ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದಲ್ಲಿ ಸ್ನಾತಕ ಪದವಿ ವ್ಯಾಸಂಗಕ್ರಮ

ಅಜೀಂ ಪ್ರೇಂಜಿ ವಿಶ್ವವಿದ್ಯಾಲಯವು 2015 ರ  ಜುಲೈ ನಿಂದ ಆರಂಭಗೊಳ್ಳುವಂತೆ ಸ್ನಾತಕ ಪದವಿ ವ್ಯಾಸಂಗಕ್ರಮವನ್ನು ಒದಗಿಸುತ್ತದೆ.ಇದು ಮೂರು ವರ್ಷಗಳ  ಪೂರ್ಣ ಸಮಯವಸತಿ ವ್ಯಾಸಂಗಕ್ರಮವಾಗಿರುತ್ತದೆ. ಅಂತಿಮವಾಗಿ ವಿದ್ಯಾರ್ಥಿಗಳು ಆರ್ಟ್ಸ್ ಪದವಿ (ಬಿ.ಎ.) ಮತ್ತು ಬ್ಯಾಚುಲರ್ ಆಫ್ ಸೈನ್ಸ್ (ಬಿ..ಎಸ್.ಸಿ) ಪದವಿ ಪಡೆಯುತ್ತಾರೆ.ಅಲ್ಲದೆ ಪದವಿ ನಂತರ ಆನರ್ಸ್ ಪದವಿ ಪಡೆಯಲು ಸಂಶೋಧನೆ ಮತ್ತು ಯೋಜನೆಗಳನ್ನು ತೆಗೆದುಕೊಳ್ಳಲೂ ಅವಕಾಶವನ್ನು ಹೊಂದಿರುತ್ತಾರೆ.ವಿಶೇಷಾಧ್ಯನಕ್ಕೆ ದೊರಕಲಿರುವ ವಿಷಯಗಳು  ಮಾನವಿಕಗಳು  (ಸಾಹಿತ್ಯ, ತತ್ವಶಾಸ್ತ್ರ ಮತ್ತು ಇತಿಹಾಸ), ವಿಜ್ಞಾನ (ಭೌತಶಾಸ್ತ್ರ, ಜೀವಶಾಸ್ತ್ರ) ಮತ್ತು ಸಮಾಜ ವಿಜ್ಞಾನ (ಅರ್ಥಶಾಸ್ತ್ರ, ರಾಜಕೀಯ).

 ಇಂದಿನ ಯುವ ಪೀಳಿಗೆಯು ತಮ್ಮ ಕೆಲಸ ಮತ್ತು ಆಸಕ್ತಿಗಳಲ್ಲಿ ತೀವ್ರಾಸಕ್ತಿ ಹೊಂದಿ ನಿರ್ಣಾಯಕ ಮತ್ತು ಸ್ವತಂತ್ರ ಚಿಂತಕರಾಗಿ ಬೆಳೆಯುವಂತೆ, ಶಿಕ್ಷಣನೀಡಬೇಕಾದ ಅಗತ್ಯವಿದೆ ಎಂದು ಈ ವಿಶ್ವವಿದ್ಯಾಲಯವು ನಂಬುತ್ತದೆ.

ಇಲ್ಲನ ಪದವೀಧರರಿಗೆ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ವ್ಯಾಸಂಗಕ್ರಮಗಳೂ ಸೇರಿದಂತೆ ಉನ್ನತ ಶಿಕ್ಷಣ, ಆಸಕ್ತಿದಾಯಕ ಉದ್ಯೋಗಗಳು ಮುಂತಾದ ಅನೇಕ ಆಯ್ಕೆಗಳು ಭವಿಷ್ಯದಲ್ಲಿ ದೊರೆಯುತ್ತವೆ.

 

 

 

 

 

 

 

 

http://www.deccanherald.com/content/432273/azim-premji-university-offer-...

 

Date: 
ಬುಧವಾರ, October 8, 2014 - 10:15am
18448 ನೊಂದಾಯಿತ ಬಳಕೆದಾರರು
7204 ಸಂಪನ್ಮೂಲಗಳು