ಮೃಗಾಲಯದಲ್ಲಿ ಉಪಾಧ್ಯಾಯರಿಗೆ ಕಾರ್ಯಾಗಾರ

ಮೈಸೂರು ಮೃಗಾಲಯದಲ್ಲಿ ಪರಿಸರ ಸಂರಕ್ಷಣಾ ಕಾರ್ಯಾಗಾರ:

ಮೃಗಾಲಯ ಸಂರಕ್ಷಣಾ ಶಿಕ್ಷಣ ಕಾರ್ಯಕ್ರಮದ ಅಂಗಭಾಗವಾಗಿ ಮೈಸೂರು ಮೃಗಾಲಯದವರು ಅಗಸ್ಟ್ 26 ಮತ್ತು 27 ರಂದು 11 ಮತ್ತು 12ನೇ ತರಗತಿ(ಪದವಿ ಪೂರ್ವಕಾಲೇಜು) ಶಿಕ್ಷಕರಿಗೆ ಎರಡು ದಿನದ ಕಾರ್ಯಾಗಾರವನ್ನು ಏರ್ಪಡಿಸಿದ್ದಾರೆ.ಸದರಿ ಕಾರ್ಯಕ್ರಮದ ಮೂಲಕ ಶಿಕ್ಷಕರು ವನ್ಯ ಜೀವಿ ಮತ್ತು ಪರಿಸರ ಸಂರಕ್ಷಣೆ ಹಾಗು ಪಠ್ಯಕ್ರಮಗಳು ಒಂದಕ್ಕೊಂದು ಅನುಗುಣವಾಗಿರುವಂತೆ ಮಾಡುವುದು ಸಾಧ್ಯವೆಂದು ಮೃಗಾಲಯ ಅಧಿಕಾರಗಳ ನಂಬಿಕೆ.ಒಂದು ಕಾಲೇಜಿನಿಂದ ಇಬ್ಬರು ಶಿಕ್ಷಕರು ಭಾಗವಹಿಸಬಹುದು.ಮೊದಲು ಬಂದವರಿಗೆ ಆದ್ಯತೆ ಎಂಬ ಕ್ರಮದಲ್ಲಿ ಒಟ್ಟು 40 ಜನರಿಗೆ ಅವಕಾಶವಿದೆ.ಅರ್ಜಿನಮೂನೆಯನ್ನು ಮೃಗಾಲಯದ ಕಛೇರಿಯಲ್ಲಿ ಪಡೆಯಬಹುದು.

Zoo to hold workshop for teachers
Mysore zoo will hold a two-day workshop for teachers of pre-university colleges here on August 26 and 27 to create awareness on zoo conservation education programmes. The zoo authorities feel that the effort would help teachers correlate curriculum with conservation of wildlife and environment. Only two teachers can participate from a college and a total of 40 teachers will be enrolled on a first come, first served basis, according to a press release. Interested teachers can obtain application forms from the zoo office

ಮೂಲ:www.justmysore.in

Date: 
ಮಂಗಳವಾರ, July 30, 2013 - 11:15am
Source: 
ಪತ್ರಿಕಾವಾರ್ತೆ
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು