ಪುಟಾಣಿಗಳ ರಾಗಿ ಪ್ರಾಜೆಕ್ಟ್

ರಾಗಿ ಪರಿಪೂರ್ಣ ಆರೋಗ್ಯಕರ ಆಹಾರ - ಕ್ಯಾಲ್ಸಿಯಂ, ಪ್ರೋಟೀನ್, ಮತ್ತು ಕಬ್ಬಿಣದ ಅಂಶಗಳು ಇದರಲ್ಲಿ ಸಮೃದ್ಧ ವಾಗಿವೆ -ಆದರೆ  ಇದು ನಗರದ ಮಕ್ಕಳಿಗೆ  ಅತ್ಯಂತ ನೆಚ್ಚಿನ ಆಹಾರ ಅಲ್ಲ! ಆದರೆ ಹಳ್ಳಿಯ ಮಕ್ಕಳು ರಾಗಿ ಬಗ್ಗೆ ಏಕೆ ಮೂಗು ಮುರಿಯುವುದಿಲ್ಲ?

ಭಾರತದ ಹಳ್ಳಿಯ ಮಕ್ಕಳಿಗೆ ರಾಗಿ ಬದುಕಿನ ಒಡನಾಡಿ. ಭಾರತದಾದ್ಯಂತ ರಾಗಿ, ನಾಚಾನಿ, ನಾಗ್ಲಿ, ಮಾಂಡುವಾ, ಕೋಡಾ, ಆರಿಯಾಮ್ ಎಂಬ ಹೆಸರಿನಲ್ಲಿ ರಾಗಿಯನ್ನು ರೈತರು ಬೆಳೆಯುತ್ತಾರೆ. ರೈತರ ಮಕ್ಕಳಿಗೆ ಮೊಳಕೆಯಿಂದ ಹಿಡಿದು ಸುಗ್ಗಿಯ ತನಕ ರಾಗಿಯ ಒಡನಾಟ ಹೊಂದಿರುತ್ತಾರೆ.ಚಿಕ್ಕಂದಿನಲ್ಲಿ ನಮಗೆ ಪ್ರಿಯವಾಗಿದ್ದ ಒಂದು ರಾಗಿಯ ತಿಂಡಿ ಇಲ್ಲಿದೆ.

ರಾಗಿ ಕಾಚಕ್ಕಿ

ಬೇಕಾದ ಸಾಮಾಗ್ರಿ

ಚೆನ್ನಾಗಿ ಬಲಿತು ಹಾಲು ತುಂಬಿದ ಹಸಿರು ರಾಗಿಯ ತೆನೆ 3-4

ಕಾಯಿ ತುರಿ

ಬೆಲ್ಲ

ಹಾಲು ತುಂಬಿದ ಹಸಿರು ರಾಗಿಯ ತೆನೆಯನ್ನುಸಣ್ಣ ಉರಿಯ ಮೇಲೆ ಗಮ್ಮೆಂದು ವಾಸನೆ ಬರುವವರೆಗೆ ಕಾಯಿಸಿ ನಂತರ ಒಂದು ಮೊರ ದಲ್ಲಿ ತೆನೆಗಳನ್ನು ಇರಿಸಿ ಕೈನಿಂದ ಉಜ್ಜಿರಿ .ಹಸಿರುಹಸಿರಾದ ಹಾಲು ತುಂಬಿದ ಕಾಳುಗಳು ಬೇರ್ಪಡುತ್ತವೆ.ಹೊಟ್ಟನ್ನೆಲ್ಲಾ ಬೇರ್ಪಡಿಸಿ ಕಾಳಿಗೆ ಕಾಯಿ ತುರಿ, ಬೆಲ್ಲ ಸೇರಿಸಿ ತಿಂದರೆ ಬಹಳ ರುಚಿ.

ಇತ್ತೀಚೆಗೆ ಪೂರ್ಣಕಲಿಕೆ ಕೇಂದ್ರ ಹಾಗು ಅಜಿಂ ಪ್ರೇಂಜಿ ವಿಶ್ವವಿದ್ಯಾಲಯ ರಾಗಿಯನ್ನು ನಗರದ ಮಕ್ಕಳಿಗೆ  ನಿಕಟಗೊಳಿಸುವ ಒಂದು ವಿನೂತನ ಪ್ರಾಜೆಕ್ಟ್ಅನ್ನು ಹಮ್ಮಿಕೊಂಡಿದ್ದರು ಅದರ ಬಗ್ಗೆ ಉದಯವಾಣಿ ಪತ್ರಿಕೆಯವರು ದಿನಾಂಕ ೨೭ -೦೧- ೨೦೧೮ರಂದು ಪ್ರಕಟಿಸಿದ ಲೇಖನವನ್ನು ಇಲ್ಲಿ ಕೊಡಲಾಗಿದೆ.

ಇದರ ಜೊತೆಗೆ ಒಂದು ರಾಗಿ ಅಡುಗೆಗಳ ಕಿರುಹೊತ್ತಿಗೆಯನ್ನು ಹೊರತಂದಿರುವುದು ವಿಶೇಷ.

 

 

18461 ನೊಂದಾಯಿತ ಬಳಕೆದಾರರು
7223 ಸಂಪನ್ಮೂಲಗಳು