ಕರಗುವ ಪ್ಲಾಸ್ಟಿಕ್-ಶಾಲಾ ಬಾಲಕಿಯ ಸಂಶೋಧನೆ

ಕರಗುವ ಪ್ಲಾಸ್ಟಿಕ್ ಕಂಡುಹಿಡಿದ 10ನೇ ಕ್ಲಾಸ್ ನ ವೈ.ಆರ್ ಅನನ್ಯ ಹುಡುಗಿ..! 
ರಾಷ್ಟ್ರ ಮಟ್ಟದ ಇನ್ ಸ್ಪೈರ್ ಅವಾರ್ಡ್‍ಗೆ ಸೆಲೆಕ್ಟ್ ಆಗಿದ್ದ ಈ ಬಾಲಕಿ.
ಯಾಗಟಿಯ ಕಡೂರು ತಾಲ್ಲೂಕಿನ ಚಿಕ್ಕಮಗಳೂರಿನವಳು.

ನಮ್ಮ ರಾಜ್ಯದ ಯುವಪಿಳಿಗೆ ಹುಡುಗಿ ಸಲಾಂ
ಲೈಕ್ ಮಾಡಿ. ಕಾಮೆಂಟ್ ಮಾಡುತ್ತ ಶೇರ್ ಮಾಡಿ.

– ಸ್ಪೆಷಲ್ ಪ್ಲಾಸ್ಟಿಕ್ ತಯಾರಿಸೋದು ಹೇಗೆ..?
– ಪರಿಸರ ಉಳಿಸುವುದರ ಜೊತೆಗೆ ಸಂಶೋಧಕರಾಗಿ

ಮನೆಯಲ್ಲಿದ್ದ ಹಸು ಪ್ಲಾಸ್ಟಿಕ್ ಕವರ್ ತಿಂದು ಸಾವನ್ನಪ್ಪಿದ್ದರಿಂದ ಮನನೊಂದ ಬಾಲಕಿ ವಾತಾವರಣದಲ್ಲಿ ಕರಗುವಂತಹ ಪ್ಲಾಸ್ಟಿಕನ್ನೇ ಕಂಡು ಹಿಡಿದಿದ್ದಾಳೆ.

ಈ ಪ್ಲಾಸ್ಟಿಕ್ 20-25 ದಿನಗಳಲ್ಲಿ ವಾತಾವರಣದಲ್ಲಿ ಸಣ್ಣ-ಸಣ್ಣ ಚೂರುಗಳಾಗಿ ಕರಗಿ ಗೊಬ್ಬರವಾಗುತ್ತದೆ.
ಚಿಕ್ಕಮಗಳೂರು ಜಿಲ್ಲೆ ಕಡೂರಿನ ದೀಕ್ಷಾ ವಿದ್ಯಾ ಮಂದಿರದಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಅನನ್ಯಳ ವಯಸ್ಸಿನ್ನು 16 ವರ್ಷ. ಈ ವಯಸ್ಸಿಗೆ ಬಾಲಕಿ ರಾಜ್ಯ ಹಾಗೂ ದೇಶಕ್ಕೆ ತಲೆನೋವಾಗಿರುವ ಸಮಸ್ಯೆಯೊಂದಕ್ಕೆ ಪರಿಹಾರ ಕಂಡು ಹಿಡಿದಿದ್ದಾಳೆ.

ಪ್ಲಾಸ್ಟಿಕ್‍ನಿಂದ ಪರಿಸರದಲ್ಲಿ ಆಗುತ್ತಿರುವ ಅನಾಹುತಗಳನ್ನು ತಡೆಯುವುದಕ್ಕೆ ಸರ್ಕಾರ ಎಷ್ಟೆ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಆದರೆ ಮನೆಯಲ್ಲಿದ್ದ ಹಸು ಪ್ಲಾಸ್ಟಿಕ್ ತಿಂದು ಸಾವನ್ನಪ್ಪಿದ್ದರಿಂದ ಅಂತಹಾ ಪ್ಲಾಸ್ಟಿಕ್‍ಗೆ ಪರ್ಯಾಯವಾಗಿ ಪರಸರದಲ್ಲಿ ಕರಗುವ ಪ್ಲಾಸ್ಟಿಕನ್ನು ಸಂಶೋಧಿಸಿದ್ದಾಳೆ.

ಈ ಪ್ಲಾಸ್ಟಿಕ್ 20-25 ದಿನಗಳ ಕಾಲ ಪರಿಸರದಲ್ಲಿದ್ದರೆ ಸಣ್ಣ-ಸಣ್ಣ ಚೂರುಗಳಾಗಿ ಕರಗುತ್ತದೆ. ಇದರಿಂದ ವಾತಾವರಣದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ.
ಈ ಮಾದರಿಯ ಪ್ಲಾಸ್ಟಿಕ್ ನಿರ್ಮಾಣಕ್ಕೆ ಹೆಚ್ಚಿನ ಖರ್ಚು ಬರುವುದಿಲ್ಲ.

ನಾವು ದಿನನಿತ್ಯ ಬಳಸುವ ವಸ್ತುಗಳನ್ನೇ ಬಳಸಿಕೊಂಡು ಪರಿಸರದಲ್ಲಿ ಕರಗುವ ಪ್ಲಾಸ್ಟಿಕ್ ತಯಾರಿಸಬಹುದು. ಕಾನ್‍ಫ್ಲೋರ್, ವಿನೇಗರ್, ನೀರು ಹಾಗೂ ಗ್ಲಿಸರಿನ್ ಮುಂತಾದ ವಸ್ತುಗಳನ್ನು ಬಾಣಲೆಯೊಂದರಲ್ಲಿ ಹೀಟ್ ಮಾಡಿದಾಗ ಸಿಗೋ ಜಲ್ಲಿ ಲೇಯರನ್ನು ಅಲ್ಯೂಮಿನಿಯಂ ಪೇಪರ್ ಮೇಲೆ ಶೀಟ್‍ನಂತೆ ಹಾಕಿ, 24 ಗಂಟೆ ಸೂರ್ಯನ ಬೆಳಕು ಅಥವಾ 48 ಗಂಟೆ ರೂಂ ಟೆಂಪ್ರೇಚರ್‍ನಲ್ಲಿ ಇಟ್ಟರೆ ಪ್ಲಾಸ್ಟಿಕ್‍ನಂತಹ ಶೀಟ್ ಸಿಗುತ್ತದೆ. ಅದನ್ನು ಯಾವ ಆಕಾರಕ್ಕೆಬೇಕಾದರೂ ಮಾಡಿಕೊಳ್ಳಬಹುದು.

ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟದ ಇನ್ಸಪೈರ್ಡ್ ಅವಾರ್ಡ್‍ಗೆ ಸೆಲೆಕ್ಟ್ ಆಗಿದ್ದ ಈ ಬಾಲಕಿಗೆ ರಾಷ್ಟ್ರಮಟ್ಟದಲ್ಲಿ ಬೆಳ್ಳಿ ಪದಕ ಲಭಿಸಿದೆ.

ಈಕೆಯ ಸಾಧನೆಯನ್ನು ತಂದೆ-ತಾಯಿ, ಶಾಲಾ ಆಡಳಿತ ಮಂಡಳಿ ಹಾಗೂ ರಾಜ್ಯದ ಜನ ಕೂಡ ಶ್ಲಾಘಿಸಿದೆ.

ಇತಿಹಾಸದ ಸಮಸ್ಯೆಯೊಂದಕ್ಕೆ ಪರಿಹಾರದ ದಾರಿಯೊಂದು ದೊರಕಿದಂತಾಗಿದೆ. ಸರ್ಕಾರ ಇತ್ತ ಗಮನ ಹರಿಸಿ ಈ ಮಾದರಿಯ ಪ್ಲಾಸ್ಟಿಕ್ ಬಳಕೆಯಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ರೀತಿಯ ಪ್ಲಾಸ್ಟಿಕ್ ಬಳಕೆಯನ್ನು ಜಾರಿಗೆ ತಂದರೆ ಅವನತಿಯ ಅಂಚಿನಲ್ಲಿರುವ ಪರಿಸರವನ್ನು ಉಳಿಸಬಹುದು

 

Date: 
ಬುಧವಾರ, September 21, 2016 - 4:45pm
Venue: 
ಕಡೂರು
ಭಾರತ
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು