ವಿಷಯಗಳನ್ನು ಸಲ್ಲಿಸಲು ಮಾರ್ಗಸೂಚಿಗಳು

ವಿಷಯಗಳನ್ನು ಸಲ್ಲಿಸಲು ಮಾರ್ಗಸೂಚಿಗಳು

   ಶಿಕ್ಷಕರು ಪರಸ್ಪರ ವಿಚಾರ ವಿನಿಮಯ ನಡೆಸಿ, ಚರ್ಚಿಸಿ, ಚಿಂತನೆ ನಡೆಸಲು ಮತ್ತು ಸಂಪನ್ಮೂಲ ರಚಿಸಿ ಹಂಚಿಕೊಳ್ಳಲು www.teachersofindia.org   ಒಂದು ವೇದಿಕೆಯಾಗಿದೆ.  ಭಾರತದಾದ್ಯಾಂತ ಇರುವ ಸರ್ಕಾರಿ ಶಾಲೆಗಳ ಪ್ರಾಥಮಿಕ ಶಾಲಾ ಉಪಾಧ್ಯಾಯರು ಈ ಪೋರ್ಟಲ್ಲಿನ ಉದ್ದೇಶಿತ ಓದುಗವರ್ಗ ಅವರಿಗೆ ಅವರವರ ಮಾತೃಭಾಷೆಯಲ್ಲಿ ವಿಷಯಗಳನ್ನು ಒದಗಿಸುವುದು ನಮ್ಮ ಉದ್ದೇಶ ಮತ್ತು ಕಾರ್ಯನೀತಿ.  ಈಗ ಈ ಪೋರ್ಟಲ್ ಅನ್ನು ಇಂಗ್ಲೀಷ್ ಜೊತೆಯಲ್ಲಿ ನಾಲ್ಕು ಪ್ರಮುಖ ಭಾರತೀಯ ಭಾಷೆಗಳಲ್ಲಿ ತರುತ್ತಿದ್ದೇವೆ.  ಈ ಪ್ರತಿಯೊಂದು ಭಾಷೆಯಲ್ಲಿನ ವಿಷಯ ಸಾಮಾಗ್ರಿಯು ಇತರೇ ಭಾಷಾ ಗುಂಪುಗಳಿಗೂ ಉಪಯುಕ್ತವಾಗುವಂತೆ ಮಾಡಲು ನಾವು ಶ್ರಮಿಸುತ್ತಿದ್ದೇವೆ.

     ಪೋರ್ಟಲ್ಲಿನ ಪ್ರಕಟಿತ ವಿಷಯಗಳು ಪ್ರತಿಯೊಂದು ಭಾಷೆಯ ಉಪಾಧ್ಯಾಯರಿಗೆ ಅನುಕೂಲಕರವಾಗುವಂತೆ ಮತ್ತು ಉಪಯುಕ್ತವಾಗುವಂತೆ ಮಾಡಲು ಮತ್ತು ವಿಷಯ ಪ್ರವಹನೆ ಸರಾಗವಾಗಿ ಆಗುವಂತೆ ಮಾಡಲು ಈ ಮುಂದಿನ ಮಾರ್ಗ ಸೂಚಿಗಳನ್ನು ರಚಿಸಲಾಗಿದೆ.  ಈ ಪೋರ್ಟಲ್ಲಿನ ಎರಡು ಪ್ರಮುಖ ವಿಷಯ ವಿಭಾಗಗಳೆಂದರೆ ಶಿಕ್ಷಕ ಸಮುದಾಯಗಳು ಮತ್ತು ಸಂಪನ್ಮೂಲಗಳು.

     ನೀವು ಯಾವುದೇ ಲೇಖನ ಇತ್ಯಾದಿಗಳನ್ನು ಸಲ್ಲಿಸುವುದಕ್ಕಿಂತ ಮುಂಚೆ ನಮ್ಮ ವಿಷಯ ಕಾರ್ಯನೀತಿಯನ್ನು ದಯವಿಟ್ಟು ಓದಿರಿ.

ಸಮುದಾಯಗಳು

     ಶಿಕ್ಷಕರ ನಡುವೆ ಮುಕ್ತ ಕೊಳ್ಕೊಡೆ ನಡೆಯುವಂತೆ ಮಾಡಲು ಶಿಕ್ಷಕ ಸಮುದಾಯಗಳು ಎಂಬುದು ತೆರೆದ ವೇದಿಕೆಯಾಗಿದೆ.  ಇದರಲ್ಲಿ ಪ್ರಕಟವಾಗುವ ವಿಷಯಗಳನ್ನೆಲ್ಲಾ ಬಳಕೆದಾರರೇ ತಯಾರಿಸುತ್ತಾರೆ.  ಇಲ್ಲಿನ ಭಾಷೆ ಮತ್ತು ವಿಷಯಗಳ ಔಚಿತ್ಯದ ರಕ್ಷಣೆಗಾಗಿ ಮಾತ್ರ ಇವುಗಳ ಸಂಪಾದನಾ ಕಾರ್ಯವನ್ನು ತೀರ ಕಡಿಮೆ ಪ್ರಮಾಣದಲ್ಲಿ ಮಾಡಲಾಗುವುದು.  ಶಿಕ್ಷಣ ಮತ್ತು ಅಭಿವೃಧ್ಧಿ ಕುರಿತು  ಮಹತ್ವ ಪೂರ್ಣವಾದ ವಿಚಾರಗಳ ಬಗ್ಗೆ ಪ್ರಬುದ್ಧ ಸಂಭಾಷಣೆಯನ್ನು ಉತ್ತೇಜಿಸಲು www.teachersofindia.org ಉದ್ದೇಶಿಸಿದೆ. ಆದ್ದರಿಂದ ದಯವಿಟ್ಟು  ವಿವೇಕಯುತ ವಿಚಾರ ವಿನಿಮಯಕ್ಕೆ ಅನುವುಮಾಡಿಕೊಡಿ.  ಆದಷ್ಟು ಹೆಸರಿಟ್ಟು  ದೂಷಿಸುವುದು, ಅಶ್ಲೀಲತೆ ಮತ್ತು ನಿಂದನೆ ಇವುಗಳಿಗೆ ಎಡೆಇಲ್ಲದೆ ಸಂವಾದ ನಡೆಸಿ.  ಹಾಸ್ಯ ಪ್ರಜ್ಞೆಗೆ ಸದಾ ಸ್ವಾಗತವಿದೆ.:-)

 ಸಂಪನ್ಮೂಲಗಳು:  ನಮ್ಮ ಪೋರ್ಟಲ್ಲಿ ನಲ್ಲಿ ಪ್ರಕಟವಾಗುವ ವಿವಿಧ ಬಗೆಯ ಸಂಪನ್ಮೂಲಗಳು ಸ್ಥೂಲವಾಗಿ ಈ ಎರಡು ಪ್ರವರ್ಗಗಳಲ್ಲಿ ಬರುತ್ತವೆ: ತರಗತಿ ಸಂಪನ್ಮೂಲಗಳು: ಇವನ್ನು ಶಿಕ್ಷಕರು ತಮ್ಮ ತರಗತಿಗಳಲ್ಲಿ ಪಾಠ ಮಾಡಲು ಬಳಸಿಕೊಳ್ಳಬಹುದು. ಶಿಕ್ಷಕಾಭಿವೃದ್ಧಿ ಸಂಪನ್ಮೂಲಗಳು: ಇವು  ಶಿಕ್ಷಕರು ವೃತ್ತೀಯವಾಗಿ ಬೆಳೆಯಲು ಸಹಾಯ ಮಾಡುತ್ತವೆ.ಸಂಪನ್ಮೂಲಗಳು ವಿವಿಧ ಬಗೆಗಳಲ್ಲಿ ಇರಬಹುದು.-ಲೇಖನಗಳು, ದೃಶ್ಯನಿರೂಪಣೆಗಳು, ಧ್ವನಿ ನಿರೂಪಣೆಗಳು ಇತ್ಯಾದಿ.  

  ಪೋರ್ಟಲ್ಲಿ ನಲ್ಲಿ ಪ್ರಕಟಿತ ಸಂಪನ್ಮೂಲಗಳು ಸಂದರ್ಭೋಚಿತವಾಗಿರಬೇಕು:  ಹೀಗಿದ್ದರೂ ಎತ್ತಿದ ವಾದಗಳು ಮತ್ತು ಅದನ್ನು ಟೀಕಿಸಿ ಬರೆದ ಅಂಶಗಳು ಬಹಳ ಕಾಲ ಉಳಿಯುವಂತಹವಾಗಿರಬೇಕು ಮತ್ತು ಮುಂದೆ ಬಳಸುವವರಿಗೆ ಸಂಪನ್ಮೂಲ ವಿಷಯವಾಗಿ ಬಳಸಬಹುದಾಗಿರಬೇಕು. ಸಂಪನ್ಮೂಲಗಳನ್ನು ಪೋರ್ಟಲ್ಲಿಗೆ ಅಂತರ್ಜಾಲ ಮೂಲಕ(ಆನ್ಲೈನ್ ಆಗಿ) ಅಥವಾ ಪೋರ್ಟಲ್ ತಂಡದ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಕೊರಿಯರ್ ಮೂಲಕ ಕಳುಹಿಸಿಕೊಡಬಹುದು.

 ಸಂಪನ್ಮೂಲಗಳನ್ನು ಮೂರು ವಿಧಾನಗಳಲ್ಲಿ ಸಲ್ಲಿಸಬಹುದು:    

1. " ಸಂಪನ್ಮೂಲ ಒದಗಿಸಿ "ಅನ್ನು ಕ್ಲಿಕ್ ಮಾಡಿ ಪೋರ್ಟಲ್ಲಿ ನಲ್ಲಿ ಸಲ್ಲಿಸಬಹುದು.

(ಇದೇ ಅತ್ಯಂತ ಉತ್ತಮ ವಿಧಾನ, ಇದರಿಂದ ಅದರ ಪರಿಶೀಲನೆ ಕಾರ್ಯ ಸುಲಭವಾಗುತ್ತದೆ ಮತ್ತು ನಿಮ್ಮ ಸಂಪನ್ಮೂಲವು ಪೋರ್ಟಲ್ಲಿ ನಲ್ಲಿ ವೇಗವಾಗಿ ಪ್ರಕಟವಾಗುತ್ತದೆ.)

2.  teachers@azimpremjifoundation.org  ಗೆ ಇ- ಮೇಲ್ ಮೂಲಕ ಕಳುಹಿಸಿ.

(ಅದನ್ನು ಲಗತ್ತಾದ ಕಡತಗಳ ರೀತಿಯಲ್ಲಿ  ಕಳುಹಿಸಿ ಇಡೀ ಪಾಠವನ್ನು ಇ ಮೇಲ್ ನ  ಒಡಲಿನಲ್ಲಿ ಅಂಟಿಸಬೇಡಿ.  ನಿಮ್ಮ ಸಂಪನ್ಮೂಲವನ್ನು Microsoft Word ಅಥವಾ Open Office Writer  ನಂತಹ ಪದ ಸಂಸ್ಕರಣ ತಂತ್ರಾಂಶ ಬಳಸಿ ಬೆರಳಚ್ಚು ಮಾಡಿ ಮತ್ತು ಸದರಿ ಕಡತವನ್ನು ಲಗತ್ತಿಸಿ. ಯಾವುದಾದರೂ ತುರ್ತು ಸ್ಪಷ್ಟೀಕರಣ ಬೇಕಿದ್ದರೆ ನಿಮ್ಮನ್ನು ಸಂಪರ್ಕಿಸಲು ನಿಮ್ಮ ಇ ಮೇಲ್ ನಲ್ಲಿ ನಿಮ್ಮ ದೂರವಾಣಿ ಸಂಖ್ಯೆಯನ್ನು ಸೇರಿಸಿರಿ.)

3. ಅಂಚೆ ಮೂಲಕ ಅಥವಾ ಕೋರಿಯರ್ ಮೂಲಕ :  ಸಂಪಾದಕರು (ಕನ್ನಡ), Teachers of India, Azim Premji Foundation, 134,  ದೊಡ್ಡ ಕನ್ನೆಲ್ಲಿ, ಸರ್ಜಾಪುರ ರಸ್ತೆ, ಬೆಂಗಳೂರು 560 033, ದೂ.ವಾ. 080-66-144-900 ಗೆ  (ಅದರಲ್ಲಿ ನಿಮ್ಮ ಅಂಚೆ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಬರೆಯಿರಿ.  ಮುದ್ರಿತ ಮತ್ತು ಕೈ ಬರಹದ ಪ್ರತಿಗಳು ಎರಡನ್ನೂ ನಾವು ಸ್ವೀಕರಿಸುತ್ತೇವೆ.  ಅವು ಅಚ್ಚುಕಟ್ಟಾದ ಮತ್ತು ಎರಡು ಸಾಲು ಅಂತರವುಳ್ಳ ಪ್ರತಿಗಳಾಗಿರತಕ್ಕದ್ದು ಸುತ್ತಲೂ 1.2" ಮಾರ್ಜಿನ್ ಇರಬೇಕು.  ಕಾಗದದ ಒಂದು ಮಗ್ಗುಲಿನಲ್ಲಿ ಬರೆಯಿರಿ ಅಥವಾ ಮುದ್ರಿಸಿ. ನೀವು ಅಡಕ ಮುದ್ರಿಕೆ (ಸಿ.ಡಿ) ಕಳುಹಿಸುತ್ತಿದ್ದರೆ, ಸಿ.ಡಿ.ಯ ಮೇಲೆ ಅದರಲ್ಲಿರುವ ವಿಷಯದ ಸಾರಾಂಶವನ್ನು ಬರೆಯಿರಿ.  ನಿಮ್ಮ ಹೆಸರು ಮತ್ತು ಸಂಪರ್ಕ ಸಂಖ್ಯೆಯನ್ನೂ ಬರೆಯಿರಿ. ತುರ್ತು ಸ್ಪಷ್ಟೀಕರಣ ಬೇಕಿದ್ದರೆ ನಿಮ್ಮನ್ನು ಸಂಪರ್ಕಿಸಲು ಮತ್ತು ಸಂಪನ್ಮೂಲವನ್ನು ಬೇಗನೆ ಮೇಲುನಕಲು ಮಾಡಲು ಇದು ಸಹಾಯ ಮಾಡುತ್ತದೆ).

ಉಪಯುಕ್ತ ಕಡತ ನಾಮಗಳನ್ನು ನೀಡಿ:  ನೀವು ಇಮೇಲ್ ಅಥವಾ ಅಡಕ ಮುದ್ರಿಕೆಗಳಲ್ಲಿ ಕಡತಗಳನ್ನು ಕಳುಹಿಸುವಾಗ ನಮಗೆ ಕಡತದಲ್ಲಿರುವ ವಿಷಯವನ್ನು ಗುರುತಿಸುವುದು ಸಾಧ್ಯವಾಗುವಂತೆ ಅದಕ್ಕೆ ಒಂದು ಕಡತ ನಾಮವನ್ನು ಕೊಡಲು ಮರೆಯದಿರಿ.  ನಮ್ಮ ಸಂಪಾದಕರು ಅನೇಕ ಭಾಷೆಯ ಅನೇಕ ವಿಷಯಗಳನ್ನು ಮತ್ತು ವಿವಿಧ ಶಾಲಾ(ತರಗತಿ) ಮಟ್ಟದ ವಿಷಯ ಸಾಮಾಗ್ರಿಗಳನ್ನು ನಿರ್ವಹಿಸ ಬೇಕಾಗಿರುವುದರಿಂದ ಇದನ್ನು ದಯವಿಟ್ಟು ಬಹಳ ಮುಖ್ಯ ಎಂದು ಪರಿಗಣಿಸಿರಿ.

ಇಮೇಲ್ ಗಳಲ್ಲಿ ಬಹಳ ಸ್ಪಷ್ಟವಾದ ಮತ್ತು ಆರ್ಥಪೂರ್ಣವಾದ ವಿಷಯಸೂಚಿಗಳನ್ನು ಇಮೇಲ್ ನ ವಿಷಯ ವಾಗಿ ಬರೆಯಿರಿ.

  ಅಡಕ ಮುದ್ರಿಕೆಯ ಮೇಲೆ ಅದರಲ್ಲಿನ ವಿಷಯದ ಬಗ್ಗೆ ಅರ್ಥ ಪೂರ್ಣವಾದ ಸೂಚಕಗಳನ್ನು ಬರೆಯಿರಿ. ಅಡಕ ಮುದ್ರಿಕೆ (ಸಿ.ಡಿ) ಮೇಲೆ ನಿಮ್ಮ ಹೆಸರು ಹಾಗೂ ದೂರವಾಣಿ ಸಂಖ್ಯೆ ಬರೆಯಿರಿ.  ಇದರಿಂದ ನಿಮ್ಮನ್ನು ಬೇಗನೆ ಸಂಪರ್ಕಿಸಿ ನಮ್ಮ ಸಂದೇಹಗಳನ್ನು ಪರಿಹರಿಸಿಕೊಂಡು ಸಂಪನ್ಮೂಲಗಳನ್ನು ಬೇಗನೆ  ಮೇಲು ನಕಲು ಮಾಡುವುದು ಸಾಧ್ಯವಾಗುತ್ತದೆ.

ಕಡತ ನಾಮಗಳು/ಇಮೇಲ್ ವಿಷಯಗಳು/ಸಿ.ಡಿ.ಶೀರ್ಷಿಕೆಗಳಿಗೆ ಕೆಲವೊಂದು ಸಲಹೆಗಳು:-

     ನಿಮ್ಮ ಭಾಷೆ ಮತ್ತು ನಿಮ್ಮ ರಾಜ್ಯದ ಹೆಸರು ಸೇರಿಸಿ, ನೀವು ಒದಗಿಸುತ್ತಿರುವ ಸಂಪನ್ಮೂಲದ  ವಿಷಯ ಒಳ ವಿಷಯಗಳ ಸೂಚಕಗಳನ್ನು ಮತ್ತು ನಿಮ್ಮ ಹೆಸರನ್ನು ಬರೆಯಿರಿ.

ಉದಾಹರಣೆ:

Hindi-MP-EVS-Reptiles-lesson plan-Uday

Hindi-UP-Maths-Addition-worksheet-Suneeti Chakravarthy

Tamil-Puducherry-English language-game-Selvarajan

Tamil-Tamil Nadu-Science-photosynthesis-video-Vasumathi

ತೀರ ಮುಖ್ಯವಾದ ಮಾಹಿತಿ ಸೇರಿಸಿರಿ

   ಪ್ರತಿಯೊಂದು ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ಕೆಲವೊಂದು ಪ್ರಾಥಮಿಕ ಮಾಹಿತಿಗಳು ಕೊಟ್ಟರೆ ಅವು ನಮ್ಮ ಸಂಪಾದಕರು ಅವುಗಳನ್ನು ವೇಗವಾಗಿ ಮತ್ತು ದಕ್ಷತೆಯಿಂದ ಪರಿಶೀಲಿಸಿ ಮುಂದಿನ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತದೆ.  ನೀವು ಕಳುಹಿಸುವ ಯಾವುದೇ ಸಂಪನ್ಮೂಲದ  ಆವರಕ ಟಿಪ್ಪಣಿಯಾಗಿ ಅಥವಾ ಅದರ ಮೊದಲ ಭಾಗದಲ್ಲಿ ಈ ಮುಂದಿನ ವಿವರಗಳನ್ನು ನೀಡಿರಿ:

ಸಂಪನ್ಮೂಲದಲ್ಲಿ ಬಳಸಿದ ಭಾಷೆ

ವಿಷಯ: (ಪರಿಸರ ವಿಜ್ಞಾನ, ಗಣಿತ, ಸಮಾಜ ಪಾಠಗಳು, ವಿಜ್ಞಾನ, ಇತ್ಯಾದಿ)

ಒಳವಿಷಯ: (ಕೂಡುವ ಲೆಕ್ಕದ ಪ್ರಥಮ ಪಾಠ, ಸಸ್ಯ ಪ್ರಪಂಚ, ಋತುಮಾನಗಳು, ದೇಹದ ಶುಚಿತ್ವ, ಇತ್ಯಾದಿ)

ಸಂಪನ್ಮೂಲದ ವಿಭಾಗ: (ಲೇಖನ, ತರಗತಿ ಚಟುವಟಿಕೆ, ಕಾರ್ಯಪತ್ರ, ದೃಶ್ಯ ನಿರೂಪಣೆ, ಅನಿಮೇಷನ್ ಇತ್ಯಾದಿ)

ಪಠ್ಯಕ್ರಮ: ಇದು ಪಠ್ಯ ಕ್ರಮಕ್ಕೆ ಅನ್ವಯಿಸುತ್ತದೆ (ಕೇರಳ ರಾಜ್ಯ ಮಂಡಳಿ, ಮಧ್ಯಪ್ರದೇಶ ರಾಜ್ಯ ಮಂಡಳಿ ಪಠ್ಯ  ಕ್ರಮ, ಇತ್ಯಾದಿ)

ಗ್ರೇಡು ಹಂತ (ತರಗತಿ): ಇದು ಯಾವ ತರಗತಿಗೆ ಸೂಕ್ತ (1-2ರ ವರೆಗೆ 4-5ರ ಇಯತ್ತೆ, ಯಾವುದೇ  ತರಗತಿ ಅಥವಾ ತರಗತಿ viii ಇತ್ಯಾದಿ)

ನಿಮ್ಮ ಕಿರುಪರಿಚಯ ಸೇರಿಸಿ:

     ಲೇಖಕರೇ, ನಿಮ್ಮ ಅನುಭವ, ನೈಪುಣ್ಯದ ಕ್ಷೇತ್ರಗಳು ಮುಂತಾದವನ್ನು ಒಳಗೊಂಡ 50 ಪದಗಳ ಒಂದು ಕಿರಿಪರಿಚಯವನ್ನು  ಕಳುಹಿಸಿಕೊಡಿ  ಅದರೊಂದಿಗೆ ನಿಮ್ಮ ಪಾಸ್ಪೋರ್ಟ್ ಅಳತೆಯ ಭಾವ ಚಿತ್ರವನ್ನು - ಮುದ್ರಿತ ಪ್ರತಿಯಾಗಿ, ಇಮೇಲ್ ಆಗಿ, ಅಡಕ ಮುದ್ರಿಕೆಯಲ್ಲಿ ಮಿದು ಪ್ರತಿಯಾಗಿ ಕಳುಹಿಸಿಕೊಡಿ.

ಪಠ್ಯ ಸಂಪನ್ಮೂಲಗಳು: ಮುದ್ರಿತ ರೂಪದಲ್ಲಿ ಅಥವಾ ಕೈ ಬರಹದಲ್ಲಿ ಒಂದೆ ಮಗ್ಗುಲಲ್ಲಿ ಬರೆದು ಕಳುಹಿಸಿ ಸುತ್ತಲೂ 1.5" ಮಾರ್ಜಿನ್ ಬಿಡಿ. ಇಮ್ಮಡಿ ಅಂತರ (ಡಬಲ್ ಸ್ಪೇಸ್ ಕೊಟ್ಟು) ಬರೆಯಿರಿ/ ಬೆರಳಚ್ಚು ಮಾಡಿರಿ.

ಅಕ್ಷರರೂಪ  ಮತ್ತು ಫಾರ್ಮಾಟಿಂಗ್

     ಇಂಗ್ಲೀಷ್ ದಸ್ತಾವೇಜಿಗೆ ಟೈಮ್ಸ್ ನ್ಯೂರೋಮನ್, ಏರಿಯಲ್ ಅಥವಾ ಕ್ಯಾಲಿಬ್ರಿ ಅಕ್ಷರಗಳನ್ನು ಬಳಸಿರಿ. ಲೇಖನದುದ್ದಕ್ಕೂ ಒಂದೇ ಅಕ್ಷರ ರೂಪವನ್ನು ಬಳಸಿರಿ.  ಶೀರ್ಷಿಕೆ ಮತ್ತು ಇತರೆ ಉಪ ಶೀರ್ಷಿಕೆಗಳಿಗೆ ಬೋಲ್ಡ್ ಮತ್ತು ಇಟಾಲಿಕ್ಸ್ ರೂಪಗಳನ್ನು ಬಳಸಿರಿ. ಭಾರತೀಯ ಭಾಷೆಗಳಿಗೆ ಯೂನಿಕೋಡ್ ಅಕ್ಷರ ರೂಪಗಳನ್ನು ಬಳಸಿರಿ.  ಪ್ರತಿಯೊಂದು ಭಾಷೆಗೂ ನಾವು ಪ್ರಾಶಸ್ತ್ಯ ಕೊಡುವ ಅಕ್ಷರ ರೂಪಕ್ಕೆ ಈ ಕೆಳಗಿನ ಕೋಷ್ಟಕವನ್ನು ನೋಡಿರಿ.  ಮುಂದಿನ ಅಕ್ಷರ ರೂಪದ ಗಾತ್ರವನ್ನು ಬಳಸಿರಿ.

ಭಾಷೆ

ಫಾಂಟ್ ಹೆಸರು

ಲೇಖನ ಒಡಲಿನ ಅಕ್ಷರಗಳು

ಮುಖ್ಯ ಶೀರ್ಷಿಕೆ

ಉಪಶೀರ್ಷಿಕೆ ಹಂತ 1

ಉಪಶೀರ್ಷಿಕೆ ಹಂತ 2

ಕನ್ನಡ

(ತುಂಗಾ) ನುಡಿ-ಯೂನಿಕೋಡ್

14

22

18

16

 

ಭಾಷೆ ಮತ್ತು ಬರವಣಿಗೆ ಶೈಲಿ

ಸರಳವಾದ ಚಿಕ್ಕ ಚಿಕ್ಕ ವಾಕ್ಯಗಳು

     ನಿಮ್ಮ ಭಾಷೆಯನ್ನು ಸರಳ ಮತ್ತು ಸ್ಪಷ್ಟವಾಗಿ ಇರಿಸಿರಿ ತಾರ್ಕಿಕವಾಗಿ ಮುಂದುವರಿಯಲಿ ಹಾಗೂ ವಾದ ವಿವಾದ ಸುಸಂಬದ್ಧವಾಗಿ ಇರಲಿ.  ನಿಮ್ಮ ಭಾಷೆ ಸಾಮಾನ್ಯ ಓದುಗನಿಗೆ ಬೇಗನೆ ಅರ್ಥವಾಗುವಂತೆ ಇರಲಿ ಎಂಬ ಕಾರಣಕ್ಕೆ ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಬರೆಯಲು ಕೇಳುತ್ತೇವೆ.

ಸಂಕ್ಷಿಪ್ತಿಗಳು ಮತ್ತು ಕಿರುನಾಮಗಳು

ಸಂಪನ್ಮೂಲದಲ್ಲಿ ಸಂಕ್ಷಿಪ್ತಿಗಳು ಮೊತ್ತಮೊದಲಿಗೆ ಬರುವಾಗ ಅದನ್ನಷ್ಟೇ ಬರೆಯದೇ ಮೊದಲು ಅದರ ವಿಸ್ತ್ಕೃತ ರೂಪ ಬರೆದು ಆವರಣದ ಒಳಗೆ ಅದರ ಸಂಕ್ಷಿಪ್ತಿಯನ್ನು ಬರೆಯಿರಿ.  ಆ ತರುವಾಯ ಮುಂದಕ್ಕೆ ನೀವು ಆ ಸಂಕ್ಷಿಪ್ತ ರೂಪ ಬರೆದರೆ ಸಾಕು.

ಉದಾ: ಈ ಪಠ್ಯ ಪುಸ್ತಕವನ್ನು ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟು (ನ್ ಸಿ ಎಫ್) 2005 ನಲ್ಲಿರುವ ನಿಬಂಧನೆಗಳ ಅನುಸಾರವಾಗಿ ತಯಾರಿಸಲಾಗಿದೆ.  ಶಿಕ್ಷಣ ಕುರಿತ ರಾಷ್ಟ್ರೀಯ ಕಾರ್ಯ ನೀತಿ (ಎನ್.ಪಿ.ಇ) ಯೂ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯು ಎನ್.ಸಿ.ಎಫ್ ಅನ್ನು ಆಧರಿಸತಕ್ಕದ್ದೆಂದು ಹೇಳಿದೆ.  ಎನ್.ಸಿ.ಎಫ್2005,  1986 ಮತ್ತು 2000ರ ಆವೃತ್ತಿಗಳ ತರುವಾಯ ಬಂದ ಮೂರನೇ ಆವೃತ್ತಿಯಾಗಿದೆ.  ಎನ್.ಪಿ.ಇ ನಲ್ಲಿ---

ಚಿತ್ರಗಳು, ಭಾವಚಿತ್ರಗಳು, ರೇಖಾಚಿತ್ರಗಳು

     ಚಿತ್ರಗಳು, ಭಾವಚಿತ್ರಗಳು, ರೇಖಾಚಿತ್ರಗಳು ಕೆಲವೊಮ್ಮೆ ಸಂಪನ್ಮೂಲಗಳಿಗೆ ಅತಿ ಹೆಚ್ಚಿನ ಮೌಲ್ಯಗಳನ್ನು ನೀಡುತ್ತವೆ.  ಹೀಗಿದ್ದರೂ ಬಿಂಬಗಳು ತೀರ ಕಡಿಮೆ ರೆಸಲ್ಯೂಷನ್ ಹೊಂದಿದ್ದರೆ, ಕಾಗದದ ಮೇಲೆ ಮುದ್ರಿಸಿದಾಗ ನಿಸ್ಸಾರ ಹಾಗೂ ಅಸ್ಪಷ್ಟವಾಗಿ ಕಾಣುತ್ತವೆ.  ಹೀಗಾಗಿ ಅವು ಉಪಾಧ್ಯಾಯರಿಗೆ ಉಪಯೋಗಕ್ಕೆ ಬರುವುದಿಲ್ಲ.  ತೀರ ಹೆಚ್ಚಿನ ನಿಖರತೆಯ (ರೆಸಲ್ಯೂಷನ್) ದ್ದಾದರೆ ಕಡತದ ಗಾತ್ರ ತೀರ ದೊಡ್ಡದ್ದಾಗಿರುತ್ತದೆ ಮತ್ತು ಅದನ್ನು ಇ ಮೇಲ್ ನಲ್ಲಿ ಕಳುಹಿಸುವುದು ಕಷ್ಟ.  ಆದ್ದರಿಂದ ಚಿತ್ರಗಳನ್ನು  ಮೇಲುನಕಲು  ಮಾಡುವಾಗ ಅಥವಾ ದಾಖಲೆಗಳು ಅಥವಾ ಪಟ ನಿರೂಪಣೆಗಳಲ್ಲಿ ಚಿತ್ರವನ್ನು ಸೇರಿಸುವಾಗ ಚಿತ್ರಗಳು ಸೂಕ್ತ  ನಿಖರತೆ ಹೊಂದಿರುವಂತೆ ನೋಡಿಕೊಳ್ಳಬೇಕಾದ್ದು ಸೂಕ್ತ

     ನಿಮ್ಮ ಚಿತ್ರಗಳು ಕನಿಷ್ಠ 100 dpi ನಿಖರತೆ ಹೊಂದಿರುವಂತೆ ಮತ್ತು 200 dpi  ನಿಖರತೆ ಮೀರದಂತೆ ನೋಡಿಕೊಳ್ಳಿ.  100 dpi ಗಿಂತ ಕಡಮೆ ನಿಖರತೆಯ ಚಿತ್ರಗಳು ಕಂಪ್ಯೂಟರ್ ಪರದೆ ಮೇಲೆ ಚಿನ್ನಾಗಿರುವಂತೆ  ಕಾಣಬಹುದು.  ಆದರೆ ಅವನ್ನು ಮುದ್ರಿಸಿದಾಗ ಉತ್ತಮ ಗುಣಮಟ್ಟದ್ದಾಗಿರುವುದಿಲ್ಲ. (ಅವುಗಳಲ್ಲಿ ಬಹಳಷ್ಟುನ್ನು ಮುದ್ರಿಸಿಟ್ಟುಕೊಳ್ಳಲು ಬಯಸಬಹುದು.  ಆದ್ದರಿಂದ 100 dpi ಗಿಂತಲೂ ಹೆಚ್ಚಿನ ನಿಖರತೆ ಇರುವ ಚಿತ್ರಗಳನ್ನು ಬಳಸಲು ಪ್ರಯತ್ನಿಸಿ.  ಹೀಗಿದ್ದರೂ ಅತಿ ಹೆಚ್ಚು ನಿಖರತೆ ಎಂದರೆ ಕಡತದ ಗಾತ್ರ ದೊಡ್ಡದು ಎಂದರ್ಥ.  ಆದ್ದರಿಂದ ಅಂತರ್ಜಾಲದಲ್ಲಿ  ಮೇಲು ನಕಲು ಮಾಡುವ ಮುನ್ನ ಅಥವಾ ಇಮೇಲ್ ಮೂಲಕ ಕಳುಹಿಸುವ ಮುನ್ನ ಅಥವಾ ದಾಖಲೆಗಳು ಇಲ್ಲವೇ ಪಟನಿರೂಪಣೆಯಲ್ಲಿ ಚಿತ್ರ ಸೇರಿಸುವ ಮುನ್ನ ನಿಮ್ಮ ಕಡತದ ಗಾತ್ರವನ್ನು ಸೂಕ್ತ ಅಳತೆಗೆ ಪರ್ಯಾಪ್ತಗೊಳಿಸಿರಿ.

ಕಡತದ ಗಾತ್ರ ಕಡಿಮೆ ಮಾಡುವುದು:

ಕಡತದ ಗಾತ್ರವನ್ನು ಕೆಲವೊಂದು ಫೋಟೋ ಸಂಪಾದನಾ ತಂತ್ರಾಂಶ (ಸಾಫ್ಟ್ವೇರ್) ಬಳಸಿ ಅಂದರೆ ‘Microsoft Office Picture Manager’ (ಮೈಕ್ರೋಸಾಫ್ಟ್ ಆಫೀಸ್ ತಂಡದ ಒಂದು ಭಾಗ)‘Picasa Photo Editor (ಉಚಿತವಾಗಿ ಇಳಿ ನಕಲು ಮಾಡಿಕೊಳ್ಳಬಹುದು) ‘Adobe Photoshop’(ಇದು ವೃತ್ತೀಯ ತಂತ್ರಾಶ-ಇದನ್ನುವಾಣಿಜ್ಯವಾಗಿ ಮಾರಲಾಗುತ್ತದೆ)ಅಥವಾ GIMP (ಫೋಟೋಶಾಪ್ ಗೆ ಪರ್ಯಾಯವಾಗಿ ದೊರಕುವ ಮುಕ್ತ ಮತ್ತು ಉಚಿತ ಮೂಲ) www.freeonlinephotoeditor.com ನಂತಹ ವೆಬ್ ಸೈಟುಗಳು ಯಾವ ತಂತ್ರಾಂಶವನ್ನೂ (ಸಾಫ್ಟ್ವೇರ್) ಬಳಸದೆ ಫೋಟೋಗಳನ್ನು ಎಡಿಟ್ ಮಾಡಲು ಸಹಾಯ ಮಾಡುತ್ತವೆ.  ಇದರಲ್ಲಿರುವ ವಿಷಯಗಳು ಸ್ವಯಂವೇದ್ಯ ಮತ್ತು ಫೋಟೋ ಎಡಿಟ್ ಮಾಡಲು ಬಾರದ ಜನರೂ ಇದನ್ನು ಸುಲಭವಾಗಿ ಬಳಸಬಹುದು.

ಕಡತದ ರೂಪಗಳು:

JPEG ರೂಪವನ್ನು ನಾವು ಮಾನ್ಯ ಮಾಡುತ್ತೇವೆ.

ಚಿತ್ರಗಳನ್ನು jpeg, tiff, bmp, gif, png, etc. ನಂತಹ ವಿವಿಧ ರೂಪಗಳಲ್ಲಿ ಉಳಿಸಲಾಗುತ್ತದೆ. tiff ಮತ್ತು bmp ಗಳು ಬಲು ದೊಡ್ಡ ಕಡತ ಗಾತ್ರಗಳನ್ನು ಹೊಂದಿರುತ್ತದೆ.  ಮತ್ತು ಸಾಮಾನ್ಯ ಬಳಕೆದಾರರಿಗೆ ಇತರೆ ಕಿರಿಕಿರಿ ಉಂಟು ಮಾಡುತ್ತವೆ.Jpeg, gif ಮತ್ತು png ಸಣ್ಣ ಕಡತದ ಗಾತ್ರವನ್ನು ಹೊಂದಿರುತ್ತವೆ.  ಚಿತ್ರ ನೋಡಲು ಮತ್ತು  ಸಂಪಾದನೆ ಮಾಡಲು Jpeg ರೂಪಕ್ಕೆ ಬಹಳಷ್ಟು ತಂತ್ರಾಂಶಗಳು ಬೆಂಬಲ ನೀಡುತ್ತವೆ.  ಆದ್ದರಿಂದ ನೀವು  ನಿಮ್ಮ ಚಿತ್ರಗಳನ್ನು  Jpeg ರೂಪಕ್ಕೆ ಅದರಲ್ಲೂ ಅವು tiff ಅಥವಾ bmp ರೂಪಗಳಲ್ಲಿದ್ದರೆ ಪರಿವರ್ತಿಸಿ ಎಂದು ನಾವು ಸಲಹೆ ನೀಡುತ್ತೇವೆ.

ಚಿತ್ರಗಳನ್ನು ಬೇರೆಯಾಗಿ ಲಗತ್ತಿಸಿರಿ:

ಚಿತ್ರಗಳನ್ನು ಸೇರಿಸಿದಾಗ ಕಡತದ ಗಾತ್ರ ದೊಡ್ಡದಾಗುತ್ತದೆ.  ಫೋಟೋಗಳು ದಾಖಲೆಗೆ ಅತ್ಯಾವಶ್ಯಕ ಭಾಗಗಳಾಗಿದ್ದರೆ ಮಾತ್ರ ಅವನ್ನು ದಾಖಲೆಗೆ ಸೇರಿಸಿರಿ.  ಫೋಟೋಗಳನ್ನು ಸೇರಿಸುವಾಗ ಅವುಗಳ ಕನಿಷ್ಠ ನಿಖರತೆ 100 dpi ಇರುವಂತೆ ನೋಡಿಕೊಳ್ಳಿ. ಅದರ ನಿಖರತೆ ತೀರ ದೊಡ್ಡದಿದ್ದರೆ ಅದನ್ನು 200  dpi ಗೆ ಕಡಿಮೆ ಮಾಡಿರಿ (ಮೇಲೆ " ಕಡತದ ಗಾತ್ರ ಕಡಿಮೆ ಮಾಡುವುದು" ನೋಡಿ ) ಫೋಟೋಗಳನ್ನು ಮುದ್ರಿಸಿ ಸಹಾಯಕ ಸಾಮಾಗ್ರಿಯಾಗಿ ಬಳಸ ಬೇಕಾಗಿದ್ದಲ್ಲಿ ಫೋಟೋಗಳನ್ನು ಲೇಖನದಲ್ಲಿ ಸೇರಿಸ ಬೇಡಿ.  ನಮಗೆ ಅದನ್ನು ಕಳುಹಿಸುವಾಗ ಅದನ್ನು ಒಂದು  ಅಡಕ ಮುದ್ರಿಕೆಯಲ್ಲಿ(ಸಿ.ಡಿ.) ಯಲ್ಲಿ ಅಥವಾ ಇ ಮೇಲ್ನಲ್ಲಿ ಬೇರೆಯ ಲಗತ್ತಾಗಿ ಕಳುಹಿಸಿಕೊಡಿ.

ವಿಡಿಯೋಗಳು (ದೃಶ್ಯ ನಿರೂಪಣೆಗಳು):

ಚಿಕ್ಕದಾಗಿದ್ದರೂ ಪರಿಣಾಮಕಾರಿಯಾದ  ವಿಡಿಯೋಗಳನ್ನು ನಾವು ಆಶಿಸುತ್ತೇವೆ.  ನಿಮ್ಮಲ್ಲಿ ಉದ್ದನೆಯ ವಿಡಿಯೋಗಳಿದ್ದು ಅದರಿಂದ ಕಿರಿದಾದ ಆದರೆ ಆರ್ಥಪೂರ್ಣವಾದ ತುಣುಕುಗಳನ್ನು ನೀವು ಸಿದ್ಧಪಡಿಸ ಬಹುದಾದರೆ ದಯವಿಟ್ಟು ಅವುಗಳನ್ನು ಒಂದು ಟಿಪ್ಪಣಿಯ ಜೊತೆಯಲ್ಲಿ ನಮಗೆ ಕಳುಹಿಸಿಕೊಡಿ.

     ನಿಮ್ಮ ವಿಡಿಯೋಗಳನ್ನು ಮೂರು ರೀತಿಯಲ್ಲಿ ಸಲ್ಲಿಸಬಹುದು.  ಪೋರ್ಟಲ್ಲಿ ಗೆ ಮೇಲು ನಕಲು ಮಾಡುವುದು 2. ಇಮೇಲ್ ಮೂಲಕ ಕಳುಹಿಸುವುದು 3.ಸಿ.ಡಿ ಅಥವಾ ಡಿ.ವಿ.ಡಿ ಮೇಲೆ ಮುದ್ರಿಸಿ ಅಂಚೆ ಮೂಲಕ ಕಳುಹಿಸಿ ಕೊಡಬಹುದು.   ವಿವರಗಳಿಗಾಗಿ ದಯವಿಟ್ಟು  ಮೇಲೆ  ನೋಡಿ.  ನಿಮ್ಮ ವಿಡಿಯೋಗಳನ್ನು  ವೃತ್ತಿಪರ ಕ್ಯಾಮರಾದಲ್ಲಿ ಸೆರೆಹಿಡಿದಿರಬೇಕಾಗಿಲ್ಲ.  ನಿಮ್ಮ ಮೊಬೈಲು ಕ್ಯಾಮರಾದಲ್ಲಿ ಅಥವಾ ಡಿಜಿಟಲ್ ಕ್ಯಾಮರಾಗಳಲ್ಲಿ ಸೆರೆಹಿಡಿದ ಕೆಲವೊಂದು ದೃಶ್ಯಾವಳಿಗಳನ್ನೂಕಳುಹಿಸಿಕೊಡಬಹುದು.  ಅವು ಉತ್ತಮ ಶೈಕ್ಷಣಿಕ ಮೌಲ್ಯವನ್ನು ಸಮಂಜಸ ಧ್ವನಿ ದೃಶ್ಯಗಳ ಗುಣಮಟ್ಟವನ್ನು ಹೊಂದಿದ್ದರೆ ಅದನ್ನು www.teachersofindia.org ನಲ್ಲಿ ಪ್ರಕಟಿಸಲಾಗುವುದು.

ನಿಮ್ಮ ವಿಡಿಯೋದ ಧ್ವನಿ -ದೃಶ್ಯ ಗುಣಮಟ್ಟ ಹೆಚ್ಚಿಸಲು ಕೆಲವೊಂದು ಸೂಚನೆಗಳು:

(ಎ) ದೃಶ್ಯ ಸೆರೆ ಹಿಡಿಯುವಾಗ ಕ್ಯಾಮರವನ್ನು ಸಾಧ್ಯವಾದಷ್ಟು ಸ್ಥಿರವಾಗಿ ಹಿಡಿದುಕೊಳ್ಳಿ.  ಅದು ಅತಿಯಾಗಿ ಅಲುಗಾಡದಂತೆ ನೋಡಿಕೊಳ್ಳಿರಿ.  ಸೆರೆ ಹಿಡಿಯುವ ಕೋನಗಳನ್ನು ತೀರ ಬೇಗ ಬೇಗನೆ ಬದಲಾಯಿಸಬೇಡಿ.  ಒಂದು ಕ್ಯಾಮರಾ ಸ್ಟಾಂಡು ಬಳಸಿರಿ ಅಥವಾ ಕ್ಯಾಮರವನ್ನು ಮೇಜು ಅಥವಾ ಅಂಥದ್ದೇ ಸ್ಥಳದಲ್ಲಿ ಅಲುಗಾಡದಂತೆ ಇರಿಸಿ.

(ಬಿ)  ಚಿತ್ರ ತೆಗೆಯುತ್ತಿರುವ ವಸ್ತುವಿನ ಮೇಲೆ ಸಾಕಷ್ಟು ಬೆಳಕು ಬೀಳುತ್ತಿರುವಂತೆ ನೋಡಿಕೊಳ್ಳಿರಿ.

(ಚಿ)  ಧ್ವನಿಯು ಹೊರಗಿನ ಗಲಭೆಯಿಂದ ಬಾಧಿತವಾಗದಂತೆ ನೋಡಿಕೊಳ್ಳಿ. ಮೈಕನ್ನು ಧ್ವನಿಯ ಮೂಲಕ್ಕೆ ಆದಷ್ಟೂ ಹತ್ತಿರವಾಗಿ ಹಿಡಿದುಕೊಳ್ಳಿರಿ.

ವಿಡಿಯೋ ಸಂಗ್ರಹರೂಪಗಳು:

ವಿಡಿಯೋಗಳನ್ನು mpeg, avi, flv, 3gp, wmv, mp4 ಮತ್ತು ಇನ್ನೂ ಅನೇಕ ಸ್ವರೂಪಗಳಲ್ಲಿ  ಉಳಿಸಿ ಸಂಗ್ರಹಿಸಲಾಗುವುದು.  ನಮ್ಮ ಪೋರ್ಟಲ್ ಬಹುಪಾಲು ಈ ಎಲ್ಲಾ ಸ್ವರೂಪಗಳನ್ನು ಪೋಷಿಸಬಲ್ಲದು.  ಹೀಗಿದ್ದರೂ, ನಾವು mpeg, flv,  ಮತ್ತು mp4 ಸ್ವರೂಪಗಳನ್ನು ಬಳಸಲು ಶಿಫಾರಸು ಮಾಡುತ್ತೇವೆ.  ಏಕೆಂದರೆ ಬಹಳಷ್ಟು ನೋಡುಗರ ತಂತ್ರಾಂಶದಲ್ಲಿ ಅವುಗಳಿಗೆ ಬೆಂಬಲಾವಕಾಶವಿದೆ.

www.teachersofindia.org ಅವರಿಗೆ ಸುಸಂಬದ್ಧವಾದ ಕೆಲವೊಂದು ವಿಡಿಯೋಗಳು ನಿಮಗೆ ಕಂಡು ಬಂದರೆ ನಮಗೆ ಅವುಗಳ ಕೊಂಡಿ (ಲಿಂಕು)ಗಳನ್ನು ನಮಗೆ ಕಳುಹಿಸಬಹುದು. 

ಬೌದ್ಧಿಕ ಪ್ರಾಮಾಣಿಕತೆ, ಕಾಪಿರೈಟುಗಳು, ಕೃತಿಚೌರ್ಯ, ಭಾರಮನ್ನಣೆ:

ಬೌದ್ಧಿಕ ಪ್ರಾಮಾಣಿಕೆ ನಮಗೆ ಬಲು ಮೆಚ್ಚು.  ಇನ್ನೊಬ್ಬ ವ್ಯಕ್ತಿ ಅಥವಾ ಸಂಸ್ಥೆಗೆ ಕಾಪಿರೈಟು ಇರುವಂಥ ಯಾವುದನ್ನೂ ನಮಗೆ ಸಲ್ಲಿಸ ಬೇಡಿ.  ಮೂಲ ಸಂಪನ್ಮೂಲಕ್ಕೆ ಆಭಾರ ಮನ್ನಣೆ ಸಲ್ಲಿಸದೆ ಅನಧಿಕೃತವಾಗಿ ಯಾವುದೇ ಮೂಲದಿಂದ ---- ಅದು ನಿಮ್ಮ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳ ಟಿಪ್ಪಣಿಗಳಾಗಿರಬಹುದು -- ನಕಲು ಮಾಡುವುದೇ ಕೃತಿಚೌರ್ಯ.  ಕೃತಿಚೌರ್ಯವನ್ನು ಮಾಡಬೇಡಿ.

ಅಂತರ್ಜಾಲದಿಂದ ತೆಗೆದುಕೊಂಡ ಚಿತ್ರಗಳನ್ನು ಸಲ್ಲಿಸುವಾಗ ಬಹಳ ಎಚ್ಚರ ವಹಿಸಿರಿ.  ಅಂತರ್ಜಾಲದಲ್ಲಿ ಸಿಗುವ ಎಲ್ಲಾ ಚಿತ್ರಗಗಳು ಉಚಿತ ಚಿತ್ರಗಳಲ್ಲ.  www.dreamstime.com/freeimages, http://www.gettyimages.com, http://www.flickr.com/, http://www.freeimages.co.uk/. ಇವೇ ಮುಂತಾದವು ಉಚಿತ ಚಿತ್ರಗಳನ್ನು ಕೊಡುವ ಕೆಲವೊಂದು  ವೆಬ್ ತಾಣಗಳು.

     ಬೇರೊಬ್ಬರ ಕೃತಿಯಿಂದ ಏನನ್ನಾದರೂ ಉದ್ಧರಿಸಿ ಹೇಳುವಾಗ ಅದಕ್ಕೆ ದಯವಿಟ್ಟು ಸರಿಯಾಗಿ ಕೃತಜ್ಞತೆ ಯನ್ನುಸಲ್ಲಿಸಿರಿ.  ಬೇರೊಬ್ಬರ ಮೂಲ ಚಿಂತನೆಗಳು ವಿಚಾರಗಳನ್ನು ಆಧಾರವಾಗಿ ಇಟ್ಟುಕೊಂಡು ನೀವು ಏನನ್ನಾದರೂ ರಚಿಸುತ್ತಿದ್ದರೆ ದಯವಿಟ್ಟು ಅದಕ್ಕೆ ಕೃತಜ್ಞತೆ ಸಲ್ಲಿಸಿರಿ.  ಲೇಖನದ ಅಂತ್ಯದಲ್ಲಿ ಸಂಬಂಧಪಟ್ಟ  ಉಲ್ಲೇಖಗಳನ್ನು ಮೂಲವನ್ನು ಅವು ಬರುವ ಕ್ರಮದಲ್ಲಿ ತಿಳಿಸಿರಿ.  ಉದ್ಧರಣೆಗಳನ್ನು ಮಾಡುವಾಗ ಚಿಕಾಗೋ ಮಾನ್ಯುಯಲ್ ಆಫ್ ಸ್ಟೈಲ್ ಅನ್ನು ಬಳಸಿರಿ.  ನಿಮಗೆ ಇನ್ನೂ ಸಂಶಯವಿದ್ದರೆ ನಮ್ಮ ಸಂಪಾದಕರನ್ನು ಸಂಪರ್ಕಿಸಿರಿ.

19821 ನೊಂದಾಯಿತ ಬಳಕೆದಾರರು
7791 ಸಂಪನ್ಮೂಲಗಳು