ಭಾರತೀಯ ಶಾಲಾಶಿಕ್ಷಕರಿಗೆಆಸ್ಟ್ರೇಲಿಯನ್ ಸ್ಕಾಲರ್ಷಿಪ್

ಭಾರತೀಯ ಶಾಲಾಶಿಕ್ಷಕರಿಗೆಆಸ್ಟ್ರೇಲಿಯನ್ ಸ್ಕಾಲರ್ಷಿಪ್   (Australian Scholarship for Indian School Teachers )

 ದಿ ಅಶೋಕ್ ಖುರಾನಾ-ಭಾರತೀಯ ಶಾಲಾಶಿಕ್ಷಕರಿಗೆ ಅಡಿಲೈಡ್ ವಿಶ್ವವಿದ್ಯಾನಿಲಯದ ಸ್ಕಾಲರ್ಷಿಪ್ (The Ashok Khurana-University of Adelaide scholarship for Indian teachers) ಇವರು ಸಫಲರಾದ ಅರ್ಜಿದಾರರಿಗೆ  ಅಡಿಲೈಡ್ ವಿಶ್ವವಿದ್ಯಾನಿಲಯದಲ್ಲಿ ಮಾಸ್ಟರ್ಸ್ ಆಫ್ ಎಜುಕೇಷನ್ ಪ್ರೋಗ್ರಾಂ ಆಫ್ ಸ್ಟಡಿ (Master of Education program of study)  ಕಾರ್ಯಕ್ರಮ ದಲ್ಲಿ ಭಾಗವಹಿಸಿ ಓದಲು ಎಲ್ಲ ನೆರವನ್ನು ನೀಡುತ್ತದೆ

ಅಡಿಲೈಡ್ ವಿಶ್ವವಿದ್ಯಾನಿಲಯದಲ್ಲಿ  ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಅಶೋಕ್ ಖುರಾನಾ ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ಈ ಸ್ಕಾಲರ್ ಶಿಪ್ ಅನ್ನು 2012 ರ ನವೆಂಬರ್19ರಂದು ಘೋಷಿಸಲಾಯಿತು.ಯುವಕರಾಗಿದ್ದಾಗ ಶ್ರೀ ಅಶೋಕ್ ಖುರಾನಾ ಅವರಿಗೆ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶ ದೊರಕಿತು.ಅದರಿಂದ ಅವರ ಜೀವನದ ಸ್ವರೂಪವೇ ಬದಲಾಯಿತು. ಭಾರತದ ಶಿಕ್ಷಣ ವ್ಯವಸ್ಥೆಗೆ ತಮ್ಮ ಆಭಾರಮನ್ನಣೆ ಸಲ್ಲಿಸಲು ಹಾಗು ಭಾರತ ಮತ್ತು ಆಸ್ಟ್ರೇಲಿಯಾದ ನಡುವೆ ಶೈಕ್ಷಣಿಕ ಸಂಬಂಧಗಳನ್ನು ಹೆಚ್ಚು ಬಲಪಡಿಸಲು ಅವರು  ಈ ಮೂಲಕ ಇಚ್ಛಿಸುತ್ತಿದ್ದಾರೆ.

ಈ ಸ್ಕಾಲರ್ ಶಿಪ್  ಸಫಲರಾದ ಅರ್ಜಿದಾರರಿಗೆ  ಅಡಿಲೈಡ್ ವಿಶ್ವವಿದ್ಯಾನಿಲಯದಲ್ಲಿ  ಮಾಸ್ಟರ್ಸ್ ಆಫ್ ಎಜುಕೇಷನ್ ಪ್ರೋಗ್ರಾಂ ಆಫ್ ಸ್ಟಡಿ(Master of Education program of study)  ಕಾರ್ಯಕ್ರಮ ವನ್ನು ಪೂರ್ಣಾವಧಿಯಾಗಿ ಅಧ್ಯಯನ ಮಾಡಲು ನೆರವು ನೀಡುತ್ತದೆ. ಈ ಸ್ಕಾಲರ್ ಶಿಪ್ನ  ಒಟ್ಟು ಮೌಲ್ಯವು ವರ್ಷಕ್ಕೆ  25,000 ಡಾಲರ್ ಆಗಿದ್ದು ಇದು ಸ್ಕಾಲರ್ ಶಿಪ್ ಪಡೆದವರ ವಿಮಾನ ಯಾನದ ಖರ್ಚು,ಜೀವನ ನಿರ್ವಹಣೆ ವೆಚ್ಚ ಮತ್ತು ಪಾಠ ಶುಲ್ಕಗಳನ್ನು ಭರಿಸುತ್ತದೆ. ಸಫಲರಾದ ಅರ್ಜಿದಾರರಿಗೆ  ಮಾಸ್ಟರ್ಸ್ ಆಫ್ ಎಜುಕೇಷನ್ (Master of Education) ಕಾರ್ಯಕ್ರಮದ ಒಂದುವರ್ಷದ ಪಾಠ ಶುಲ್ಕದಲ್ಲಿ  ಶೇಕಡಾ 50 ರಿಯಾಯತಿ ನೀಡಲಾಗುತ್ತದೆ.

. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14ನೇ ಡಿಸೆಂಬರ್, 2012        

 ಹೆಚ್ಚಿನ ವಿವರಗಳು ಮತ್ತು ಅರ್ಜಿ ನಮೂನೆಗಾಗಿ ದಯವಿಟ್ಟು  http://www.adelaide.edu.au/scholarships/pgcoursework/   ಗೆ ಭೇಟಿ ನೀಡಿರಿ

 

 

 

Date: 
ಗುರುವಾರ, November 22, 2012 - 1:15pm
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು