ಕಲಿಕೆಯನ್ನು ಅನುಕೂಲಿಸುವುದು ೧.೨.೧ ಕನ್ನಡ

೧.೨ ಕಲಿಕೆಯನ್ನು ಅನುಕೂಲಿಸುವುದು ೧.೨.೧ ಕನ್ನಡ ಸಮಯ : ೧೨೦ ಗಂಟೆಗಳು ಒಟ್ಟು ಅಂಕಗಳು ೧೦೦ ತಾತ್ವಿಕ : ೪೫ ಗಂಟೆಗಳು ಆಂತರಿಕ-೪೦ ಪ್ರಾಯೋಗಿಕ : ೭೫ ಗಂಟೆಗಳು ಬಾಹ್ಯ _ ೬೦ ಭಾಷೆಯನ್ನು ಸಹಜವಾಗಿಯೇ ನಾವು ಸಂವಹನಕ್ಕಾಗಿ ಬಳಸುತ್ತೇವೆ. ನಮ್ಮ ’ವಾಸ್ತವ’ಕ್ಕೆ ರೂಪ ನೀಡಿ ಮನಸ್ಸಿನಲ್ಲಿ ಮೂಡಿಸುವುದು ಭಾಷೆಯೇ - ನಮ್ಮ ಚಿಂತನೆಗಳನ್ನು ನಾವು ಪ್ರಾರಂಭಿಸಿ, ಅದಕ್ಕೆ ವಿವಿಧ ಆಯಾಮಗಳನ್ನು ಜೋಡಿಸಿ ವಿಸ್ತಾರಗೊಳಿಸಿಕೊಳ್ಳುವುದು ಭಾಷೆಯ ಮೂಲಕವೇ. ಭಾಷೆಗೂ ಸಂಸ್ಕೃತಿಗೂ ಸಹ ಗಾಢವಾದ ಸಂಬಂಧವಿದೆ. ಶಿಕ್ಷಣದಲ್ಲಿ ಭಾಷಾ ಶಿಕ್ಷಕರ ಪಾತ್ರ ಬಹಳ ಮಹತ್ವದ್ದು. ಪ್ರಶಿಕ್ಷಣಾರ್ಥಿಗಳು ಸಮುದಾಯದೊಡನೆ, ಸಂಸ್ಕೃತಿಯೊಂದಿಗೆ, ಸಾಹಿತ್ಯದೊಳಗೆ ಸೇರಿ ಭಾಷಾ ಕಲಿಕೆಗೆ ಅನುವು ಮಾಡಿಕೊಡುವುದಕ್ಕೆ ದಾರಿಗಳನ್ನು ರೂಪಿಸಿಕೊಳ್ಳುವುದಕ್ಕೆ ಸಾಧ್ಯತೆಗಳನ್ನು ತೆರೆದಿಡುವುದು ಈ ಪಠ್ಯ ವಿಷಯದ ಆಶಯವಾಗಿದೆ. ಈ ಪಠ್ಯಕ್ರಮದ ರಚನೆಯಲ್ಲಿ ಪ್ರಶಿಕ್ಷಣಾರ್ಥಿಗಳ ಅನುಭವಗಳಿಗೆ ಮತ್ತು ಅವರ ಅಭಿರುಚಿಯ ಮುಕ್ತ ಹಂಚಿಕೆಗೆ ಅವಕಾಶಗಳಿವೆ. ಪ್ರಶಿಕ್ಷಣಾರ್ಥಿಗಳು ಅನುಭವಾತ್ಮಕವಾಗಿ ತಾವು ಕಲಿತಿದ್ದನ್ನು ವಿವಿಧ ರೀತಿಯಲ್ಲಿ ಬಳಸಿಕೊಳ್ಳುವುದಕ್ಕೆ ಆದ್ಯತೆ ಇದೆ. ಭಾಷಾ ಶಿಕ್ಷಣ ಶಾಸ್ತ್ರದ ತಾತ್ವಿಕ ಅಂಶಗಳ ಹಿನ್ನೆಲೆಯಲ್ಲಿ ತರಗತಿಯನ್ನು ವೀಕ್ಷಿಸಿ, ಅದರ ಬಗ್ಗೆ ಚಿಂತನೆ ನಡೆಸಲು ಅವಕಾಶಗಳನ್ನು ಕಲ್ಪಿಸಿಕೊಡಲಾಗಿದೆ. ಉದ್ದೇಶಗಳು ಈ ಶಿಕ್ಷಕ ಶಿಕ್ಷಣ ಕಾರ್ಯಕ್ರಮವು ಪ್ರಶಿಕ್ಷಣಾರ್ಥಿಗಳಲ್ಲಿ; * ಪ್ರಶಿಕ್ಷಣಾರ್ಥಿಗಳು ಮೂಲ ಆಕರಗಳ ಸಂಪನ್ಮೂಲಗಳ ಸ್ವ ಅನುಭವ ಕೊಡುತ್ತದೆ. * ಸ್ವ - ಶಕ್ತಿಯಿಂದ ಸಂಪನ್ಮೂಲಗಳ ಅನ್ವೇಷಣೆ - ಆ ಮೂಲಕ ಕಲಿಯುವ/ಕಲಿಸುವ ದಾರಿಗಳನ್ನು ರಚಿಸಲು ಸಾಮರ್ಥ್ಯ ಬೆಳೆಸುತ್ತದೆ. * ಸಂಭಾಷಣೆ, ಚರ್ಚೆ, ಮಾಹಿತಿ ವಿನಿಮಯ, ವಿಚಾರ ವಿನಿಮಯದಂತಹ ಸನ್ನಿವೇಶಗಳಲ್ಲಿ ಸಕ್ರಿಯವಾಗಿ ಆಲಿಸಿ ಗ್ರಹಿಸಿಕೊಳ್ಳುವ ಸಾಮರ್ಥ್ಯ ಬೆಳೆಸುತ್ತದೆ.
* ಮಾನವ ಜೀವನದಲ್ಲಿ ಕಥೆಯ ಮಹತ್ವ ತಿಳಿಸುತ್ತದೆ. * ವೈವಿಧ್ಯಮಯ ಮೌಖಿಕ ಅಭಿವ್ಯಕ್ತಿಗೆ ಅವಕಾಶಗಳನ್ನು ಪಡೆದು, ಸಂದರ್ಭಾನುಸಾರ ಅದನ್ನು ಉಪಯೋಗಿಸುವ ಸಾಮರ್ಥ್ಯ ಬೆಳೆಸುತ್ತದೆ. * ೧ ರಿಂದ ೪ನೇ ತರಗತಿಯ ಮಕ್ಕಳಲ್ಲಿ ಆಲಿಸುವಿಕೆಯ ಮತ್ತು ಮೌಖಿಕ ಅಭಿವ್ಯಕ್ತಿ ಕೌಶಲಗಳನ್ನು ಬೆಳೆಸಲು ಸಹಾಯವಾಗುವ ಮಾರ್ಗೋಪಾಯಗಳನ್ನು ತಿಳಿದು ಸಂಪನ್ಮೂಲಗಳ ಸೃಷ್ಠಿ/ಅನ್ವೇಷಣೆ/ಬಳಕೆಯಲ್ಲಿ ನಿಪುಣರನ್ನಾಗಿಸುತ್ತದೆ. * ಓದಿನ ಕೌಶಲದ ಮೇಲೆ ಪ್ರಭಾವ ಬೀರುವ ವಿವಿಧ ಸಾಮಾಜಿಕ - ಮಾನಸಿಕ ಅಂಶಗಳನ್ನು ಅರ್ಥೈಸಿಕೊಳ್ಳಲು ಸಮರ್ಥರನ್ನಾಗಿಸುತ್ತದೆ. * ಪ್ರಶಿಕ್ಷಣಾರ್ಥಿಗಳು ತಮ್ಮ ಅನುಭವ ಹಂಚಿಕೊಳ್ಳಲು, ಅಭಿಪ್ರಾಯ ಮಂಡಿಸಲು, ಮಾಹಿತಿ/ ವಿಚಾರಗಳನ್ನು ಮಂಡಿಸಲು ವಿಮರ್ಶಾತ್ಮಕ ಚಿಂತನೆಗಳನ್ನು ಹಂಚಿಕೊಳ್ಳಲು, ವರದಿ ಮಾಡಲು ಬರೆಯುವ ಸಾಮರ್ಥ್ಯ ಬೆಳೆಸುತ್ತದೆ. * ಬರವಣಿಗೆಯ ಕೌಶಲದ ಬಗ್ಗೆ ಅರಿತು ಮತ್ತು ಅದನ್ನು ಸಮರ್ಥವಾಗಿ ಕಲಿಸುವ ಮಾರ್ಗೋಪಾಯಗಳನ್ನು ತಿಳಿಸಿಕೊಡುತ್ತದೆ. * ಶಾಲಾ ಪಠ್ಯ ವಸ್ತುವಿನ ವಿಶಾಲ ಹಿನ್ನೆಲೆಯಲ್ಲಿ ಶೀಘ್ರವಾಗಿ ಶಾಲಾ ಮಕ್ಕಳನ್ನು ಸಾಕ್ಷಕರನ್ನಾಗಿಸುವುದರ ಮಹತ್ವವನ್ನು ತಿಳಿಸಿಕೊಡುತ್ತದೆ. ಘಟಕ - ೧: ಸಾಹಿತ್ಯ ತಾತ್ವಿಕ- ೫ ಗಂಟೆಗಳು * ಭಾಷೆಯ ಉದ್ದೇಶ - ತರಗತಿಯ ಒಳಗೆ; ಹೊರಗೆ * ಭಾಷೆ ಸಂವಹನ ಮತ್ತು ಚಿಂತನೆಯ ಮಾಧ್ಯಮ * ಭಾಷಾ ಪಠ್ಯಕ್ರಮ ಮತ್ತು ಇತರ ಪಠ್ಯ ಕ್ರಮಗಳಲ್ಲಿ ಭಾಷೆಯ ಬಳಕೆ ೬೧ ಪ್ರಾಯೋಗಿಕ- ೫ ಗಂಟೆಗಳು ಜನಪ್ರಿಯ ಟಿ.ವಿ ಕಾರ್ಯಕ್ರಮಗಳು, ಪತ್ರಿಕಾ ಲೇಖನ (ಸಮಾಚಾರ ಹಾಗೂ ಚಿಂತನಾ ಲೇಖನಗಳು, ಕಥೆ, ಕವನ) ಮತ್ತು ಸಿನಿಮಾ ಕಥೆಗಳ ಬಗ್ಗೆ ಚರ್ಚೆ * ಸಣ್ಣ ಕಥೆ, ಕವನ, ಪ್ರಬಂಧ - ಇವುಗಳ ಓದು ಮತ್ತು ಹಂಚಿಕೊಳ್ಳುವಿಕೆ (ಈ ಎರಡೂ ಚಟುವಟಿಕೆಗಳನ್ನು, ತಾತ್ವಿಕ ಕ್ಕೆ ಮುಂಚಿತವಾಗಿ ಮಾಡುವುದು * ಶಿಶು ಸಾಹಿತ್ಯ ಸಮೀಕ್ಷೆ - ಗ್ರಂಥಾಲಯ ಪ್ರಕಾಶನ ಮಾರುಕಟ್ಟೆ * ಸ್ಥಳೀಯ ಸಂಪನ್ಮೂಲಗಳ ಹುಡುಕಾಟ - (ಕಥೆ, ಕವನ, ಶಿಶು ಪ್ರಾಸ ಪದ್ಯಗಳು, ಅಭಿನಯ ಗೀತೆಗಳು, ಕಥನ ಗೀತೆಗಳು, ನಾಟಕಗಳು) * ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ (ಕಲಾವಿದರ) ಸಂದರ್ಶನ/ತನ್ಮೂಲಕ ಕಲಿಕೆ * ಸಮೀಕ್ಷೆ, ಸಂಪನ್ಮೂಲಗಳ ಹುಡುಕಾಟ ಮತ್ತು ಸಂದರ್ಶನಗಳನ್ನು, ಇದೇ ವರ್ಷದಲ್ಲಿ, ಯಾವಾಗ ಬೇಕಾದರೂ ಅಗತ್ಯ, ಅನುಕೂಲಕ್ಕನುಗುಣವಾಗಿ ನಡೆಸುವುದು ಪಠ್ಯ ಸಂವಹನಾ ಕ್ರಮ * ಪ್ರಶಿಕ್ಷಕರ ಸಾಹಿತ್ಯಾನುಭವ ಹಂಚಿಕೆ * ಪ್ರಶಿಕ್ಷಣಾರ್ಥಿಗಳ - ವಿವಿಧ ಸಾಹಿತ್ಯ ಪ್ರಕಾರಗಳ ಓದು; ಮಂಡನೆ (ಕನಿಷ್ಟ ಎರಡು ಪ್ರಕಾರ) (ಕವನ, ಕಥೆ, ಚಿಂತನಾ ಸಾಹಿತ್ಯ, ನಾಟಕ, ಜನಪ್ರಿಯ ಸಾಹಿತ್ಯ) * ಸ್ಥಳೀಯ ಸಂಪನ್ಮೂಲ (ಜನಪದ ಕಥೆ, ಹಾಡು, ನಾಟಕ, ಕಾವ್ಯ, ಗಾದೆ, ಒಗಟು, ಶಿಶು ಪ್ರಾಸ/ಶಿಶು ಪದ್ಯ) ಸಮೀಕ್ಷೆ * ಸಂಪನ್ಮೂಲ ವ್ಯಕ್ತಿ ಸಂದರ್ಶನ/ಪ್ರಸ್ತುತ ಪಡಿಸುವ ರೀತಿ ಕ್ರಮಗಳ ತಿಳುವಳಿಕೆ * ಅದೇ ರೀತಿಯಲ್ಲಿ ಪುನರ್ ಮಂಡನೆಗೆ ಪ್ರಯತ್ನ * ತಾತ್ವಿಕ ಅಂಶಗಳಿಗೆ ಸೂಕ್ತವಾದ ಲೇಖನಗಳ, ವಿಡೀಯೋಗಳ ವಿಮರ್ಶಾತ್ಮಕ ೬೨ ಓದು; ನೋಟ ನಂತರ, ಗುಂಪು ಚರ್ಚೆ, ತರಗತಿ ಚರ್ಚೆಗಳ ಮೂಲಕ ವಿವಿಧ ನೋಟಗಳು, ಅಭಿಪ್ರಾಯಗಳ ವಿನಿಮಯ. ಪ್ರಶಿಕ್ಷಣಾರ್ಥಿಗಳಿಗೆ ಸ್ವಂತವಾಗಿ ಚಿಂತಿಸಿ, ತಮ್ಮ ಚಿಂತನೆಯನ್ನು ಮುಕ್ತವಾಗಿ ಹಂಚಿಕೊಳ್ಳುವ ಅವಕಾಶ, ಪರಿಸ್ಥಿತಿಗನುಗುಣವಾಗಿ ಸಂಪನ್ಮೂಲಗಳ ಬದಲಾವಣೆ ಮೌಲ್ಯಾಂಕನ * ಭಾಗವಹಿಸುವಿಕೆ * ವರ್ಕ್‌ಶೀಟ್ * ಮುಕ್ತಾಂತ ಪ್ರಶ್ನಾವಳಿ * ಪ್ರಶ್ನೆಪತ್ರಿಕೆ ಘಟಕ _ ೨: ಆಲಿಸುವಿಕೆ ಮತ್ತು ಮೌಖಿಕ ಅಭಿವ್ಯಕ್ತಿ ತಾತ್ವಿಕ - ೮ ಗಂಟೆಗಳು * ಭಾಷಾ ಗಳಿಕೆ ಮತ್ತು ಭಾಷಾ ಕಲಿಕೆ - ಶಾಲಾ ಪೂರ್ವ ಮತ್ತು ಶಾಲಾ ಪ್ರಾರಂಭದ ವರ್ಷಗಳು; ಮಕ್ಕಳ ಹಿನ್ನಲೆ ಮತ್ತು ಶಾಲಾ ಅನುಭವ * ಮಗು, ಮಗುವಿನ ಮಾತು - ಒಂದು ಸಂಪನ್ಮೂಲವಾಗಬೇಕು * ವಿದ್ಯಾರ್ಥಿಯ ಶಕ್ತಿ ಮತ್ತು ಪ್ರತಿಕೂಲತೆ- ಇದರಿಂದ ವಿದ್ಯಾರ್ಥಿಯ ಆಲಿಸುವಿಕೆಗೆ/ ಅಭಿವ್ಯಕ್ತಿಗೆ ಆಗುವ ಪರಿಣಾಮ * ವಿವಿಧ ವಿದ್ಯಾರ್ಥಿಗಳ ಅಗತ್ಯತೆಗಳಿಗನುಗುಣವಾಗಿ ಸೂಕ್ತ ಸಂಪನ್ಮೂಲಗಳ ಸೃಷ್ಠಿ/ ಅನ್ವೇಷಣೆ/ಬಳಕೆ * ಆಟದ ಅರ್ಥ, ರೂಪುರೇಷೆ, ಆಟದ ವಿಧಗಳು * ಮಕ್ಕಳ ಭಾಷಾ ಗಳಿಕೆಯಲ್ಲಿ ಆಟದ ಪಾತ್ರ; ಮಕ್ಕಳ ಸಾಂಸ್ಕೃತಿಕ ಹಾಗೂ ಸಾಮಾಜಿಕ - ಆರ್ಥಿಕ ಹಿನ್ನೆಲೆಯಿಂದ, ಆಟಗಳಲ್ಲಿ ಕಾಣಬರುವ ವ್ಯತ್ಯಾಸಗಳು - ಇದರಿಂದ ಉಂಟಾಗುವ ಭಾಷಾ ವೈವಿಧ್ಯ
* ’ಆಟ-ಕಲಿಕೆ’ಯ ನಡುವಿನ ಸಂಬಂಧ * ಮಾನವನ ಜೀವನದಲ್ಲಿ ಕಥೆ ಪ್ರಾಯೋಗಿಕ- ೧೫ ಗಂಟೆಗಳು ಪ್ರಶಿಕ್ಷಣಾರ್ಥಿಗಳು ಸೂಚನೆಗಳನ್ನು ಗಮನವಿಟ್ಟು ಆಲಿಸಿ, ಅರ್ಥೈಸಿಕೊಂಡು ಅದನ್ನು ಪಾಲಿಸುವಂತಹ ಭಾಷಾ ಆಟಗಳನ್ನು ಆಡಬೇಕು. * ಪ್ರಶಿಕ್ಷಣಾರ್ಥಿಗಳಿಗೆ ಸಮಂಜಸವಾದ ಗಂಭೀರ ವಿಷಯದ ಬಗ್ಗೆ ಸಿ.ಡಿ ಆಲಿಸಿ ಅಥವಾ ಡಾಕ್ಯುಮೆಂಟರಿ ಚಿತ್ರವನ್ನು ನೋಡಿ ಅದರ ಆಧಾರದ ಮೇಲೆ ಚರ್ಚೆ ನಡೆಸಬೇಕು/ ಗ್ರಹಿಕೆಯ ಮೌಲ್ಯಮಾಪನಕ್ಕೆ ಪರೀಕ್ಷೆ ಬರೆಯಬೇಕು. * ೧ರಿಂದ ೪ನೇ ತರಗತಿಯ ಮಕ್ಕಳಿಗೆ ಕಥೆ ಹೇಳುವುದರ ಅವಶ್ಯಕತೆಯ ಬಗ್ಗೆ ಓದಿ, ಅದನ್ನು ಚರ್ಚಿಸಬೇಕು. ಪ್ರತಿಯೊಬ್ಬರೂ ಒಂದು ಕಥೆಯನ್ನು ಆಯ್ಕೆ ಮಾಡಿಕೊಂಡು ತರಗತಿಯಲ್ಲಿ ನಿರೂಪಿಸಬೇಕು. * ಪ್ರಶಿಕ್ಷಕರು ಆಯ್ಕೆ ಮಾಡಿದಂದು ವಿಷಯವನ್ನು ಸೆಮಿನಾರ್ ಶೈಲಿಯಲ್ಲಿ ಪ್ರಸ್ತುತ ಪಡಿಸಬೇಕು. * ತರಗತಿಯಲ್ಲಿ ಕಥೆ ಶಿಶು ಗೀತೆ, ಹಾಡು, ಕಿರುನಾಟಕ ಇವನ್ನು ನಿರೂಪಿಸಬೇಕು. * ಆಲಿಸುವ ಮತ್ತು ಮಾತನಾಡುವ ಅನೇಕ ಆಟಗಳನ್ನು ತರಗತಿಯಲ್ಲಿ ಬಳಕೆ ಮಾಡಿ ಅವುಗಳ ಸಮರ್ಪಕತೆಯ ಬಗ್ಗೆ ಚಿಂತನೆ ನಡೆಸಿ ಸಂಪನ್ಮೂಲಗಳ ಸೂಕ್ತತೆಯನ್ನು ವಿಶ್ಲೇಷಿಸಬೇಕು. ಇಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿಯ ಮಾತು ಸಂಪನ್ಮೂಲವಾದದ್ದನ್ನು ವಿಶೇಷವಾಗಿ ಗಮನಿಸಿ, ಅದನ್ನು ಹಂಚಿಕೊಳ್ಳಬೇಕು. * ಪ್ರಶಿಕ್ಷಣಾರ್ಥಿ ಮಕ್ಕಳ ಆಟವನ್ನು ಗಮನಿಸಿ, ವಿವರವಾಗಿ ದಾಖಲಿಸಬೇಕು - ದಾಖಲೆಯನ್ನು ನೋಡಿ ಭಾಷಾ ಉಪಯೋಗ, ವರ್ತನೆ, ವಿವಾದ ಪರಿಹಾರ, ಮಕ್ಕಳು ಉಪಯೋಗಿಸಿದ ಜನಪದ ಹಾಡು, ಆಟ, ಜನಪ್ರಿಯ ಮಾಧ್ಯಮಗಳ (ಟಿವಿ ಸೀರಿಯಲ್, ಸಿನೆಮಾ) ಪ್ರಭಾವ ಇತ್ಯಾದಿಗಳನ್ನು ವಿಶ್ಲೇಷಿಸಬೇಕು.
ಪಠ್ಯ ಸಂವಹನಾ ಕ್ರಮ * ಸ್ವ-ಅಧ್ಯಯನ * ಮಾಧ್ಯಮಗಳ ಬಳಕೆಯಿಂದ ಆಲಿಸುವಿಕೆ: ಧ್ವನಿ/ದೃಶ್ಯ ಮುದ್ರಣ * ಮಂಡನೆ - i) ಸೆಮಿನಾರ್ ಶೈಲಿಯಲ್ಲಿ ಮಂಡನೆ ii) ಚರ್ಚೆ iii) ನಾಟಕ iv) ಕವನ ವಾಚನ v) ಕಥಾ ನಿರೂಪಣೆ ಮೌಲ್ಯಾಂಕನ * ಪ್ರಶಿಕ್ಷಕರು ಪ್ರತೀ ಚಟುವಟಿಕೆಗೂ ವೀಕ್ಷಣಾ ತಪಶೀಲು ತಯಾರಿ ಮಾಡಿಟ್ಟುಕೊಂಡು ಅದರ ಪ್ರಕಾರವಾಗಿ ಮೌಲ್ಯಾಂಕನ ಮಾಡಬೇಕು. * ಕಂಪ್ಯೂಟರ್ ಬಳಸಿ/ಮೊಬೈಲ್ ಬಳಸಿ ತಮ್ಮ ಮಂಡನೆಯ ಧ್ವನಿ/ದೃಶ್ಯ ಮುದ್ರಣ ಮಾಡಿಕೊಂಡು ವಿಕ್ಷೀಸಿ ಸ್ವ - ಮೌಲ್ಯಮಾಪನ * ವಿವಿಧ ರೀತಿಯ ಮಂಡನೆಗೆ ಪ್ರಶಿಕ್ಷಕರು ಸೂಕ್ತ ರೂಬ್ರಿಕ್ಸ್ ತಯಾರಿಸಿ ಮೌಲ್ಯ ಮಾಪನ ಮಾಡಬೇಕು * ಇತರರ ಸೆಮಿನಾರ್ ಶೈಲಿಯ ಮಂಡನೆ ಮತ್ತು ಚರ್ಚೆಗಳಲ್ಲಿ ಭಾಗವಹಿಸುವಿಕೆ * ಕಥಾ ನಿರೂಪಣೆ - ಕಥೆಯ ಆಯ್ಕೆ, ನಿರೂಪಣಾ ಶೈಲಿಯ ಆಯ್ಕೆ, ಸಂಪನ್ಮೂಲ ತಯಾರಿಕೆ, ನಿರೂಪಣೆ ಮತ್ತು ಚಿಂತನೆ - ಸಹಪಾಠಿಗಳ ಹಿಮ್ಮಾಹಿತಿ - ಇದರಿಂದ ಕಲಿಯುವ/ನಿರೂಪಣೆಯನ್ನು ಉತ್ತಮ ಪಡಿಸಿಕೊಳ್ಳುವ ಅವಕಾಶ ೬೫ ಘಟಕ-೩: ಓದು ಮತ್ತು ಬರಹ ತಾತ್ವಿಕ - ೧೦ ಗಂಟೆಗಳು ಓದನ್ನು ಕಲಿಸುವ ಕ್ರಮಗಳು: * ಭಾಷೆ ಮತ್ತು ಸಮಾಜ - ಮಕ್ಕಳ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಭಾಷಾ ಹಿನ್ನೆಲೆಗೂ ಓದು - ಬರಹಕ್ಕೂ ಇರುವ ಸಂಬಂಧ * ಓದಿಗೆ ಪೂರ್ವ ಸಿದ್ಧತೆ (ಕಥೆ, big booಞ, ಶಿಕ್ಷಕರು ಗಟ್ಟಿಯಾಗಿ ಅರ್ಥವಾಗುವಂತೆ ಓದುವುದು, ಪದ-ಗೋಡೆ (ತಿoಡಿಜ - ತಿಚಿಟಟ) * ಓದುವಿಕೆಗೆ ತಂತ್ರಗಳು * ಸಕ್ರಿಯ ಓದುವಿಕೆಗೆ ಸಹಾಯವಾಗುವ ತಂತ್ರಗಳ/ಆಟಗಳ ಅಗತ್ಯತೆ * ಓದಿಗೆ ಮುಂಚೆ, ಓದುವಾಗಿನ ಮತ್ತು ಓದಿನ ನಂತರದ ಚಟುವಟಿಕೆಗಳು * ಓದನ್ನು ಪ್ರೋತ್ಸಾಹಿಸಲು ಸಹಾಯಕವಾಗುವ ತರಗತಿಯ ಲೈಬ್ರರಿ, ಓದಿನ ಕ್ಲಬ್‌ಗಳು - ಇದರ ಸ್ಥಾಪನೆ, ನಿರ್ವಹಣೆ * ಓದು ಮತ್ತು ಬರವಣಿಗೆಗೆ ಇರುವ ಸಂಬಂಧ * ಕಿರಿಯ ಪ್ರಾಥಮಿಕ ಹಂತದಲ್ಲಿ ಬರವಣಿಗೆಯ ಹಂತಗಳ (ತಂತ್ರಗಾರಿಕೆ) ಬಗ್ಗೆ ಅರಿವು * ಕಿರಿಯ ಪ್ರಾಥಮಿಕ ಹಂತದಲ್ಲಿ ಬರವಣಿಗೆ ಕಲಿಸುವ ವಿಧಾನ/ಕ್ರಮಗಳು * ಕಿರಿಯ ಪ್ರಾಥಮಿಕ ಹಂತದಲ್ಲಿ ಓದು, ಬರವಣಿಗೆಯ ಮೌಲ್ಯಮಾಪನ ಪ್ರಾಯೋಗಿಕ - ೨೦ ಗಂಟೆಗಳು * ವಿವಿಧ ರಿತಿಯ ಪ್ರಕಾರಗಳನ್ನು ’ಅರ್ಥೈಸಿ’ಕೊಳ್ಳುವುದಕ್ಕಾಗಿ ಓದುವುದು - ತೀರ್ಮಾನಿಸುವುದು, ವಿಶ್ಲೇಷಿಸುವುದು ಮತ್ತು ವ್ಯಾಪ್ತಿಯನ್ನು ಮೀರಿ ಅರ್ಥೈಸಿಕೊಂಡಿದ್ದು (exಣಡಿಚಿಠಿoಟಚಿಣioಟಿ) - ಈ ಅಂಶಗಳನ್ನು ತಾವು ಓದಿದ ಕಥೆ, ಕವನ ಇತ್ಯಾದಿಗಳ ಉದಾಹರಣೆಗಳಿಂದ ಅರ್ಥ ಮಾಡಿಕೊಳ್ಳುತ್ತಾರೆ. ೬೬ * ಓದನ್ನು ಪರಾಮರ್ಶೆಯ ಉಪಕರಣವಾಗಿ ಉಪಯೋಗಿಸುವುದು - ನಿಘಂಟು, ವಿಶ್ವಕೋಶ ಮತ್ತು ಅಂತರ್ಜಾಲದ ಬಳಕೆ * ಶಿಶು ಸಾಹಿತ್ಯ ಸಮೀಕ್ಷೆಯಿಂದ ತಮಗೆ ದೊರಕಿದ ಸಾಮಗ್ರಿಯಲ್ಲಿ ಸೂಕ್ತವಾದುದನ್ನು ಮಕ್ಕಳ ಓದಿಗೆ ಆಯ್ಕೆ ಮಾಡಿ, ಓದನ್ನು ಕಲಿಸಲು ಬಳಸುತ್ತಾರೆ. ಉದ್ದೇಶ ಸಫಲತೆಯನ್ನು ಅರಿಯಲು ಮೌಲ್ಯಮಾಪನ ಮಾಡಿ, ತಮ್ಮ ಆಯ್ಕೆಯನ್ನು ವಿಮರ್ಶೆಗೆ ಒಳಪಡಿಸಿಕೊಳ್ಳುತ್ತಾರೆ * ಪ್ರಶಿಕ್ಷಣಾರ್ಥಿಗಳು ತಾವು ಅಭ್ಯಾಸ ಬೋಧನೆಗೆ ಹೋದ ಸಮಯದಲ್ಲಿ ತರಗತಿ ಗ್ರಂಥಾಲಯ ಸ್ಥಾಪಿಸಬೇಕು. ಮಕ್ಕಳಿಗೆ ಪುಸ್ತಕಗಳನ್ನು ನೋಡಲು, ಓದಲು ಮುಕ್ತ ಸಮಯ ಮತ್ತು ಸ್ಥಳಾವಕಾಶ ನೀಡಿ, ಅವರು ತೆಗೆದುಕೊಂಡು ಓದಿದ ಪುಸ್ತಕಗಳ ಪ್ರಕಾರ, ಗುಣಮಟ್ಟ, ನಿರೂಪಣೆ, ಭಾಷಾ ಶೈಲಿಗಳನ್ನು ಗಮನಿಸಬೇಕು. * ಪ್ರಶಿಕ್ಷಣಾರ್ಥಿಗಳಿಗೆ ವಿವಿಧ ರೀತಿಯ ಬರವಣಿಗೆಗೆ ಅವಕಾಶ ನೀಡುವುದು - ಅರ್ಜಿಗಳು, ದೂರು, ಆಹ್ವಾನ ಪತ್ರಿಕೆ, ಸರ್ಕ್ಯುಲರ್, ನೋಟಿಸ್ ಇತ್ಯಾದಿ. * ಸ್ವತಂತ್ರ ಮತ್ತು ಸೃಜನಾತ್ಮಕ ಬರವಣಿಗೆಗೆ ಅವಕಾಶ ನೀಡಲು ಆಯೋಜಿಸಿ, ತರಗತಿಯಲ್ಲಿ ಪ್ರಯೋಗಿಸಿ, ಆ ಬರವಣಿಗೆಗಳನ್ನು ತಮ್ಮ ಸಹಪಾಠಿಗಳೊಡನೆ ಹಂಚಿಕೊಳ್ಳುತ್ತಾರೆ * ಪ್ರಶಿಕ್ಷಣಾರ್ಥಿಗಳು ’ದಿನಚರಿ’ ಬರೆಯಬೇಕು; ವ್ಯವಸ್ಥಿತ ದಾಖಲೆಯನ್ನು ಇಡುಬೇಕು (ತಾವು ಓದಿದ ಅಥವಾ ನೋಡಿದ ವಸ್ತು ವಿಷಯಕ್ಕೆ ಪ್ರತಿಕ್ರಿಯೆಯನ್ನು ದಾಖಲಿಸುತ್ತಾರೆ. ಇದಲ್ಲದೆ, ಅಭ್ಯಾಸ ಬೋಧನೆ ಸಮಯವನ್ನು ಆದ ಪ್ರಸಂಗಗಳನ್ನು ಸಹ ದಾಖಲಿಸುತ್ತಾರೆ)* * ಪ್ರಶಿಕ್ಷಣಾರ್ಥಿಗಳ ಸ್ವ - ಅನುಭವ ಲೇಖನಗಳನ್ನು ಮತ್ತು ಸೃಜನಶೀಲ ಬರವಣಿಗೆಯನ್ನು (ಕಥೆ, ಕವನ ಇತ್ಯಾದಿಗಳನ್ನು) ‘ಶಿಕ್ಷಣ ಮೂಲ ಪರಿಕಲ್ಪನೆಗಳ ಪರಿಚಯ’ ತರಗತಿಯಲ್ಲಿ ಚರ್ಚೆಗೆ ಬಳಸಬೇಕು ಪಠ್ಯ ಸಂವಹನಾ ಕ್ರಮ * ಪ್ರಶಿಕ್ಷಣಾರ್ಥಿಗಳ ಲೇಖನಗಳ ವಿವಿಧ ಶೈಲಿಯ ಮಂಡನೆಗೆ ಪ್ರೋತ್ಸಾಹ, ಸಹಕಾರ * ಸಂಬಂಧಿತ ತಾತ್ವಿಕ ಲೇಖನಗಳ ಓದು, ಚರ್ಚೆ * ಪ್ರಶಿಕ್ಷಣಾರ್ಥಿಗಳು ತಮ್ಮ ಅನುಭವಗಳನ್ನು ಬರೆದು, ತಮ್ಮ ಬರವಣಿಗೆಯನ್ನು ತಾವು
ಓದುಗರಾಗಿ ಓದಿ ಸ್ವ-ವಿಮರ್ಶೆಗೊಳಪಡಿಸಿ ತಿದ್ದುಪಡಿ ಮಾಡುತ್ತಾರೆ. ಪರಿಷ್ಕೃತ ಪ್ರತಿಯನ್ನು ಸಹಪಾಠಿಗಳೊಂದಿಗೆ ಹಂಚಿಕೊಂಡು ಅಭಿಪ್ರಾಯ ತಿಳಿಯುತ್ತಾರೆ. ಪ್ರಶಿಕ್ಷಕರ ಮಾರ್ಗದರ್ಶನದೊಂದಿಗೆ ತಿದ್ದುಪಡಿಗಳನ್ನು ಮಾಡಿಕೊಳ್ಳಬೇಕು * ಭಾಷಾ ಆಟಗಳು-ಪ್ರಶಿಕ್ಷಕರು ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸುವುದು * ಪ್ರಶಿಕ್ಷಣಾರ್ಥಿಗಳು ಶಾಲಾ ಮಕ್ಕಳಿಗೆ ಆಯೋಜಿಸುವುದು. ಪ್ರಶಿಕ್ಷಣಾರ್ಥಿಗೆ ಚರ್ಚೆ, ಕರಡು ಪ್ರತಿ, ಸಂಪಾದಿಸುವುದು, ತಿದ್ದುವುದು, ಮರು ವಿನ್ಯಾಸಗೊಳಿಸುವುದು, ಪ್ರಕಟಿಸುವುದು/ಪ್ರದರ್ಶಿಸುವುದು ಇಂತಹ ಪ್ರಕ್ರಿಯೆಗಳಿಗೆ ಅವಕಾಶ ಮಾಡಿ ಕೊಡಬೇಕು. ಕ್ಲಾಸ್ ಟಾಕ್ ನಿರೂಪಣಾ ಸಾಹಿತ್ಯಕ್ಕೂ ಮತ್ತು ವಿವರಣಾ ಸಾಹಿತ್ಯಕ್ಕೂ ಇರುವ ವ್ಯತ್ಯಾಸ ಮೌಲ್ಯಾಂಕನ * ಓದಿನ ಸಾಮಗ್ರಿಗಳ ಮೇಲೆ ವರ್ಕ್‌ಶೀಟ್ * ಭಾಗವಹಿಸುವಿಕೆ * ಭಾಷಾ ಆಟಗಳ ಮೌಲ್ಯಮಾಪನ ಘಟಕ-೪: ಭಾಷಾ ಶಿಕ್ಷಣ ಶಾಸ್ತ್ರ ಪ್ರಾರಂಭಿಕ ಸಾಕ್ಷರತೆ ತಾತ್ವಿಕ - ೧೫ ಗಂಟೆಗಳು * ಮಕ್ಕಳ ಭಾಷಾ ಕಲಿಕೆ - ಶಾಲಾ ಪೂರ್ವ ಮತ್ತು ಶಾಲೆಯ ಮೊದಲ ಹಂತದ ಬೆಳವಣಿಗೆಗೆ, ಮಕ್ಕಳ ಹಿನ್ನೆಲೆ ಮತ್ತು ಶಾಲಾ ಅನುಭವದ ಪರಿಣಾಮ * ಮನೆಯ ಭಾಷೆಯಿಂದ ಶಾಲಾ ಭಾಷೆಗೆ ಹೊಂದಿಕೊಳ್ಳುವುದು * ಸಾಕ್ಷರತೆಯ ಅವಿಚ್ಛಿನ್ನ sಸರಣಿ  ಯ ಬಗ್ಗೆ ತಿಳಿಯಬೇಕು_ ಮಾತು, ಆಟ, ಲೇಖನ, ದೃಶ್ಯ ಮಾಧ್ಯಮ, ಓದುವುದು ಮತ್ತು ಬರವಣಿಗೆ ೬೮ * ಭಾಷಾ ಕಲಿಕಾ ವಿಧಾನ - ಪ್ರತ್ಯಕ್ಷ ವಿಧಾನ * ಸಂಪೂರ್ಣ ಭಾಷಾ ವಿಧಾನ * ಮಕ್ಕಳ ಹಕ್ಕು ಕಾಯಿದೆಯ ಸಂದರ್ಭದಲ್ಲಿ ಪ್ರಾರಂಭಿಕ ಸಾಕ್ಷರತೆಯ ಮಹತ್ವ * ಪ್ರಾರಂಭಿಕ ಸಾಕ್ಷರತೆಯ ಬಗ್ಗೆ ಇರುವ ಲೇಖನಗಳ ಓದು ಮತ್ತು ಇದರ ಪರಿಣಾಮದ ಬಗ್ಗೆ ಚಿಂತನೆ * ಭಾಷಾ ಸಮೃದ್ಧ ತರಗತಿ * ಸಂಪನ್ಮೂಲಗಳ ಆಯ್ಕೆ - ವಿಧ ಮತ್ತು ಸೂಕ್ತತೆ * ತರಗತಿಯಲ್ಲಿ ವೈವಿಧ್ಯತೆ ಮತ್ತು ಸಮೃದ್ಧ ಸಂಪನ್ಮೂಲಗಳ ಅವಶ್ಯಕತೆಗಳು * ನಮ್ಯ ಪಾಠ ಯೋಜನೆಯ ಅವಶ್ಯಕತೆ * ನಲಿ-ಕಲಿ ಪದ್ಧತಿಯ ತಾತ್ವಿಕ ಹಿನ್ನೆಲೆಯ ಅರಿವು; ಸಂಪನ್ಮೂಲಗಳ ಅವಲೋಕನ * ಭಾಷಾ ಕಲಿಕೆಯ ಮೌಲ್ಯಾಂಕನ - ಅಅಇ ಪ್ರಾಯೋಗಿಕ - ೨೦ ಗಂಟೆಗಳು ಪ್ರಶಿಕ್ಷಣಾರ್ಥಿಗಳು, ಸಮೀಕ್ಷೆಯಿಂದ ದೊರೆತ ಒಂದು ಕಥೆಯನ್ನು ಆರಿಸಿಕೊಳ್ಳುತ್ತಾರೆ. ಈ ಕಥಾ ನಿರೂಪಣೆಗೆ ಅಗತ್ಯವಾದ ಸಾಮಗ್ರಿಗಳನ್ನು ತಯಾರಿಸಿಕೊಂಡು, ಅದರ ಸುತ್ತ ಚಟುವಟಿಕೆಗಳನ್ನು ಯೋಜಿಸಬೇಕು * ಈ ಕಥೆಗೆ ಬೇಕಾದ ಓದುವ ಸಾಮಗ್ರಿಯನ್ನು ಹುಡುಕಬೇಕು/ತಯಾರಿಸಬೇಕು (ಃig ಃooಞ ಪರಿಕಲ್ಪನೆ) * ಪ್ರಶಿಕ್ಷಣಾರ್ಥಿಗಳು ವಿದ್ಯಾರ್ಥಿಗಳಿಗೆ ಹಾಡುವುದಕ್ಕೆ, ಕುಣಿಯುವುದಕ್ಕೆ, ಚಿತ್ರ ಬರೆಯುವುದಕ್ಕೆ ಮತ್ತು ಕರಕುಶಲತೆಗೆ ಅವಕಾಶ ಮಾಡಿಕೊಡಬೇಕು (ಸೂಕ್ತವಾದವುಗಳನ್ನು ಮಾತ್ರ) * ತರಗತಿಯ ವೈವಿಧ್ಯತೆಯು (ಕಲಿಕಾ, ಭಾಷಾ, ಜಾತಿ, ಲಿಂಗ) ಬಗ್ಗೆ ಚಿಂತಿಸಿ, ಅದನ್ನು ತಮ್ಮ ಸಹಪಾಠಿಗಳೊಂದಿಗೆ ಮತ್ತು ಪ್ರಶಿಕ್ಷಕರೊಂದಿಗೆ ಚರ್ಚಿಸಬೇಕು. ಇದರಲ್ಲಿ ಪ್ರಮುಖವಾಗಿ ಎಲ್ಲ ವಿದ್ಯಾರ್ಥಿಗಳನ್ನೂ ಕಲಿಕಾ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳುವುದರಲ್ಲಿ ಎದುರಾದ ಸವಾಲುಗಳು ಮತ್ತು ಅದರ ಪರಿಹಾರೋಪಾಯಗಳ ಬಗ್ಗೆ ಮಾತನಾಡಬೇಕು
* ಶಾಲಾ ಮಕ್ಕಳು, ಅವರ ಬಗ್ಗೆ/ ಕುಟುಂಬದ ಬಗ್ಗೆ/ ಮನೆಯ ಬಗ್ಗೆ/ ಊಟ ತಿಂಡಿಯ ಬಗ್ಗೆ/ ಅವರು ನೋಡುವ ಟಿವಿ ಕಾರ್ಯಕ್ರಮಗಳ ಬಗ್ಗೆ ಬರೆಯಲು ಪ್ರೋತ್ಸಾಹ ನೀಡಬೇಕು ಛಿ) ಪಠ್ಯ sಸಂವಹನಾ ಕ್ರಮ * ಉಪನ್ಯಾಸ * ವಿಮರ್ಶಾತ್ಮಕ ಓದುವಿಕೆ  ಮತ್ತು ಚರ್ಚೆ - ಓದುವ ದಾರಿಗಳ ಬಗ್ಗೆ * ಸಣ್ಣ ಗುಂಪು ಚರ್ಚೆ (೧) ತ್ವರಿತ ಸಾಕ್ಷರತೆಯ ಮಹತ್ವ (೨) ತತ್ವಾಂಶಗಳ ಅರಿವು (೩) ಪ್ರಶಿಕ್ಷಣಾರ್ಥಿಗಳ ವಿಶ್ವಾಸಾರ್ಹ(ಂuಣheಟಿಣiಛಿ) ಸಾಮಗ್ರಿಗಳ ಶೋಧನೆ (೪) ತಮ್ಮ ಅನುಭವಗಳ ಬಗ್ಗೆ ಚಿಂತನೆ ಮೌಲ್ಯಾಂಕನ * ಸಂಪನ್ಮೂಲಗಳ ಗುಣಮಟ್ಟದ ಮೌಲ್ಯಮಾಪನ * ಪ್ರಶಿಕ್ಷಣಾರ್ಥಿಗಳ ಚಿಂತನೆ ಮತ್ತು ಭಾಗವಹಿಸುವಿಕೆ * ವರ್ಕ್‌ಶೀಟ್ ಘಟಕ-೫: ಭಾಷಾ ತರಗತಿಯಲ್ಲಿ ಒಳಗೊಳ್ಳುವಿಕೆ ತಾತ್ವಿಕ - ೭ ಗಂಟೆಗಳು * ಒಳಗೊಳ್ಳುವಿಕೆ * ಎಲ್ಲ ರೀತಿಯ ಸಾಮರ್ಥ್ಯಗಳಿರುವ ವಿದ್ಯಾರ್ಥಿಗಳನ್ನು ಒಳಗೊಳ್ಳುವುದರ ಅವಶ್ಯಕತೆ ೭೦ * ಮಕ್ಕಳ ಸಾಮರ್ಥ್ಯಗಳನ್ನು ಗುರುತಿಸುವುದು  ಗುರುತಿಸುವ ಪ್ರಕ್ರಿಯೆಯಲ್ಲಿ ಮಕ್ಕಳ ಆಲಿಸುವಿಕೆ, ಮಾತು, ಓದು, ಬರಹ ಎಲ್ಲವನ್ನು ಪರೀಕ್ಷಿಸಲೇಬೇಕಾದ ಅಗತ್ಯ * ಮಕ್ಕಳ ವೈವಿಧ್ಯ ಅಗತ್ಯಗಳಿಗನುಗುಣವಾದ ಕಲಿಕಾ ಅನುಭವಗಳನ್ನು ನೀಡುವ ಅವಶ್ಯಕತೆ * ಮಕ್ಕಳ ವೈವಿಧ್ಯತೆಗಳಿಗೆ ಸ್ಪಂದಿಸುವ ತರಗತಿ ಆಚರಣೆಗಳು ಪ್ರಾಯೋಗಿಕ - ೧೫ ಗಂಟೆಗಳು * ಕರ್ನಾಟಕ ಸರ್ಕಾರ ತಯಾರಿಸಿರುವ ಂಐP ಪರಿಹಾರ ಬೋಧನಾ ಸಾಮಗ್ರಿಗಳ ಅಧ್ಯಯನ * ತರಗತಿಯ ವೈವಿಧ್ಯತೆಯ ಬಗ್ಗೆ ಶಾಲಾ ಶಿಕ್ಷಕರೊಡನೆ ಸಮಾಲೋಚನೆ * ಶಾಲೆಗಳಲ್ಲಿ ಪ್ರಕ್ರಿಯೆಗಳನ್ನು ಗಮನಿಸಿ ಅದರಲ್ಲಿ ತಾವು ಅಳವಡಿಕೊಳ್ಳಬಹುದಾದ ಅಥವಾ ಬದಲಾಯಿಸಬಹುದಾದ ಅಂಶಗಳನ್ನು ಪಟ್ಟಿಮಾಡಿ ಸಹಪಾಠಿಗಳೊಂದಿಗೆ ಚರ್ಚಿಸಬೇಕು. (ಕಲಾಶಿಕ್ಷಣ, Iಅಖಿ, ಒಳಗೊಳ್ಳುವ ಶಿಕ್ಷಣದ ಕೊಡುಗೆಗಳು) * ತರಗತಿಯ ವೈವಿಧ್ಯತೆಗೆ ಸೂಕ್ತವಾಗುವ ವಿಭಿನ್ನ ಸಂಪನ್ಮೂಲಗಳನ್ನು ತಯಾರಿಸಿ, ಉಪಯೋಗಿಸಿ ಅದರ ಸೂಕ್ತತೆಯನ್ನು ಅಧ್ಯಯನ ಮಾಡುವುದು (ಕಲಾಶಿಕ್ಷಣ, , ಒಳಗೊಳ್ಳುವ ಶಿಕ್ಷಣದ ಕೊಡುಗೆಗಳು) ಪಠ್ಯ ಸಂವಹನಾ ಕ್ರಮ * ತರಗತಿಯಲ್ಲಿ ಒಳಗೊಳ್ಳುವಿಕೆಯ ಕುರಿತಾದ ಲೇಖನಗಳ ಪರಿಶೀಲನೆ-ಚರ್ಚೆ * ಸಂಪನ್ಮೂಲ ಸಾಮಗ್ರಿಗಳ ಅಮೂಲಾಗ್ರ ಪರಿಶೀಲನೆ, ಚಿಂತನೆ * ಕಲೆ ಮತ್ತು ತಂತ್ರeನದ ಸಹಾಯದಿಂದ ಹೊಸ ಸಾಮಗ್ರಿಗಳ ರಚನೆ ಮತ್ತು ಶಿಕ್ಷಕರೊಂದಿಗೆ ಇದರ ಪ್ರಯೋU
ಕ್ಲಾಸ್ ಟಾಕ್ * ಮಕ್ಕಳನ್ನೇ ಸಂಪನ್ಮೂಲವಾಗಿ ಪರಿಗಣಿಸುವುದು * ಮಕ್ಕಳ ತರಗತಿಯ ಮಾತುಕತೆಯನ್ನು ಸಂಪನ್ಮೂಲವಾಗಿ ಪರಿಗಣಿಸುವುದು * ಡಯಾಗ್ನಾಸ್ಟಿಕ್ ಪರೀಕ್ಷೆ ಮತ್ತು ಮಕ್ಕಳ ಅರಿವಿನ ಮೌಲ್ಯ ಮಾಪನ - ಇವೆರಡರ ನಡುವಿನ ವ್ಯತ್ಯಾಸ (ಜiಜಿಜಿeಡಿeಟಿಛಿe beಣತಿeeಟಿ ಜiಚಿgಟಿosಣiಛಿ ಣesಣ ಚಿಟಿಜ ಚಿssessiಟಿg ಛಿhiಟಜಡಿeಟಿ uಟಿಜeಡಿsಣಚಿಟಿಜiಟಿg) ಮೌಲ್ಯಾಂಕನ * ಪ್ರಶಿಕ್ಷಣಾರ್ಥಿಗಳ ಅರಿವಿನ ಬಗ್ಗೆ ಪರೀಕ್ಷೆ (ಪ್ರಶ್ನೆ ಪತ್ರಿಕೆ) * ಗುಂಪಿನಲ್ಲಿ ಅವರ ಭಾಗವಹಿಸುವಿಕೆ, ಮುಂದಾಳತ್ವ (iಟಿiಣiಚಿಣive ಟಿoಣ ಟeಚಿಜeಡಿshiಠಿ), ಶಿಕ್ಷಕರೊಡನೆ ಸಹಭಾಗಿತ್ವವನ್ನು ಗಮನಿಸಿ ದಾಖಲಿಸಬೇಕು. ಪರಾಮರ್ಶನ ಸಾಹಿತ್ಯ * * ಸಾರ್ವಜನಿಕ ಶಿಕ್ಷಣ ಇಲಾಖೆ, ಪರಿಹಾರ ಬೋಧನೆ, ಕರ್ನಾಟಕ ಸರ್ಕಾರ ಮತ್ತು ಅಜೀಂ ಪ್ರೇಮ್‌ಜೀ ಫೌಡೇಶನ್ * ಹನೂರು ಕೃಷ್ಣಮೂರ್ತಿ, ಮುಷ್ತಾಕ್ ಬಾನು (ಸಂ) (೨೦೦೬). ಸುವರ್ಣ ಕಥಾ ಸಂಕಲನ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ * * ಜಿ. ಶಂ. ಪರಮಶಿವಯ್ಯ (ಸಂ) (೧೯೯೬). ದಕ್ಷಿಣ ಕರ್ನಾಟಕದ ಜಾನಪದ ಕಥೆಗಳು, ಸಾಹಿತ್ಯ ಅಕಾಡೆಮಿ, ನವದೆಹಲಿ * * ಜಿ. ಎಸ್. ಶಿವರುದ್ರಪ್ಪ (೧೯೯೭). ಸಮಗ್ರ ಕಾವ್ಯ, ಕಾಮಧೇನು, ಶೇಷಾದ್ರಿಪುರಂ,
ಜಿ. ಎಸ್. ಶಿವರುದ್ರಪ್ಪ (೧೯೯೭). ಸಮಗ್ರ ಕಾವ್ಯ, ಕಾಮಧೇನು, ಶೇಷಾದ್ರಿಪುರಂ, ಬೆಂಗಳೂರು * ೭೨ ಕಲೆಯಿಂದ ಕಲಿಕೆ. ನವಕರ್ನಾಟಕ ಪ್ರಕಾಶನ. *
18449 ನೊಂದಾಯಿತ ಬಳಕೆದಾರರು
7204 ಸಂಪನ್ಮೂಲಗಳು