ಫೆಲೋಷಿಪ್ ಪ್ರೋಗ್ರಾಂ

ಅಜೀಂ ಪ್ರೇಂಜಿ ಪ್ರತಿಷ್ಠಾನವು 2015  ತನ್ನ ಫೆಲೋಶಿಪ್ ಪ್ರೋಗ್ರಾಂ ಅನ್ನು ಪ್ರಕಟಿಸುತ್ತಿದೆ.

ಬೆಂಗಳೂರು, ಆಗಸ್ಟ್ 17, 2015 : ಅಜೀಂ ಪ್ರೇಂಜಿ ಪ್ರತಿಷ್ಠಾನವು 2015ರ ಡಿಸೆಂಬರ್ 14ರಿಂದ  ಪ್ರಾರಂಭವಾಗುವ ತನ್ನ ವಾರ್ಷಿಕ ಫೆಲೋಶಿಪ್ ಪ್ರೋಗ್ರಾಂ ಅನ್ನು ಪ್ರಕಟಿಸಿದೆ. ಈ ವ್ಯಾಸಂಗಕ್ರಮಕ್ಕೆ ಅರ್ಜಿಗಳನ್ನು ಯಾವುದೇ ವಿದ್ಯಾವಿಷಯದಲ್ಲಿ ಸ್ನಾತಕೋತ್ತರ ಅಥವಾ ವೃತ್ತಿಪರ ಪದವಿಯನ್ನು ಪಡೆದಿದ್ದು 3 ರಿಂದ 10 ವರ್ಷಗಳ ಅನುಭವ ಹೊಂದಿರುವ ಮತ್ತು ಶಿಕ್ಷಣದಲ್ಲಿ ಉತ್ತಮ ಗುಣಮಟ್ಟ ಹಾಗು ಸರ್ವ ಸಮಾನತೆ ತರುವ  ಬಯಕೆ ಇರುವ  ವ್ಯಕ್ತಿಗಳಿಂದ ಆಹ್ವಾನಿಸಲಾಗಿದೆ. ಈ ಫೆಲೋಶಿಪ್ ವ್ಯಾಸಂಗಕ್ರಮಕ್ಕೆ ಮಾಸಿಕ ರೂ.27000/- ಸ್ಟೈಪಂಡು ಕೊಡಲಾಗುವುದು. ಈ ವ್ಯಾಸಂಗಕ್ರಮವು ವಿವಿಧ ಕ್ಷೇತ್ರಗಳ ವ್ಯಕ್ತಿಗಳಿಗೆ ಶೈಕ್ಷಣಿಕ ಮತ್ತು ಸಾಮಾಜಿಕ ರಂಗದ ವ್ಯಾಪಕ ಮತ್ತು ನವೀನ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 15, 2015.  (ಇಮೇಲ್ ವಿಳಾಸ: fellowship@azimpremjifoundation.org">mailto:fellowship@azimpremjifoundation.org">fellowship@azimpremjifoundation.org)
ಆನ್ಲೈನ್ ಮೌಲ್ಯಮಾಪನದ ತರುವಾಯ ವೈಯಕ್ತಿಕ ಸಂದರ್ಶನಗಳನ್ನು ನಡೆಸಿ ಆಯ್ಕೆಗಳನ್ನು ಮಾಡಲಾಗುವುದು.ಈ ಫೆಲೋಶಿಪ್ ವ್ಯಾಸಂಗಕ್ರಮವು 2 ವರ್ಷದ  ಪೂರ್ಣಾವಧಿ ಕಾರ್ಯಕ್ರಮವಾಗಿದ್ದು, ಮೊದಲ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ಬೋಧನೆಮಾಡುವುದು  ಮತ್ತು ಪ್ರತಿಷ್ಠಾನದ ಕ್ಷೇತ್ರ ಸಂಸ್ಥೆಯ ಚಟುವಟಿಕೆಗಳಲ್ಲಿ  ಭಾಗವಹಿಸುವುದು ಒಳಗೊಂಡಿರುತ್ತದೆ. ಇದು ಫೆಲೋಗಳು ಸಾರ್ವಜನಿಕ ಶಿಕ್ಷಣದ ಬಗ್ಗೆ  ಆಳವಾದ ತಿಳುವಳಿಕೆಯನ್ನು ಪಡೆದುಕೊಳ್ಳಲು ಮತ್ತು ತಮ್ಮದೇ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು  ಸಹಾಯ ಮಾಡುತ್ತದೆ. ಎರಡನೇ ವರ್ಷದಲ್ಲಿ ಖುದ್ದು ಮಾಡಿ ಕಲಿಯುವ ಯೋಜನೆಗಳಿಗೆ ಹೆಚ್ಚು ಗಮನ ನೀಡಲಾಗುವುದು.ಹಾಗೆಯೇ ಅವರು ಫೆಲೋಶಿಪ್ ಮುಗಿದ ನಂತರ ಕ್ಷೇತ್ರ ಸಂಸ್ಥೆಗಳಲ್ಲಿ ವಹಿಸುವ ಪಾತ್ರಗಳಿಗೆ ಅವರನ್ನು ಸಜ್ಜು ಮಾಡಲು, ಮತ್ತು ಫೆಲೋಗಳ ಸಾಮರ್ಥ್ಯ ವರ್ಧನೆಗೆ ಗಮನ ಹರಿಸಲಾಗುವುದು.
ಸುಧೀಶ್ ವೆಂಕಟೇಶ್, ಅಜೀಂ ಪ್ರೇಂಜಿ ಪ್ರತಿಷ್ಠಾನದ ಮುಖ್ಯ ಮಾನವ ಸಂಪನ್ಮೂಲಾಧಿಕಾರಿಗಳು (Chief People Officer) ಹೀಗೆ ಹೇಳುತ್ತಾರೆ: "ಸಾಮಾಜಿಕ ಬದಲಾವಣೆಯ ಹರಿಕಾರರಾಗುವ ಮನಸ್ಸು ಮತ್ತು ಹೃದಯವನ್ನು ಹೊಂದಿರುವ ಹಲವಾರು ಜನ  ವಿವಿಧ ಸಂಸ್ಥೆಗಳಲ್ಲಿ ಕೆಲಸ  ಮಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ. ಇಂಥವರಿಗೆ ಈ ಫೆಲೋಷಿಪ್ ಮುಖಾಂತರ ಭಾರತದ ಶಾಲಾ ಶಿಕ್ಷಣದಲ್ಲಿ ಉತ್ತಮ ಗುಣಮಟ್ಟ ಮತ್ತು ಸರ್ವ ಸಮಾನತೆ ಹೆಚ್ಚಿಸುವ ಕಾರ್ಯದಲ್ಲಿ ನೇರವಾಗಿ ಪಾಲ್ಗೊಳ್ಳುವ ಅವಕಾಶ ದೊರಕಲಿದೆ.ಇದಲ್ಲದೆ ಸ್ವಯಂ ವಸ್ತುಸ್ಥಿತಿಯನ್ನು ಅರಿತು,ಎದುರಾಗುವ ಸವಾಲುಗಳನ್ನು  ಬಗೆಹರಿಸಿ ಸಾಧನೆಯ  ತೃಪ್ತಿಪಡೆಯುವ  ಅವಕಾಶ ಕೂಡ ಇದೆ. ಹಾಗೆಯೇ ನಮಗೂ ಇದು  ಬದ್ಧ ಮತ್ತು ಪ್ರತಿಭಾವಂತ ಜನರನ್ನು ಗುರುತಿಸಲು ಒಂದು ಸದವಕಾಶವಾಗಿದೆ -ತಮ್ಮ ಫೆಲೋಶಿಪ್ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಇದೇ ಕಾರ್ಯದಲ್ಲಿ ಮುಂದುವರಿಯಲು ಆಸಕ್ತಿ ತೋರಿಸುವ ಎಲ್ಲರೂ ಪೂರ್ಣಾವಧಿ ಸದಸ್ಯರಾಗಿ ಫೌಂಡೇಶನ್ ಸೇರಲು ಸ್ವಾಗತವಿದೆ."

ಬೆಂಗಳೂರಿನಲ್ಲಿ 2 ವಾರಗಳ ಪರಿಚಯ-ಪ್ರವೇಶ (Induction) ಕಾರ್ಯಕ್ರಮದ ಅನಂತರ, ಫೆಲೋಗಳನ್ನು ಪ್ರತಿಷ್ಠಾನವು ಪ್ರಸ್ತುತ ಕ್ಷೇತ್ರ ಸಂಸ್ಥೆಗಳ ಮೂಲಕ ಕೆಲಸ ಮಾಡುತ್ತಿರುವ  ಬಿಹಾರ, ಛತ್ತೀಸ್ಗಡ, ಕರ್ನಾಟಕ, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ, ತೆಲಂಗಾಣ ಮತ್ತು ಉತ್ತರಾಖಂಡಗಳಿಗೆ ಪೋಸ್ಟ್ ಮಾಡಲಾಗುತ್ತದೆ.
.
ವಿವರಗಳು:
ಟೋಲ್ ಫ್ರೀ ಸಹಾಯವಾಣಿ: 1800 274 ​​0101
ಇಮೇಲ್: fellowship@azimpremjifoundation.org
ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸುವ ವಿಧಾನಕ್ಕಾಗಿ : www.azimpremjifoundation.org/fellowship">http://www.azimpremjifoundation.org/fellowship
ಮಾಧ್ಯಮ ಸಂಬಂಧಿತ ಪ್ರಶ್ನೆಗಳಿಗಾಗಿ ಸಂಪರ್ಕ: ಸಲ್ಮಾ salma@azimpremjifoundation.org

ಅಜೀಂ ಪ್ರೇಂಜಿ ಪ್ರತಿಷ್ಠಾನದ ಬಗ್ಗೆ
ಅಜೀಂ ಪ್ರೇಂಜಿ ಪ್ರತಿಷ್ಠಾನವು ಭಾರತದ ಶಿಕ್ಷಣದಲ್ಲಿ ಉತ್ತಮ ಗುಣಮಟ್ಟ ಮತ್ತು ಸರ್ವಸಮಾನತೆ ಕುರಿತು ಜೊತೆಗೆ ಶಿಕ್ಷಣಕ್ಕೆ ಸಂಬಂಧಪಟ್ಟ  ಅಭಿವೃದ್ಧಿ ಪ್ರದೇಶಗಳಲ್ಲಿ  ಗಾಢವಾದ, ದೊಡ್ಡ ಪ್ರಮಾಣದ ಮತ್ತು ಸಾಂಸ್ಥಿಕ ಪ್ರಭಾವವನ್ನು ತರುವ ದಿಶೆಯಲ್ಲಿ  ಒಂದು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿರುವ ಒಂದು ಲಾಭ ನಿರೀಕ್ಷೆ ಇಲ್ಲದೆ ದುಡಿಯುತ್ತಿರುವ ಸಂಸ್ಥೆ. ಯಾವುದೇ ದೊಡ್ಡ ಪ್ರಮಾಣದ ಶೈಕ್ಷಣಿಕ ಬದಲಾವಣೆ ತರಬೇಕಾದರೆ ಅನೇಕ ದಶಕಗಳ ಕಾಲ ಗಮನಾರ್ಹ ಮತ್ತು ನಿರಂತರ ಪರಿಶ್ರಮ ಅಗತ್ಯ  ಮತ್ತು ಏಕಕಾಲದಲ್ಲಿ ಅನೇಕ ಹಂತಗಳಲ್ಲಿ ಹಾಗೂ ಹಲವಾರು ಪ್ರದೇಶಗಳಲ್ಲಿ ಕೆಲಸ ಮಾಡಿದರೆ ಮಾತ್ರ ಅದನ್ನು ಸಾಧಿಸಬಹುದು. ಈ ಪ್ರತಿಷ್ಠಾನವು ಇಂದು ಒಟ್ಟು 3, 50,000ಕ್ಕೂ ಹೆಚ್ಚು ಶಾಲೆಗಳನ್ನು ಹೊಂದಿರುವ 8 ರಾಜ್ಯಗಳಲ್ಲಿ ಕೆಲಸ ಮಾಡುತ್ತಿದೆ.
ಅದರ ಕೆಲಸ ಕಾರ್ಯಗಳ ಪ್ರಮುಖ ಅಂಶಗಳು ಕೆಳಗಿನಂತಿವೆ
ಸರ್ಕಾರದ ಜೊತೆಗೂಡಿ ಕೆಲಸ: ಅಜೀಂ ಪ್ರೇಂಜಿ  ಪ್ರತಿಷ್ಠಾನವು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಕೆಲಸ ಮಾಡುತ್ತದೆ ಮತ್ತು ಶಿಕ್ಷಕರು, ಶಿಕ್ಷಕರ ಶಿಕ್ಷಕರು, ಮುಖ್ಯ ಶಿಕ್ಷಕರು, ಬ್ಲಾಕ್ ಮತ್ತು ಕ್ಲಸ್ಟರ್ 
ಮಟ್ಟದ ಶಿಕ್ಷಣ ಅಧಿಕಾರಿಗಳು, ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ರಾಜ್ಯ ಹಾಗು ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನೀತಿ ರೂಪಿಸುವವರು  ಇವರುಗಳ ಜೊತೆಯಲ್ಲಿ  ಕೆಲಸಮಾಡುತ್ತಿದೆ.
ರಾಜ್ಯ ಮತ್ತು ಜಿಲ್ಲಾ ಸಂಸ್ಥೆಗಳು: ಪ್ರತಿಷ್ಠಾನವು ಆಯ್ದ ಭಾರತದ ರಾಜ್ಯಗಳ ರಾಜಧಾನಿಗಳಲ್ಲಿ ರಾಜ್ಯ ಸಂಸ್ಥೆಗಳನ್ನು ಹೊಂದಿದೆ ಮತ್ತು ಈ ರಾಜ್ಯಗಳ ಒಳಗೆ ಹಲವಾರು ಜಿಲ್ಲಾ ಸಂಸ್ಥೆಗಳನ್ನು ಹೊಂದಿದೆ ಮತ್ತು ಪ್ರತಿಯೊಂದರಲ್ಲೂ ಕಂಕಣಬದ್ಧರಾಗಿ ದುಡಿಯುತ್ತಿರುವ ಶ್ರದ್ಧಾವಂತ  ತಂಡಗಳಿವೆ. ಈ ಸಂಸ್ಥೆಗಳು ಸರ್ಕಾರದ ಶಿಕ್ಷಣ ವ್ಯವಸ್ಥೆ ಯೊಂದಿಗೆ ನಿಕಟವಾಗಿ ಕೈಜೋಡಿಸಿ ಗ್ರಾಮಮಟ್ಟದಲ್ಲಿ ಕೆಲಸ ಮಾಡುತ್ತಿವೆ. ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಶಿಕ್ಷಕರ, ಮುಖ್ಯ ಶಿಕ್ಷಕರ ಮತ್ತು ಇತರ ಕಾರ್ಯಕರ್ತರ ಸಾಮರ್ಥ್ಯವರ್ಧನೆಯನ್ನು ಇವು ಮಾಡುತ್ತಿವೆ. ಇದು ರಾಜ್ಯ ಮಟ್ಟದಲ್ಲಿ ಪಠ್ಯಕ್ರಮ, ಮೌಲ್ಯಮಾಪನ, ಶೈಕ್ಷಣಿಕ ನಾಯಕತ್ವ ಮತ್ತು ಆಡಳಿತ ನಿರ್ವಹಣೆ, ಕಾರ್ಯನೀತಿ ರೂಪಣೆ ಮತ್ತು ಪ್ರಸಾರ ಕೆಲಸಗಳನ್ನು ಒಳಗೊಂಡಿರುತ್ತದೆ. ಅನೇಕ ಜಿಲ್ಲಾ ಸಂಸ್ಥೆಗಳಲ್ಲಿ, ಪ್ರಾತ್ಯಕ್ಷಿಕೆಯ ನಿರ್ದಿಷ್ಟ ಉದ್ದೇಶಕ್ಕಾಗಿಯೇ ಶಾಲೆಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಶಾಲೆಗಳು ಸ್ಥಳೀಯ ಸಮುದಾಯಕ್ಕೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿವೆ,ಹೀಗೆ 'ಪ್ರಾತ್ಯಕ್ಷಿಕೆ ಶಾಲೆಗಳಾಗಿ' ಮಾದರಿಯಾಗಿರುತ್ತವೆ. ಪ್ರತಿಷ್ಠಾನವು ಇಂದು ಕರ್ನಾಟಕ (ಬೆಂಗಳೂರು, ಯಾದಗಿರಿ, ಮಂಡ್ಯ ಮತ್ತು ಗುಲ್ಬರ್ಗ), ರಾಜಸ್ಥಾನ (ಜೈಪುರ, ಸಿರೋಹಿ, ಟೋಂಕ್, ಬಾರ್ಮರ್ ಮತ್ತು ರಾಜ್ಸಮಂದ್), ಉತ್ತರಾಖಂಡ (ಡೆಹ್ರಾಡೂನ್, ಉತ್ತರಕಾಶಿ, ಉಧಮ್ ಸಿಂಗ್ ನಗರ್ ಮತ್ತು ಅಲ್ಮೋರಾ), ಬಿಹಾರ (ಪಾಟ್ನಾ), ಛತ್ತೀಸ್ಗಢ (ರಾಯ್ಪುರ ಮತ್ತು ಧಮ್ ತರಿ), ಮಧ್ಯಪ್ರದೇಶ (ಭೋಪಾಲ್) ಮತ್ತು ಪುದುಚೇರಿಯಲ್ಲಿ. ತನ್ನ ಸಂಸ್ಥೆಗಳನ್ನು ಹೊಂದಿದೆ.
ಸಂಶೋಧನೆ : ಹಲವಾರು ರಾಜ್ಯಗಳಲ್ಲಿ ಈ ಸಂಸ್ಥೆಯು ಹೊಸ ಅರಿವನ್ನು ಪಡೆದುಕೊಳ್ಳಲು ಮತ್ತು ಸಾಕ್ಷ್ಯ ಆಧಾರಿತ ನೀತಿ ನಿರೂಪಣೆಯ ಬೆಂಬಲಿಸಲು ವಿಶಾಲ ಪರಿಧಿಯ ಶೈಕ್ಷಣಿಕ ಸಂಶೋಧನೆಗಳನ್ನು ಕೈಗೊಂಡಿದೆ.

 

 

 

 

 

 

 

Date: 
ಶುಕ್ರವಾರ, August 21, 2015 - 9:30am
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು