನೆ ಬೇಟಿ ನೀಡಿದಾಗ ಅಲ್ಲಿನ ಮಕ್ಕಳು ಓದಿನ ಬಗ್ಗೆ ಇಟ್ಟಿರುವ ಆಸಕ್ತಿ ಪುಸ್ತಕಗಳ ಬಗ್ಗೆ ಕಾಳಜಿ ಕಂಡು ಬೆರಗಾದೆ.
         ಇತನ ಹೆಸರು ರಾಹುಲ್ ಇನ್ನು 6ನೇ ತರಗತಿಯಲ್ಲಿ ಸರಕಾರಿ ಶಾಲೆಯಲ್ಲಿ ಓದುತ್ತಿದ್ದಾನೆ. ಶಾಲೆಯ ಗ್ರಂಥಾಲಯ ಹಾಗೂ ಸರ್ ರತನ್ ಟಾಟಾ ಟ್ರಸ್ಟ್ ನ ಗ್ರಂಥಾಲಯ ಚಟುವಟಿಕೆಗಳ ಪ್ರಭಾವಕ್ಕೆ ಒಳಗಾಗಿ ತನ್ನ ಮನೆಯಲ್ಲಿಯೇ ಸ್ವತ: ಗ್ರಂಥಾಲಯ ರಚನೆ ಮಾಡಿಕೊಂಡು ತನ್ನ ಸುತ್ತಮುತ್ತಲಿರುವ ಅನೇಕ ಗೆಳೆಯರ ಜೊತೆಗೆ ಓದಿನಲ್ಲಿ ಮುಳಗಿರುವ ಹುಡುಗ ರಾಹುಲ್ ತಂದೆ ಗ್ರೋಬ್ರ್ಯಾ ಸೃಜನಶೀಲರು. ತಾಯಿ ಕಮಲಿಬಾಯಿ. ಇಬ್ಬರು ಮಗನ ಓದಿಗೆ ಬೆನ್ನೆಲುಬಾಗಿ ನಿಂತು ಅನೇಕ ರೀತಿಯ ಪುಸ್ತಕಗಳ ಸಂಗ್ರಹಕ್ಕೆ ನೆರವಾಗಿದ್ದಾರೆ. ಅಲ್ಲದೇ ಮಕ್ಕಳ ಜೊತೆಗೆ ಮನೆಯ ಹಿರಿಯರೂ ಕೂಡ ಓದಿನ ಚಟುವಟಿಕೆಯಲ್ಲಿ ತೊಡಗುತ್ತಾರೆ ಇದು ಗಮನಿಸಲೇಬೇಕಾದ ವಿಷಯ.
         ಈ ವಿದ್ಯಾರ್ಥಿಯಲ್ಲಿ ಸುಮಾರು 60ಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವಿದ್ದು ಹಾಡು, ಕಥೆ, ಚಿತ್ರಕಥೆ, ಸಾಮಾನ್ಯ ಜ್ಞಾನ, ಸ್ವಾತಂತ್ರ ಹೋರಾಟಗಾರರ ಜೀವನ ಚರಿತ್ರೆ, ರಸಪ್ರಶ್ನೆ, ಮಾಹಾ ಪುರುಷರ ಜೀವನ ಚರಿತ್ರೆ, ಕನ್ನಡ , ಇಂಗ್ಲೀಷ್, ಆರೋಗ್ಯದ ಮಾಹಿತಿ ಉಳ್ಳ ಪುಸ್ತಕಗಳು ಹೀಗೆ ಅನೇಕ ರೀತಿಯ ಪುಸ್ತಕಗಳ ಸಂಗ್ರಹ ಇಲ್ಲವೆ.
         ಸಂಜೆ 5ಕ್ಕೆ ಈ ವಿದ್ಯಾರ್ಥಿಗಳ ಓದುವ ಸಮಯ ಸುಮಾರು 6 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಸೇರಿ ಸುಮಾರು ದಿನಕ್ಕೆ 2 ಗಂಟೆ ಓದುತ್ತಾರೆ. ಓದಿದ್ದನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಾರೆ. ಪ್ರಶ್ನೆಗಳನ್ನು ಕೇಳುತ್ತಾರೆ. ತಿಳಿಯದ್ದನ್ನು ದೊಡ್ಡವರಿಂದ ಕೇಳಿ ತಿಳುದುಕೊಳ್ಳುತ್ತಾರೆ. ಅವರವರವ ಗೆಳೆಯರ ಬಳಗದಲ್ಲಿ ಚರ್ಚೆ ಮಾಡುತ್ತಾರೆ. ಈ ಎಲ್ಲಾ ಚಟುವಟಿಕೆಗಳಿಗೆ ಮನೆಯವರ ಸಂಪೂರ್ಣ ಸಹಕಾರವಿದೆ.
         ರಾಹುಲ್ ಯಾವುದೇ ನಗರಕ್ಕೆ ಹೋಗಲಿ ಅಲ್ಲಿಂದ ಚಿಕ್ಕದೊಂದು ಪುಸ್ತಕ ಕೊಂಡು ತರುವ ಹವ್ಯಾಸವುಳ್ಳ ಹುಡುಗ, ಸುಮ್ಮನೆ ಏನೇನೊ ಖರೀದಿ ಮಾಡಿ ತಿನ್ನುವ ಮಕ್ಕಳ ಮಧ್ಯೆ ಪುಸ್ತಕ ಖರೀದಿ ಮಾಡುವ ಹುಡುಗ ಈ ರಾಹುಲ್ ಪುಸ್ತಕ ಪ್ರೇಮಿಯೂ ಹೌದು. ಬಸವಣ್ಣನ ವಚನಗಳಾಗಲಿ ಸಾಂಸ್ಕøತಿಕ ನೃತ್ಯವಾಗಲಿ ಸಿನಿಮಾ ಹಾಡುಗಳಾಗಲಿ ಇಷ್ಟಪಡುವ ಈ ರಾಹುಲ್ ಊರಿನ ಉಳಿದ ಮಕ್ಕಳಿಗೆ ಓದಿನಲ್ಲಿ ಪುಸ್ತಕ ಸಂಗ್ರಹ ಮಾಡುವ ಕೆಲಸದಲ್ಲಿ ಮಾದರಿಯಾಗಿದ್ದಾನೆ.
         ತನ್ನ ಗ್ರಂಥಾಲಯಕ್ಕೆ ಯಾರೇ ಭೇಟಿ ನೀಡಲಿ ಅವರೊಂದಿಗೆ  ತಾನು ಓದಿರುವ ಪುಸ್ತಕದ ಕುರಿತು ಮಾತನಾಡುತ್ತಾನೆ. ತನಗಿರುವ ಅನೇಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾನೆ. ತನ್ನ ಈ ಹವ್ಯಾಸಕ್ಕೆ ಕಲಿಕೆ ಸರ್ ರತನ್ ಟಾಟಾ ಟ್ರಸ್ಟ್ ನ ಪ್ರೇರಕಿಯಾಗಿ ಕೆಲಸ ಮಾಡುತ್ತಿರುವ ಕುಮಾರಿ ರೇಣುಕಾ ಪ್ರೋತ್ಸಾಹ ನೀಡಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ ರಾಹುಲ್.
        ಮಕ್ಕಳು ಬರಿ ಆಟ ಟಿವಿ ನೋಡುವುದರಲ್ಲಿ ಕಾಲ ಕಳೆಯುತ್ತಾರೆ ಎನ್ನುವ ಈ ಸಂದರ್ಭದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೆಂಕಟೇಶ ನಗರ ಶಾಲೆಯ ಆರನೇಯ ತರಗತಿಯ ವಿದ್ಯಾರ್ಥಿ ರಾಹುಲ್ ಆಟ ಪಾಠ ಓದು ಎಲ್ಲವನ್ನು ಉತ್ತಮ ರೀತಿಯಲ್ಲಿ ಮಾಡಿಕೊಂಡು ಸರಿಯಾದ ದಾರಿಯಲ್ಲಿ ಸಾಗುತ್ತಿದ್ದಾನೆ. ಆತನ ಮನೆಯ ಗ್ರಂಥಾಲಯವನ್ನು ಒಮ್ಮೆ ಬೇಟಿ ನೀಡಿ ನೀವು ಓದಿರುವ ಚೆಂದದ ಪುಸ್ತಕವನ್ನು ಆ ಮಗುವಿಗೆ ಕೊಡಿ ರಾಹುಲ್ ಓದಲಿ ತನ್ನ ಗೆಳೆಯರಿಗೆ ಓದಿಸಲಿ.
       ಈ ವಿದ್ಯಾರ್ಥಿಯ ಓದಿನ ಹವ್ಯಾಸ ಎಲ್ಲರೂ ಮೆಚ್ಚುವಂತಹದ್ದು. ತಾನು ಓದಿರುವ ಅನೇಕ ಪುಸ್ತಕಗಳ ಬಗ್ಗೆ ವಿವರವಾಗಿ ಮಾತನಾಡುವ ಜಾಣತನ ಈತನಲ್ಲಿದೆ. ಪುಸ್ತಕ ಸಂಗ್ರಹಣೆ ಒಂದು ಉತ್ತಮವಾದ ಹವ್ಯಾಸ. ಇಂತಹ ಮಕ್ಕಳಿಗೆ ಹಿರಿಯರು ಪುಸ್ತಕ ಕೊಟ್ಟು ಓದಲು ಪ್ರೋತ್ಸಾಹಿಸಬೇಕು.

 

Date: 
ಶುಕ್ರವಾರ, October 24, 2014 - 3:45pm
18449 ನೊಂದಾಯಿತ ಬಳಕೆದಾರರು
7204 ಸಂಪನ್ಮೂಲಗಳು