ಇಂದು ಶಾಲಾ ಬೋಧನೆಗಳಲ್ಲಿ ತಂತ್ರಜ್ಞಾನದ ಪಾತ್ರವೇನು?

ಕೊಡುಗೆ: editor_kn | Sep 3, 2012

ನಮಗೆ ಬೇಕಿರಲಿ ಮತ್ತು ಬೇಡದಿರಲಿ ತಂತ್ರಜ್ಞಾನವು ಶರವೇಗದಿಂದ ನಮ್ಮ ವೈಯಕ್ತಿಕ ಹಾಗು ಸಾಮಾಜಿಕ ಬದುಕಿನಲ್ಲಿ ಪ್ರವೇಶಿಸಿ ಅನಿವಾರ್ಯ ಸಾಧನವಾಗುತ್ತಿದೆ ಶಾಲಾ ಬೋಧನೆಗಳಲ್ಲಿ ಅದನ್ನುಹೇಗೆ ಫಲಪ್ರದವಾಗಿ ಬಳಸಬಹುದು ? ಬಳಸಬೇಕೇ ಬೇಡವೇ ?

sapna patil's picture

ಇಡೀ ಜಗತ್ತಿಗೆ ಐ.ಟಿ ಪರಿಚಯಿಸಿದವರು ನಾವು , ನಮ್ಮ ಮಕ್ಕಳ ಕಲಿಕೆಯಲ್ಲಿ ತಂತ್ರಜ್ಞಾನದ ಬಳಕೆ ಮಾಡದಿದ್ದರೆ ಶರವೇಗದಿಂದ ಹೋಗುತ್ತಿರುವ ಜಗತ್ತಿನ್ನೊಂದಿಗೆ ಸ್ಪರ್ಧಿಸಲು ಹೇಗೆ ಸಾಧ್ಯ ? ತಂತ್ರಜ್ಞಾನದ ಬಳಕೆ ಅವಶ್ಯಕವಾಗಿ ಬೇಕಾಗಿದೆ.

ಶಿಕ್ಷಕರು ಸಾಮಾನ್ಯವಾಗಿ ಮಾಹಿತಿ ಸಂವಹನ ತಂತ್ರಜ್ಞಾನಗಳ ಬಳಕೆಯೂ ಆಡಳಿತಾತ್ಮಕ ಕಾರ್ಯಗಳಲ್ಲಿ ಬಳಸುವರು (ಶಿಕ್ಷಕರು ಸಾಮಾನ್ಯವಾಗಿ ಮಾಹಿತಿ ಸಂವಹನ ತಂತ್ರಜ್ಞಾನವನ್ನು ದೈನಂದಿನ ಕೆಲಸ ಗಳಲ್ಲಿ ಬಳಸುವರು (ದಾಖಲೆಗಳನ್ನು ಇಡುವುದು, ಪಠ್ಯ ಯೋಜನೆ ಅಭಿವೃದ್ಧಿ, ಮಾಹಿತಿಯ ಪ್ರದರ್ಶನ, ಅಂತರ್ಜಾಲದಲ್ಲಿ ಮೂಲ ಮಾಹಿತಿ ಹುಡುಕಲು).

• ವಿಜ್ಞಾನ ಬೋಧನೆಯಲ್ಲಿ 3 ಡಿ ಇಮೇಜ್ ಮತ್ತು ಗ್ರಾಫಿಕ್ ತಂತ್ರಜ್ಞಾನವನ್ನು ಬಳೆಸುವದರಿಂದ ಸುಲಭವಾಗಿ ಬೋಧಿಸ ಬಹುದು .
• ಕಂಪ್ಯೂಟರ್‌ನಲ್ಲಿ ದಾಖಲೆಗಳನ್ನು, ಮಾಹಿತಿಗಳನ್ನು, ಚಿತ್ರಗಳನ್ನು, ಇ-ಬುಕ್‌ಗಳನ್ನು, ಹಾಡುಗಳನ್ನು, ಮಕ್ಕಳಿಗೆ ತೋರಿಸುವ ಮೂಲಕ ಜ್ಞಾನ ವೃದ್ದಿ.
• ವಿದ್ಯಾರ್ಥಿಗಳು ಪ್ರೊಜೆಕ್ಟ್ ಸಿದ್ಧಗೊಳಿಸಲು, ಅಧ್ಯಯನ ಮಾಡಲು ಕಂಪ್ಯೂಟರ್‌ ಅಪ್ಲಿಕೇಶನ್ಗಳಳನ್ನು ಬಳಸಿಕೊಳ್ಳಬಹುದು. ಎಂಎಸ್ ವರ್ಡ್‌ನಂತಹ ಅಪ್ಲಿಕೇಶನ್‌ಗಳಲ್ಲಿ ಬರೆಯುವುದು, ತಿದ್ದುವುದು, ಹೊಂದಿಸುವುದು ಅತ್ಯಂತ ಸುಲಭವಾಗಿದ್ದು, ಕೈಬರಹಕ್ಕಿಂತ ಇದು ಅದು ಅತ್ಯಂತ ಸುಲಭ ಮತ್ತು ವೇಗದ್ದಾಗಿರುತ್ತದೆ.
• ಕಠಿಣವಾದ ಲೆಕ್ಕಗಳನ್ನು ಕಂಪ್ಯೂಟರ್ ಬಳಸಿ ಮಾಡುವುದು ಅತ್ಯಂತ ಸುಲಭವಾಗುತ್ತದೆ. ಕಲಿಕೆಯ ದೃಷ್ಟಿಯಿಂದ ಕಂಪ್ಯೂಟರ್ ಬಳಕೆ ಅತ್ಯಂತ ಪ್ರಯೋಜನಕಾರಿ.
• ಕಂಪ್ಯೂಟರ್‌ನಲ್ಲಿ ವೀಡಿಯೋ ಗೇಮ್ ಆಡುವುದು ಅತ್ಯಂತ ಮನರಂಜನೀಯವಾಗಿರುತ್ತದೆ. ಹೊಸ ಹೊಸ ಆಟಗಳನ್ನು ಕಂಪ್ಯೂಟರ್‌ನಲ್ಲಿ ಸ್ಥಾಪಿಸಿಕೊಂಡು ಆಡಬಹುದು.
• ಅಂತರಜಾಲವನ್ನು ಬಳಸಿ ಅಗತ್ಯ ಮಾಹಿತಿಗಳನ್ನು ಹುಡುಕಬಹುದು ಮತ್ತು ಅಂತರಜಾಲದಿಂದ ಪಡೆದ ಮಾಹಿತಿಗಳನ್ನು ಕಂಪ್ಯೂಟರ್ ಹಾರ್ಡ್ ಡ್ರೈವ್‌ಗಳಲ್ಲಿ ಶೇಖರಿಸಿ ಇಡಬಹುದು. ಇಮೇಲ್ ಮಾಡಲು, ಸಾಮಾಜಿಕ ಸಂವಹನ ನಡೆಸಲು ಬಳಸಬಹುದಾಗಿದೆ.
• ಕಂಪ್ಯೂಟರ್‌ನಲ್ಲಿ ಬರೆದದ್ದನ್ನು, ಇಂಟರ್ನೆಟ್‌ನಿಂದ ಡೌನ್‌‍ಲೋಡ್ ಮಾಡಿದ್ದನ್ನು ಬಾಹ್ಯ ಹಾರ್ಡ್‌ಡಿಸ್ಕ್‌ಗಳಾದ ಸಿಡಿ, ಡಿವಿಡಿ, ಪೆನ್‌ಡ್ರೈವ್ ಮುಂತಾದವುಗಳ ಮುಖಾಂತರ ಇತರರೊಂದಿಗೆ ಹಂಚಿಕೊಳ್ಳುವುದು ಅಥವಾ ಬೇರೊಂದು ಕಂಪ್ಯೂಟರ್‌ಗೆ ವರ್ಗಾಯಿಸುವುದು ಎಲ್ಲವೂ ಸುಲಭ.

editor_kn's picture

ತಂತ್ರಜ್ಞಾನ ಶಾಲೆಯಲ್ಲಿ ಬಳಸುವುದರ ವಿಚಾರಕ್ಕೆ ಬಂದಾಗ ಹಳ್ಳಿ ಮತ್ತು ನಗರಗಳ ನಡುವಿನ ಅಂತರ ತಂತ್ರಜ್ಞಾನದ ಲಭ್ಯತೆ ಆಧಾರದ ಮೇಲೆ ಇನ್ನೂ ಜಾಸ್ತಿ ಆಗುತ್ತಿದೆ. ಶಾಲೆಯಲ್ಲಿ ತಂತ್ರಜ್ಞಾನ ಬಳಸಲಿ ಬಳಸದಿರಲಿ ನಗರದ ಮಕ್ಕಳು ಅಂತರ್ಜಾಲದ ಪೂರ್ಣ ಉಪಯೋಗವನ್ನು ಮನೆಗಳಲ್ಲಿರುವ ಕಂಪ್ಯೂಟರ್ ಮೂಲಕ ಪಡೆದುಕೊಳ್ಳುತ್ತಾರೆ.ಇನ್ನು ಹಳ್ಳಿಗಳಲ್ಲಿ ಅಂತರ್ಜಾಲಕ್ಕೆ ಬೇಕಾದ ದೂರವಾಣಿಯ ಪ್ರಬಲ ತರಂಗಗಳು ದೊರೆಯದೇ ಇರುವ ಕಾರಣ ತೊತ್ರಜ್ಞಾನದ ಬಳಕೆ ದೂರದ ಮಾತಾಯಿತು.

18592 ನೊಂದಾಯಿತ ಬಳಕೆದಾರರು
7257 ಸಂಪನ್ಮೂಲಗಳು