ಸಹಮಂಥನ-ಶಿಕ್ಷಣದಲ್ಲಿ ಕ್ಷೇತ್ರ ಕಾರ್ಯಾಚರಣೆ

"ಶಿಕ್ಷಣದಲ್ಲಿ ಕ್ಷೇತ್ರ ಕಾರ್ಯಾಚರಣೆ "ಸಂಶೋಧನಾ ಸಮಾವೇಶ

2014ರ ಜುಲೈ25,26,27

ಸ್ಥಳ: ಕೃಷಿಕಾಲೇಜು ಸಭಾಂಗಣ,ಭೀಮರಾಯನಗುಡಿ,ಶಹಾಪುರ,ಯಾದಗಿರಿಜಿಲ್ಲೆ

ಜುಲೈ 25 ಉದ್ಘಾಟನೆ ,ಪ್ರಾಸ್ತಾವಿಕ ಭಾಷಣ,ಅಧಿವೇಶನ

Happy to be part of this program. Yadgir is the youngest district of the state and it is the most backward part of NEK as mentioned by the Nanjundappa Report. Azim Premji Foundation’s work in the education domain is the most basic of the works for Yadgir’s development

- Inauguration by Manoj Jain, District Collector

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಬಹಳ ಹರ್ಷವಾಗುತ್ತದೆ.ಯಾದಗಿರಿ ಕರ್ನಾಟಕ ರಾಜ್ಯದ ಅತ್ಯಂತ ಕಿರಿಯ ಜಿಲ್ಲೆ ಮತ್ತು ನಂಜುಂಡಪ್ಪನವರ ವರದಿಯ ಪ್ರಕಾರ ಈಶಾನ್ಯಕರ್ನಾಟಕದ ಬಲು ಹಿಂದುಳಿದ ಜಿಲ್ಲೆ. ಅಜೀಂ ಪ್ರೇಂಜಿ ಪ್ರತಿಷ್ಠಾನವು ಶಿಕ್ಷಣ ಕ್ಷೇತ್ರದಲ್ಲಿ ಮಾಡುತ್ತಿರುವ ಕಾರ್ಯವು ಯಾದಗಿರಿ ಜಿಲ್ಲೆಯ ಅಭಿವೃದ್ಧಿ ಕ್ಷೇತ್ರದಲ್ಲಿ ಬಲು ಪ್ರಮುಖವಾದ ಕಾರ್ಯ ಎಂದು ನಾನು ಅಭಿಪ್ರಾಯ ಪಡುತ್ತೇನೆ-ಮನೋಜ್ ಜೈನ್,ಯಾದಗಿರಿ ಜಿಲ್ಲಾಧಿಕಾರಿಗಳು

ಉದ್ಘಾಟನಾ ಸಮಾರಂಭ

ಜುಲೈ 26,

“The environment is very festive. It has created an intimate experience for both the

presenters and the participants. Heartening to see the tremendous growth of the members of

NEK here. Although the sessions were packed, it didn’t feel tiresome or rushed because each

session was well-planned with enough scope for discussion. The research topics clearly had a

deep emotional connect for the researchers, and that made it come alive for the audience as

well. The desire and passion for change is very obvious. The forum is warm and vibrant; the

energy in the conference is like a live-wire.”

- L. Devaki, Azim Premji University

"ಎಲ್ಲೆಲ್ಲೂ ಹಬ್ಬದ ವಾತಾವರಣ! ವಿಷಯ ಮಂಡಿಸುವವರು ಮತ್ತು ಸಮಾವೇಶದಲ್ಲಿ ಪಾಲ್ಗೊಂಡವರಿಗೂ ಒಂದು ನಿಕಟ ಆತ್ಮೀಯ ಅನುಭವ. ಈಶಾನ್ಯ ಕರ್ನಾಟಕದ ಸದಸ್ಯರ ಈ ಅದ್ಭುತ ಬೆಳವಣಿಗೆ ಬಲು ಹೃದಯಂಗಮ. ಸಮಾವೇಶ ಕಿಕ್ಕಿರಿದು ತಂಬಿದ್ದರೂ ಅಧಿವೇಶನಗಳನ್ನು ಚೆನ್ನಾಗಿ ಯೋಜಿಸಿ ಚರ್ಚೆಗೆ ಸಾಕಷ್ಟು ಸಮಯ ನಿಯೋಜಿಸಿದ್ದರಿಂದ ಎಲ್ಲೂ ನೀರಸ ಅಥವಾ ಆತುರಾತುರವಾಯಿತು ಎನಿಸಲಿಲ್ಲ.ತೆಗೆದುಕೊಂಡಿದ್ದ ಸಂಶೋಧನಾ ವಿಷಯಗಳಿಗೂ ಮತ್ತು ಸಂಶೋಧಕರಿಗೂ ಭಾವನಾತ್ಮಕ ಸಂಬಂಧವಿದ್ದುದರಿಂದ ಪ್ರೇಕ್ಷಕರಿಗೂ ಅದು ತುಂಬು ಜೀವಂತಿಕೆಯಂದ ಮನಮುಟ್ಟಿತು. ಬದಲಾವಣೆಯ ಆಕಾಂಕ್ಷೆ ಮತ್ತು ಅಭೀಪ್ಸೆ ಎದ್ದುಕಾಣುತ್ತಿತ್ತು . ಆತ್ಮೀಯ ಮತ್ತು ಚೈತನ್ಯ ಪೂರ್ಣ ವೇದಿಕೆಯಲ್ಲಿ
 ಮಿಂಚಿನ ಸಂಚಾರವಾಗುತ್ತಿತ್ತು."

- ಎಲ್. ದೇವಕಿ, ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ

 

 

ಜುಲೈ 27

 

It’s wonderful to see the growth of the team. I remember how things were different during early days of the Learning Guarantee Program when getting an article for a newsletter was difficult. And today, we have 86 research papers that were presented. I am delighted to see this beautiful flower blossom. The fact that this was full-house participation by teachers and functionaries on a Sunday is testimony that Sahamanthana is their program and not ours.

-S. Giridhar, Registrar , Azim Premji University

ಈ  ತಂಡದ ಬೆಳವಣಿಗೆ ನಿಜಕ್ಕೂಅದ್ಭುತ .ಕಲಿಕಾ ಖಾತರಿ ಕಾರ್ಯಕ್ರಮದ ಮೊದಲ ದಿನಗಳಲ್ಲಿ ನಮ್ಮ ವಾರ್ತಾಪತ್ರಕ್ಕೆ ಒಂದು ಲೇಖನವನ್ನು ಪಡೆಯುವುದೂ ಕಷ್ಟವಾಗಿತ್ತು. ಇಂದು 86 ಸಂಶೋಧನಾ ಪ್ರಬಂಧ ಮಂಡನೆಯಾಗಿದೆ.ಈ ಸುಂದರ ಪುಷ್ಪ ಅರಳುತ್ತಿರುವುದು ನನಗೆ ಹರ್ಷತಂದಿದೆ.ಕಿಕ್ಕಿರಿದ ಸಭಾಂಗಣದಲ್ಲಿ ಶಿಕ್ಷಕರು ಮತ್ತು ಕಾರ್ಯಕರ್ತರು ಭಾನುವಾರದಂದೂ ಚಟುವಟಿಕೆಯಿಂದ ಭಾಗವಹಿಸುತ್ತಿರುವುದು ಸಹಮಂಥನವು ಅವರ ಕಾರ್ಯಕ್ರಮವೇ ಹೊರತು ನಮ್ಮದಲ್ಲ ಎಂಬುದಕ್ಕೆ ಪ್ರಬಲ ಸಾಕ್ಷಿ.

ಎಸ್.ಗಿರಿಧರ್,  ರಿಜಿಸ್ಟ್ರಾರ್, ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ

 

ಸಮನ್ವಯ ಮುಖ್ಯೋಪಾಧ್ಯಾಯರ ವಾರ್ತಾಪತ್ರದ ಬಿಡುಗಡೆ

 

 

 

 

 

 

 

 

 

Date: 
ಶನಿವಾರ, July 26, 2014 - 9:00pm
Source: 
ಜಿಲ್ಲಾ ಸಂಸ್ಥೆ,ಯಾದಗಿರಿ
19306 ನೊಂದಾಯಿತ ಬಳಕೆದಾರರು
7714 ಸಂಪನ್ಮೂಲಗಳು