ಮಕ್ಕಳ ಗ್ರಾಮ ಸಭೆ & ಎಸ್.ಡಿ.ಎಮ್.ಸಿ ಸಬಲೀಕರಣ

ದಿನಾಂಕ- 14-11-2018 ರಂದು ನಮ್ಮ ಶಾಲೆಯಾದ ಸ.ಹಿ.ಪ್ರಾ. ಶಾಲೆ ಮಂಗಳೂರು ತಾ.ಸುರಪುರ ಜಿ.ಯಾದಗಿರನಲ್ಲಿ ಮಹಿಳಾ ಸಮುಖ್ಯಾ ಸಂಸ್ಥೆ ಸುರಪುರ ಮುಖ್ಯಸ್ಥರಾದಂತಹ ಶ್ರೀಮತಿ ಕರುಣಾ. ಜೆ (JRP) ಮತ್ತು ಕುಮಾರಿ ಸಾಬಮ್ಮ (CRP) ಆದ ಇವರುಗಳು ಮಕ್ಕಳ ಗ್ರಾಮ ಸಭೆ & SDMC ಸಬಲೀಕರಣದ ಕುರಿತು ಚರ್ಚಿಸಲು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಶಾಲೆಯ SDMC ಸಮಿತಿಯವರಾದ ಶ್ರೀ ಬಲಭೀಮಪ್ಪ ಪೂಜಾರಿ ಅಧ್ಯಕ್ಷರು, ಶ್ರೀ ಭೀಮರಾಯ ಒಂಟೆತ್ತು ಉಪಾಧ್ಯಕ್ಷರು ಹಾಗೂ ಶ್ರೀ ನಂದಪ್ಪ ದೊರೆ, ಶ್ರೀ ನಾಗನಗೌಡ ಪಾಟೀಲ, ಶ್ರೀಮತಿ ಪಾರ್ವತಿ, ಶ್ರೀಮತಿ ಮಲ್ಲಮ್ಮ, ಶ್ರೀಮತಿ ಪರಮವ್ವ, ಶ್ರೀಮತಿ ಶರಣಮ್ಮ, ಶ್ರೀಮತಿ ಖಾದರಭೀ, ಶ್ರೀಮತಿ ಲಾಲಬೀ ಸದಸ್ಯರುಗಳು ಹಾಗೂ ಅಂಗನವಾಡಿ ಕಾರ್ಯಕರ್ತರಾದ ಶ್ರೀಮತಿ ತಾಯಮ್ಮ ಹವಾಲ್ದಾರ ಹಾಗೂ ಸಹಾಯಕರಾಧ ಶ್ರೀಮತಿ ರೇಣುಕಾ ಹಾಗೂ ಮಂಗಳೂರು ಗ್ರಾಮದ ಸ್ತ್ರೀ ಶಕ್ತಿ ಸಂಘದವರು ಭಾಗವಹಿಸದ್ದರು.
ಈ ಕಾರ್ಯಕ್ರಮದಲ್ಲಿ ಚರ್ಚಿಸಲಾದ ವಿಷಯಗಳು ಈ ಕೆಳಗಿನಂತಿರುತ್ತವೆ.
1. ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರುವುದು.
2. ಶಾಲಾ ಆವರಣದ ಸ್ವಚ್ಚತೆಯನ್ನ ಕಾಯ್ದುಕೊಳ್ಳುವುದು.
3. ಕಿಶೋರ & ಕಿಶೋರಿ ಗುಂಪಿನ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದು.
4. ಕಿಶೋರಿ ಬಾಲಕಿಯರ ವ್ಯಯಕ್ತಿಕ ಸಮಸ್ಯೆಗಳಿಗೆ ಮಾರ್ಗದರ್ಶನ & ಪರಿಹಾರ ಕಂಡುಕೊಳ್ಳುವುದು.
5. SDMC ಯವರ ಪಾತ್ರ & ಜವಾಬ್ದಾರಿಗಳನ್ನು & ಶಾಲೆಯ ಅಭಿವೃದ್ಧಿಯಲ್ಲಿ ಅವರ ಪಾತ್ರವನ್ನು ತಿಳಿಸುವುದು.
6. ಸ್ತ್ರೀ ಶಕ್ತಿ ಸಂಘಗಳ ಕಾರ್ಯಚಟುವಟಿಕೆಗಳ ಮೇಲ್ವಿಚಾರಣೆ & ಮಾರ್ಗದರ್ಶನ ನೀಡುವುದು.

ಈ ಎಲ್ಲಾ ವಿಷಯಗಳನ್ನು ಚರ್ಚಿಸಲಾಗಿರುತ್ತದೆ.

Date: 
ಶುಕ್ರವಾರ, November 16, 2018 - 3:00pm
19178 ನೊಂದಾಯಿತ ಬಳಕೆದಾರರು
7446 ಸಂಪನ್ಮೂಲಗಳು