ಮಕ್ಕಳ ಸಾಹಿತಿ ಶಿಕ್ಷಕರ ಸಮಾವೇಶ

ಯಾದಗಿರಿ ಜಿಲ್ಲಾ ಸಂಸ್ಥೆಯು ಕೆಂಭಾವಿಗ್ರಾಮದಲ್ಲಿ ಎರಡು ದಿನಗಳ ಮಕ್ಕಳ ಸಾಹಿತಿ ಶಿಕ್ಷಕರ ಸಮಾವೇಶವನ್ನು, ನವೆಂಬರ್ 22 ಮತ್ತು 23, 2013 ರಂದು ಸುರಪುರ ಬ್ಲಾಕ್ ನಲ್ಲಿ ಏರ್ಪಡಿಸಿತ್ತು. ಸಮಾವೇಶವನ್ನು ಕೆಂಭಾವಿ ಶಿಕ್ಷಕರ ಕಲಿಕಾ ಕೇಂದ್ರ (ಟಿ ಎಲ್ ಸಿ) ಕ್ಯಾಂಪಸ್  ನ ಒಳಗೆ ನಡೆಸಲಾಯಿತು.
ಮಕ್ಕಳ ಸಾಹಿತ್ಯಕ್ಷೇತ್ರದಲ್ಲಿ  ಕೆಲಸ ಮಾಡಿದ ಶಿಕ್ಷಕರನ್ನು  ಗುರುತಿಸಿ, ಪ್ರೋತ್ಸಾಹಿಸುವುದು  ಮತ್ತು  ತಮ್ಮ ತರಗತಿಯಲ್ಲಿ ಸಾಹಿತ್ಯವನ್ನು  ಬಳಸುವಂತೆ ಅವರನ್ನು ಪ್ರೇರೇಪಿಸುವುದು ಸಮಾವೇಶದ ಉದ್ದೇಶವಾಗಿತ್ತು.
ಕನ್ನಡ ಸಾಹಿತ್ಯದ ಶ್ರೀಮಂತ ಪರಂಪರೆಗೆ ಹೋಲಿಸಿದರೆ  ಕನ್ನಡದಲ್ಲಿ ರಚನೆಯಾದ ಮಕ್ಕಳ ಸಾಹಿತ್ಯ ಅತ್ಯಲ್ಪ ಎಂದೇ ಹೇಳಬೇಕು . ಕನ್ನಡದಲ್ಲಿ ಮಕ್ಕಳಿಗೆಂದೇ ಸಾಹಿತ್ಯ ಬರೆಯುವ ಸಾಹಿತಿಗಳು ಬಲು ವಿರಳ . ಹಿಂದಿ ಮುಂತಾದ ಇತರ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಕಥೆಗಳು, ಶಿಶುಪ್ರಾಸಗಳು, ಹಾಡುಗಳು  ಮತ್ತು ನಾಟಕ ಗಳಂತಹ ಮಕ್ಕಳ ಸಾಹಿತ್ಯದ ಲಭ್ಯತೆ ಸೀಮಿತವಾಗಿದೆ. ಮಕ್ಕಳ ಸಾಹಿತ್ಯವನ್ನು ಬರೆಯುವ ಮತ್ತು ತರಗತಿಯ ಇದನ್ನು ಬಳಸಿಕೊಂಡು ಪಾಠಮಾಡುವ ಶಿಕ್ಷಕರ ಸಂಖ್ಯೆ ಕೂಡ ಬೆರಳೆಣಿಕೆಯಷ್ಟು. ಮಕ್ಕಳಿಗಾಗಿ ಸಾಹಿತ್ಯ ರಚನೆ ಮಾಡುವ ಮತ್ತು ಸೂಕ್ತ ಮಕ್ಕಳ ಸಾಹಿತ್ಯಕೃತಿಗಳನ್ನು ಗುರುತಿಸಿ ತರಗತಿಯಲ್ಲಿ ಅದನ್ನು ಬಳಸಿ ಕೊಳ್ಳುವ  ಈ ಎರಡೂ ದಿಶೆಯಲ್ಲಿ  ಶಿಕ್ಷಕರ ಸಾಮರ್ಥ್ಯ ವರ್ಧನೆ ಯನ್ನು ಗುರಿಯಲ್ಲಿಟ್ಟುಕೊಂಡು ಈ ಸಮಾವೇಶವನ್ನು ಆಯೋಜಿಸಲಾಗಿತ್ತು.

. ಸಮ್ಮೇಳನಕ್ಕೆ  ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ,. ಸ್ಥಳೀಯ ಕನ್ನಡ ಸಾಹಿತ್ಯ ಸಂಸ್ಥೆಗಳಾದ ಸುರಪುರದ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಸಂಘ, ಮತ್ತು ಕೆಂಭಾವಿ ಗ್ರಾಮದ ಜನತೆ  ಹೃತ್ಪೂರ್ವಕ ಬೆಂಬಲ ನೀಡಿದರು.