ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ-2015

 ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಪ್ರತಿವರ್ಷ ಸೆಪ್ಟೆಂಬರ್ 8 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ . ಈ ದಿನವನ್ನು  ಯುನೆಸ್ಕೋ (UNESCO) ಸಾಕ್ಷರತಾ ದಿನವಾಗಿ ಗೊತ್ತುಪಡಿಸಿದೆ ಮತ್ತು ಮೊದಲ ಸಾಕ್ಷರತಾ ದಿನವನ್ನು 1966 ರಲ್ಲಿ ಆಚರಿಸಲಾಯಿತು.ಈ ವರ್ಷ "ಸಾಕ್ಷರತೆ ಮತ್ತು ಸುಸ್ಥಿರ ಸಮಾಜಗಳು"ಎಂಬ ವಸ್ತುವಿಷಯದೊಂದಿಗೆ  ಇದನ್ನುಎಲ್ಲೆಡೆ ಆಚರಿಸಲಾಗಿದೆ.

 ಗುಣಮಟ್ಟದ ಶಿಕ್ಷಣ ಮತ್ತು ಅಭಿವೃದ್ಧಿಯೊಂದಿಗೆ ಸುಸ್ಥಿರ ಸಮಾಜ ನಿರ್ಮಾಣದ ಧ್ಯೇಯವಾಕ್ಯವುಳ್ಳ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದಲ್ಲಿ ಸೆಪ್ಟಂಬರ್ 08, 2015ರಂದು  ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ-2015 ಅನ್ನು  ಅದರ ಗ್ರಂಥಾಲಯದಲ್ಲಿ ಆಚರಿಸಲಾಯಿತು.   ಜೊತೆಗೆ ಸಾಕ್ಷರತೆಯನ್ನು ಕುರಿತ ವಿವಿಧ ಪುಸ್ತಕಗಳ ಒಂದು ಪುಸ್ತಕ ಪ್ರದರ್ಶನವನ್ನುಇಲ್ಲಿ ಸಾಪ್ತಾಹಿಕವಾಗಿ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಬೋಧಕವರ್ಗ ಮತ್ತು ಇತರ ಗ್ರಂಥಾಲಯದ ಸಂದರ್ಶಕರು ಇದರ ಲಾಭ ಪಡೆಯುತ್ತಿದ್ದಾರೆ. ಸಂಬಂಧಪಟ್ಟ ಫೋಟೊವನ್ನು ಇಲ್ಲಿ ಕೊಡಲಾಗಿದೆ.

 ಸಾಕ್ಷರತೆ ಕುರಿತು ಆಣಿಮುತ್ತುಗಳು
" ಉತ್ತಮ ಅರಿವುಳ್ಳ ಮತ್ತು ದೈವದತ್ತ  ಹಕ್ಕುಗಳನ್ನು ತಿಳಿದು  ಗೌರವಿಸುವುದನ್ನು ಕಲಿಸಲಾದ ಜನರ ರಾಷ್ಟ್ರವನ್ನು  ಯಾರೂ ಗುಲಾಮರನ್ನಾಗಿ  ಮಾಡಲು ಸಾಧ್ಯವಿಲ್ಲ ಅಜ್ಞಾನವೇ ದಬ್ಬಾಳಿಕೆಗೆ ಬುನಾದಿ." - ಬೆಂಜಮಿನ್ ಫ್ರಾಂಕ್ಲಿನ್
 
"ಓದದ  ವ್ಯಕ್ತಿ ಓದಲು ಸಾಧ್ಯವಿಲ್ಲದ ವ್ಯಕ್ತಿ ಗಿಂತ ಮಿಗಿಲೇನಲ್ಲ." - ಮಾರ್ಕ್ ಟ್ವೈನ್
 
"ಒಮ್ಮೆನೀವು ಓದಲು ಕಲಿತರೆ ನೀವು ಶಾಶ್ವತವಾಗಿ ಸ್ವತಂತ್ರರಾಗಿರುತ್ತೀರಿ." - ಫ್ರೆಡೆರಿಕ್ ಡಗ್ಲಾಸ್
 
"ನೀವು ಬದುಕುವಾಗ  ನಾಳೆಯೇ ನಿಮ್ಮ ಅಂತ್ಯ ಎನ್ನುವಂತೆ  ಬದುಕಿರಿ. ಕಲಿಯುವಾಗ  ನಿಮಗೆ ಸಾವೇ ಇಲ್ಲ ಎಂಬಂತೆ ಕಲಿಯಿರಿ ." - ಮಹಾತ್ಮ ಗಾಂಧಿ
 
"ಬೌದ್ಧಿಕ ಬೆಳವಣಿಗೆ ಹುಟ್ಟಿನಿಂದಲೇ ಆರಂಭವಾಗಬೇಕು ಮತ್ತು ಸಾವಿನಿಂದ ಕೊನೆ ಆಗಬೇಕು." - ಆಲ್ಬರ್ಟ್ ಐನ್ಸ್ಟೈನ್
 
"ಸಾಕ್ಷರತೆಯು ಬೇಗುದಿಯಿಂದ ಬರವಸೆಯೆಡೆಗೆ ಕರೆದೊಯ್ಯುವ ಅಮೂಲ್ಯ ಸೇತುವೆ." - ಕೋಫಿ ಅನ್ನಾನ್
 
"ಕಲಿಕೆಯ ಒಂದು ಸುಂದರ ಅಂಶವೆಂದರೆ ಯಾರೂ ಅದನ್ನು ನಿಮ್ಮಿಂದ ಕಸಿದುಕೊಳ್ಳಲಾರರು."- B.B. ಕಿಂಗ್
 
" ಪುಸ್ತಕವೆಂಬುದುಮತ್ತೆ ಮತ್ತೆ ತೆರೆದು ನೋಡಬಹುದಾದ ಉಡುಗೊರೆ." - ಗ್ಯಾರಿಸನ್ ಕೆಲ್ಲರ್
 
Date: 
ಗುರುವಾರ, September 10, 2015 - 9:00am
Source: 
ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಗ್ರಂಥಾಲಯ
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು