ಪರಿಚಯ:
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ ಗ್ರಾಮದ ನೆಹರೂ ನಗರzಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಚ್ಚಹಸಿರಿನ ಆವರಣ ಬಂದವರನ್ನು ಹಾರ್ದಿಕವಾಗಿ ಸ್ವಾಗತಿಸುತ್ತದೆ. ಮಕ್ಕಳು ಆಗಷ್ಟೇ ಗಿಡಗಳಿಗೆಲ್ಲ ನೀರುಣಿಸಿದ್ದರು, ಬೆಳಗಿನ ಪ್ರಾರ್ಥನಾ ಸಭೆ ಆಗತಾನೆ ಮುಗಿದಿತ್ತು. ತರಗತಿಗಳು ಇನ್ನೂ ಆರಂಭವಾಗಿರಲಿಲ್ಲ. ಆದರೆ ಮಧ್ಯಾಹ್ನದ...
ಅಜೀಂ ಪ್ರೇಂಜಿ ಪ್ರತಿಷ್ಠಾನದಲ್ಲಿ ಫೆಲೊಷಿಪ್ ವ್ಯಾಸಂಗಕ್ರಮ ೨೦೧೪-೨೦೧೬
ಫೆಲೋಶಿಪ್ ಎಂಬುದು ನೀವು ಶಿಕ್ಷಣದ ವಿವಿಧ ಆಯಾಮಗಳನ್ನು ಅನ್ವೇಷಿಸಲು ಮತ್ತು ಇದೇ ನಿಮ್ಮನಲ್ಮೆಯ ಉದ್ಯೋಗವೇ ಎಂದು ಕಂಡುಹಿಡಿಯಲು ಒಂದು ಸದವಕಾಶ. ಇದು 2 ವರ್ಷದ ಪೂರ್ಣಾವಧಿಯ ವ್ಯಾಸಂಗ ಕ್ರಮ. ಇದರಿಂದ ನೀವು ಗ್ರಾಮೀಣ ಸರ್ಕಾರಿ ಶಾಲೆಗಳ ವಾಸ್ತವಾನುಭವಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಅನುಭವಿಸಲು ಅವಕಾಶ ಸಿಗುತ್ತದೆ.
ಈ ಪರಿಶ್ರಮದ 2 ವರ್ಷದ ವ್ಯಾಸಂಗ ಕ್ರಮದಲ್ಲಿ ಕೆಳಗಿನ ಕಾರ್ಯಕ್ರಮಗಳು ಸೇರಿವೆ.
ಶಿಕ್ಷಣ ಮತ್ತು ಅಭಿವೃದ್ಧಿ ಸಮಸ್ಯೆಗಳ ಪರಿಕಲ್ಪನಾ ತಿಳುವಳಿಕೆ ಬಲಗೊಳಿಸಲು 5 ವಾರಗಳ ತರಗತಿಯ ಮಾಡ್ಯೂಲ್
22 ತಿಂಗಳು ಪ್ರತಿಷ್ಠಾನದ ಜಿಲ್ಲಾ ಸಂಸ್ಥೆಗಳಲ್ಲಿ ಗ್ರಾಮ ಮಟ್ಟದಲ್ಲಿ ತೀವ್ರ ಕ್ಷೇತ್ರಕಾರ್ಯ.
ಪ್ರಾಯೋಗಿಕ ಮಟ್ಟದಲ್ಲಿ ಗುಣಮಟ್ಟವನ್ನು ಸುಧಾರಿಸುವ ಗಮನಾರ್ಹ ಉದ್ದೇಶದಿಂದ ನೇರ ಯೋಜನೆಯಲ್ಲಿ ಕೆಲಸ.
ನೀವು ಯಾವುದೇ ವಿದ್ಯಾವಿಷಯದಲ್ಲಿ ಸ್ನಾತಕೋತ್ತರ ಅಥವಾ ವೃತ್ತಿಪರ ಪದವಿಯನ್ನು ಹೊಂದಿರಬೇಕು ಮತ್ತು ನಿಮಗೆ 2 ರಿಂದ 6 ವರ್ಷಗಳ ಕಾರ್ಯಾನುಭವ ಇರಬೇಕು. ನಾವು ವಿವಿಧ ಹಿನ್ನೆಲೆಯ ಜನರನ್ನು ಸ್ವಾಗತಿಸುತ್ತವೆ. ಇಲ್ಲಿ ಮುಖ್ಯವಾಗಿ ಬೇಕಾಗಿರುವುದು ಸಾಮಾಜಿಕ ವಲಯದಲ್ಲಿ ಹೊಸತನ್ನು ಶೋಧಿಸುವ ಬಯಕೆ ಮತ್ತು ಕೊಡುಗೆ ನೀಡಲು ಉತ್ಕಟಾಪೇಕ್ಷೆ.
ಈ ಫೆಲೋಶಿಪ್ ರೂ 27,000 ಮಾಸಿಕ ಸ್ಟೈಫಂಡ್ ಹೊಂದಿರುತ್ತದೆ. ಫೆಲೋಶಿಪ್ ಅವಧಿಯಲ್ಲಿ ನೀವು ಭಾರತದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಇದ್ದು ಕೆಲಸ ಮಾಡಬೇಕಾಗುತ್ತದೆ. ನಿಮಗೆ ವಹಿಸಬಹುದಾದ ಜಿಲ್ಲೆಗಳು ಈ ರೀತಿ ಇವೆ.
ಛತ್ತೀಸ್ಗಢ - ಧಮ್ ತರಿ
ಕರ್ನಾಟಕ - ಈಶಾನ್ಯ ಕರ್ನಾಟಕ ಮತ್ತು ಮಂಡ್ಯ
ಪುದುಚೇರಿ
ರಾಜಸ್ಥಾನ್ - ಸಿರೋಹಿ, ಬಾರ್ಮರ್, ರಾಜ್ಸಾಮಂದ ಮತ್ತು ಟಾಂಕ್
ಉತ್ತರಾಖಂಡ - ಉತ್ತರಕಾಶಿ, ಅಲ್ಮೋರಾ ಮತ್ತು ಉಧಮ್ ಸಿಂಗ್ ನಗರ
ನೋಂದಣಿ ಮತ್ತು ಅರ್ಜಿಗಾಗಿ "ಇಲ್ಲಿ ಕ್ಲಿಕ್ ಮಾಡಿ"
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15ನೇ ಸೆಪ್ಟೆಂಬರ್ 2014