ಪ್ರೇರಣಾ ತರಬೇತಿ

ಶಿಕ್ಷಣ ಫೌಂಡೇಷನ್ ಮತ್ತು ಸಮಗ್ರ ಶಿಕ್ಷಣ ನೀತಿಯವರು 4ನೇ ತರಗತಿಯಿಂದ 9ನೇ ತರಗತಿಯ ಮಕ್ಕಳಿಗೆ ವಿನೂತನ ಮಾದರಿಯ ಕಲಿಕೆಯನ್ನು ಆಯೋಜಿಸಿದ್ದು, ಇದರ ತರಬೇತಿಯನ್ನು ಸ.ಹಿ.ಪ್ರಾ.ಶಾಲೆ ಮಂಗಳೂರು ಶಾಲೆಯಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಸುರಪುರ ತಾಲ್ಲೂಕಿನ ಕನ್ನಳ್ಳಿ & ಪೇಠ ಅಮ್ಮಾಪೂರ ಕ್ಲಸ್ಟರ್ ನ ಕನ್ನಡ, ಇಂಗ್ಲೀಷ ಹಾಗೂ ಗಣಿತ ಪಾಠ ಬೋಧನೆ ಮಾಡುವ 30 ಶಿಕ್ಷಕರು ಆಗಮಿಸಿದ್ದರು,. ಈ ತರಬೇತಿಯನ್ನು ನೀಡಲು ಶ್ರೀ ಪರಶುರಾಮ ಚಲವಾದಿ CRP ಕನ್ನಳ್ಳಿ ಕ್ಲಸ್ಟರ & ಶ್ರಿ ಶಿವಾನಂದ CRP ಪೇಠ ಅಮ್ಮಾಪೂರ ಕ್ಲಸ್ಟರ ಇವರುಗಳು ಶಿಕ್ಷಕರಿಗೆ ಪ್ರೇರಣಾ ತರಬೇತಿಯ ಕುರಿತು ಸೂಕ್ತ ಮಾರ್ಗದರ್ಶನವನ್ನು ನೀಡಿದರು.

ಈ ತರಬೇತಿಯಲ್ಲಿ ಮಕ್ಕಳನ್ನು ಪಠ್ಯ & ಸಹಪಠ್ಯ ವಿಷಯಗಳಲ್ಲಿ ಮಕ್ಕಳ ಭಾಗವಹಿಸುವಿಕೆಯ ತಂತ್ರಗಳು, ಮಕ್ಕಳಿಗೆ ನಿರ್ಭಯ ವಾತಾವರಣವನ್ನು ಕಲ್ಪಿಸುವುದು, ಅಭ್ಯಾಸ ಪುಸ್ತಕಗಳ ಮೂಲಕ ರಚನಾತ್ಮಕವಾದ ಕಲಿಕೆಯನ್ನುಂಟುಮಾಡುವುದು ಹಾಗೂ ಸಚಿತ್ರವಾದ ಪ್ರಗತಿ ನೋಟದ ಮೂಲಕ ಮಕ್ಕಳ ಕಲಿಕೆಯ ಬದಲಾವಣೆಗಳನ್ನು ಮೌಲ್ಯಮಾಪನ ಮಾಡುವುದನ್ನು ತಿಳಿಸಿಕೊಟ್ಟರು .

ಶಾಲೆಗೆ ಸತತವಾಗಿ ಮಗು ಹಾಜರಿರುವಂತೆ ನೊಡಿಕೊಳ್ಳಲು 'ಹಸಿರು ಸ್ಟಾರ್ ಬಟನ್'ಗಳನ್ನು ನೀಡಿ ಮಗುವು ಸತತವಾಗಿ ಶಾಲೆಗೆ ಬರಲು ಉತ್ತೇಜಿಸುವುದು. ಕಲಿಕೆಯಲ್ಲಿ ಸಂಪೂರ್ಣವಾಗಿ & ಗುಣಾತ್ಮಕ ಕಲಿಕೆಯನ್ನು ಪಡೆದುಕೊಳ್ಳಲು 'ಬೆಳ್ಳಿ ಸ್ಟಾರ್ ಬಟನ್'ಗಳನ್ನು ನೀಡಿ ಮಗುವನ್ನು ಕಲಿಕೆಗೆ ಪ್ರೇರೆಪಿಸುವುದು. ಸಹಪಠ್ಯ ಚಟುವಟಿಕೆಗಳಲ್ಲಿ ಮಗುವನ್ನು ತೊಡಗಿಸಿಕೊಂಡು ಅವರಲ್ಲಿ ಧನಾತ್ಮಕ ವರ್ತನೆ ಉಂಟುಮಾಡಲು ಅವರಿಗೆ ' ಗುಲಾಬಿ ಸ್ಟಾರ್ ಬಟನ್' ಗಳನ್ನು ನೀಡಿ ಪ್ರೇರೆಪಿಸುವುದನ್ನು ತಿಳಿಸಿದರು.

ಪ್ರತಿ ತರಗತಿಯ ಮಕ್ಕಳನ್ನು 10 ವಿದ್ಯಾರ್ಥಿಗಳಂತೆ 'ಪ್ರೇರಣಾ ಕ್ಲಬ್' ಗುಂಪು ಮಾಡಿ , ಅದಕ್ಕೊಬ್ಬ ನಾಯಕನನ್ನು ಮೇಲ್ವಿಚಾರಣೆ ಮಾಡಲು ನೇಮಿಸವುದು. ವಿದ್ಯಾರ್ಥಿ ನಾಯಕರುಗಳು ಮಾರ್ಗದರ್ಶಕ ಶಿಕ್ಷಕರೊಟ್ಟಿಗೆ ಸೇರಿ 15 ದಿನಗಳಿಗೊಮ್ಮೆ ಸಭೆ ಮಾಡುತ್ತಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಪ್ರೇರೆಪಿಸುವಂತಹ ಪಠ್ಯ & ಸಹಪಠ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. .

ನಿರಂತರವಾಗಿ ಮಗುವಿನ ಶೈಕ್ಷಣಿಕೆ ಚಟುವಟಿಕೆ, ಸಹಪಠ್ಯ ಚಟುವಟಿಕೆ ಹಾಗೂ ಸ್ವಚ್ಛತೆ ಯನ್ನು ಗಮನಿಸಸುತ್ತಾ ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರಗತಿ ನೋಟವನ್ನು 'ಸ್ಟಾರ್ ಸ್ಟಿಕರ್ ' ಗಳ ಮೂಲಕ ತುಂಬುತ್ತಾ ಮಗುವಿನ ಸರ್ವಾಂಗೀಣ ಬೆಳವಣಿಗೆಯನ್ನು ಮೌಲ್ಯಮಾಪನ ಮಾಡುವುದು. ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಶಾಲೆಯ ಪ್ರಧಾನ ಗುರುಗಳಾದ ಶ್ರೀ ಪ್ರಶಾಂತ ಅಕ್ಕಸಾಲಿಗರ ಹಾಗೂ ಎಲ್ಲಾ ಸಹ ಶಿಕ್ಷಕರುಗಳು ತರಬೇತಿಗೆ ಬೇಕಾದ ಎಲ್ಲಾ ಸಂಪನ್ಮೂಲಗಳನ್ನು ಒದಗಿಸಿಕೊಟ್ಟು ತರಬೇತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Date: 
ಶನಿವಾರ, May 12, 2018 - 10:30am
19178 ನೊಂದಾಯಿತ ಬಳಕೆದಾರರು
7446 ಸಂಪನ್ಮೂಲಗಳು