ಭೂ ಸ್ವರೂಪಗಳು ಮತ್ತು ಪರ್ವತಗಳ ರಚನೆ

Resource Info

ಮೂಲ ಮಾಹಿತಿ

ಈ ಪಾಠ ಯೋಜನೆಯು ಮಕ್ಕಳಿಗೆ ಸಾಧ್ಯವಾದಷ್ಟು ಸರಳ ರೀತಿಯಲ್ಲಿ ಭೂಮಿಯ ರಚನೆಯ ಬಗ್ಗೆ ಅವರ  ಜ್ಞಾನ ಮತ್ತು  ಪ್ಲೇಟ್ ಟೆಕಟೋನಿಕ್ಸ್ ಪರಿಕಲ್ಪನೆಯನ್ನು ಒಟ್ಟುಗೂಡಿಸಿ ಪರ್ವತ ರಚನೆಯ ಆಕರ್ಷಕ ನೈಸರ್ಗಿಕ ಪ್ರಕ್ರಿಯೆಯನ್ನು  ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತದೆ.

ಪಾಠ ಯೋಜನೆ ವಿವರಗಳು

ಕಾಲಾವಧಿ: 
03 hours 20 mins
ಪೀಠಿಕೆ: 

ಪರ್ವತಗಳ ಉಗಮದ ಬಗ್ಗೆ  ಪಠ್ಯಪುಸ್ತಕಗಳಲ್ಲಿ  ತೀರ ನಿಖರವಾಗಿ  ಬರೆದಿರುವುದಿಲ್ಲ  ಮತ್ತು ಪಠ್ಯಪುಸ್ತಕಗಳಲ್ಲಿನ ಬಹುಪಾಲು  ವಿಷಯಗಳು   ಪರ್ವತಗಳು, ಪ್ರಸ್ಥಭೂಮಿ ಅಥವಾ ಬಯಲು ಭೂಮಿ ಎಲ್ಲಿವೆ  ಮತ್ತು ಇಂತಹ ಪ್ರದೇಶಗಳಲ್ಲಿ ವಿವರಣೆ ಮೇಲೆ ಕೇಂದ್ರೀಕೃತವಾಗಿದೆಯೇ ಹೊರತು ಅವು ಹೇಗೆ ಉಂಟಾಗಿವೆ ಎಂಬುದನ್ನು ಹೇಳುವುದಿಲ್ಲ.  ನನ್ನ ಬೋಧನೆ ಅನುಭವದಿಂದ ಅರಿತಿರುವ ಅಂಶವೆಂದರೆ ಪರ್ವತಗಳ ಉಗಮದ ಬಗ್ಗೆ   ಎಲ್ಲಾತರಗತಿಯ ವಿದ್ಯಾರ್ಥಿಗಳಲ್ಲಿ ಕುತೂಹಲ ವಿರುತ್ತದೆ ಮತ್ತು ಕಲ್ಪನೆಗಳು ಗರಿಗೆದರುತ್ತವೆ. ಹಾಗಾಗಿ ಸಾಧ್ಯವಾದಷ್ಟು ಸರಳವಾಗಿ  (4 ನೇ / 5 ನೇ ತರಗತಿಯಲ್ಲಿ  ಕಲಿಸಲಾಗುವ) ಭೂಮಿಯ ರಚನೆ ಮತ್ತು ಪ್ಲೇಟ್ ಟೆಕ್ಟೋನಿಕ್ಸ್ ಬಳಸಿ ಪರ್ವತ ರಚನೆಯ ಆಕರ್ಷಕ ನೈಸರ್ಗಿಕ ಪ್ರಕ್ರಿಯೆ ಮಕ್ಕಳಿಗೆ ತಿಳಿಸುವ   ಅಗತ್ಯವಿದೆ ಎಂದು ನನಗನಿಸಿತು.

ಉದ್ದೇಶ: 
ಸೆಷನ್ 1:
 
ವಿವಿಧ ಎತ್ತರಗಳ  ಐಟಂಗಳನ್ನು ಜೊತೆ ಸೇರಿಸುವುದು
 
ವಿವಿಧ ಭೂರಚನೆಯ ಬಗ್ಗೆ  ಮತ್ತು ಹಲವು ಭೂರಚನೆಯ ಕಂಡುಬರುವ ವಸ್ತುಗಳ ಬಗ್ಗೆ  ವಿದ್ಯಾರ್ಥಿಗಳು ಈಗಾಗಲೇ ಏನು ತಿಳಿದಿದ್ದಾರೆ ಎಂಬುದರ  ಮೌಲ್ಯಮಾಪನ ಮಾಡುವುದು.
 
ಎತ್ತರದ ಬಗ್ಗೆ ಮತ್ತು ಭೌಗೋಳಿಕ ಸ್ವರೂಪಗಳ ಬಗ್ಗೆ ಕುತೂಹಲ ಉಂಟುಮಾಡುವುದು
 
ಸೆಷನ್ 2:
 
ಚಿತ್ರಗಳನ್ನು ಅಧ್ಯಯನ ಮಾಡುವುದು ಮತ್ತು ಪ್ರದರ್ಶಿಸಿರುವ  ಭೌಗೋಳಿಕ ಸ್ವರೂಪಗಳನ್ನು  ಬೆಟ್ಟಗುಡ್ಡಗಳು ಪ್ರಸ್ಥಭೂಮಿಗಳು, ಬಯಲು, ಮರುಭೂಮಿ ಹಾಗು ಕರಾವಳಿ ತೀರಗಳು ಹೀಗೆ ವರ್ಗೀಕರಿಸಲು ಹೇಳುವುದು.
 
ವಿವಿಧ ಭೂರಚನೆಯ ಮುಖ್ಯ ಲಕ್ಷಣಗಳನ್ನು ಗುರುತಿಸುವುದು.
 
ನಿರ್ದಿಷ್ಟ ಖಂಡದಲ್ಲಿನ ವಿವಿಧ ಭೂರಚನೆಗಳನ್ನು  ಗುರುತಿಸುವುದು.
 
ವಿಶ್ವದ ಪರ್ವತಗಳು ಪ್ರಸ್ಥ ಭೂಮಿಗಳು, ಮಹಾನ್ ನದಿ ಬಯಲು ಮತ್ತು ಮರುಭೂಮಿಗಳನ್ನು  ಪಟ್ಟಿ ಮಾಡುವುದು
 
ಸೆಷನ್ 3:
 
ಭೂಮಿಯ ಹೊರಪದರದಲ್ಲಿ ಬಗ್ಗೆ ಕಲಿತಿದ್ದನ್ನು  ಮರುಸಮೀಕ್ಷೆ ಮಾಡುವುದು.
 
ಪ್ಲೇಟ್ ಟೆಕ್ಟಾನಿಕ್ಸ್ ತಿಳುವಳಿಕೆ ಬೆಳಸಿಕೊಳ್ಳುವುದು.
 
ಪರ್ವತಗಳು, ಬಯಲು ಪ್ರಸ್ಥಭೂಮಿಗಳು ಅರಿವನ್ನು ಬೆಳಸಿಕೊಳ್ಳುವುದು.
 
ಸೆಷನ್ 4:
 
ಪರ್ವತಗಳ ತಿಳುವಳಿಕೆ ಬೆಳಸಿಕೊಳ್ಳುವುದು ಮತ್ತು ಅವುಗಳನ್ನು ವರ್ಗೀಕರಿಸಲು ಸಾಧ್ಯವಾಗುವುದು.
ಹಂತಗಳು : 

 ಪೂರಕ ಸಾಮಾಗ್ರಿ

 

ಸೆಷನ್ 1: ಒಂದು ಆಟದ ಮೂಲಕ ಸಂದರ್ಭವನ್ನು ರಚಿಸುವುದು

 

ಸಂಪನ್ಮೂಲ 1 - 'ಎತ್ತರದ ಜೊತೆ ವಸ್ತುಗಳನ್ನು ಹೊಂದಿಸಿ ಬರೆಯುವುದು ' ಫ್ಲ್ಯಾಶ್ ಕಾರ್ಡ್

 

ಸಾಮಾಗ್ರಿ  ಹೊಳವುಗಳು: ಪೈನ್ ಶಂಕುಗಳು, ಕಲ್ಲುಗಳು, ಹೂಳು ಬೆರೆತ ನೀರಿನ ಬಾಟಲಿ, ಮರಳಿನ ಒಂದು ಪಾಕೇಟ್  ಬೆಡುಯಿನ್  ನ ಚಿತ್ರ, ಒಂದು ಹಿಡಿ ರಾಗಿ, ಜೋಳ, ಚಹಾ / ಕಾಫಿ ಪ್ಯಾಕೆಟ್, ಇತ್ಯಾದಿ

 

ನದಿ ಬಯಲು ಪ್ರಸ್ಥ ಭೂಮಿ, ಪರ್ವತಗಳು, ಮರುಭೂಮಿಗಳು, ಮತ್ತು ಕರಾವಳಿ ಬಯಲು: ಅವುಗಳ  ಹೆಸರನ್ನು ಬರೆದ ಅಥವಾ ಎತ್ತರ ಬರೆದ  ಕಾರ್ಡ್ಇಟ್ಟುಕೊಳ್ಳಿ

 

ವಾಸ್ತವಿಕ ವಸ್ತುಗಳ ತರಗತಿಯ ಮಕ್ಕಳಲ್ಲಿ   ಆಸಕ್ತಿಮೂಡಿಸುತ್ತದೆ . ನಿಮ್ಮ ವಿದ್ಯಾರ್ಥಿಗಳು ಸೂಕ್ತವಾಗಿದೆ  ಎಂದು ನೀವು ಆಲೋಚಿಸುವ ಯಾವುದೇ ಇತರ ವಸ್ತು ಬಳಸಬಹುದು.

ಅಧಿವೇಶನ 2: ಭೂ ಸ್ವರೂಪಗಳ ಗುಣಲಕ್ಷಣಗಳನ್ನು ಗುರುತಿಸುವುದು

 

ಸಂಪನ್ಮೂಲ 2 ಬೆಟ್ಟಗುಡ್ಡಗಳು, ಪ್ರಸ್ಥಭೂಮಿಗಳು, ಮಹಾನ್ ನದಿ ಬಯಲು, ಮರುಭೂಮಿ ಮತ್ತು ಕರಾವಳಿ ಪ್ರಸ್ಥಭೂಮಿಯ ಚಿತ್ರಗಳು

 

ಸಂಪನ್ಮೂಲ 3: ಅಭ್ಯಾಸಪತ್ರ 1

ಸೆಷನ್ 3

ಸಂಪನ್ಮೂಲ 4: (ಶಿಕ್ಷಕರು ಸಿದ್ಧವಾಗಿ  ಇಟ್ಟುಕೊಳ್ಳಬೇಕು )

ಮಡಿಕೆ ತೋರಿಸಲು

 

  1. ಒಂದು ರಬ್ಬರ್ / ಟೆನಿಸ್ ಚೆಂಡು.
  2.  ಇಡೀ  ಚೆಂಡನ್ನು ಸುತ್ತಲಾದ ಅದರ 5 ಸೆಂ ದಪ್ಪದ ಗೋದಿಹಿಟ್ಟು.
  3. ಹಿಟ್ಟನ್ನು ಮೇಲೆ ಮುಚ್ಚಲು ಕೆಂಪು ಬಣ್ಣದ ಒಂದು ತೆಳುವಾದ ಬಟ್ಟೆ, ಮಗ್ಗಲುಗಳನ್ನು ಬಿಟ್ಟು.
  4. ಹಸಿರು ಬಣ್ಣದ ಮತ್ತೊಂದು ಬಟ್ಟೆ ಕೆಂಪು ಬಣ್ಣದ  ಬಟ್ಟೆ ಮೇಲೆ ಹಾಕಲು.
  5. ಭೂಮಿಯ ರಚನೆ ರೇಖಾಚಿತ್ರಗಳು, ಸಂಪನ್ಮೂಲ 5  ಪರ್ವತಗಳ ಪದರ ರಚಿಸಿ

 

ದೋಷವ್ಯವಸ್ಥೆಯನ್ನುತೋರಿಸಲು

 

ಒಂದೇ ಗಾತ್ರ ಮತ್ತು ಆಕಾರದ ಮೂರು ಗಟ್ಟಿ ಇಟ್ಟಿಗೆಗಳು .  ಚೌಕಾಕಾರ ಇದ್ದರೆ ಒಳ್ಳೆಯದು

ಬ್ಲಾಕ್ ಮೌಂಟೇನ್ ಮತ್ತು ಬಿರುಕು ಕಣಿವೆ ರೇಖಾಚಿತ್ರಗಳು

ಸಂಪನ್ಮೂಲ 5: ಭೂಮಿಯ ರಚನೆ ರೇಖಾಚಿತ್ರಗಳು, ಮಡಕೆಗಳು, ದೋಷಗಳು ಮತ್ತು ಬಿರುಕು ಕಣಿವೆಗಳು

 

ಸೆಷನ್ 4

 

ಬ್ಲಾಕ್ ಪರ್ವತಗಳು, ಜ್ವಾಲಾಮುಖಿಗಳು, ಪದರ ಪರ್ವತಗಳು ,ಮತ್ತು ಉಳಿಕೆಯ ಪರ್ವತಗಳ.ಚಿತ್ರಗಳು

 

ಭಾರತದಲ್ಲಿ ಈ ಪರ್ವತಗಳಪಟ್ಟಿ. ಭಾರತದ ಒಂದು ಸ್ವಾಭಾವಿಕ ನಕ್ಷೆ. ( ಸಿದ್ಧವಾಗಿ  ಇಟ್ಟುಕೊಳ್ಳಿ)

ಪರ್ವತದ,  ಪ್ರಸ್ಥಭೂಮಿಯ, ಬಯಲಿನ, ಮರುಭೂಮಿಯ ಗುಣಲಕ್ಷಣಗಳ ಒಂದು ಪಟ್ಟಿ,ಸಂಪನ್ಮೂಲ 6 ಮತ್ತು 7ರಲ್ಲಿ ನೀಡಲಾಗಿದೆ

ವಿವಿಧ ಖಂಡಗಳಲ್ಲಿ ಪ್ರಮುಖ ಪರ್ವತಗಳು ಪ್ರಸ್ಥಭೂಮಿ, ಬಯಲು ಮತ್ತು  ಮರುಭೂಮಿಗಳು ಪಟ್ಟಿ ಮೇಲಿನ ಸಂಪನ್ಮೂಲಗಳಲ್ಲಿ ನೀಡಲಾಗಿದೆ.

 

ಹಂತಗಳು

 

ಸೆಷನ್ 1:  ಸಂದರ್ಭವನ್ನು ಮನಗಾಣಿಸುವ ಸಲುವಾಗಿ, 'ಭೂರಚನೆಯ' ತನ್ನ ಪಾಠ ಆರಂಭಮಾಡುವ ಮೊದಲು ಶಿಕ್ಷಕರು ಈ ಆಟವನ್ನು ಬಳಸಬಹುದು.

 

ಹಂತ 1: ಶಿಕ್ಷಕರು ಒಂದು ವಸ್ತುವನ್ನು  ಮತ್ತು ಕಾರ್ಡ್ ಟ್ರೇಯಿಂದ ಸರಿಹೊಂದುವ ಎತ್ತರವಿರುವ ಒಂದು ಕಾರ್ಡ್ ತೆಗೆದುಕೊಳ್ಳಲು ವಿದ್ಯಾರ್ಥಿಗಳು ಕೇಳಬೇಕು.

 

ಹಂತ 2: ಒಮ್ಮೆ ಎಲ್ಲಾ ವಿದ್ಯಾರ್ಥಿಗಳು ವಸ್ತುಗಳು ಮತ್ತು  ಎತ್ತರವನ್ನು ಹೊಂದಿಕೆ ಮಾಡುವುದನ್ನು ಪೂರ್ಣಗೊಳಿಸಿದ ಅನಂತರ, ಶಿಕ್ಷಕರು ಈಗಾಗಲೇ ವಿದ್ಯಾರ್ಥಿಗಳು ಹೊಂದಾಣಿಕೆ ಮಾಡಿರದೇ ಹೋದ ವಸ್ತು ಮತ್ತು ಅದರ  ಎತ್ತರ ನಡುವೆ ಹೊಂದಾಣಿಕೆ ಮಾಡಿ ತೋರಿಸಬೇಕು.

ಅವರು ಮಕ್ಕಳಿಗೆ ಯಾವುದೇ ಭೂರಚನೆಯ ಅದು ಪರ್ವತ, ಬೆಟ್ಟ, ಪ್ರಸ್ಥಭೂಮಿಯ, ಅಥವಾ ಬಯಲು ಆಗಿರಲಿ ಅದನ್ನು  ಸಮುದ್ರ ಮಟ್ಟದಿಂದ ಇರುವ ಎತ್ತರದ ಆಧಾರದ ಮೇಲೆ ಮಾತ್ರವೇ ವಿವರಿಸಲಾಗುವುದು ಎಂದು ಮನವರಿಕೆ ಮಾಡಿಸಬೇಕು.

 

 ಅವರು ಯಾವುದರ ಆಧಾರದ ಮೇಲೆ ಹೊಂದಾಣಿಕೆ  ಮಾಡಿದರೆಂಬುದನ್ನು ಪರಸ್ಪರ ಹಂಚಿಕೊಳ್ಳಲು ವಿದ್ಯಾರ್ಥಿಗಳಿಗೆ ಕೇಳ ಬೇಕು.

 

ದೈನಂದಿನ ಜೀವನ, ಉದಾ ಕೆಲವು ಉದಾಹರಣೆಗಳು ನೀಡಿ ಮಾತ್ರ ಕರಾವಳಿ ಪ್ರದೇಶ ಸಂಗ್ರಹಿಸಿದ ಚಿಪ್ಪುಗಳನ್ನು ತೋರಿಸಿರಿ.

ಅಧಿವೇಶನ 2

 

ಹಂತ1: ಶಿಕ್ಷಕ ರು 4-5 ವಿದ್ಯಾರ್ಥಿಗಳ ಪ್ರತಿ ಗುಂಪಿಗೆ  ಒಂದು ಸೆಟ್ (ಉದಾ ಪರ್ವತಗಳನ್ನು ಮಾತ್ರ ತೋರಿಸುವ ಚಿತ್ರಗಳನ್ನು ಒಂದು ಸೆಟ್) ಚಿತ್ರಗಳನ್ನು ಹಂಚಬೇಕು.

 

ವಿದ್ಯಾರ್ಥಿಗಳು ತಾವೇ ಈ ಭೂರಚನೆಯ ಪ್ರತಿಯೊಂದು ವಿಶಿಷ್ಟವಾದ ಲಕ್ಷಣಗಳು ಹೊರತರುವ ಪ್ರಯತ್ನ ಮಾಡಲು ಈ ಚಿತ್ರಗಳನ್ನು ಬಳಸಿರಿ.

 

ಹಂತ 2:  ಮಕ್ಕಳಿಗೆ ಎಚ್ಚರಿಕೆಯಿಂದ ಚಿತ್ರಗಳನ್ನು ವೀಕ್ಷಿಸಲು ಮತ್ತು ಅವರಿಗೆ ನೀಡಲಾಗಿದೆ ನಿರ್ದಿಷ್ಟ ಭೂರಚನೆಯ ಮುಖ್ಯ ವಿಶಿಷ್ಟವಾದ ಲಕ್ಷಣಗಳು ಪಟ್ಟಿ ಮಾಡುವುದಕ್ಕಾಗಿ 15 ನಿಮಿಷಗಳನ್ನು ನೀಡಬೇಕು.

 

ಹಂತ 3: ತಮ್ಮ ಸಂಶೋಧನೆಗಳ ಆಧಾರದ ಮೇಲೆ ಒಂದು ಪ್ರಸ್ತುತಿ ನೀಡಲು ಅವರನ್ನು ಕೇಳಬೇಕು.

 

ಹಂತ 4: ಪ್ರಸ್ತುತಿ ನಡೆಯುತ್ತಿರುವ ಸಂದರ್ಭದಲ್ಲಿ ಆಯೋಜಕನು  ಈ ಅಭಿಪ್ರಾಯಗಳನ್ನು  ಬರೆದು ಕೊಂಡು ನಂತರ ಚರ್ಚೆ ಸಮಾರೋಪ ಮಾಡಬೇಕು.

 

ಹಂತ 1: ಬೋರ್ಡಿನ ಮೇಲೆ  (ಸಿಯಲ್ & ಸಿಮಾ ಅದರ ಎರಡು ಪದರಗಳ) ಕ್ರಸ್ಟ್ ತೋರಿಸುವ ಭೂಮಿಯ, ನಡುಭಾಗ ಮತ್ತು ಕೇಂದ್ರಭಾಗದ ಆಂತರಿಕ ರಚನೆಯನ್ನು ರಚಿಸಿ. (ಸಂಪನ್ಮೂಲ 5)

 

ಹಂತ 2: ಸಂಪನ್ಮೂಲ 4 ರಲ್ಲಿ  ತೋರಿಸಿರುವಂತೆ ವಿದ್ಯಾರ್ಥಿಗಳು, ಭೂಮಿಯ ರಚನೆಯ ಒಂದು ಕಾರ್ಯೋಪಯುಕ್ತ ಮಾದರಿಯನ್ನು ಮಾಡಲು ಸಹಾಯ ಮಾಡಿ.

 

 ಆದ್ದರಿಂದ ಒಂದು ಚೆಂಡನ್ನು ತೆಗೆದುಕೊಳ್ಳಿ, ಅದರ ಮೇಲೆ ಗೋಧಿ ಹಿಟ್ಟನ್ನು ಸುತ್ತಿ , ಮಗ್ಗುಲು ಗಳು  ಒಳಗೊಂಡಿರುವ ಚೆಂಡನ್ನು ನೋಡಬಹುದು ಎಂಬಂತೆ ತೆರೆದುಬಿಡಿರಿ . ನಂತರ ಕೆಂಪು ಬಟ್ಟೆಯಿಂದ ಮೊದಲು ತದನಂತರ ಹಸಿರು ಬಟ್ಟೆಯಿಂದ ಹಿಟ್ಟಿನ ಮೇಲೆ ಸುತ್ತಿ. ಮಡಿಕೆಗಾಗಿ ಹಾಕಿದ ಒತ್ತಡವನ್ನು 'ಸಂಕೋಚನ' ಎಂದು ಕರೆಯಲಾಗುತ್ತದೆ ಎಂದು ಹೇಳಿ.

ಹಂತ 3: ರೇಖಾಚಿತ್ರ ಮತ್ತು ಮಾದರಿಯನ್ನು ಹೋಲಿಸಿ, ಮತ್ತು ಪ್ರತಿಯೊಂದು ಪದರದ ಬಗ್ಗೆ ಹೇಳಿ.

 

ಹಂತ 4: ಬದಿಗಳಲ್ಲಿ ನಿಮ್ಮ ಬೆರಳುಗಳಿಂದ ಹಿಟ್ಟನ್ನು ಒತ್ತಿ ಮತ್ತು ಬಟ್ಟೆ ಎರಡು ತುಣುಕುಗಳು ನರಿಗೆಗಟ್ಟಿ – ಪರ್ವತಗಳನ್ನು  ರೂಪಿಸುತ್ತವೆ ಎಂಬುದನ್ನು ನೋಡಿ.

ಹಂತ 5: ಅದೇ ರೀತಿ (ನದಿ ಪಾತ್ರ / ಒತ್ತಡ) ಕ್ರಸ್ಟ್ ಹೇಗೆ ಹೊಸ ರಚನೆಯಾಗುತ್ತದೆ ತೋರಿಸಲು ಹಿಟ್ಟನ್ನು ಸೆಳೆಯಿರಿ ಈ ಇವೇ ಮುಂದೆ  ಜಲಾಶಯಗಳು ಆಗಬಹುದು.

 

ಹಂತ 6: ಕಪ್ಪು ಬೋರ್ಡ್ ಮೇಲೆ ಪರ್ವತದ ಮತ್ತು ಬಿರುಕು ಕಣಿವೆ ರೇಖಾಚಿತ್ರ ಬರೆಯಿರಿ. (ಸಂಪನ್ಮೂಲ 5)

ಹಂತ 7:ಒಂದೇ ಗಾತ್ರದ 3 ಘನ ಬ್ಲಾಕ್ಗಳನ್ನು ತೆಗೆದುಕೊಳ್ಳಿ. ನೇರವಾಗಿ ಮಧ್ಯದ ಬ್ಲಾಕ್ನ ಹಿಡಿಯದೆ ಬೀಳದಂತೆ  ನಿಮ್ಮ ತೋರು ಬೆರಳು ಮತ್ತು ಹೆಬ್ಬೆರಳು ಬಳಸಿ ಮೂರು ಬ್ಲಾಕ್ಗಳನ್ನು ಎತ್ತಿ ಹಿಡಿಯಿರಿ  ಮತ್ತು. ಈಗ ನಿಧಾನವಾಗಿ ನೀವು  ಹಿಡಿದಿರುವ ಎರಡು ಬ್ಲಾಕ್ಗಳನ್ನು ವಿರುದ್ಧ ದಿಕ್ಕಿನಲ್ಲಿ ಸರಿಸಿರಿ ಮಧ್ಯದ ಬ್ಲಾಕ್ ಕೆಳಕ್ಕೆ ಜಾರಿಬೀಳುವುದನ್ನು ಗಮನಿಸಿ. ಎರಡು ಬ್ಲಾಕ್ಗಳು  ಬ್ಲಾಕ್ ಪರ್ವತಗಳು ಮಧ್ಯದ ಬ್ಲಾಕ್ನ ಬಿರುಕು ಕಣಿವೆ ಪ್ರತಿನಿಧಿಸುತ್ತದೆ  . (ಸಂಪನ್ಮೂಲ 8 ರಲ್ಲಿ ತೋರಿಸಿದಂತೆ)

 

ನೀವು ಬ್ಲಾಕ್ ಮೌಂಟೇನ್ ಮತ್ತು ಬಿರುಕು ಕಣಿವೆ ರಚನೆಗೆ ತೋರಿಸುವಾಗ ಈಗಾಗಲೇ ಬೋರ್ಡ್ ಮೇಲೆ ಚಿತ್ರಿಸಿದ ಚಿತ್ರಗಳ ಜೊತೆ ಅದನ್ನು ಹೋಲಿಸಿ ತೋರಿಸಿ , ದೋಷವ್ಯವಸ್ಥೆ  faulting ನಲ್ಲಿ ಸಕ್ರಿಯವಾಗಿ ವರ್ತಿಸುವ ಬಲವನ್ನು  ನಮೂದಿಸಿ; ಇದನ್ನು ಸೆಳೆತ 'ಎಂದು ಕರೆಯಲಾಗುತ್ತದೆ. ರೇಖಾಚಿತ್ರ ಮತ್ತು ನಿಮ್ಮ ಚಟುವಟಿಕೆ ದಾಖಲೆಗಳು  ಹೇಗೆ ಸರಿಹೊಂದಿವೆ ಎಂಬುದನ್ನುತೋರಿಸಿ.

 

ಹಂತ 8: ದೋಸೆ ಬ್ಯಾಟರ್ ತುಂಬಿದ, 'ಸ್ಕ್ವೀಸ್ ಬಾಟಲ್' ಅನ್ನು ದೋಸೆ ಹಿಟ್ಟು ಅದರ ಮೂತಿಯಿಂದ ಹೊರಬಂದು ಸುತ್ತಲೂ ಚೆಲ್ಲಿ ಕೂರುವಂತೆ ಅಮುಕಿ ತೋರಿಸಿರಿ,ಅದನ್ನು ಒಣಗಲುಬಿಡಿ. ಇನ್ನೂ  ಹೆಚ್ಚು ಬಾರಿ ಅದುಮಿ ಹೊರತೆಗೆದು  ಪ್ರತಿ ಬಾರಿ ನೀವು ಅದುಮಿ ಹೊರತೆಗೆದಾಗ ಅದನ್ನು ಒಣಗಿಸಿ, ಇದರಿಂದ ನೀವು ಹೊರಬಂದ ಹಿಟ್ಟಿನ ಪದರಗಳನ್ನು ನೋಡಬಹುದು ಮತ್ತು ಅದು ಹೇಗೆ ಎತ್ತರಕ್ಕೆ ಬೆಳೆಯುತ್ತದೆ ಹೇಗೆ ಜ್ವಾಲಾಮುಖಿ ಪರ್ವತವು ರೂಪುಗೊಳ್ಳಲ್ಪಟ್ಟಿದೆ ಎಂಬುದನ್ನು ವಿವರಿಸಬಹುದು. (ಸಂಪನ್ಮೂಲ 9)

ಸಂಪನ್ಮೂಲ 4 ರಲ್ಲಿ ನೀಡಲಾದ ರೇಖಾಚಿತ್ರವನ್ನು ಬರೆಯಿರಿ. ಈಗ ನೀವು ಶಿಲಾಪಾಕವನ್ನು ಸ್ಫೋಟಿಸುವಂತೆ ಬಾಟಲಿಯನ್ನು ಹಿಸುಕುತ್ತಿದ್ದಂತೆ, ನಿಮ್ಮ ಚಟುವಟಿಕೆಯನ್ನು ರೇಖಾಚಿತ್ರದೊಂದಿಗೆ ಹೋಲಿಸಿ ವಿವರಿಸಿ.

ಸೆಷನ್ 4: ಪರ್ವತಗಳ ವರ್ಗೀಕರಣ

ಸಂಪನ್ಮೂಲ 4 ರಲ್ಲಿನ ಚಿತ್ರ ಬರೆಯಿರಿ.ಲಾವಾ ರಸ ಹೊರಚಿಮ್ಮುವುದನ್ನು ತೋರಿಸಲು ನೀವು ಬಾಟಲನ್ನು ಅಮುಕುತ್ತಾ ಹೋದಂತೆ ಚಿತ್ರಕ್ಕೆ ಹೊಂದಿಕೆಯಾಗುವಂತೆ ತೋರಿಸಿ ವಿವರಿಸಿರಿ.

 

ಸೆಷನ್ 4

ಪರ್ವತಗಳ ವರ್ಗೀಕರಣ

 

ಹಂತ 1ತರಗತಿಯನ್ನು 5 ಗುಂಪುಗಳಾಗಿ ವಿಭಜಿಸಿ; ಪ್ರತಿ ಗುಂಪು 4/5 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿರಬಾರದು.

ಹಂತ 2: ಚಿತ್ರಗಳನ್ನು ಗುಂಪುಗಳಿಗೆ ವಿತರಿಸಿ. (ಸಂಪನ್ಮೂಲ 2)

ಚಿತ್ರಗಳನ್ನು ಎಚ್ಚರಿಕೆಯಿಂದ ವೀಕ್ಷಿಸಲು ಮತ್ತು ಪ್ರತಿಯೊಂದು ಗುಣಲಕ್ಷಣಗಳನ್ನು ಹೊರತೆಗೆಯಲು ಅವರಿಗೆ ಸೂಚನೆ ನೀಡಿ.

ಹಂತ 3: ಅವರು ತಮ್ಮ ಸಂಶೋಧನೆಗಳನ್ನು ಪ್ರಸ್ತುತಪಡಿಸಲಿ. ಬೋರ್ಡ್ ಮೇಲೆ ಅವರ ಅವಲೋಕನಗಳನ್ನು ರೆಕಾರ್ಡ್ ಮಾಡಿ.

ಹಂತ 4: ಪ್ರತಿಯೊಂದು ರೀತಿಯ ಪರ್ವತದ ಹೆಸರುಗಳನ್ನು ನೀಡುವ ಮೂಲಕ ಚರ್ಚೆಯನ್ನು ಸಮಾರೋಪ ಮಾಡಿರಿ.

 

 

 

 

 

 

 

 

 

ಮೌಲ್ಯಮಾಪನ: 

ಸೆಷನ್ಸ್ : 2

ವಿದ್ಯಾರ್ಥಿಗಳು ತಮ್ಮ ಅಟ್ಲಾಸ್ಗಳು ತೆಗೆದುಕೊಳ್ಳುವಂತೆ ಹೇಳಿ.ಪ್ರತಿ ಖಂಡದಲ್ಲಿನ ಪ್ರಮುಖ ಪರ್ವತಗಳು, ಪ್ರಸ್ಥ ಭೂಮಿಗಳು, ಮಹಾನ್ ನದಿ ಬಯಲು ಮತ್ತು ಮರುಭೂಮಿಗಳು ಹುಡುಕಲು ಮತ್ತು ಸಂಪನ್ಮೂಲ 3. ರಲ್ಲಿ ನೀಡಲಾದ ಅಭ್ಯಾಸ ಪತ್ರ ತುಂಬಲು ಹೇಳಿ. ವಿದ್ಯಾರ್ಥಿಗಳು ಜೋಡಿಯಾಗಿ ಕೆಲಸ ಮಾಡಬೇಕು .

ಸೆಷನ್ 3

ನೀವು ದೈನಂದಿನ ಜೀವನದಲ್ಲಿ ಸೆಳೆತದ ಬಲಪ್ರಯೋಗ  ಮಾಡುವ ಎರಡು ಚಟುವಟಿಕೆಗಳನ್ನು ಪಟ್ಟಿ ಮಾಡಿರಿ.

ನೀವು ದೈನಂದಿನ ಜೀವನದಲ್ಲಿ ಒತ್ತಡದ ಬಲಪ್ರಯೋಗ ಮಾಡುವ ಎರಡು ಚಟುವಟಿಕೆಗಳನ್ನು ಪಟ್ಟಿ ಮಾಡಿರಿ.

ಸೆಷನ್ 4

ವಿದ್ಯಾರ್ಥಿಗಳು ಮಾಡಿದ ಪ್ರಸ್ತುತಿ ಪ್ರತಿಯೊಂದು ಭೂರಚನೆಯ ಗುಣಲಕ್ಷಣಗಳ ಮೇಲೆ ಮೌಲ್ಯಮಾಪನ ವೆಂದು ಪರಿಗಣಿಸಬಹುದು.

 

ವೈಯಕ್ತಿಕ ಅಭಿಪ್ರಾಯ: 

References

1.    ‘Plate Tectonics Theory – Mountain Building Process – Origin and Formation of Fold Mountains- Mountain Building Process; Origin and Formation of Fold Mountains- Plate Tectonics Theory

 http://enggpedia.com/science/plate-tectonics-theory-mountain-building-process-origin-  and-  formation-of-fold-mountains/

2. Video on ‘Structure of the earth’    

http://www.youtube.com/watch?v=Sxd5YrEPyMY&feature=related

3. http://www.teachersdomain.org/resource/ess05.sci.ess.earthsys.shake/ http://www.teachersdomain.org/asset/ess05_int_shake/

4. Plate Tectonics@pppst.com

5.  Reading on Rift Valley:   http://en.wikipedia.org/wiki/Great_Rift_Valley

18624 ನೊಂದಾಯಿತ ಬಳಕೆದಾರರು
7275 ಸಂಪನ್ಮೂಲಗಳು