‘ಐ ವಂಡರ್...'ಆರಂಭಿಕ ಸಂಚಿಕೆ

‘ಐ ವಂಡರ್’ ವಿಜ್ಞಾನಕ್ಕೆ ಸಂಬಂಧಿಸಿದ ಪತ್ರಿಕೆಯಾಗಿದ್ದು ದೇಶದ ಅನೇಕ ಶಾಲೆಗಳಲ್ಲಿ ವಿಜ್ಞಾನದ ಪ್ರಯೋಗ ಮತ್ತು ಬೋಧನೆಯನ್ನು ಸಮೃದ್ಧಗೊಳಿಸಲು ಉತ್ಸಾಹದಿಂದ ತೊಡಗಿರುವ ಅಸಂಖ್ಯಾತ ಶಿಕ್ಷಕರಿಂದ ಪ್ರೇರಣೆಗೊಂಡಿದೆ. ಮಾಧ್ಯಮಿಕ ಶಾಲೆಯ ಶಿಕ್ಷಕರೊಂದಿಗೆ ಜೊತೆಗೂಡಿ, ಅವರು ನೈಸರ್ಗಿಕ ವಿಜ್ಞಾನದ ಆಳವಾದ ಮತ್ತು ವಿಶಾಲ ನೆಲೆಯ ತಿಳುವಳಿಕೆ ಹೊಂದುವುದು ಹಾಗೂ ಅವರ ತರಗತಿ ಆಚರಣೆಯಲ್ಲಿ ಇದನ್ನು ಕಾರ್ಯಗತಗೊಳಿಸಲು ಸಹಾಯಕವಾಗುವಂತೆ ಉದಾಹರಣೆಗಳೊಂದಿಗೆ ಸ್ಫೂರ್ತಿ ನೀಡುವುದು ನಮ್ಮ ಉದ್ದೇಶವಾಗಿದೆ.

ನಮ್ಮ ಆರಂಭಿಕ ಸಂಚಿಕೆಯು ಆಕರ್ಷಕ ವಿಷಯವಾದ ‘ಅಂತರ್ ಶಾಸ್ತ್ರೀಯ ವಿಜ್ಞಾನ’ವನ್ನು ಶೋಧಿಸುತ್ತ ನೈಸರ್ಗಿಕ ವಿಜ್ಞಾನದಿಂದ ಜ್ಞಾನ, ವಿಧಾನಗಳು ಮತ್ತು ದೃಷ್ಟಿಕೋನಗಳನ್ನು ಒದಗಿಸುವ ಐದು ಲೇಖನಗಳನ್ನು ಪ್ರಸ್ತುತಪಡಿಸುತ್ತಿದೆ. ಈವರೆಗೆ ಅಷ್ಟಾಗಿ ಗೊತ್ತಿರದ ಆದರೆ ದೀರ್ಘಕಾಲೀನ, ವಿಜ್ಞಾನದ ರೋಮಾಂಚಕ ಐತಿಹಾಸಿಕ ಪರಿಕಲ್ಪನೆಗಳನ್ನು ‘ಆಕಸ್ಮಿಕ ಸಂಶೋಧನೆ’ ಮತ್ತು ‘ಚರಿತ್ರೆಯ ಪುಟಗಳಿಂದ’ ವಿಭಾಗಗಳಲ್ಲಿ ಹುಡುಕಲು ನಮ್ಮೊಂದಿಗೆ ಪಯಣಿಸಿ. ಚಮತ್ಕಾರಿ ಮತ್ತು ಮೇಧಾವಿ ಜೆ.ಬಿ.ಎಸ್ ಹೊಲ್ಡೇನ್ ಬಗ್ಗೆ ‘ವಿಜ್ಞಾನಿಯ ಜೀವನ ಚರಿತ್ರೆ’ಯಲ್ಲಿ ಓದಿ ಸಂತೋಷಿಸಿ. ಬೆಳಕಿನ ಪರಿಕಲ್ಪನೆಯ ಪಾಠಬೋಧನೆಗೆ ಪೂರಕವಾಗುವ ನೆರಳು ಮತ್ತು ಪ್ರತಿಫಲನದ ಸರಳ ಚಟುವಟಿಕೆಯನ್ನು ‘ವಿಜ್ಞಾನ ಪ್ರಯೋಗಾಲಯ’ ಲೇಖನದಲ್ಲಿ ಕಂಡುಕೊಳ್ಳಿರಿ. ನಮ್ಮ ವಿಶ್ವದ ವಿಸ್ಮಯಗಳನ್ನು ‘ಬೃಹತ್ಕಣದೊಂದಿಗಿನ ಒಂದು ಸಮಾಲೋಚನೆ’ ಮೂಲಕ ಮರುಶೋಧಿಸುತ್ತ ‘ಭಾರತದ ಮಂಗಳ ಕಕ್ಷಗಾಮಿ ಅಭಿಯಾನ’ದ ಬಗ್ಗೆ ‘ಅಂತರಾಳದಲ್ಲಿ/ಅಂತರಿಕ್ಷದಲ್ಲಿ’ ವಿಭಾಗದಿಂದ ಓದಿ ತಿಳಿಯಿರಿ.

‘ನಮ್ಮ ಹಿತ್ತಲಿನ ಜೀವಜಗತ್ತು’ ವಿಭಾಗದಲ್ಲಿ ‘ನೊಣಗಳ ಅಜ್ಞಾತ ಜಗತ್ತನ್ನು’ ಅರಿತು ಅಚ್ಚರಿಗೊಳ್ಳಿರಿ. ‘ಆನ್ ಲೈನ್ ವಿಜ್ಞಾನ’ದ ಪರಿಚಯ ಮಾಡಿಕೊಂಡು ‘ಸ್ಟೆಲ್ಲೇರಿಯಮ್’ ಮೂಲಕ ಸಮಯವನ್ನು ಹಂತಹಂತವಾಗಿ ಅರಿಯಿರಿ. ಇಷ್ಟರಿಂದಲೇ ನಿಮ್ಮ ಕುತೂಹಲ ತಣಿಯದಿದ್ದಲ್ಲಿ, ‘ನೀರು ಎಂಬ ಅಚ್ಚರಿಯ ಅಣು’ ಕುರಿತ ಚಟುವಟಿಕೆಗಳನ್ನು ಹಾಗೂ ‘ಮಾನವ ರಕ್ತದ ಕುರಿತು ನಿಮಗೆ ತಿಳಿಯದ ಹತ್ತು ಅಂಶಗಳು’ – ಇವೆರಡನ್ನೂ ಕಿರು ಭಿತ್ತಿಪತ್ರಗಳಲ್ಲಿ ಓದಿ ತಿಳಿದು ಖುಷಿ ಪಡುವಿರೆಂದು ಆಶಿಸುತ್ತೇವೆ!

ಇಳಿನಕಲು ಮಾಡಿಕೊಳ್ಳಿ: apu_172314_i_wonder_kannada-26.07.2018.pdf
18462 ನೊಂದಾಯಿತ ಬಳಕೆದಾರರು
7223 ಸಂಪನ್ಮೂಲಗಳು