ಕರ್ನಾಟಕ ಸರ್ಕಾರ ಮತ್ತು ಅಜೀಂಪ್ರೇಂಜಿ ಪ್ರತಿಷ್ಠಾನದ ನಡುವೆ ಒಡಂಬಡಿಕೆಯ ಜ್ಞಾಪಕ ಪತ್ರ (ಎಂಒಯು)

 

ಕರ್ನಾಟಕ ಸರ್ಕಾರವು ದಿನಾಂಕ 31-12-12 ರಂದು ಶಿಕ್ಷಕ ಶಿಕ್ಷಣ, ಶಿಕ್ಷಣ ನಾಯಕತ್ವ ಮತ್ತು ಶಾಲಾ ಶಿಕ್ಷಣದಲ್ಲಿ ಸಮುದಾಯ ಭಾಗವಹಿಸುವಿಕೆ ಕ್ಷೇತ್ರದಲ್ಲಿ ಈಶಾನ್ಯ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಅಜೀಮ್  ಪ್ರೇಂಜಿ   ಪ್ರತಿಷ್ಠಾನದೊಂದಿಗೆ ಕೆಲಸಮಾಡಲು ಒಂದು ಒಡಂಬಡಿಕೆಯ ಜ್ಞಾಪಕ ಪತ್ರ ವನ್ನು ಮಾಡಿಕೊಂಡಿತು.

ಒಡಂಬಡಿಕೆಯ ಒಪ್ಪಂದಕ್ಕೆ ಸಹಿ ಹಾಕಿದ ಅನಂತರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರ್ ಜಿ ನಾಯಕ್, ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ  ಕರ್ನಾಟಕ ಸರ್ಕಾರ,ಇವರು ಇದಕ್ಕಾಗಿ ರೂ   27 ಕೋಟಿ ತೆಗೆದಿರಿಸಲಾಗಿದೆ ಮತ್ತು ಇದನ್ನು 2013 ಮತ್ತು 2016 ನಡುವಿನ ಅವಧಿಯಲ್ಲಿ ಆಯೋಜಿಸಲಾಗುತ್ತದೆ ಎಂದು ಹೇಳಿದರು.. ಶ್ರೀ ಕುಮಾರ್ ನಾಯಕ್  ಈ ಮೊಬಲಗಿನ  ಶೇಕಡಾ 50ರಷ್ಟನ್ನು ರಾಜ್ಯ ಸರ್ಕಾರವು ಮಂಜೂರು ಮಾಡುತ್ತದೆ  ಎಂದು ಮತ್ತು ಉಳಿದ ಹಣವನ್ನು  ಫೌಂಡೇಷನ್ ಒದಗಿಸುತ್ತದೆ ಎಂದು ತಿಳಿಸಿದರು.

ಪ್ರತಿಷ್ಠಾನವು ಗುಲ್ಬರ್ಗಾ, ಯಾದಗೀರ್, ಕೊಪ್ಪಳ ಮತ್ತು ಬೀದರ್ ನಲ್ಲಿ ಕೆಲಸ ಮಾಡುತ್ತದೆ, ಮತ್ತು ಶಿಕ್ಷಣ ನಾಯಕತ್ವ ರಂಗದಲ್ಲಿ ಧಾರವಾಡ ಮೂಲದ ಶಾಲಾ ನಾಯಕತ್ವ,ಶಿಕ್ಷಣ ಯೋಜನೆ ಮತ್ತು ನಿರ್ವಹಣೆ ರಾಜ್ಯ ಇನ್ಸ್ಟಿಟ್ಯೂಟ್,  (SISLEP) ಬಲಪಡಿಸಲಾಗುವುದು ಎಂದು. ಪ್ರತಿಷ್ಠಾನವು ರಾಜ್ಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಇಲಾಖೆ ಮತ್ತು ಶೈಕ್ಷಣಿಕ ಜಿಲ್ಲಾ ಸಂಸ್ಥೆ ಮತ್ತು ತರಬೇತಿ ಕೇಂದ್ರಗಳಲ್ಲಿ (ಡಯಟ್)  ಶಿಕ್ಷಕ ಶಿಕ್ಷಣ ಬಲಪಡಿಸಲು ಶ್ರಮಿಸುವುದು ಎಂದು.ಪ್ರತಿಷ್ಠಾನವು   ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅನುರಾಗ್ ಬೆಹರ್, ಉಪಕುಲಪತಿ, ಅಜೀಂ  ಪ್ರೇಂಜಿ ವಿಶ್ವವಿದ್ಯಾಲಯ ಇವರು ಮಾತನಾಡುತ್ತಾ, ಪ್ರತಿಷ್ಠಾನವು  ಶಾಲಾ ಶಿಕ್ಷಣದ ಗುಣಮಟ್ಟದಲ್ಲಿ ದೀರ್ಘಕಾಲೀನ ಬದಲಾವಣೆಯನ್ನು ತರಲು ಅಸ್ತಿತ್ವದಲ್ಲಿರುವ ಸರಕಾರೀ ಕಾರ್ಯಯಂತ್ರದೊಂದಿಗೆ  ಕೆಲಸ ಮಾಡುತ್ತದೆ ಎಂದು ಹೇಳಿದರು.

 

Date: 
ಮಂಗಳವಾರ, January 1, 2013 - 9:30am
Source: 
ದಿ ಹಿಂದೂ ದಿನಪತ್ರಿಕೆ,
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು