ಬೇಕಾಗಿದೆ: ಬದಲಾವಣೆಗೆ ಓ ಗೊಡುವ ಮನಸ್ಸು

ಕೊಡುಗೆ: editor_kn | Aug 6, 2012

ಹಿಂದೆ ಶಿಕ್ಷಣ ವೆಂದರೆ ಬಹಳ ಆದರ್ಶ ವೃತ್ತಿಯಾಗಿತ್ತು. ಆಚಾರ್ಯ ದೇವೋಭವ ಎಂಬ ಭಕ್ತಿ ನಮ್ಮಸಂಪ್ರದಾಯವಾಗಿತ್ತು. ಬ್ರಿಟಿಷ್ ಮಾದರಿ ಶಿಕ್ಷಣ ನಮ್ಮ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯ ಬೇರನ್ನೇ ಕಿತ್ತು ಒಗೆದಿದ್ದರೆ, ಇತ್ತೀಚಿನ ವಾಣಿಜ್ಯೀಕರಣ ಶಿಕ್ಷಣವನ್ನು ಲಾಭದಾಯಕ ಉದ್ಯಮವನ್ನಾಗಿಸಿದೆ. ಇನ್ನು ಸರ್ಕಾರಿ ಶಾಲೆಗಳಲ್ಲಿ ಬೇರುಬಿಟ್ಟ ದುರವಸ್ಥೆ, ಕೆಟ್ಟ ಬೋಧನಾ ಪದ್ಧತಿಗಳು ದೈಹಿಕ ದಂಡನೆ ಮುಂತಾದವು, ಸರಕಾರವು ಮಧ್ಯ ಪ್ರವೇಶಿಸಿ ಸುವ್ಯವಸ್ಥೆಯನ್ನು ಜಾರಿಗೆ ತರುವಂತೆ ಮಾಡಿದೆ. ಇದರ ಫಲವಾಗಿ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದಿದೆ.ಈ ಬದಲಾವಣೆಗೆ ಪ್ರತಿರೋಧ ಈಗ ಅಲ್ಲಲ್ಲಿ  ಕಂಡುಬರುತ್ತಿದೆ. ರಾಷ್ಟ್ರೀಯ ಶಿಕ್ಷಣ ಚೌಕಟ್ಟು ಮತ್ತು ಶಿಕ್ಷಣ ಹಕ್ಕು ಕಾಯ್ದೆಯ ಸದುಪಯೋಗಗಳ ಬಗ್ಗೆ ಶಿಕ್ಷಕ ಸಮುದಾಯದ ಮನವೊಲಿಕೆಗೆ ಏನನ್ನು ಮಾಡಬಹುದು ಎಂಬುದು ಚರ್ಚೆಯ ವಿಷಯ. ಈ ಬಗ್ಗೆ ಸಮುದಾಯದ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗಿದೆ ಮತ್ತು ಚರ್ಚೆಯನ್ನು ಆಹ್ವಾನಿಸಲಾಗಿದೆ.   

18600 ನೊಂದಾಯಿತ ಬಳಕೆದಾರರು
7269 ಸಂಪನ್ಮೂಲಗಳು