ಚೆಂದಿಂಗಳು- ತಾಮ್ರ ಚಂದ್ರೋದಯ

2018 ರ ಜನವರಿ 31 ರ ಸಂಜೆ  ಚಂದ್ರೋದಯದ ಸಮಯದಲ್ಲಿ ಪೂರ್ಣ ಚಂದ್ರ ಗ್ರಹಣವು ಜರುಗಲಿದೆ. ಪೂರ್ಣ ಚಂದ್ರ ಗ್ರಹಣಗಳ ಸಮಯದಲ್ಲಿ, ಚಂದ್ರನು ಪೂರ್ಣವಾಗಿ ಕಣ್ಮರೆಯಾಗುವುದಿಲ್ಲ ಬದಲಾಗಿ ಅದ್ಭುತ ತಾಮ್ರವರ್ಣವನ್ನು ತಾಳುತ್ತದೆ.

 ಈ ಗ್ರಹಣವನ್ನು ವೀಕ್ಷಿಸುವುದು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ಇದಕ್ಕಾಗಿ ಯಾವುದೇ ಉಪಕರಣದ ಅಗತ್ಯವಿಲ್ಲ!

ಗ್ರಹಣ ವೀಕ್ಚಣೆಗೆ ಮೊದಲೇ ಯೋಜಿಸಿ ಏರ್ಪಾಟು ಮಾಡಿಕೊಳ್ಳಿರಿ. ಚಂದ್ರೋದಯವು  (ಪೂರ್ವ) ಚೆನ್ನಾಗಿ ಕಾಣುವ ಒಂದು  ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿರಿ.

ತಾಮ್ರ ಚಂದ್ರೋದಯದ ಒಂದು  ಪಿಕ್ನಿಕ್ ಆಯೋಜಿಸಿ ಮತ್ತು ತಪ್ಪದೇ ಹಾಜರಾಗಿ ಅಪರೂಪದ ಚೆಂದಿಂಗಳ ಸೌಂದರ್ಯವನ್ನು ಆಸ್ವಾದಿಸಿ!

ಪೂರ್ಣ ಚಂದ್ರ ಗ್ರಹಣವು   ಭಾರತೀಯ ಕಾಲಮಾನದ 18:22 ರ ಹೊತ್ತಿಗೆ  ಪ್ರಾರಂಭವಾಗಿ ಒಂದು ಗಂಟೆಯ ಕಾಲದವರೆಗೆ ಇರುತ್ತದೆ, ತದನಂತರ ಭಾಗಶಃ ಗ್ರಹಣದ ಹಂತವು ಇನ್ನೂ ಎರಡು ಗಂಟೆಗಳ ಕಾಲ ಇರುತ್ತದೆ.

ನಮ್ಮ ಸೌರವ್ಯೂಹ, ಗ್ರಹಣಗಳು ಮತ್ತು ಬೆಳಕಿನ ಭೌತಶಾಸ್ತ್ರದ ಬಗ್ಗೆ ಅರಿವು ಮೂಡಿಸಲು ಈ ಅವಕಾಶವನ್ನು ತಪ್ಪದೆ ಬಳಸಿಕೊಳ್ಳಿ , ಜೊತೆಗೆ ನೈಸರ್ಗಿಕ ವಿದ್ಯಮಾನಗಳ ಬಗ್ಗೆ ವೈಜ್ಞಾನಿಕ ಚಿಂತನೆಯನ್ನು ಉತ್ತೇಜಿಸುವ ಕಾರ್ಯವನ್ನು ಮಾಡಿರಿ.

ಈ ಗ್ರಹಣ ವೀಕ್ಷಣೆ ಕಾರ್ಯಕ್ರಮವನ್ನು ಯಾರು ಬೇಕಾದರೂ  ಏರ್ಪಡಿಸಬಹುದು.

ಈ ಅಪೂರ್ವ ಅವಕಾಶದ ಸುದ್ದಿಯನ್ನು ಎಲ್ಲೆಡೆ ಹರಡಿ!

 

ಹೆಚ್ಚಿನ ಮಾಹಿತಿಗಾಗಿ ಈ ಜಾಲತಾಣಗಳಿಗೆ ಭೇಟಿ ನೀಡಿರಿ.

https://coppermoon18.wordpress.com

ಮತ್ತು
https://www.iiap.res.in//people/personnel/pshastri/grahana/grahana.html"

 

 

Date: 
ಶನಿವಾರ, January 27, 2018 - 1:15pm
Source: 
Professor Prajval Shastri Indian Institute of Astrophysics
18326 ನೊಂದಾಯಿತ ಬಳಕೆದಾರರು
7150 ಸಂಪನ್ಮೂಲಗಳು