ಶಿಕ್ಷಣದಲ್ಲಿ ಐಸಿಟಿ ಬಳಕೆಗಾಗಿ ಶಾಲಾ ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ -2015

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಪ್ರಕಟಣೆ

ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು  ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಮತ್ತು ತನ್ನ ಅಡಿಯಲ್ಲಿ ಬರುವ  ಸ್ವಾಯತ್ತ ಶಿಕ್ಷಣ ಸಂಸ್ಥೆಗಳಿಂದ, 2015ರಾಷ್ಟ್ರೀಯ ಐಸಿಟಿ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಆಹ್ವಾನಿಸುತ್ತದೆ. ಒಟ್ಟು 87 ಐಸಿಟಿ ಪ್ರಶಸ್ತಿ ಕೊಡಲಾಗುತ್ತದೆ.  ಈ ಯೋಜನೆಯು  ತಂತ್ರಜ್ಞಾನ ಬೆಂಬಲಿತ   ಕಲಿಕೆಯನ್ನು ಶಾಲೆಯ ಪಠ್ಯಕ್ರಮ ಮತ್ತು ವಿಷಯದ ಬೋಧನೆಯಲ್ಲಿ ರಿಣಾಮಕಾರಿಯಾಗಿ ಮತ್ತು ನವೀನ ರೀತಿಯಲ್ಲಿ  ಹೊಂದಿಸಿಕೊಂಡು ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು  ಹೆಚ್ಚಿಸುವಲ್ಲಿ ಮತ್ತು ತನ್ಮೂಲಕ ಐಸಿಟಿ ಬಳಸಿಕೊಂಡು ವಿಚಾರಣೆ ಆಧಾರಿತ ಸಹಕಾರಿ ಮತ್ತು ಸಹಯೋಗದ ಕಲಿಕೆಯ ವರ್ಧನೆಗೆ ಕೊಡುಗೆ ನೀಡಿರುವ  ಶಿಕ್ಷಕರಿಗೆ  ಸನ್ಮಾನ,  ಮಾಡಲು ಉದ್ದೇಶಿಸಿದೆ. ಯೋಜನೆಯ ಒಟ್ಟಾರೆ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟ ಮತ್ತು ಸಮುದಾಯಕ್ಕೆ ಶಿಕ್ಷಕಕೊಡುಗೆಯನ್ನು ಗುರುತಿಸುತ್ತದೆ.

ಅರ್ಹತಾ ಮಾನದಂಡ:
ಭಾರತದ ಎಲ್ಲೆಡೆ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ
ಸ್ಪರ್ಧೆಯು ತೆರೆದಿರುತ್ತದೆ.
 

ಆಯ್ಕೆ ಮತ್ತು ಪ್ರವೇಶ ಪತ್ರ ಸಲ್ಲಿಕೆ:
ಶಾಲಾ  ಶಿಕ್ಷಕರು ತಮ್ಮಪ್ರವೇಶಪತ್ರವನ್ನು
ಸಂಬಂಧಪಟ್ಟ ರಾಜ್ಯಗಳು / ಕೇಂದ್ರಾಡಳಿತ ಮತ್ತು ಸ್ವಾಯತ್ತ ಸಂಸ್ಥೆಗಳು (KVs, NVS, CBSE CISCE, CTSA, AEES, ರಕ್ಷಣಾ ಇತ್ಯಾದಿ ಅಡಿಯಲ್ಲಿ ಸೈನಿಕ ಶಾಲೆಗಳ),ಕಾರ್ಯದರ್ಶಿ / ಅಧ್ಯಕ್ಷರು / ಆಯುಕ್ತರು (ಶಿಕ್ಷಣ) ಗೆ ಕಳುಹಿಸಬೇಕೆಂದು ಕೋರಲಾಗಿದೆ  ಅವರು ತಮ್ಮ ಆಯ್ಕೆ ಮತ್ತು ಅರ್ಹತೆಯ ಅನುಸಾರವಾಗಿ, ತಮ್ಮ ಪ್ರಶಸ್ತಿಗಳ ಕೋಟಾದ  ಎರಡು ಪಟ್ಟು ಶಿಕ್ಷಕರ ಹೆಸರನ್ನು   ಶಿಫಾರಸು ಮಾಡುತ್ತಾರೆ
ಶಿಕ್ಷಕರು / ಪ್ರಾಂಶುಪಾಲರು ನೇರವಾಗಿ ಯಾವುದೇ ನಾಮನಿರ್ದೇಶನವನ್ನು CIET, NCERT, ದಹಲಿ ಗೆ ಕಳುಹಿಸ ಬಾರದೆಂದು ಕೋರಲಾಗಿದೆ

ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಲ್ಲಿ / ಸ್ವಾಯತ್ತ ಸಂಸ್ಥೆಗಳ ಶಾಲೆಗಳ ಶಿಕ್ಷಕರು ಕಾರ್ಯದರ್ಶಿ (ಶಿಕ್ಷಣ) ಇವರಿಗೆ ನಾಮನಿರ್ದೇಶನಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 31, 2015 ಆಗಿದೆ.

CIET, NCERTಗೆ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ /  ಸ್ವಾಯತ್ತ ಸಂಸ್ಥೆಗಳ  ಕಾರ್ಯದರ್ಶಿ ಸಣ್ಣ ಪಟ್ಟಿ ನಾಮನಿರ್ದೇಶನಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಜೂನ್ 30, 2015 ಆಗಿದೆ.

http://ciet.nic.in/ICT_Awards.php
ಅರ್ಹತಾ ನಿಯಮಗಳು, ರೆಗ್ಯುಲೇಷನ್ ಗಳು ಮತ್ತು ಪ್ರವೇಶ ಪತ್ರದ ನಮೂನೆ ಬಗ್ಗೆ ವಿವರಗಳಿಗಾಗಿ, ನಮ್ಮ ವೆಬ್ಸೈಟ್ www.ciet.nic.in ಭೇಟಿ ನೀಡಿ ಅಥವಾ ಕೆಳಗಿನ ವಿಳಾಸಕ್ಕೆ ಪತ್ರ ಬರೆಯಿರಿ:

The Joint Director,

Central Institute of Educational Technology (CIET), NCERT

Sri Aurobindo Marg, New Delhi-110016

E-mail: jdciet.ncert@nic.in

Date: 
ಶುಕ್ರವಾರ, March 20, 2015 - 10:15am
Source: 
http://ciet.nic.in/ICT_Awards.php
18449 ನೊಂದಾಯಿತ ಬಳಕೆದಾರರು
7204 ಸಂಪನ್ಮೂಲಗಳು