ಕರ್ನಾಟಕದ 'ಕುಡಿ'-ಶ್ರೇಷ್ಠ ಶಿಕ್ಷಕ

ಶ್ರೀ ಕುಡಿ ವಸಂತ ಶೆಟ್ಟಿ.

ಉಡುಪಿ ಜಿಲ್ಲೆಯ ಉಡುಪಿ ತಾಲ್ಲೂಕಿನ ಕುಡಿ  ಗ್ರಾಮದ ಶ್ರೀ ವಿಷ್ಣು ಮೂರ್ತಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕುಡಿ ವಸಂತ ಶೆಟ್ಟಿ ಅವರು ರಾಷ್ಟ್ರ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಗೊಂಡಿದ್ದಾರೆಂದು  ಕರ್ನಾಟಕ ಶಿಕ್ಷಣ ಇಲಾಖೆಯು ಪ್ರಕಟಿಸಿದೆ.

ವಿಷಯ ತಿಳಿದು ಸಂತಸ ವ್ಯಕ್ತ ಪಡಿಸಿದ ವಸಂತ ಶೆಟ್ಟಿ ಅವರು "ನಮ್ಮದು ಹಳ್ಳಿಯ ಶಾಲೆ. ಇದಕ್ಕೆ ಮನ್ನಣೆ ದೊರೆತದ್ದು ನನಗೆ ಅತೀವ ಸಂತಸ ತಂದಿದೆ.ನಾನೊಬ್ಬ ಶಿಕ್ಷಕರ ಮಗ. ಮುಖ್ಯೋಪಾಧ್ಯಾಯನಾಗಿ ನಾನು ವೃತ್ತಿಜೀವನ ಆರಂಭಿಸಿದೆ,ಶಾಲೆ ಎಂಬುದು ಹೇಗಿರಬೇಕು ಎಂಬ ಬಗ್ಗೆ ಒಂದು ಕನಸು-ಕಾಣ್ಕೆ ನನ್ನಲ್ಲಿಇತ್ತು. ಅದನ್ನೇ ಅನುಷ್ಠಾನ ಗೊಳಿಸದ್ದೇನೆ. ಶಿಸ್ತು ಮತ್ತು ಸಮಯಪಾಲನೆಗೆ ನಮ್ಮಶಾಲೆ ಮಹತ್ವ ನೀಡುತ್ತಿದೆ" ಎಂದು ಹಿಂದು ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಶ್ರೀ ಕುಡಿ ವಸಂತ ಶೆಟ್ಟಿ ಅವರು 1980 ರಿಂದ ಶ್ರೀ ವಿಷ್ಣು ಮೂರ್ತಿ ಶಾಲೆಯ ಸ್ಥಾಪಕ ಮುಖ್ಯೋಪಾಧ್ಯಾಯರಾಗಿ ಕಳೆದ 32 ವರ್ಷಗಳಿಂದ ಸೇವೆಸಲ್ಲಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಎಂ.ಎ. ಪದವೀಧರರಾದ ಶ್ರೀಯುತರು ಡಾ. ಟಿಎಂಎ ಪೈ ಶಿಕ್ಷಣ ಕಾಲೇಜಿನ ಬಿ.ಎಡ್ ಪದವಿಧರರು.

ದಿನಾಂಕ 5ನೇ ಸೆಪ್ಡಂಬರ್ 2012ರಂದು ದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರಪತಿ ಪ್ರಣಾಬ್ ಮುಖರ್ಜಿ ಅವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಾರೆ.

ಚಿತ್ರ ಮತ್ತು ಸುದ್ದಿಕೃಪೆ: "ದಿ ಹಿಂದೂ"

 

Date: 
ಸೋಮವಾರ, September 3, 2012 - 12:00pm
Source: 
ದಿ ಹಿಂದೂ -ಇಂಗ್ಲಿಷ್ ದೈನಿಕ ದಿನಾಂಕ ೩೧-೦೮-೨೦೧೨
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು