ಸ್ನಾತಕೋತ್ತರ ವ್ಯಾಸಂಗ ಕ್ರಮಗಳು-2016 ಕ್ಕೆ ಪ್ರವೇಶ

ಸ್ನಾತಕೋತ್ತರ ವ್ಯಾಸಂಗ ಕ್ರಮಗಳು-2016 ಕ್ಕೆ ಪ್ರವೇಶ

*ಎಂ.ಎ ಶಿಕ್ಷಣ * ಎಂ.ಎ ಅಭಿವೃದ್ಧಿ

* ಎಂ.ಎ ಸಾರ್ವಜನಿಕ ಕಾರ್ಯನೀತಿ ಮತ್ತು ಆಡಳಿತ

 

ಪಠ್ಯಕ್ರಮ

ಮುಖ್ಯ ಕೋರ್ಸುಗಳು ಬುನಾದಿ ಹಾಕಿಕೊಡುತ್ತವೆ ಮತ್ತು ಐಚ್ಛಿಕ ವಿಷಯಗಳು ನಿಮ್ಮ ಪರಿಣತಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುತ್ತವೆ.ಇದಲ್ಲದೆ ಇಂಟರ್ನ್‍ಷಿಪ್, ಸಂಶೋಧನೆಗಳು ಮತ್ತು ವೈಯಕ್ತಿಕ ಪ್ರಾಜೆಕ್ಟುಗಳ ಮೂಲಕ ಕ್ಷೇತ್ರಾನುಭವ ಪಡೆಯಲು ಅವಕಾಶ ಕಲ್ಪಿಸಲಾಗಿದೆ

ಇಂಗ್ಲಿಷ್ ಭಾಷೆ ಈ ಕೋರ್ಸುಗಳ ಶೈಕ್ಷಣಿಕ ಮಾಧ್ಯಮವಾಗಿರುತ್ತದೆ.

               

ವಿದ್ಯಾರ್ಥಿ ವೈವಿಧ್ಯ

ದೇಶದ ವಿವಿಧ ಭಾಗಗಳಿಂದ, ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮುದಾಯದಿಂದ ಹಾಗು ವಿವಿಧ ಶೈಕ್ಷಣಿಕ- ಆರ್ಥಿಕ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳು ಇಲ್ಲಿರುವುದರಿಂದ ಕಲಿಕೆಯ ಅನುಭವ ಅನನ್ಯ ಮತ್ತು ಅನುಪಮವಾಗಿರುತ್ತದೆ.

ಬೋಧಕವರ್ಗ

ಬೋಧನೆ, ಸಂಶೋಧನೆ ಮತ್ತು ಕ್ಷೇತ್ರಾನುಭವವುಳ್ಳ ಕಂಕಣಬದ್ಧ ಬೋಧಕ ಸಮುದಾಯ ನಮ್ಮಲ್ಲಿದೆ. ಸಂವಾದ, ಪ್ರಶ್ನೆ ಕೇಳುವಿಕೆಗೆ ಉತ್ತೇಜನ ನೀಡುವ ವಿಮರ್ಶಾತ್ಮಕ ಚಿಂತನೆ ಮತ್ತು ಸ್ವಯಂಕಲಿಕಾ ಸಾಮರ್ಥ್ಯವನ್ನು ಮೈಗೂಡಿಸುವ ಬೋಧನೆ ನಮ್ಮ   ಗುರಿ.

               

ವಿದ್ಯಾರ್ಥಿ ನೆರವು

 ಅಕ್ಕರೆಯ ಸಮುದಾಯದ ಅಂಗಭಾಗವಾಗುವಿರಿ. ವಾಚನ ಮತ್ತು ಲೇಖನ ಕೌಶಲ್ಯ ಬೆಳೆಸಲು ನೆರವು, ಪಠ್ಯವಿಷಯಗಳಿಗೆ ವಿಶೇಷ ಬೋಧನೆಗಳು ಮತ್ತು ಮಾರ್ಗದರ್ಶನ ದೊರೆಯುವುದಲ್ಲದೆ ಸ್ವಯಂ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗಿದೆ.

 

ವಿದ್ಯಾರ್ಥಿಗಳ ಮುಂದಿನ ಉದ್ಯೋಗಾವಕಾಶಗಳನ್ನು ಸುಗಮಗೊಳಿಸಲು ಅದಕ್ಕೆಂದೆ ಮುಡಿಪಾದ ಕ್ಯಾಂಪಸ್ ಪ್ಲೇಸ್‍ಮೆಂಟ್ ((campus placement cell)) ವಿಭಾಗವಿದೆ. ಸಾಮಾಜಿಕ ವಲಯ, ಸರ್ಕಾರೇತರ ಸಂಸ್ಥೆಗಳು, ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ವಿಭಾಗಗಳು, ಸಂಶೋಧನೆ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಅನೇಕ ಬಗೆಯ ಹೊಸ ಸವಾಲಿನ ಹಾಗು ಸಾರ್ಥಕಾನುಭವ ಕೊಡುವ ಉದ್ಯೋಗಗಳು ಲಭ್ಯವಿವೆ.

 

ಯಾವುದೇ ವಿದ್ಯಾವಿಷಯದಲ್ಲಿ ಗ್ರಾಜುಯೇಟ್ ಪದವಿ ಪಡೆದಿರುವವರು ಇದಕ್ಕೆ ಅರ್ಜಿ ಸಲ್ಲಿಸಬಹುದು. ಕಾರ್ಯಾನುಭವವುಳ್ಳ ವಿದ್ಯಾರ್ಥಿಗಳಿಗೆ ಸ್ವಾಗತವಿದೆ. ಅಲ್ಲದೆ ಅನುಕೂಲವಂಚಿತ ಸಮುದಾಯದಿಂದ ಬಂದವರಿಗೆ ಪ್ರವೇಶ ಪ್ರಕ್ರಿಯೆಯಲ್ಲಿ ಹೆಚ್ಚುವರಿ ಅಂಕಗಳನ್ನು ನೀಡಲಾಗುವುದು.

ಮುಖ್ಯವಾಗಿ ಬೇಕಾಗಿರುವುದು ಕಲಿಯಲೇ ಬೇಕೆಂಬ ನಿಮ್ಮ ಛಲ ಹಾಗು ಸಾಮಾಜಿಕ ಬದಲಾವಣೆಗೆ ದುಡಿಯಬೇಕೆಂಬ ಮನಸ್ಸು.

 

 

ಅರ್ಜಿಸಲ್ಲಿಸಲು ಕೊನೆಯ ದಿನಾಂಕ ಜನವರಿ 28, 2016. 30 ಕೇಂದ್ರಗಳಲ್ಲಿ ರಾಷ್ಟ್ರಮಟ್ಟದ ಲಿಖಿತ ಪರೀಕ್ಷೆಯ ದಿನಾಂಕ: ಫೆಬ್ರವರಿ 14, 2016.

ಹಣಕಾಸು ನೆರವಿಗೆ ಅರ್ಹರಾದ ವಿದ್ಯಾರ್ಥಿಗಳಿಗೆ ಅವರ ಕುಟುಂಬದ ವರಮಾನದ ಆಧಾರದ ಮೇಲೆ ವಿಸ್ತøತ ವಿದ್ಯಾರ್ಥಿವೇತನವನ್ನು ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ಲೈನ್ ಅರ್ಜಿಸಲ್ಲಿಸಲು ದಯವಿಟ್ಟು

www.azimpremjiuniversity.edu.in ಗೆ ಭೇಟಿನೀಡಿ

ಇ ಮೇಲ್ ವಿಳಾಸ: admissions@apu.edu.in ಅಥವಾ 1800 843 2001 ಕ್ಕೆ ಕರೆಮಾಡಿ

 

ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ, ಪಿಕ್ಸಲ್ ಪಾರ್ಕ್-ಬಿ, ಪಿ.ಇ.ಎಸ್. ಕ್ಯಾಂಪಸ್,

ಹೊಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ,

ಬೆಂಗಳೂರು-560100

Date: 
ಸೋಮವಾರ, November 2, 2015 - 3:15pm
18449 ನೊಂದಾಯಿತ ಬಳಕೆದಾರರು
7204 ಸಂಪನ್ಮೂಲಗಳು