ಸಮುದಾಯವೇ ಪೋಷಿಸುವ ಶಾಲೆ

ಕೊಡುಗೆ: editor_kn | Mar 4, 2013

ಹಿಂದೆ ಪ್ರತಿಹಳ್ಳಿಯಲ್ಲೂ ಒಂದೊಂದು ಕೂಲಿಮಠಗಳಿದ್ದವು.ಕೂಲಿ ಮಠ ಎಂದರೆ ಧಾರ್ಮಿಕ ಮಠವಲ್ಲ . ಊರಿನಲ್ಲಿ ಒಬ್ಬ ಉಪಾದ್ಯಾಯರು ನೆಲೆ ಊರುತ್ತಿದ್ದರು .ಆವರ ಜೀವನ ನಿರ್ವಹಣೆಗೆ ಬೇಕಾದ ಎಲ್ಲವನ್ನೂ ಊರಿನವರೇ ನೋಡಿಕೊಳ್ಳುತ್ತಿದ್ದರು. ಪ್ರತಿಯಾಗಿ ಊರಿನ ಮಕ್ಕಳಿಗೆ ಉಪಾದ್ಯಾಯರು ಅಕ್ಷರಾಭ್ಯಾಸ,ಮಗ್ಗಿ,ಅಮರಕೋಶ ಬಾಯಿಪಾಠ ನೀತಿಕಥೆಗಳು ಗಣಿತ  ಹೇಳಿಕೊಟ್ಟು ಊರಿನ ಜನರನ್ನು ವಿದ್ಯಾವಂತರನ್ನಾಗಿಸುತ್ತದ್ದರು.ಈಗ ಸರ್ಕಾರದ ಮಧ್ಯಪ್ರವೇಶದಿಂದ ಸಮುದಾಯ ಮತ್ತು ಶಾಲೆಯ ನಡುವಿನ ಸ್ನೇಹ ಸಂಬಂಧ ಕಡಿದು ಹೋಗಿದೆ.ಈಗ ಹಳ್ಳಿಗಳು ಮುಂದುವರಿದಿವೆ ಉಪಾಧ್ಯಾಯರನ್ನು ಸಲಹಬಲ್ಲ ಸಾಮರ್ಥ್ಯ ಹೊಂದಿವೆ.ನಾಲ್ಕನೇ ತರಗತಿ ವರೆಗಾದರೂ ಊರು ಸಲಹುವ ಶಾಲೆಗಳು ಮರುಕಳಿಸಬಾರದೆ?

18627 ನೊಂದಾಯಿತ ಬಳಕೆದಾರರು
7275 ಸಂಪನ್ಮೂಲಗಳು