ವೃತ್ತಿ ಕೌಶಲ ಮೇಳ ಮಕ್ಕಳಿಗೆ ಸಹಕಾರಿ'

ಸುರಪುರ: ಅಜೀಂ ಪ್ರೇಮಜಿ ಫೌಂಡೇಶನ್ ತಾಲ್ಲೂಕಿನಲ್ಲಿ ಶಿಕ್ಷಣದ ಅಭಿವೃದ್ಧಿಗೆ ಅದ್ಭುತ ಕೊಡುಗೆ ನೀಡುತ್ತಿದೆ. ವಿಜ್ಞಾನ, ಮೆಟ್ರಿಕ್ ಇತರ ಮೇಳಗಳನ್ನು ಆಯೋಜಿಸಿ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸಲು ಕಾರಣವಾಗಿತ್ತು.

ಈಗ ವೃತ್ತಿ ಕೌಶಲ ಮೇಳ ಆಯೋಜಿಸಿ ಮಕ್ಕಳಲ್ಲಿ ವೃತ್ತಿಪರತೆ ಮೂಡಿಸಲು ಯತ್ನಿಸುತ್ತಿದೆ. ಇದರ ಉಪಯೋಗವನ್ನು ಮಕ್ಕಳು ಪಡೆಯಬೇಕು. ಇಂತಹ ಮೇಳಗಳು ಖಂಡಿತ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿವೆ ಎಂದು ಕಾಂಗ್ರೆಸ್ ಮುಖಂಡ ಮಲ್ಲಯ್ಯ ಕಮತಗಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕುಪಗಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವೃತ್ತಿ ಕೌಶಲ ಮೇಳದಲ್ಲಿ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀನಿವಾಸ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಎ. ವಿ. ಕೆಂಪರಂಗಯ್ಯ, ಅಜೀಂ ಪ್ರೇಮಜಿ ಫೌಂಡೇಶನ್ ರುದ್ರೇಶ, ಮಹಾದೇವ ಮೂಲಗೆ, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಳ್ಳೆಪ್ಪ ಕಾಂಜಾಂಜಿ, ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಆರ್. ಎಸ್. ಕರಡ್ಡಿ ಮಾತನಾಡಿದರು. ಶಾಲಾ ಮೇಲುಸ್ತವಾರಿ ಸಮಿತಿ ಅಧ್ಯಕ್ಷ ನಾಗಪ್ಪ ಪೆದ್ದಕಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಮಕ್ಕಳು ಹೂವಿನ ಬೊಕ್ಕೆ, ಕ್ಯಾಂಡಲ್ ತಯಾರಿಕೆ ವಿವಿಧ ವೃತ್ತಿ ಕೌಶಲಗಳನ್ನು ಪ್ರದರ್ಶಿಸಿ ಗಣ್ಯರ ಮೆಚ್ಚುಗೆಗೆ ಪಾತ್ರರಾದರು. ಕುಬೇರಪ್ಪ ಸ್ವಾಗತಿಸಿದರು. ಶಿವಾನಂದ ನಿರೂಪಿಸಿದರು. ಸಿದ್ಧರಾಮ ವಂದಿಸಿದರು.

www.prajavani.net/authors/%E0%B2%AA%E0%B3%8D%E0%B2%B0%E0%B2%9C%E0%B2%BE%...">http://www.prajavani.net/authors/%E0%B2%AA%E0%B3%8D%E0%B2%B0%E0%B2%9C%E0...">ಪ್ರಜಾವಾಣಿ ವಾರ್ತೆ

 

Date: 
ಮಂಗಳವಾರ, January 15, 2013 - 8:45am
Source: 
http://www.prajavani.net/article/%E0%B2%B5%E0%B3%83%E0%B2%A4%E0%B3%8D%E0%B2%A4%E0%B2%BF-%E0%B2%95%E0%B3%8C%E0%B2%B6%E0%B2%B2-%E0%B2%AE%E0%B3%87%E0%B2%B3-%E0%B2%AE%E0%B2%95%E0%B3%8D%E0%B2%95%E0%B2%B3%E0%B2%BF%E0%B2%97%E0%B3%86-%E0%B2%B8%E0%B2%B9%E0%B2%95%E
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು