ಪರಿಚಯ:
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ ಗ್ರಾಮದ ನೆಹರೂ ನಗರzಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಚ್ಚಹಸಿರಿನ ಆವರಣ ಬಂದವರನ್ನು ಹಾರ್ದಿಕವಾಗಿ ಸ್ವಾಗತಿಸುತ್ತದೆ. ಮಕ್ಕಳು ಆಗಷ್ಟೇ ಗಿಡಗಳಿಗೆಲ್ಲ ನೀರುಣಿಸಿದ್ದರು, ಬೆಳಗಿನ ಪ್ರಾರ್ಥನಾ ಸಭೆ ಆಗತಾನೆ ಮುಗಿದಿತ್ತು. ತರಗತಿಗಳು ಇನ್ನೂ ಆರಂಭವಾಗಿರಲಿಲ್ಲ. ಆದರೆ ಮಧ್ಯಾಹ್ನದ...
ಪ್ರೇರಣಾ ತರಬೇತಿ
ಶಿಕ್ಷಣ ಫೌಂಡೇಷನ್ ಮತ್ತು ಸಮಗ್ರ ಶಿಕ್ಷಣ ನೀತಿಯ ವರು 4ನೇ ತರಗತಿಯಿಂದ 9ನೇ ತರಗತಿಯ ಮಕ್ಕಳಿಗೆ ವಿನೂತನ ಮಾದರಿಯ ಕಲಿಕೆಯನ್ನು ಆಯೋಜಿಸಿದ್ದು , ಇದರ ತರಬೇತಿಯನ್ನು ಸ.ಹಿ.ಪ್ರಾ.ಶಾಲೆ ಮಂಗಳೂರು ಇಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಸುರಪುರ ತಾಲ್ಲೂಕಿನ ಕನ್ನಳ್ಳಿ & ಪೇಠ ಅಮ್ಮಾಪೂರ ಕ್ಲಸ್ಟರ್ ನ ಕನ್ನಡ, ಇಂಗ್ಲೀಷ ಹಾಗೂ ಗಣಿತ ಪಾಠ ಬೋಧನೆ ಮಾಡುವ30 ಶಿಕ್ಷಕರು ಆಗಮಿಸಿದ್ದರು,. ಈ ತರಬೇತಿಯನ್ನು ನೀಡಲು ಶ್ರೀ ಪರಶುರಾಮ ಚಲವಾದಿ CRP ಕನ್ನಳ್ಳಿ ಕ್ಲಸ್ಟರ & ಶ್ರಿ ಶಿವಾನಂದ CRP ಪೇಠ ಅಮ್ಮಾಪೂರ ಕ್ಲಸ್ಟರ ಇವರುಗಳು ಶಿಕ್ಷಕರಿಗೆ ಪ್ರೇರಣಾ ತರಬೇತಿಯ ಕುರಿತು ಸೂಕ್ತ ಮಾರ್ಗದರ್ಶನವನ್ನು ನೀಡಿದರು.
ಈ ತರಬೇತಿಯಲ್ಲಿ ಮಕ್ಕಳನ್ನು ಶಾಲಾ ಪಠ್ಯ & ಸಹಪಠ್ಯ ವಿಷಯಗಳಲ್ಲಿ ಮಕ್ಕಳ ಭಾಗವಹಿಸುವಿಕೆಯ ತಂತ್ರಗಳು, ಮಕ್ಕಳಿಗೆ ನಿರ್ಭಯ ವಾತಾವರಣವನ್ನು ಕಲ್ಪಿಸುವುದು, ಅಭ್ಯಾಸ ಪುಸ್ತಕಗಳ ಮೂಲಕ ರಚನಾತ್ಮಕವಾದ ಕಲಿಕೆಯನ್ನುಂಟುಮಾಡುವುದು ಹಾಗೂ ಸಚಿತ್ರವಾದ ಪ್ರಗತಿ ನೋಟದ ಮೂಲಕ ಮಕ್ಕಳ ಕಲಿಕೆಯ ಬದಲಾವಣೆಗಳನ್ನು ಮೌಲ್ಯಮಾಪನ ಮಾಡುವುದನ್ನು ತಿಳಿಸಿಕೊಟ್ಟರು .
ಶಾಲೆಗೆ ಸತತವಾಗಿ ಮಗು ಹಾಜರಿರುವಂತೆ ನೊಡಿಕೊಳ್ಳಲು 'ಹಸಿರು ಸ್ಟಾರ್ ಬಟನ್'ಗಳನ್ನು ನೀಡಿ ಮಗುವು ಸತತವಾಗಿ ಶಾಲೆಗೆ ಬರಲು ಉತ್ತೇಜಿಸುವುದು. ಕಲಿಕೆಯಲ್ಲಿ ಸಂಪೂರ್ಣವಾಗಿ & ಗುಣಾತ್ಮಕ ಕಲಿಕೆಯನ್ನು ಪಡೆದುಕೊಳ್ಳಲು 'ಬೆಳ್ಳಿ ಸ್ಟಾರ್ ಬಟನ್'ಗಳನ್ನು ನೀಡಿ ಮಗುವನ್ನು ಕಲಿಕೆಗೆ ಪ್ರೇರೆಪಿಸುವುದು. ಸಹಪಠ್ಯ ಚಟುವಟಿಕೆಗಳಲ್ಲಿ ಮಗುವನ್ನು ತೊಡಗಿಸಿಕೊಂಡು ಅವರ ಲ್ಲಿ ಧನಾತ್ಮಕ ವರ್ತನೆ ಉಂಟುಮಾಡಲು ಅವರಿಗೆ ' ಗುಲಾಬಿ ಸ್ಟಾರ್ ಬಟನ್' ಗಳನ್ನು ನೀಡಿ ಪ್ರೇರೆಪಿಸುವುದನ್ನು ತಿಳಿಸಿದರು.
ಪ್ರತಿ ತರಗತಿಯ ಮಕ್ಕಳನ್ನು 10 ವಿದ್ಯಾರ್ಥಿಗಳಂತೆ 'ಪ್ರೇರಣಾ ಕ್ಲಬ್' ಗುಂಪು ಮಾಡಿ , ಅದಕ್ಕೊಬ್ಬ ನಾಯಕನನ್ನು ಮೇಲ್ವಿಚಾರಣೆ ಮಾಡಲು ನೇಮಿಸವುದು. ವಿದ್ಯಾರ್ಥಿ ನಾಯಕರುಗಳು ಮಾರ್ಗದರ್ಶಕ ಶಿಕ್ಷಕರೊಟ್ಟಿಗೆ ಸೇರಿ 15 ದಿನಗಳಿಗೊಮ್ಮೆ ಸಭೆ ಮಾಡುತ್ತಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಪ್ರೇರೆಪಿಸುವಂತಹ ಪಠ್ಯ & ಸಹಪಠ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. .
ನಿರಂತರವಾಗಿ ಮಗುವಿನ ಶೈಕ್ಷಣಿಕೆ ಚಟುವಟಿಕೆ, ಸಹಪಠ್ಯ ಚಟುವಟಿಕೆ ಹಾಗೂ ಸ್ವಚ್ಛತೆ ಯನ್ನು ಗಮನಿಸಸುತ್ತಾ ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರಗತಿ ನೋಟವನ್ನು 'ಸ್ಟಾರ್ ಸ್ಟಿಕರ್ ' ಗಳ ಮೂಲಕ ತುಂಬುತ್ತಾ ಮಗುವಿನ ಸರ್ವಾಂಗೀಣ ಬೆಳವಣಿಗೆಯನ್ನು ಮೌಲ್ಯಮಾಪನ ಮಾಡುವುದು. ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಶಾಲೆಯ ಪ್ರಧಾನ ಗುರುಗಳಾದ ಶ್ರೀ ಪ್ರಶಾಂತ ಅಕ್ಕಸಾಲಿಗರ ಹಾಗೂ ಎಲ್ಲಾ ಸಹ ಶಿಕ್ಷಕರುಗಳು ತರಬೇತಿಗೆ ಬೇಕಾದ ಎಲ್ಲಾ ಸಂಪನ್ಮೂಲಗಳನ್ನು ಒದಗಿಸಿಕೊಟ್ಟು ತರಬೇತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
- ಟೀಕೆ ಬರೆಯಲು ಲಾಗಿನ್ ಆಗಿ ಅಥವಾ ನೋಂದಾಯಿಸಿಕೊಳ್ಳಿರಿ