ಪ್ಲಾಸ್ಟರ್ ಆಫ್ ಪ್ಯಾರಿಸ್ ನಲ್ಲಿ ಶಿಲ್ಪಕಲೆ

Resource Info

ಮೂಲ ಮಾಹಿತಿ

ಶಿಲ್ಪಕಲೆಗೆ  ಮಾದರಿ ಪಾಠ ಯೋಜನೆ

   ಹೆಸರು _____________________                                                                                                                                ದಿನಾಂಕ_________

ವಿಷಯ

 ಕಲೆ

ಕಲಿಕೆ ವಿಷಯ

 ಪ್ಲಾಸ್ಟರ್  ಆ‍ಫ್‍ ಪ್ಯಾರಿಸ್ ನಲ್ಲಿ ಶಿಲ್ಪಕಲೆ

 

ಒಳ ವಿಷಯ

ಕೆತ್ತನೆ ವಿಧಾನ

 

 

ಪಾಠ ಯೋಜನೆ ವಿವರಗಳು

ಕಾಲಾವಧಿ: 
00 hours 45 mins
ಪೀಠಿಕೆ: 

ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಪುಡಿಯನ್ನು ಒಂದು ಘನಾಕಾರಕ್ಕೆ ಮೂಲ ಆಕರವಾಗಿ ಮಾಡಿಕೊಂಡು ಅದರಲ್ಲಿ ಚಿತ್ರ ಬಿಡಿಸಿ .ಚಿತ್ರವನ್ನು 3ಆಯಾಮದ ಶಿಲ್ಪವಾಗಿ ಮಾಡುವ ಚಟುವಟಿಕೆ ಇಲ್ಲಿದೆ.Image result for plaster of paris crafts in wall

ಉದ್ದೇಶ: 

ಸಾಮಾನ್ಯ ಉದ್ದೇಶಗಳು: ಮೂರು ಆಯಾಮದ ಕ್ರಮದಲ್ಲಿ ಅಭಿವ್ಯಕ್ತಿಯನ್ನು ಕಲಿಯುವುದು.

 

 • ನಿರ್ದಿಷ್ಟ ಉದ್ದೇಶಗಳು:
 • ಈ ಕಲೆ ಚಟುವಟಿಕೆಯು  ಕಣ್ಣು ಮತ್ತು ಕೈಗಳು ಜೊತೆಗೂಡಿ ಕೆಲಸ ಮಾಡುವುದನ್ನು ಕಲಿಸುತ್ತದೆ ಅನುಕೂಲ ಮತ್ತು ಉತ್ತಮ ಚಲನಾ ಕೌಶಲ್ಯಗಳು ಬೆಳೆಯುತ್ತವೆ
 •  ಇದು ವಸ್ತುವನ್ನು ಒಂದು  ಘನ (cube) ನ  ಒಳಗೆ ಇರಿಸಲಾಗಿದೆ ಎಂಬಂತೆ  ವಸ್ತುಗಳನ್ನು ಎಲ್ಲಾ ಕೋನಗಳಿಂದ ವೀಕ್ಷಿಸಲು ಅವರಿಗೆ ಹೇಳಿಕೊಡುತ್ತದೆ
 •  ಉದಾಹರಣೆಗೆ ಒಂದು 2D (ಎರಡು ಆಯಾಮದ) ಚಿತ್ರವನ್ನು  ಒಂದು 3D (ಮೂರು ಆಯಾಮದ) ರಚನೆಯಾಗಿ ಪರಿವರ್ತಿಸುವ ಕೆತ್ತನೆ ಕೆಲಸ ಮತ್ತು ಸಾಧನಗಳನ್ನು ಬಳಸಿಕೊಂಡು ನಯಗಾರಿಕೆ ನಿರ್ದಿಷ್ಟ ಕೌಶಲಗಳನ್ನು ತಿಳಿಯುವುದು.
ಹಂತಗಳು : 

ಅಗತ್ಯ ಸಾಮಗ್ರಿ:

 • ಅಕ್ರಿಲಿಕ್ ಬಣ್ಣಗಳು
 • ಒಂದು ದೊಡ್ಡ ಪ್ಲಾಸ್ಟಿಕ್ ಬಟ್ಟಲಿನಲ್ಲಿ ನೀರು ಮತ್ತು
 • ಕುಂಚಗಳು
 • ಪ್ಲಾಸ್ಟರ್ ಆಫ್ ಪ್ಯಾರಿಸ್
 •  ಚಾಕು ಮತ್ತು ಲಿನೊ ಕೆತ್ತನೆ ಉಪಕರಣಗಳು
 • ಒಂದು ಪ್ಲಾಸ್ಟಿಕ್ ಬ್ರೆಡ್ ಬಾಕ್ಸ್
 •  ಸ್ವಲ್ಪ ಎಣ್ಣೆ
 •  ಉಪ್ಪು ಕಾಗದ

ವಿಧಾನ:

 • ಅಗಲವಾದ ಬ್ರಷ್ನಿಂದ  ಬ್ರೆಡ್ ಬಾಕ್ಸ್ ಒಳಗೆ ಸ್ವಲ್ಪ ಎಣ್ಣೆ ಹಚ್ಚಿರಿ. ನಂತರ ದೊಡ್ಡ ಬಟ್ಟಲಿನಲ್ಲಿ  ಸ್ವಲ್ಪನೀರು ಹಾಕಿರಿ, ಇದಕ್ಕೆ, ಒಮ್ಮೆಗೆ ಒಂದು ಚಮಚದಂತೆ ಮೇಲ್ಭಾಗದಲ್ಲಿ ಗುಳ್ಳೆಗಳೇಳುವಿಕೆಯ ಪ್ರಾರಂಭವಾಗುವ ತನಕ ಪ್ಲಾಸ್ಟರ್ ಆಫ್ ಪ್ಯಾರೀಸ್ ಹಾಕಿರಿ. ಒಂದು ಪ್ಯಾಲೆಟ್ ಚೂರಿಯಿಂದ ಇದನ್ನು  ಮಿಶ್ರಣ ಮಾಡಿ ಮತ್ತು ಬ್ರೆಡ್ ಪೆಟ್ಟಿಗೆಯಲ್ಲಿ ಇದನ್ನು ಸುರಿಯಿರಿ.ಒಣಗಲು ಬಿಡಿ.
 • ಒಣಗಿದ ಮೇಲೆ, ನಿಧಾನವಾಗಿ ಬಾಕ್ಸ್ ತಳವನ್ನು ತಟ್ಟಿ ಪೆಟ್ಟಿಗೆಯಿಂದ ಪ್ಲಾಸ್ಟರ್ ಬ್ಲಾಕ್ ತೆಗೆದು ಬಿಡಿ. ಸಂಪೂರ್ಣವಾಗಿ ಒಣಗಲು ಬಿಡಿ.

  ನೀವು ಬ್ಲಾಕ್ನ ಎಲ್ಲಾ ಆರು ಕಡೆ ಏನೇನು ಕೊರೆಯಬೇಕೆಂದಿದ್ದೀರೋ  ಅದನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗಳನ್ನು ಬರೆಯಿರಿ. ನೀವು ನಿಮ್ಮ ಮನಸ್ಸಿಗೆ ಬಂದಂತೆ, ವಾಸ್ತವಿಕ ಮತ್ತು ಸಾಂಕೇತಿಕ ರೂಪಗಳು ಅಥವಾ ಅಮೂರ್ತ ಮಾದರಿಗಳನ್ನು ಮತ್ತು ಹೂವಿನ ಚಿತ್ತಾರಗಳನ್ನು ಮಾಡಬಹುದು.

 • ಈಗ ಎಲ್ಲಾ ಆರು ಕಡೆಗಳಲ್ಲಿ ನೀವು ಕಲ್ಪಿಸಿಕೊಂಡ ವಿನ್ಯಾಸ ಬರೆಯಿರಿ ಮತ್ತು ನಿಮ್ಮ ಲಿನೊ ವಿನ್ಯಾಸ ಉಪಕರಣಗಳನ್ನು ಬಳಸಿಕೊಂಡು ನಿಮ್ಮ ವಿನ್ಯಾಸದ ಭಾಗವಾಗಿರುವ ಭಾಗಗಳನ್ನು ಬಿಟ್ಟು ಉಳಿದ ಭಾಗಗಳನ್ನು ಕೆತ್ತಿ ತೆಗೆಯಿರಿ. ನಿಮ್ಮ ವಿನ್ಯಾಸ ಪ್ರಕಾರ ಮಗ್ಗುಲುಗಳು  ಅಥವಾ ತಿರುವು ಭಾಗಗಳನ್ನು ಮರಳು ಕಾಗದದ  ಬಳಸಿ ನಯಮಾಡಿರಿ. ನೀವು ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಣುಗಳು ಒಂದು ಎಲೆಯಲ್ಲಿನ ನರಗಳು ಇತ್ಯಾದಿ ಬಿಡಿಸಲು ಒಂದು ಹಲ್ಲುಕಡ್ಡಿ (toothpick) ಬಳಸಬಹುದು

  ಹೀಗೆ ಮಾಡಿದ ನಂತರ ನಿಮ್ಮ ಶಿಲ್ಪಕ್ಕೆ ರಂಗು ನೀಡಲು  ಯಾವುದೇ ಬಣ್ಣ ಅಥವಾ ಬಣ್ಣಗಳ ಸಂಯೋಜನೆಯನ್ನು ಹಚ್ಚಿರಿ. ನಿಮ್ಮ ಸೃಜನಶೀಲತೆ ಮತ್ತು ಕಲಾತ್ಮಕ ತೀರ್ಮಾನ ಬಳಸಿರಿ. ನೀವು ಕಂಚಿನ ಅಥವಾ ಕಿಲುಬಾಗಿರುವ ಪರಿಣಾಮಕ್ಕಾಗಿ ಪರ್ಲೈಸ್ಡ್ (pearlised) ಬಣ್ಣಗಳು ಅಥವಾ ಚಿನ್ನ ಮತ್ತು ಬೆಳ್ಳಿ ಧೂಳಿನ ಬಳಸಬಹುದು. ನೀವು ಇದನ್ನು  ಒಂದು ದೀಪ ಅಥವಾ ಒಂದು ಮೋಂಬತ್ತಿ ಹೋಲ್ಡರ್ ಆಗಿ ಪರಿವರ್ತಿಸಬಹುದು

ನೆನಪಿಡಿ :

 • ಬ್ಲಾಕ್ ಅನ್ನು ಅದು ಶೇ 80 ಒಣಗಿದ ಮೇಲೆ ಎಚ್ಚರಿಕೆಯಿಂದ  ಹೊರ ತೆಗೆಯಿರಿ.
 •  ಕೆತ್ತನೆ ಮಾಡುವ ವೇಳೆ  ಒಂದು ತುಂಡು ಕಿತ್ತು ಹೋದರೆ , ಹೆದರ ಬೇಕಾಗಿಲ್ಲ  ನೀವು ಸುಲಭವಾಗಿ ಸ್ವಲ್ಪ ಫೆವಿಕಾಲ್ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ ದ್ರಾವಣ ಒಟ್ಟಿಗೆ ಮಿಶ್ರಣ ಮಾಡಿ ಅದನ್ನು ಮುಖ್ಯ ಶಿಲ್ಪಕ್ಕೆ ಸೇರಿಸಬಹುದು.
 • ನಿಮ್ಮ ರೇಖಾ ಚಿತ್ರಕ್ಕೂ ಮತ್ತು ಕೆತ್ತನೆಗೂ ನಡುವೆ ಕನಿಷ್ಠ 2mm ಜಾಗವನ್ನು ಬಿಡಿ. ನಂತರ ಉಪ್ಪು ಕಾಗದದಿಂದ ಉಜ್ಜಲು  ಅದು ಅಗತ್ಯ.
 • ತಳಬಾಗ ವಿಶಾಲವಾಗಿರಲಿ ಮೇಲೆ ಕಿರಿದಾಗಿರಲಿ  ಈ ಸಮತೋಲಿತ ಸಂಯೋಜನೆಯ ಇಲ್ಲದೆ ಮಧ್ಯದಲ್ಲಿತೆಳುವಾದ ಪ್ರದೇಶ ಇದ್ದರೆ ಸುಲಭವಾಗಿ ಮುರಿಯುತ್ತವೆ.

 

18455 ನೊಂದಾಯಿತ ಬಳಕೆದಾರರು
7217 ಸಂಪನ್ಮೂಲಗಳು