ಅಜೀಂ ಪ್ರೇಂಜಿ ವಿಶ್ವವಿದ್ಯಾಲಯವು ೨೦೧೭-೨೦೧೯ರ ತನ್ನ ಸ್ನಾತಕೋತ್ತರ ವ್ಯಾಸಂಗಕ್ರಮಗಳಿಗೆ ಪ್ರವೇಶವನ್ನು ಪ್ರಕಟಿಸುತ್ತಿದೆ.

ಪತ್ರಿಕಾ ಪ್ರಕಟಣೆ
 
ಅಜೀಂ ಪ್ರೇಂಜಿ ವಿಶ್ವವಿದ್ಯಾಲಯವು
೨೦೧೭-೨೦೧೯ರ ತನ್ನ ಸ್ನಾತಕೋತ್ತರ ವ್ಯಾಸಂಗಕ್ರಮಗಳಿಗೆ ಪ್ರವೇಶವನ್ನು  ಪ್ರಕಟಿಸುತ್ತಿದೆ.
ಸಾಮಾಜಿಕ ಬದಲಾವಣೆಗೆ ನಾಯಕರ ನಿರ್ಮಾಣ 
 
ಕೌಟುಂಬಿಕ ವರಮಾನದ ಆಧಾರದ ಮೇಲೆ ಅರ್ಹ ವಿದ್ಯಾರ್ಥಿಗಳಿಗೆ ಪೂರ್ಣ ಅಥವಾ ಭಾಗಶಃ ವಿದ್ಯಾರ್ಥಿವೇತನ.
 
ಬೆಂಗಳೂರು, ಅಕ್ಟೋಬರ್ ೧೮, ೨೦೧೬: ಅಜೀಂ ಪ್ರೇಂಜಿ ವಿಶ್ವವಿದ್ಯಾಲಯವು ಸಾಮಾಜಿಕ ವಲಯದ ಅತಿ ಮುಖ್ಯ ಕ್ಷೇತ್ರಗಳಾದ ಶಿಕ್ಷಣ, ಅಭಿವೃದ್ಧಿ ಮತ್ತು ತತ್ಸಬಂಧಿತ ರಂಗಗಲ್ಲಿ ಕೊಡುಗೆ ನೀಡಲು ತೀವ್ರ ಆಸಕ್ತಿಯುಳ್ಳ  ನವ ಪದವೀಧರರು ಮತ್ತು ಅನುಭವಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಈ ಎರಡು ವರ್ಷದ ಪೂರ್ಣಾವಧಿಯ ಸ್ನಾತಕೋತ್ತರ ವ್ಯಾಸಂಗಕ್ರಮಗಳು (ಎಂ.ಎ. ಎಜುಕೇಷನ್, ಎಂ.ಎ. ಡೆವೆಲೆಪ್ಮೆಂಟ್, ಎಂ.ಎ. ಪಬ್ಲಿಕ್ ಪಾಲಿಸಿ ಮತ್ತು ಗವರ್ನೆನ್ಸ್) ಮತ್ತು ಲಾ ಅಂಡ್ ಡೆವೆಲೆಪ್ಮೆಂಟ್ ವಿಷಯದಲ್ಲಿ  ಒಂದು ವರ್ಷದ  ಎಲ್ ಎಲ್. ಎಂ. ಭಾರತೀಯ ಶಿಕ್ಷಣ ಮತ್ತು ಸಾಮಾಜಿಕ ವಲಯಕ್ಕೆ  ಗಮನಾರ್ಹವಾಗಿ ಕೊಡುಗೆ ನೀಡಬಲ್ಲ ಸಮರ್ಥ ಮತ್ತು ಬದ್ಧ ವೃತ್ತಿನಿರತರನ್ನು ಬೆಳಸುವ ಗುರಿಯನ್ನು ಹೊಂದಿವೆ.
 
ನಮ್ನ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ತಂದೆತಾಯಿಯರ ಶಿಕ್ಷಣ, ಆದಾಯ, ಜಾತಿ, ಲಿಂಗ ಇತ್ಯಾದಿ ಆಧಾರಗಳಿಂದ ಅನುಕೂಲ ವಂಚಿತ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳಿಗೆ ನೆರವನ್ನು ನೀಡುವುದಕ್ಕೆ ಸ್ಪಷ್ಟವಾಗಿ ಬದ್ಧವಾಗಿದೆ. ವಿಶ್ವವಿದ್ಯಾಲಯವು ಬೋಧನಾ ಶುಲ್ಕ, ವಸತಿ ಸೌಕರ್ಯಗಳು ಮತ್ತು ಊಟ-ತಿಂಡಿ ವೆಚ್ಚಗಳನ್ನು ಒಳಗೊಂಡ ಪೂರ್ಣ ಮತ್ತು ಭಾಗಶಃ ವಿದ್ಯಾರ್ಥಿವೇತನಗಳ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ವ್ಯಾಪಕ ಹಣಕಾಸು ನೆರವು ಒದಗಿಸುತ್ತದೆ. 
 
ಎಂ.ಎ. ಎಜುಕೇಷನ್ ವ್ಯಾಸಂಗಕ್ರಮಕ್ಕೆ ಅರ್ಜಿಸಲ್ಲಿಸುವ ವಿದ್ಯಾರ್ಥಿಗಳು ಪಠ್ಯಕ್ರಮ ಮತ್ತು ಶಿಕ್ಷಣ ಶಾಸ್ತ್ರ, ಶಾಲಾ ವ್ಯವಸ್ಥಾಪನೆ, ನಾಯಕತ್ವ ಮತ್ತು ಆಡಳಿತನಿರ್ವಹಣೆ, ಪುಟ್ಟ ಮಕ್ಕಳ ಶಿಕ್ಷಣ ಅಥವಾ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ವಿಷಯಗಳಲ್ಲಿ ಪರಿಣತಿ ಪಡೆಯಬಹುದು. ಎಮ್.ಎ. ಡೆವೆಲೆಪ್ಮೆಂಟ್ ವಿದ್ಯಾರ್ಥಿಗಳು, ಜೀವನೋಪಾಯ (ಲೈವ್ಲಿಹುಡ್) ಸಾರ್ವಜನಿಕ ಆರೋಗ್ಯ, ಕಾನೂನು, ಆಡಳಿತ ಮತ್ತು ಕಾರ್ಯನೀತಿ ಅಥವಾ ಸುಸ್ಥಿರತೆ ವಿಷಯಗಳಲ್ಲಿ ಪರಿಣತಿ ಪಡೆಯಬಹುದು. ಅವರು ಯಾವುದೇ ಪರಿಣತಿಗಾಗಿ ಅಧ್ಯಯನ ನಡೆಸದೆಯೇ  ಸಮತೋಲಿತ ಸಾಮಾನ್ಯ ವ್ಯಾಸಂಗ ಕ್ರಮವನ್ನು  ತೆಗೆದುಕೊಂಡು ಸಹ ವ್ಯಾಸಂಗ ನಡೆಸಬಹುದು.
ವಿಶ್ವವಿದ್ಯಾಲಯವು ಬುನಾದಿ ವ್ಯಾಸಂಗದ ಮುಖ್ಯ ಪಠ್ಯಕ್ರಮ, ಮತ್ತು ಐಚ್ಛಿಕಗಳ ಮೂಲಕ ಪರಿಣತಿ ಪಡೆಯುವ ಆಯ್ಕೆ ಅವಕಾಶ ದೊಂದಿಗೆ "ಸ್ವತಂತ್ರ ಅಧ್ಯಯನ’ ದ ಆಯ್ಕೆಯ ಮೂಲಕ ನಿಮ್ಮದೇ ಆದ ಪಠ್ಯ ವಿನ್ಯಾಸ ರೂಪಿಸಿಕೊಳ್ಳಲು ನಮ್ಯತೆಯನ್ನೂ ಒದಗಿಸುತ್ತಾ ಒಂದು ಅನನ್ಯ ಕಲಿಕೆಯ ಅನುಭವವನ್ನು ನೀಡುತ್ತದೆ.
 
 
ವಿಶ್ವವಿದ್ಯಾಲಯದಲ್ಲಿನ ಸಂಯೋಜಿತ ಕ್ಷೇತ್ರ ಅಭ್ಯಾಸವು  ಪ್ರತಿ ವಾರವೂ ಇರುವ  ಪ್ರಾಯೋಗಿಕ ಅಧ್ಯಯನ (ಪ್ರಾಕ್ಟಿಕಂ), ದೀರ್ಘಕಾಲೀನ ಸಂಸರ್ಗ ಭೇಟಿ, ಕ್ಷೇತ್ರದಲ್ಲಿ ಸಂಶೋಧನೆ ಇಂಟರ್ನ್ಶಿಪ್ ಅವಕಾಶಗಳು ಮತ್ತು ಸ್ವತಂತ್ರ ಕ್ಷೇತ್ರ ಯೋಜನೆಗಳನ್ನು ಹೊಂದಿದ್ದು ಒಂದು ವಿಶಿಷ್ಟ ಕಲಿಕೆಯ ಅನುಭವವಾಗಿದೆ. ಇದಲ್ಲದೆ, ಲಲಿತಕಲೆ ಮತ್ತು ಕರಕುಶಲ ಕಲೆ, ಸಂಗೀತ, ಸಿನಿಮಾ, ಸಾಹಿತ್ಯ ಇತ್ಯಾದಿ ಕೋರ್ಸುಗಳು ಇವೆ ಹಾಗೆಯೇ ಕಾರ್ಯಾಗಾರಗಳು, ವಿಚಾರಗೋಷ್ಠಿಗಳು, ಅತಿಥಿ ಉಪನ್ಯಾಸ ಮತ್ತು ಇತರ ವಿವಿಧ ಕಾರ‍್ಯಕ್ರಮಗಳ ಮೂಲಕ ಕಲಿಕೆಯ ಇತರ ಅವಕಾಶಗಳನ್ನು ಕ್ಯಾಂಪಸ್ ನಲ್ಲಿ ಏರ್ಪಡಿಸಲಾಗುತ್ತದೆ.
ಈ ಸ್ನಾತಕೋತ್ತರ ವ್ಯಾಸಂಗಕ್ರಮಗಳ ಶಿಕ್ಷಣಮಾಧ್ಯಮ ಇಂಗ್ಲಿಷ್ ಆಗಿರುತ್ತದೆ.
ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ, ರಿಜಿಸ್ಟ್ರಾರ್ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಎಸ್. ಗಿರಿಧರ್ ಅವರು ಹೀಗೆ ಹೇಳುತ್ತಾರೆ "ನಮ್ಮ ಸ್ಪಷ್ಟ ಸಾಮಾಜಿಕ ಉದ್ದೇಶದ ಹಿನ್ನೆಲೆಯಲ್ಲಿ ನೋಡಿದಾಗ , ನಮ್ಮ ಬಹುಪಾಲು ಎಲ್ಲಾ ಪದವೀಧರರು ಶಿಕ್ಷಣ ಮತ್ತು ಅಭಿವೃದ್ಧಿ ವಲಯದಲ್ಲಿ ಅದರಲ್ಲೂ ಅನೇಕರು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವುದನ್ನು ಆಯ್ಕೆ ಮಾಡಿಕೊಂಡಿರುವುದು ಬಲು ಸಂತೋಷದ ವಿಷಯವಾಗಿದೆ. ಅವರು ಗ್ರಾಮೀಣ ಮಟ್ಟದಲ್ಲಿ ಅರ್ಥಪೂರ್ಣವಾಗಿ ಸಾಮಾಜಿಕ ಬದಲಾವಣೆಗೆ ಕೊಡುಗೆ ನೀಡುವ ಅವಕಾಶವನ್ನು ಕೈಗೆತ್ತಿಕೊಂಡಿದ್ದಾರೆ ಎಂಬುದು ಹಾರ್ದಿಕ ಅಂಶ’ 
 
 
ಪ್ರವೇಶ ಪ್ರಕ್ರಿಯೆ ಮತ್ತು ದಿನಾಂಕಗಳು: ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವೆಬ್ಸೈಟ್ನಲ್ಲಿ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದಲ್ಲಿನ ಫಲಿತಾಂಶವನ್ನು ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಸ್ನಾತಕೋತ್ತರ ಮತ್ತು ಎಲ್‌ಎಲ್.ಎಂ ವ್ಯಾಸಂಗಕ್ರಮಕ್ಕೆ ಅರ್ಜಿಗಳನ್ನು ಸಲ್ಲಿಸಲು ಅಂತಿಮ ದಿನಾಂಕ ಜನವರಿ ೧೨, ೨೦೧೭. ಭಾರತದಾದ್ಯಂತ ಸುಮಾರು ೩೦ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಯನ್ನು  ಜನವರಿ ೨೨, ೨೦೧೭ ರಲ್ಲಿ ನಡೆಸಲಾಗುವುದು ಮತ್ತು ಸಂದರ್ಶನಗಳನ್ನು  ಫೆಬವರಿ / ಮಾರ್ಚ್ ೨೦೧೭ ರಲ್ಲಿ ನಡೆಸಲಾಗುವುದು. 
 
ವೃತ್ತಿ ಅವಕಾಶಗಳು ಮತ್ತು ಉದ್ಯೋಗ ನೆರವು 
 
ಕಳೆದ ನಾಲ್ಕು ವರ್ಷಗಳಲ್ಲಿ ಉತ್ತೀರ್ಣರಾದ ನಾಲ್ಕು ಸ್ನಾತಕೋತ್ತರ ವ್ಯಾಸಂಗಕ್ರಮಗಳ ವಿದ್ಯಾರ್ಥಿಗಳಿಗೆ ಸುಮಾರು ನೂರಕ್ಕೆ ನೂರರಷ್ಟು ಕ್ಯಾಂಪಸ್ ಪ್ಲೇಸ್ಮೆಂಟ್ ಆಗಿರುತ್ತದೆ. ವಿದ್ಯಾರ್ಥಿಗಳ ಮುಂದಿನ ಉದ್ಯೋಗಾವಕಾಶಗಳನ್ನು ಸುಗಮಗೊಳಿಸಲು ಅದಕ್ಕೆಂದೆ ಮುಡಿಪಾದಕ್ಯಾಂಪಸ್ ಪ್ಲೇಸ್ಮೆಂಟ್ (ಛಿಚಿmಠಿus ಠಿಟಚಿಛಿemeಟಿಣ ಛಿeಟಟ) ವಿಭಾಗವಿದೆ. ಸಾಮಾಜಿಕ ವಲಯ, ಸರ್ಕಾರೇತರ ಸಂಸ್ಥೆಗಳು, ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ವಿಭಾಗಗಳು, ಸಂಶೋಧನೆ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಅನೇಕ ಬಗೆಯ ಹೊಸ ಸವಾಲಿನ ಹಾಗು sಸಾರ್ಥಕಾನುಭವ ಕೊಡುವ ಉದ್ಯೋಗಗಳು ಲಭ್ಯವಿವೆ. 
 
 
ನಮ್ಮ ವಿಳಾಸ: ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ, ಪಿಕ್ಸೆಲ್ ಪಾರ್ಕ್, ಬಿ ಬ್ಲಾಕ್, ಪಿಇಎಸ್ ಕ್ಯಾಂಪಸ್, ಎಲೆಕ್ಟ್ರಾನಿಕ್ಸ್ ಸಿಟಿ, ಹೊಸೂರು ರಸ್ತೆ, ಬೆಂಗಳೂರು, ೫೬೦೧೦೦
ಉಚಿತ ಸಹಾಯವಾಣಿ: ೧೮೦೦ ೮೪೩ ೨೦೦೧
 
ಇಮೇಲ್: ಸ್ನಾತಕೋತ್ತರ ವ್ಯಾಸಂಗಕ್ರಮಗಳಿಗಾಗಿ admissions@apu.edu.in

ವೆಬ್ಸೈಟ್: www.azimpremjiuniversity.edu.in/admissions  

ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಬಗ್ಗೆ:
ಅಜೀಂ ಪ್ರೇಂಜಿ ವಿಶ್ವವಿದ್ಯಾಲಯವನ್ನು ಕರ್ನಾಟಕ ಸರ್ಕಾರದ ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯ ಕಾಯಿದೆ, ೨೦೧೦ ರ ಅಡಿಯಲ್ಲಿ ಸ್ಥಾಪಿಸಲಾಗಿದೆ. ಈ ವಿಶ್ವವಿದ್ಯಾಲಯವನ್ನು ಪ್ರಾಯೋಜಿಸಿದ ಸಂಸ್ಥೆಯಾದ ಅಜೀಂ ಪ್ರೇಂಜಿ ಫೌಂಡೇಶನ್, ಇದನ್ನು ಸಂಪೂರ್ಣವಾಗಿ ಜನಹಿತದ ಮತ್ತು ಲಾಭ ನಿರೀಕ್ಷೆಯಿಲ್ಲದ ಸ್ಪಷ್ಟ ಸಾಮಾಜಿಕ ಉದ್ದೇಶವನ್ನು ಹೊಂದಿರುವ ವಿಶ್ವವಿದ್ಯಾಲಯವಾಗಿ ಅಸ್ತಿತ್ವಕ್ಕೆ ತಂದಿದೆ. ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಪ್ರಮುಖ ಧ್ಯೇಯೋದ್ದೇಶವೆಂದರೆ ಭಾರತದ ಶಿಕ್ಷಣ ಮತ್ತು ಅಭಿವೃದ್ಧಿ ಕ್ಷೇತ್ರಗಳಿಗೆ ಉತ್ತಮ ಕೊಡುಗೆ ನೀಡಬಲ್ಲ ಹೆಚ್ಚು ಸಮರ್ಥರೂ, ನಿಷ್ಠಾವಂತರೂ ಮತ್ತು ಸಾಮಾಜಿಕ ಬದ್ಧತೆ ಉಳ್ಳವರೂ ಆದ ಪದವೀಧರರನ್ನು ಸಿದ್ಧಪಡಿಸುವುದು.
 
ಮಾಧ್ಯಮ ಸಂಬಂಧಿ ಪ್ರಶ್ನೆಗಳಿಗಾಗಿ ಸಂಪರ್ಕಿಸಿ: ಸ್ನೇಹಾ ಕುಮಾರಿ:sneha.kumari@azimpremjifoundation.org
Date: 
ಶುಕ್ರವಾರ, November 4, 2016 - 10:45am
Source: 
Azimpremji university
19178 ನೊಂದಾಯಿತ ಬಳಕೆದಾರರು
7446 ಸಂಪನ್ಮೂಲಗಳು