ಖ್ಯಾತ ಗಣಿತಜ್ಞೆ ಶಕುಂತಲಾ ದೇವಿ ಇನ್ನಿಲ್ಲ.

ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದ  ಅಪೂರ್ವ ಪ್ರತಿಭೆ ಶಕುಂತಲಾ ದೇವಿ.ಚಿಕ್ಕಂದಿನಲ್ಲಿಯೇ ಆವರಲ್ಲಿದ್ದ ಗಣಿತದ ಅಪೂರ್ವ ಪ್ರತಿಭೆ ಮತ್ತು ಅಗಾಧ ನೆನಪಿನ ಶಕ್ತಿ ಗೆ ಪ್ರಸಿದ್ಧರು. ಅವರಿಗೆ ಭವಿಷ್ಯದಲ್ಲಿ ಅವು ಮಾನವ ಕಂಪ್ಯೂಟರ್ ಎಂಬ ಖ್ಯಾತಿಯನ್ನು ಮತ್ತು ಗಿನ್ನಿಸ್ ದಾಖಲೆ ಯನ್ನುದೊರಕಿಸಿಕೊಟ್ಟವು.

1977 ರಲ್ಲಿ ಡಲ್ಲಾಸ್ ನಗರದಲ್ಲಿ ಒಂದು ಕಂಪ್ಯೂಟರ್ ನ ಜೊತೆ 188132517 ನ ಘನ ಮೂಲವನ್ನು ಯಾರು ಮೊದಲು ಕಂಡುಹಿಡಿಯುತ್ತಾರೆ ಎಂಬ ಸ್ಫರ್ಧೆ ಎದುರಿಸಿದರು ಹಾಗು ಅನಾಯಾಸವಾಗಿ ಗೆದ್ದರು. ಒಂದು ಅಮೆರಿಕನ್ ವಿಶ್ವವಿದ್ಯಾಲಯದಲ್ಲಿ  91674867692003915809866092758538016248310668014430862240712651642793465704086709659 327920576748080679002278301635492485238033574531693511190359657754734007568168830

5620821016129132845564805780158806771 ರ 23ನೇ ಮೂಲವನ್ನು ಕಂಡುಹಿಡಿಯಲು ಕೇಳಲಾಯಿತು. ಕೇವಲ 50 ಸೆಕೆಂಡುಗಳಲ್ಲಿ 546372891 ಎಂದು ಅದಕ್ಕೆ ಉತ್ತರಿಸಿ ಕಂಪ್ಯೂಟರ್ ಅನ್ನು ಸೋಲಿಸಿದರು

ಏಪ್ರಿಲ್ 21, 2013 ಭಾನುವಾರದಂದು ಸುಮಾರು  ಬೆಳಗ್ಗೆ 8:15 ರ ಹೊತ್ತಿಗೆ, ಶಕುಂತಲಾ ದೇವಿ  ತಮ್ಮ 83 ವರ್ಷದಲ್ಲಿ ಬೆಂಗಳೂರಿನ "ಬೆಂಗಳೂರು ಆಸ್ಪತ್ರೆ" ಯಲ್ಲಿ ನಿಧನರಾದರು.  ದುರ್ಬಲ ಮೂತ್ರಪಿಂಡ ಮತ್ತು ಉಸಿರಾಟದ ಸಮಸ್ಯೆ ಹೊಂದಿದ್ದರಿಂದ ಅವರು ಏಪ್ರಿಲ್ 3 ರಂದು ಆಸ್ಪತ್ರೆಗೆ ದಾಖಲಾಗಿದ್ದರು.

ನಾಡಿನ ಈ ಅಪೂರ್ವ ಪ್ರತಿಭೆಗೆ ಟೀಚರ್ಸ್ ಆ‍ಫ್ ಇಂಡಿಯಾ  ಅಶ್ರುಪೂರಿತ ಶ್ರದ್ಧಾಂಜಲಿ ಅರ್ಪಿಸುತ್ತದೆ.

Date: 
ಸೋಮವಾರ, April 22, 2013 - 2:00pm

ಪ್ರತಿಕ್ರಿಯೆಗಳು

mag's picture

I have read a lot of article on Shakuntala devi. She is the inspiration for many teachers and have been the best teacher for the kids. I liked this blog post on her and i feel that its a gratitude that you have expressed to her through this write up.
best crm systems

18449 ನೊಂದಾಯಿತ ಬಳಕೆದಾರರು
7204 ಸಂಪನ್ಮೂಲಗಳು