ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ: ಪ್ರವೇಶ ತೆರೆದಿವೆ

ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ: ಪ್ರವೇಶ ತೆರೆದಿವೆ
 
ಸ್ನಾತಕೋತ್ತರ ಪದವಿ ವ್ಯಾಸಂಗ ಕ್ರಮಗಳು-2016-18
ಪದವಿ ವ್ಯಾಸಂಗ ಕ್ರಮಗಳು -2016-2019
 
 
ಬೆಂಗಳೂರು, ಡಿಸೆಂಬರ್ 2015: ಅಜೀಂ ಪ್ರೇಂಜಿ ವಿಶ್ವವಿದ್ಯಾಲಯವು ತನ್ನ ಎರಡು ವರ್ಷದ ಪೂರ್ಣಾವಧಿಯ ಸ್ನಾತಕೋತ್ತರ ಪದವಿ ವ್ಯಾಸಂಗ ಕ್ರಮಗಳು-(ಎಂ.ಎ ಶಿಕ್ಷಣ, ಎಂ.ಎ ಅಭಿವೃದ್ಧಿ ಹಾಗು ಎಂ.ಎ ಸಾರ್ವಜನಿಕ ಕಾರ್ಯನೀತಿ ಮತ್ತು ಆಡಳಿತ) ಮತ್ತು ತನ್ನ ಮೂರು ವರ್ಷದ ಪದವಿ ವ್ಯಾಸಂಗ ಕ್ರಮಗಳು- ಬಿ.ಎಸ್‍ಸಿ.(ಭೌತ ಶಾಸ್ತ್ರ ಅಥವಾ ಜೀವಶಾಸ್ತ್ರ) ಬಿ.ಎ.(ಅರ್ಥಶಾಸ್ತ್ರ ಅಥವಾ ಸಂಯುಕ್ತ ಮಾನವಿಕಗಳು) ಇವುಗಳಿಗೆ ಪ್ರವೇಶವನ್ನು ಪ್ರಕಟಿಸುತ್ತಿದೆ. ಅಜೀಂ ಪ್ರೇಂಜಿ ಅಭಿವೃದ್ಧಿ ಪ್ರತಿಷ್ಠಾನವು 2010ರಲ್ಲಿ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿತು.
 
ಪ್ರವೇಶ ಪ್ರಕ್ರಿಯೆ ಮತ್ತು ದಿನಾಂಕಗಳು: ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವೆಬ್ ಸೈಟ್ ನಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸಬಹುದು.
ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಅರ್ಜಿದಾರರ ಕಿರುಪಟ್ಟಿ ತಯಾರಿಸಲಾಗುವುದು. ಸ್ನಾತಕೋತ್ತರ ಪದವಿ ವ್ಯಾಸಂಗ ಕ್ರಮಗಳಿಗೆ ಅರ್ಜಿಸಲ್ಲಿಸಲು ಕೊನೆಯ ದಿನಾಂಕ ಜನವರಿ 28, 2016 ಮತ್ತು ಭಾರತದಾದ್ಯಂತ 30 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಯ ದಿನಾಂಕ: ಫೆಬ್ರವರಿ 14, 2016. ಪದವಿ ವ್ಯಾಸಂಗಕ್ರಮಗಳಿಗೆ ಪ್ರವೇಶವು ಎರಡು ಹಂತಗಳಲ್ಲಿ ನಡೆಯುವುದು.ಮೊದಲ ಹಂತದ ಪ್ರವೇಶ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 20, 2015. ಅದಕ್ಕೆ ಲಿಖಿತ ಪರೀಕ್ಷೆಯ ದಿನಾಂಕ: ಡಿಸೆಂಬರ್ 27, 2015. ಆಯ್ಕೆಯಾದವರ ಪಟ್ಟಿಯನ್ನು ಜನವರಿ 2016 ರಲ್ಲಿ ಪ್ರಕಟಿಸಲಾಗುವುದು. ವಾಡಿಕೆಯ ಪ್ರವೇಶಕ್ಕೆ ಅರ್ಜಿಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 25, 2016 ಇದಕ್ಕೆ ಪರೀಕ್ಷೆ ಮತ್ತು ಸಂದರ್ಶನಗಳನ್ನು ಮೇ 2016ರಲ್ಲಿ ನಡೆಸಲಾಗುವುದು.
 
ಸ್ನಾತಕೋತ್ತರ ಪದವಿ ವ್ಯಾಸಂಗ ಕ್ರಮಗಳನ್ನು ಕುರಿತು:. ಎಂ.ಎ ಶಿಕ್ಷಣ ವ್ಯಾಸಂಗ ಕ್ರಮದ ವಿದ್ಯಾರ್ಥಿಗಳು ಪಠ್ಯಕ್ರಮ ಮತ್ತು ಬೋಧನ ಶಾಸ್ತ್ರ (Curriculum & Pedagogy ), ಶಾಲಾ ಮುಖಂಡತ್ವ ಮತ್ತು ಆಡಳಿತ (School Leadership & Management) ಹಾಗು ಎಳೆಯ ಮಕ್ಕಳ ಶಿಕ್ಷಣ (Early Childhood Education ) ವಿಷಯಗಳಲ್ಲಿ ಪರಿಣತಿ ಪಡೆಯಬಹುದು. ಎಂ.ಎ ಅಭಿವೃದ್ಧಿ ವ್ಯಾಸಂಗ ಕ್ರಮದ ವಿದ್ಯಾರ್ಥಿಗಳು ಜೀವನೋಪಾಯ (livelihood), ಆರೋಗ್ಯ ಮತ್ತು ಪೌಷ್ಟಿಕಾಹಾರ, (Health & Nutrition), ಕಾನೂನು, ಆಡಳಿತ ಅಥವಾ ಸುಸ್ಥಿರತೆ ( Law & Governance or Sustainability) ವಿಷಯಗಳಲ್ಲಿ ಪರಿಣತಿ ಪಡೆಯಬಹುದು. ಅಲ್ಲದೆ ಅವರು ಯಾವುದೇ ಪರಿಣತಿ ಇಲ್ಲದೆ ಸಮತೋಲಿತ ಸಾಮಾನ್ಯ ವ್ಯಾಸಂಗಕ್ರಮವನ್ನು ಆಧ್ಯಯನ ಮಾಡಬಹುದು. (ಇಂಗ್ಲಿಷ್ ಭಾಷೆ ಈ ಎಲ್ಲ ಕೋರ್ಸುಗಳ ಶೈಕ್ಷಣಿಕ ಮಾಧ್ಯಮವಾಗಿರುತ್ತದೆ)
 
ಪದವಿ ವ್ಯಾಸಂಗ ಕ್ರಮಗಳು-. ಭೌತ ಶಾಸ್ತ್ರ ಅಥವಾ ಜೀವಶಾಸ್ತ್ರ ಮೇಜರ್ ಇರುವ ಬಿ.ಎಸ್‍ಸಿ. ಪದವಿ ಮತ್ತು ಅರ್ಥಶಾಸ್ತ್ರ ಅಥವಾ ಸಂಯುಕ್ತ ಮಾನವಿಕಗಳು (ಚರಿತ್ರೆ, ತತ್ವ ಶಾಸ್ತ್ರ, ಭಾಷೆ ಮತ್ತು ಸಾಹಿತ್ಯ) ಮೇಜರ್ ಆಗಿರುವ ಬಿ.ಎ.ಪದವಿ ಗಳನ್ನು ಅಧ್ಯಯನ ಮಾಡಬಹುದಾಗಿದೆ. ಅಲ್ಲದೆ ವಿಶಾಲ ಪರಿಧಿಯ ವಿಷಯಗಳಿಂದ (ಅಂದರೆ ಉದಾ.ಡಾಟಾ ಸೈನ್ಸಸ್, ಡೆವಲಪ್ಮೆಂಟ್ ಸ್ಟಡೀಸ್,ಎಜುಕೇಷನ್ ಸ್ಟಡೀಸ್) ಅಯ್ದು ಮೈನರ್ ವಿಷಯಗಳನ್ನು ಅಧ್ಯಯನ ಮಾಡಬಹುದಾಗಿದೆ.ಅವರು ಹೆಚ್ಚುವರಿ ಸಂಶೋಧನಾಕಾರ್ಯ ಮತ್ತು ಯೋಜನೆಗಳನ್ನು ತೆಗೆದು ಕೊಂಡು ತಮ್ಮ ಆನರ್ಸ್ ಪದವಿಗೂ ಅಧ್ಯಯನ ಮಾಡಬಹುದಾಗಿದೆ. (ಇಂಗ್ಲಿಷ್ ಭಾಷೆ ಈ ಎಲ್ಲ ಕೋರ್ಸುಗಳ ಶೈಕ್ಷಣಿಕ ಮಾಧ್ಯಮವಾಗಿರುತ್ತದೆ.)
 
ಹಣಕಾಸು ನೆರವು: ವಿಶ್ವವಿದ್ಯಾಲಯವು ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ವ್ಯಾಪಕ ಸಂಪೂರ್ಣ ಮತ್ತು ಭಾಗಶಃ ವಿದ್ಯಾರ್ಥಿವೇತನಗಳನ್ನು ನೀಡಿ ಹಣಕಾಸು ನೆರವು ಒದಗಿಸಲು ಬದ್ಧವಾಗಿದೆ.ಅಲ್ಲದೆ ರಿಯಾಯತಿ ದರದಲ್ಲಿ ಶಿಕ್ಷಣ ಸಾಲವನ್ನು ಪಡೆಯಲೂ ನೆರವು ನೀಡುತ್ತದೆ.
 
ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಮತ್ತು ಮುಖ್ಯ ಕಾರ್ಯಾಚರಣೆ ಅಧಿಕಾರಿಯವರಾದ ಶ್ರೀ ಎಸ್ ಗಿರಿಧರ್ ಅವರು ಹೀಗೆ ಹೇಳುತ್ತಾರೆ: “ಉನ್ನತ ಮಟ್ಟದ ಸಕ್ಷಮತೆ , ಪ್ರಾಮಾಣಿಕತೆ ಮತ್ತು ಸಾಮಾಜಿಕ ಬದ್ಧತೆಯುಳ್ಳ ವೃತ್ತಿಪರರನ್ನು ಬೆಳಸುವುದೇ ನಮ್ಮ ಪ್ರಯತ್ನ. ವಿದ್ಯಾರ್ಥಿಗಳು ತಮ್ಮ ತಮ್ಮ ಅಸಕ್ತ ವಿಷಯಗಳನ್ನು ಅದ್ಯಯನ ಮಾಡಲು ಸಾಕಷ್ಟು ಅವಕಾಶ ನೀಡುತ್ತಾ ಅದೇ ಸಮಯದಲ್ಲಿ ಅವರಲ್ಲಿ ವಿದ್ಯಾವಿಷಯದ ಬಗ್ಗೆ ಆಳವಾದ ಜ್ಞಾನ ಮೈಗೂಡಿಸುವುದಕ್ಕೆ ಸೂಕ್ತವಾಗಿ ಇಲ್ಲಿನ ಪಠ್ಯಕ್ರಮ, ವಿದ್ಯಾರ್ಥಿ ಮತ್ತು ಬೋಧಕ ವರ್ಗದ ಹೆಚ್ಚಿನ ಅನುಪಾತ ಹಾಗು ಗಮನೀಯ ವಿದ್ಯಾರ್ಥಿ ನೆರವುಗಳನ್ನು ವಿನ್ಯಾಸಗೊಳಿಸಲಾಗಿದೆ.”
 
 
ಉದ್ಯೋಗಾವಕಾಶಗಳು ಮತ್ತು ಪ್ಲೇಸ್ಮೆಂಟ್ ನೆರವು
 ವಿದ್ಯಾರ್ಥಿಗಳ ಮುಂದಿನ ಉದ್ಯೋಗಾವಕಾಶಗಳನ್ನು ಸುಗಮಗೊಳಿಸಲು ಅದಕ್ಕೆಂದೆ ಮುಡಿಪಾದ
ಕ್ಯಾಂಪಸ್ ಪ್ಲೇಸ್‍ಮೆಂಟ್ (campus placement cell) ವಿಭಾಗವಿದೆ. ಸಾಮಾಜಿಕ ವಲಯ, ಸರ್ಕಾರೇತರ ಸಂಸ್ಥೆಗಳು, ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ವಿಭಾಗಗಳು, ಸಂಶೋಧನೆ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಅನೇಕ ಬಗೆಯ ಹೊಸ ಸವಾಲಿನ ಹಾಗು sಸಾರ್ಥಕಾನುಭವ ಕೊಡುವ ಉದ್ಯೋಗಗಳು ಲಭ್ಯವಿವೆ.
ವಿಳಾಸ: ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ, ಪಿಕ್ಸಲ್ ಪಾರ್ಕ್-ಬಿ, ಪಿ.ಇ.ಎಸ್. ಕ್ಯಾಂಪಸ್, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆ, ಬೆಂಗಳೂರು-560100.
ಸುಂಕ ರಹಿತ ಸಹಾಯವಾಣಿ; 1800 843 2001 
 
ಇ ಮೇಲ್: ಪದವಿ ವ್ಯಾಸಂಗಕ್ರಮಕ್ಕೆ ugadmissions@apu.edu.in
ಸ್ನಾತಕೋತ್ತರ ವ್ಯಾಸಂಗಕ್ರಮಕ್ಕೆ admissions@apu.edu.in
 
ಮಾಧ್ಯಮದÀವರಿಗೆ ಸಂಪರ್ಕ:
 
 
Date: 
ಬುಧವಾರ, December 2, 2015 - 9:15am
18462 ನೊಂದಾಯಿತ ಬಳಕೆದಾರರು
7223 ಸಂಪನ್ಮೂಲಗಳು