ಯಶಸ್ವಿ ಅನಾವರಣ

ದಿನಾಂಕ 5-9-2012.ಬೆಂಗಳೂರು.

ಇಂದು ಶಿಕ್ಷಕರ ದಿನಾಚರಣೆಯ ಶುಭಸಂದರ್ಭದಂದು ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ  ಟೀಚರ್ಸ್ ಆಫ್ ಇಂಡಿಯಾ ಪೋರ್ಟಲ್ ನ ಹೊಸ ವಿನ್ಯಾಸದ ಅನಾವರಣ ಸಮಾರಂಭ ನಡೆಯಿತು. ಚಿಕ್ಕದಾದ ಮತ್ತು ಚೊಕ್ಕವಾದ ಸಮಾರಂಭದಲ್ಲಿ ಕಿಕ್ಕಿರಿದ ಸಭಾಂಗಣದಲ್ಲಿ ಈ ಸಮಾರಂಭದ ಅಂಗವಾಗಿ 12 ಜನ ವಿವಿಧ ಶಾಲೆಗಳ ಶಿಕ್ಷಕರನ್ನು ಸನ್ಮಾನಿಸಲಾಯಿತು.

 ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಣ,ತಂತ್ರಜ್ಞಾನ ಮತ್ತು ವಿನ್ಯಾಸ ತಂಡದ ಮುಖ್ಯಸ್ಥೆ  ಡಾ. ರಾಧ ಗಣೇಶನ್ ಅವರು ಪೋರ್ಟಲ್ ನಡೆದುಬಂದ ದಾರಿ, ಅದರ ಏಳು-ಬೀಳುಗಳು ಮತ್ತು ಶ್ರಮ-ಸಾಧನೆಗಳ ಸಂಕ್ಷಿಪ್ತ ವಿವರಣೆಯನ್ನು ನೀಡಿದರು.

ಸಮಾರಂಭದ  ಅಂಗವಾಗಿ ಎರ್ಪಡಿಸಿದ್ದ ಸ್ಫರ್ಧೆಗೆ ಸ್ಪಂದಿಸಿಬಂದಿದ್ದ  95 ಪದ್ಯ ಫೋಟೋಗಳ ಪ್ರದರ್ಶನ ಎಲ್ಲರ ಗಮನಸೆಳೆಯಿತು.  ಪ್ರಾರಂಭಕ್ಕೆ ಶ್ರೀ ಅನಂತಗಂಗೋಳ ಅವರ  ಶುಭಾಶಯದ ಧ್ವನಿ ಸಂದೇಶವನ್ನು ಸಭೆಗೆ ಕೇಳಿಸಲಾಯಿತು. ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಶ್ರೀ ರಾಮ್ ಅವರು ಸಾಂದರ್ಭಿಕ ಪರಿಚಯದ ನುಡಿಗಳನ್ನುಆಡಿದರು. ಶಿಕ್ಷಕರೇ ತಯಾರಿಸಿದ್ದ ಅರ್ಥಗರ್ಭಿತ ಕಿರುಚಿತ್ರಗಳು ಮತ್ತು ಪದ್ಯಗಳು ಸಭೆಯ ಪ್ರಶಂಸೆಗೆ ಪಾತ್ರವಾದವು.

 ಸಮಾರಂಭದಲ್ಲಿ ಸನ್ಮಾನಿತ ಶಿಕ್ಷಕರನ್ನು ಶ್ರೀ ಅರುಣ್ ನಾಯಕ್ ಅವರು ಸ್ವಾಗತಿಸಿ ಪರಿಚಯಿಸಿದರು. ಸನ್ಮಾನಿತ ಶಿಕ್ಷಕರಲ್ಲಿ ನಾಲ್ವರು ತಮ್ಮ ಅನುಭವವನ್ನು ಸಭೆಯಲ್ಲಿ ಹೇಳಿದರು. ತರುವಾಯ ಸನ್ಮಾನಿತ ಶಿಕ್ಷಕರು ಕಂಪ್ಯೂಟರ್ ಕ್ಲಿಕ್ ಮಾಡುವ ಮೂಲಕ  ಹೊಸ ವಿನ್ಯಾಸದ  ಅನಾವರಣ ಮಾಡಿದರು.

ಪೊರ್ಟಲ್ ಗೆ ಪ್ರೇರಕಶಕ್ತಿಯಾದ ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀ ಗಿರಿಧರ್  ಅವರು ಅಭಿನಂದನಾ ಮಾತುಗಳನ್ನು ಆಡಿ ಟೀಚರ್ಸ್ ಆಫ್ ಇಂಡಿಯಾ ಪೋರ್ಟಲ್ ಗೆ ಸರ್ವ ಯಶಸ್ಸನ್ನು  ಹಾರೈಸಿದರು.

ಆರ್ಘ್ಯಂ ಸಂಸ್ಥೆ ಯ ಮುಖ್ಯಸ್ಥರಾದ ಶ್ರೀ ದೀಪಕ್ ಮೆನನ್ ಅವರು ಮಾತನಾಡಿ ಶಿಕ್ಷಣ ರಂಗದಲ್ಲಿ ಅಪಾರ ಅಭಿವೃದ್ದಿಗೆ ಸಾಧ್ಯತೆಯಿದೆ ಎಂದು ತಿಳಿಸಿ ಶುಭಕೋರಿದರು.

ಡಾ.ರೋಹಿತ್ ಧನಕರ್ ಅವರ ಮುಖ್ಯ ಭಾಷಣ ಬೋಧಪ್ರದವಾಗಿತ್ತು.

ವಿಶ್ವವಿದ್ಯಾಲಯದ ನಿನಾದ್ ತಂಡದವರಿಂದ ವಾದ್ಯರಹಿತ ವೃಂದಗಾನವು ಸಭಿಕರನ್ನು ರಂಜಿಸಿತು.

Date: 
ಗುರುವಾರ, September 6, 2012 - 11:00am
Source: 
ಸಂಪಾದಕ ಮಂಡಳಿ, ಟೀಚರ್ಸ್ ಆಫ್ ಇಂಡಿಯಾ ಪೋರ್ಟಲ್
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು