ರಾಜಧಾನಿಯಲ್ಲಿ ರಮಣೀಯ ಅನಾವರಣ.

ನವದೆಹಲಿ, ದಿನಾಂಕ-5-9-12..

ಶಿಕ್ಷಕರ ದಿನಾಚರಣೆಯ ಶುಭ ಸಂದರ್ಭದಂದು  ವಸಂತ ವಿಹಾರದಲ್ಲಿರುವ ಅಜೀಂ ಪ್ರೇಂಜಿ ಪ್ರತಿಷ್ಠಾನದ ನವದೆಹಲಿಯ ಕಛೇರಿಯ ಐಎಎ ತಂಡದವರು ಶಿಕ್ಷಕರ ದಿನಾಚರಣೆಯ ಸರಳ ಸಮಾರಂಭಕ್ಕೆ 6 ಜನ ಶಿಕ್ಷಕರನ್ನು ಆಹ್ವಾನಿಸಿದ್ದರು. ಅವರಲ್ಲಿ ಇಬ್ಬರು ಅದೇ ದಿನ ಶ್ರೇಷ್ಠ ಶಿಕ್ಷಕರಾಗಿ ರಾಜ್ಯ ಪ್ರಶಸ್ತಿ ಪಡೆದವರು. ರಾಜ್ಯ ಪ್ರಶಸ್ತಿಗೆ ಪಾತ್ರರಾದ ಶ್ರೀಮತಿ ಇಂದು ಬಾತ್ರ ಅವರು ಟೀಚರ್ಸ್ ಆಫ್ ಇಂಡಿಯಾ ಪೋರ್ಟಲ್ ನ ಹೊಸ ವಿನ್ಯಾಸದ ಅನಾವರಣವನ್ನು ಪೋರ್ಟಲ್ಲಿನ ಚಿತ್ರವನ್ನು ಕ್ಲಿಕ್ ಮಾಡಿ ತೆರೆದು  ಮಾಡಿದರು.ಅದೇ ಸಮಾರಂಭದಲ್ಲಿ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಶಿಕ್ಷಣ,ತಂತ್ರಜ್ಞಾನ ಮತ್ತು ವಿನ್ಯಾಸ ತಂಡದ ಸದಸ್ಯರೂ ಹಾಗು ಹಿಂದಿ ಪೋರ್ಟಲ್ಲಿನ ಸಂಪಾದಕರಾದ ಶ್ರೀ ರಮಣಿಕ್ ಮೋಹನ್ ಅವರು ನೆರದವರಿಗೆ ಪೋರ್ಟಲ್ಲಿನ ವಿವಿಧ ವಿಭಾಗದ ಯಾತ್ರೆ ಮಾಡಿಸಿದರು.ಅದರ ಸಂವಾದ ವೇದಿಕೆ,ವಿಷಯ ಸಾಮಾಗ್ರಿಗಳ ಮಹತ್ವವನ್ನು ವಿವರಿಸಿದರು.

Date: 
ಶನಿವಾರ, September 8, 2012 - 9:15pm
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು