ಗಣಿತದ ಭಯ ಹೋಗಲಾಡಿಸಲು "ಕಲಿಕಾ ಆಂದೋಲನ'

4 ಮತ್ತು 5ನೇ ತರಗತಿ ಮಕ್ಕಳಲ್ಲಿರುವ ಗಣಿತದ ವಿಷಯದಲ್ಲಿನ ಭಯವನ್ನು ಹೋಗಲಾಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಹೈದರಾಬಾದ್ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳಲ್ಲಿ ‘ಅಕ್ಷರ' ಫೌಂಡೇಷನ್’ ಸಹಭಾಗಿತ್ವದಲ್ಲಿ ‘ಗಣಿತ ಕಲಿಕಾ ಆಂದೋಲನ’ ಹಮ್ಮಿಕೊಂಡಿದೆ."ಶಿಕ್ಷಣ ವಾರ್ಷಿಕ ಸ್ಥಿತಿ ವರದಿ 2014" (2014 ಆಶರ್) [“The Annual Status of Education Report 2014 (ASER 2014) ] ಪ್ರಕಾರ ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಲ್ಲಿ 5 ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಕೇವಲ  ಶೇ 20.1 ರಷ್ಟುಮಂದಿ ಮಾತ್ರ ಸರಳ ಭಾಗಾಕಾರದ ಲೆಕ್ಕವನ್ನು ಮಾಡಬಲ್ಲರು ಎಂದು ತಿಳಿದುಬಂದಿದೆ. ಗಣಿತ ಕಲಿಕಾ ಆಂದೋಲನವು ಮಕ್ಕಳಲ್ಲಿನ ಈ ಕಳಪೆ  ಕುಶಲತೆಯ ಮಟ್ಟವನ್ನು ಸುಧಾರಿಸಲು ಮತ್ತು ಎಲ್ಲರಿಗೂ ಗುಣಮಟ್ಟದ ಶಿಕ್ಷಣವನ್ನು ನೀಡುವ ದಿಶೆಯಲ್ಲಿ ಕೆಲಸ  ಮಾಡುತ್ತದೆ.

ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಯು ಈ ಯೋಜನೆಗೆ ಹಣಕಾಸು ನೆರವು ನೀಡಿದ್ದು, ಹೈ.ಕ ಭಾಗದ ಶಾಲೆಗಳಿಗೆ ಗಣಿತ ಕಲಿಕಾ ಕಿಟ್‌ಗಳನ್ನು ವಿತರಿಸಿದೆ. ಪ್ರಾಥಮಿಕ ಶಾಲೆಯ ಗಣಿತ ಶಿಕ್ಷಕರು ಇವುಗಳನ್ನು ಬಳಸಿಕೊಂಡು ತಮ್ಮ ತರಗತಿಯಲ್ಲಿ ಸಂತಸದ ಕಲಿಕೆಯನ್ನು ಉಂಟುಮಾಡಬಹುದು. ಗಣಿತದ ಪರಿಕಲ್ಪನೆಗಳನ್ನು ಪರಿಣಾಮಕಾರಿಯೂ ಹಾಗೂ ಅರ್ಥಪೂರ್ಣವಾಗಿಯೂ ಅನುಷ್ಠಾನಗೊಳಿಸಬಹುದಾಗಿದೆ.

ಕಿಟ್ ಏನನ್ನು ಒಳಗೊಂಡಿದೆ?: ಚೌಕಳಿ ಬಿಲ್ಲೆಗಳು, ಸಂಖ್ಯಾ ರೇಖೆ, ಬಟ್ಟೆಗೆ ಹಾಕುವ ಕ್ಲಿಪ್‌ಗಳು, ಅಬಾಕಸ್, ಬೇಸ್ 10ರ ಬ್ಲಾಕ್‌ಗಳು, ಸ್ಥಾನ ಬೆಲೆ ಸೂಚಿ, ಸ್ಥಾನ ಬೆಲೆ ಪಟ್ಟಿಗಳು, ಭಿನ್ನರಾಶಿ ಆಕಾರಗಳು, ಭಿನ್ನರಾಶಿ ಪಟ್ಟಿಗಳು, ದಶಮಾಂಶ ಸೆಟ್, ದಶಮಾಂಶ ಸ್ಥಾನ ಬೆಲೆ ಪಟ್ಟಿಗಳು, ದಾಳ, ಜಿಯೊಬೋರ್ಡ್, ಕೋನಮಾಪಕ ಮತ್ತು ಕೋನದ ಅಳತೆ, ಗಡಿಯಾರ, ತಕ್ಕಡಿ, ಘನಾಕೃತಿಗಳು, ಆಟಿಕೆ ಹಾಗೂ ನಾಣ್ಯಗಳು, ಟ್ಯಾನ್‌ಗ್ರಾಮ್ ಮತ್ತು ಗಣಿತದ ಪರಿಕಲ್ಪನೆಯ ಕಾರ್ಡ್‌ಗಳು.

 

 

Date: 
ಗುರುವಾರ, July 9, 2015 - 11:45am
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು