ಪ್ರಾಥಮಿಕ ಪೂರ್ವ ಮಕ್ಕಳಿಗೆ ಪದಪರಿಚಯ

Resource Info

ಮೂಲ ಮಾಹಿತಿ

ಯಾವುದೇ ವಸ್ತು ನೋಡಿದರೂ ಮಕ್ಕಳು ಇದೇನು?  ಎಂದು ಕೇಳುತ್ತಾರೆ. ಕಲಿಕೆ ಕುರಿತ  ಇವರ ಕುತೂಹಲವೇ ಭಾಷೆ ಕಲಿಸಲು ಉತ್ತಮ ಸೋಪಾನ. ಇಂಗ್ಲಿಷ್ ಭಾಷೆ ಕಲಿಸಲು ಪದಪರಿಚಯ ವಿಧಾನವನ್ನು ಈ ಪಾಠ ಯೋಜನೆ ಹೊಂದಿದೆ.

ಪಾಠ ಯೋಜನೆ ವಿವರಗಳು

ಕಾಲಾವಧಿ: 
00 hours 40 mins
ಪೀಠಿಕೆ: 

ಎಳೆಯ ಮಕ್ಕಳು ತಮ್ಮ ಮಾತೃಭಾಷೆಯನ್ನು ಹೇಗೆ ಕಲಿತುಕೊಳ್ಳುತ್ತವೆ ಎಂಬುದನ್ನು ನಾವೆಲ್ಲ ಗಮನಿಸಿದ್ದೇವೆ. ಹಿರಿಯರು ಹಾಗೂ ಇತರ ಮಕ್ಕಳು ಬೇರೆ ಬೇರೆ ಸಂದರ್ಭಗಳಲ್ಲ್ಲಿ ಆಡುವ ಮಾತುಗಳ ಇಡೀ ವಾಕ್ಯಗಳನ್ನು ಅವರು ಆಲಿಸುತ್ತಾರೆ. ಮಾತನಾಡುವಾಗ ಅವರು ಬಿಡಿಪದಗಳನ್ನು ಮಾತ್ರ ಬಳಸಿದರೂ, ಪೂರ್ಣವಾಕ್ಯಗಳನ್ನು ಹಾಗೂ ತಮಗೆ ನೀಡಿರುವ ಸೂಚನೆಗಳನ್ನು ಮತ್ತು ಮೆಚ್ಚುಗೆಯ ಮಾತುಗಳನ್ನು ಅರ್ಥಮಾಡಿಕೊಳ್ಳಬಲ್ಲರು.

ಹೊಸ ಭಾಷೆಯನ್ನು ಬೋಧಿಸುವಾಗಲೂ ನಾವು ಇದೇ ತಂತ್ರವನ್ನು ಬಳಸಿಕೊಳ್ಳಬಹುದು. ಆದ್ದರಿಂದಲೇ ಈ ಪಾಠದ ಯೋಜನೆಯಲ್ಲಿ ದೈನಂದಿನ ಚಟುವಟಿಕೆಗಳನ್ನು ಬಳಕೆ ಮಾಡಲಾಗಿದೆ. ಬೋಧನೆಗೆ ನೆರವಾಗುವ ಸಾಮಾಗ್ರಿಗಳನ್ನು ಮಗುವಿನ ಸುತ್ತಮುತ್ತಲಿನ ಪರಿಸರದಿಂದಲೇ ತೆಗೆದುಕೊಳ್ಳಲಾಗಿದೆ.

ಇಡೀ ಭಾಷೆಯನ್ನು ಕಲಿಸುವುದೇ ನಮ್ಮ ಪ್ರಯತ್ನವಾದರೂ ಇಲ್ಲಿ ಮಗುವಿನ ಪದಸಂಪತ್ತಿನ ವೃದ್ಧಿಗೆ ಹೆಚ್ಚಿನ ಗಮನ ನೀಡಲಾಗಿದೆ. ಮೊದಲ ಭಾಷೆಯನ್ನು ಕಲಿಯುವಾಗ ಮಾಡುತ್ತಿದ್ದಂತೆ ಇಲ್ಲಿಯೂ ಮಗುವಿಗೆ ಬಿಡಿಪದಗಳನ್ನು ಬಳಸಿ ಮಾತನಾಡಲು ಪ್ರೋತ್ಸಾಹಿಸಲಾಗುವುದು. ಈ ಚಟುವಟಿಕೆಗಳು ಗಮನವಿಟ್ಟು ಕೇಳುವ ಹಾಗೂ ಮಾತನಾಡುವ ಮಗುವಿನ ಕೌಶಲಗಳನ್ನು ಇನ್ನಷ್ಟು ಬಲಪಡಿಸುತ್ತವೆ.

ಉದ್ದೇಶ: 

ವಿದ್ಯಾರ್ಥಿಗಳು:

  • ನಿರ್ದಿಷ್ಟ ವಸ್ತು ಅಥವಾ ಘಟನೆಗಳಿಗೆ ಸಂಬಂಧಿಸಿ ಮಾತನಾಡಿದ ಸರಳ ವಾಕ್ಯಗಳನ್ನು ಆಲಿಸುತ್ತಾರೆ.
  • ಪ್ರದರ್ಶಿಸಿದ ವಸ್ತುಗಳ ಗುಣಲಕ್ಷಣಗಳನ್ನು ಅರಿತು ಅವನ್ನು ಗುರುತಿಸುತ್ತಾರೆ.
  • ಸರಿಯಾದ ಪದಗಳನ್ನು ಬಳಕೆ ಮಾಡಿ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ.
  • ತರಕಾರಿ ಅಚ್ಚು ಒತ್ತುವುದು, ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ಶಿಕ್ಷಕರ ಸೂಚನೆಗಳನ್ನು ಪಾಲಿಸುವುದು ಮುಂತಾದ ಚಟುವಟಿಕೆಗಳಲ್ಲಿ ಮಗ್ನರಾಗುತ್ತಾರೆ.

ತಮ್ಮ ಗುಂಪಿನವರು ಸಂಗ್ರಹಿಸಿದ ಮಾಹಿತಿಗಳನ್ನು ನಿರೂಪಿಸುತ್ತಾರೆ.

 

ಹಂತಗಳು : 

ನೀವು ಕೆಳಗಿನ ಸ್ಥಳಾವಕಾಶಗಳನ್ನು ನಿಮ್ಮ ಟಿಪ್ಪಣಿಗಳನ್ನು ಬರೆದುಕೊಳ್ಳಲು ಬಳಕೆ ಮಾಡಬಹುದು!

ನಿಮಗೆ ಇದು ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂದೆನಿಸಿದರೂ ಇದು ಬಹಳ ಮುಖ್ಯ ಹಂತವಾಗಿರುತ್ತದೆ. ತಾವು ಹೇಳಿದ್ದನ್ನು ಶಿಕ್ಷಕರು ಗಮನವಿಟ್ಟು ಕೇಳಿದ್ದಾರೆ ಎಂಬುವುದು ಅವರಿಗೆ ಮನವರಿಕೆ ಆದಾಗ ಮಕ್ಕಳ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಇದು ಗುಣಾತ್ಮಕ ಸ್ವಗೌರವವನ್ನು ಹೆಚ್ಚಿಸಲು ನೆರವಾಗುತ್ತದೆ.

ನೆನಪಿಡಿ, ವಿದ್ಯಾರ್ಥಿಗಳು ನೀವು ಆಡಿದ ಮಾತುಗಳನ್ನು ಕೇಳಿ ಪದಗಳನ್ನು ಕಲಿತುಕೊಳ್ಳುತ್ತಾರೆ. ಆದ್ದರಿಂದ ಸರಳವಾದ ಮತ್ತು, ಚಿಕ್ಕಚಿಕ್ಕ ವಾಕ್ಯಗಳನ್ನು ಬಳಕೆ ಮಾಡಿರಿ. ಅವರು ಮಾತೃಭಾಷೆಯಲ್ಲಿ ಉತ್ತರ ನೀಡಿದರೂ ಅದನ್ನು ಅಂಗೀಕರಿಸಿರಿ.ಆ ಉತ್ತರಗಳನ್ನೇ ನೀವು ಇಂಗ್ಲೀಷಿನಲ್ಲಿ ಹೇಳಿ ತೋರಿಸಿರಿ.

ಹಂತಗಳು:

ಹಂತ 1 : ಆಸಕ್ತಿಯನ್ನು ಬೆಳೆಸುವುದು

ವಿದ್ಯಾರ್ಥಿಗಳಿಗೆ ನಮಸ್ತೆ ಅಥವಾ ಗುಡ್ ಮಾರ್ನಿಂಗ್ ಎಂದು ಹೇಳಿ. ಅವರನ್ನು ದೊಡ್ಡ ವೃತ್ತಾಕಾರದಲ್ಲಿ ಕೂರಿಸಿ ಜೊತೆಯಲ್ಲಿ ನೀವೂ ಕುಳಿತುಕೊಳ್ಳಿ. ಅವರು ಬಹಳ ಇಷ್ಟಪಡುವ ತರಕಾರಿಗಳ ಹೆಸರನ್ನು ಹೇಳಲು ತಿಳಿಸಿ.

ಇತರ ವಿದ್ಯಾರ್ಥಿಗಳು ಅದನ್ನು ಗಮನವಿಟ್ಟು ಕೇಳುವಂತೆ ಉತ್ತೇಜಿಸಿ. "ಹ್ಞಾ, ಐ ಆಲ್ಸೊ ಲೈಕ್ ಇಟ್!", "ಗುಡ್! ವಿ ಆಲ್ ಮಸ್ಟ್ ಈಟ್ ಸ್ಪಿನಾಜ್", "ಓಹ್ ಸುದೀಶ್ ಆಲ್ಸೊ ಲೈಕ್ಸ್ ಇಟ್", "ಡೋಂಟ್ ಯು ಸುದೀಶ್?", "ನೌ ನಮ್ರತಾ ವಿಲ್ ನೇಮ್ ಹರ್ ಫೇವರಿಟ್ ವೆಜಿಟೆಬಲ್", "ಲೆಟ್ಸ್ ಲಿಸನ್ ಟು ಹರ್" ಮುಂತಾದ ವಾಕ್ಯಗಳನ್ನು ಬಳಕೆ ಮಾಡಿರಿ.

ಹಂತ 2: ಚಟುವಟಿಕೆ

ಈಗ ಅವರ ಜೊತೆ ಈ ಮುಂದಿನಂತೆ ಸಂಭಾಷಣೆಯಲ್ಲಿ ತೊಡಗಿರಿ:

ಶಿಕ್ಷಕರು: (ಅವರಿಗೆ ಬೆಂಡೆಕಾಯಿಯನ್ನು ತೋರಿಸುತ್ತ) ದಿಸ್ ವೆಜಿಟೆಬಲ್ ಈಸ್ ಕಾಲ್ಡ್ ಲೇಡೀಸ್ ಫಿಂಗರ್, ಇಟ್ ಈಸ್ ಲಾಂಗ್. ವಾಟ್ ಈಸ್ ದಿ ಕಲರ್ ಆಫ್ ದಿಸ್ ವೆಜಿಟೆಬಲ್?

ವಿದ್ಯಾರ್ಥಿಗಳು: ಗ್ರೀನ್/ಹಸಿರು (ಯಾರೊಬ್ಬರೂ ಹೇಳದಿದ್ದಲ್ಲಿ ನೀವೇ ಉತ್ತರವನ್ನು ತಿಳಿಸಿ)

ಶಿಕ್ಷಕರು: ಯಸ್, ಇಟ್ ಈಸ್ ಗ್ರೀನ್

ಶುಭಾ, ಕಮ್ ಎಂಡ್ ಟೇಕ್ ದಿಸ್ ಲೇಡೀಸ್ ಫಿಂಗರ್ (ಇದನ್ನು ಕೈಸನ್ನೆ ಮುಂತಾದ ರೀತಿಯಲ್ಲಿ ವ್ಯಕ್ತಪಡಿಸಿ, ಅವರು ಅರ್ಥಮಾಡಿಕೊಳ್ಳದೇ ಇದ್ದಲ್ಲಿ ಮತ್ತೆ ಇಂಗ್ಲೀಷ್ನಲ್ಲಿ ಅದನ್ನೆ ಹೇಳಿರಿ).

ನೌ ಗಿವ್ ದಿಸ್ ಲೇಡೀಸ್ ಫಿಂಗರ್ ಟು ರಾಜ್ ( ಈ ಸಂಭಾಷಣೆಯನ್ನು 2 ಸಲ ಬೇರೆ ಬೇರೆ ವಿದ್ಯಾಗಳೊಂದಿಗೆ ಪುನರಾವರ್ತಿಸಿ).

(ಟೊಮ್ಯಾಟೋ ತೋರಿಸುತ್ತ) ವಾಟ್ ಈಸ್ ದಿಸ್?

ವಿದ್ಯಾರ್ಥಿಗಳು: ಟೊಮ್ಯಾಟೊ/ತಕ್ಕಾಳಿ (ಎಲ್ಲ ಉತ್ತರಗಳನ್ನೂ ಸ್ವೀಕರಿಸಿ)

ಶಿಕ್ಷಕರು: ಇಟ್ ಈಸ್ ಅ ಟೊಮ್ಯಾಟೊ.

ಈಸ್ ಇಟ್ ಲಾಂಗ್? (ಬೆಂಡೆಕಾಯಿಯನ್ನು ತೋರಿಸಿ) ಈಸ್ ಇಟ್ ಲಾಂಗ್ ಲೈಕ್ ಲೇಡೀಸ್ ಫಿಂಗರ್?

ವಿದ್ಯಾಗಳು: ನೊ/ಪ್ರತಿಕ್ರಿಯೆ ಇಲ್ಲ.

ಶಿಕ್ಷಕರು: ಇಟ್ ಈಸ್ ರೌಂಡ್.

(ನಿಂಬೆಹಣ್ಣು ತೋರಿಸುತ್ತ) ಈಸ್ ಇಟ್ ಲಾಂಗ್ ಆರ್ ರೌಂಡ್?

ವಿದ್ಯಾರ್ಥಿಗಳು: ರೌಂಡ್/ಪ್ರತಿಕ್ರಿಯೆ ಇಲ್ಲ.

ಶಿಕ್ಷಕರು: ಲೇಡೀಸ್ ಫಿಂಗರ್ ಈಸ್ ಲಾಂಗ್, ದಿ ಟೊಮ್ಯಾಟೊ ಎಂಡ್ ದಿ ಲೇಮನ್ ಆರ್ ರೌಂಡ್.

(ಸೌತೆಕಾಯಿ ತೋರಿಸುತ್ತ) ಈಸ್ ಇಟ್ ರೌಂಡ್ ಲೈಕ್ ದಿ ಲೆಮನ್ ಎಂಡ್ ದಿ ಟೊಮ್ಯಾಟೊ?

ವಿದ್ಯಾರ್ಥಿಗಳು: ನೊ ಲಾಂಗ್

ಈ ಸಂಭಾಷಣೆಯನ್ನು ಆಲೂಗಡ್ಡೆ ಹಾಗೂ ಹುರುಳಿಕಾಯಿ ಬಳಕೆ ಮಾಡಿ ಮುಂದುವರಿಸಿ.

ಶಿಕ್ಷಕರು: ನೌ ಲೆಟ್ಸ್ ಡು ಸಮ್ ಪ್ರಿಂಟಿಂಗ್

ಪ್ರತಿಯೊಬ್ಬ ವಿದ್ಯಾರ್ಥಿಗೂ ಡ್ರಾಯಿಂಗ್ ಹಾಳೆಗಳನ್ನು ಒದಗಿಸಿ. ತಟ್ಟೆಗಳಲ್ಲಿ ಜಲವರ್ಣ(ವಾಟರ್ ಕಲರ್)ಗಳನ್ನು ಕೂಡ ಒದಗಿಸಿ. ಅವರಿಗೆ ಬೆಂಡೆಕಾಯಿ, ಹುರುಳೀಕಾಯಿ, ಆಲೂಗಡ್ಡೆಯ ಚೂರುಗಳನ್ನು ನೀಡಿ. ಬಣ್ಣದಲ್ಲಿ ಅದ್ದಿ ಬಣ್ಣದ ಮುದ್ರೆ ಒತ್ತುವುದು ಹೇಗೆ ಎನ್ನುವುದನ್ನು ಹಾಗೂ ತರಕಾರಿ ಚಿತ್ತಾರಗಳನ್ನು ಮುದ್ರಿಸುವುದು ಹೇಗೆ ಎನ್ನುವುದನ್ನು ತಿಳಿಸಿ.

ಯಾವ ಬಣ್ಣಬೇಕು ಎಂಬುದನ್ನುಅವರೆ ಆಯ್ಕೆ ಮಾಡಿಕೊಂಡು ಮುದ್ರೆಗಳನ್ನು ಒತ್ತಲಿ. ಶಾಲಾ ಗೋಡೆಯ ಮೇಲೆ ಮಕ್ಕಳ ಈ ಕಲಾಕೃತಿಗಳನ್ನು ಪ್ರದರ್ಶಿಸಿ.

ಮೌಲ್ಯಮಾಪನ: 

ಮಕ್ಕಳ ಕಲಾಕೃತಿ ಹಾಗೂ ಪ್ರತಿಕ್ರಿಯೆಗಳನ್ನು ವಿಶ್ಲೇಷಿಸಬಹುದು. ಇದು ಅಂಕಗಳನ್ನು ಕೊಡುವುದಕ್ಕಾಗಿ ಅಥವಾ ಗ್ರೇಡ್ ಗಳನ್ನು ನೀಡುವುದಕ್ಕಾಗಿ ಅಲ್ಲ, ಬದಲಾಗಿ ಇದನ್ನು ಚಟುವಟಿಕೆಗಳನ್ನು ನಡೆಸುವ ನಮ್ಮ ವಿಧಾನಗಳನ್ನು ಸುಧಾರಿಸಿಕೊಳ್ಳಲು ಬಳಕೆ ಮಾಡಬಹುದು.

18904 ನೊಂದಾಯಿತ ಬಳಕೆದಾರರು
7422 ಸಂಪನ್ಮೂಲಗಳು