ವಿಷಯ ಕಾರ್ಯನೀತಿ

ಶಿಕ್ಷಕರಿಗಾಗಿ ಅವರ ಮಾತೃ ಭಾಷೆಯಲ್ಲಿ:

     ಭಾರತದ್ಯಾಂತ ಶಿಕ್ಷಣದ ಗುಣಮಟ್ಟವನ್ನು ಉತ್ತಮ ಪಡಿಸುವ ಆದರ್ಶದೊಂದಿಗೆ ನಮ್ಮ ಟೀಚರ್ಸ್ ಪೋರ್ಟಲ್  www.teachersofIndia.org ಕೆಲಸ ಮಾಡುತ್ತಿದೆ.  ದೇಶದಾದ್ಯಾಂತ ಹಬ್ಬಿಹರಡಿರುವ ಒಟ್ಟು ಶಿಕ್ಷಕ ಸಮುದಾಯವನ್ನೇ ಒಳಗೊಂಡು ದುಡಿಯಲು ಇದನ್ನು ಪರಿಕಲ್ಪಿಸಲಾಗಿದೆ.  ಇದರ ಬಳಕೆದಾರ ಸಮುದಾಯಗಳನ್ನು ಸಬಲಗೊಳಿಸಿ ಉತ್ತೇಜಿಸಲು ಮತ್ತು ಸಂಪನ್ಮೂಲ ತಯಾರಿಸಿ ಹಂಚಿಕೊಳ್ಳಲು ಇದನ್ನು ವಿನ್ಯಾಸಗೊಳಿಸಲಾಗಿದೆ.

     ಭಾರತದ ಉದ್ದಗಲಕ್ಕೂ ಇರುವ ಸರ್ಕಾರಿ ಶಾಲೆಗಳ ಪ್ರಾಥಮಿಕ ಶಾಲಾ ಶಿಕ್ಷಕರು ಇದರ ಉದ್ದೇಶಿತ ಶ್ರೋತೃವರ್ಗ.  ಇವರು ತಮ್ಮ ಇಂಗ್ಲೀಷ್ ಗಿಂತಲೂ ತಮ್ಮ ತಮ್ಮ ಭಾಷೆಗಳನ್ನು ಉತ್ತಮವಾಗಿ ಬಳಸ ಬಲ್ಲವರಾಗಿರುತ್ತಾರೆ.  ಆದ್ದರಿಂದಲೇ  www.teachersofIndia.org ನ ಮುಖ್ಯ ಕಾರ್ಯನೀತಿ ಎಂದರೆ ಅದರಲ್ಲಿರುವ ವಿಷಯಗಳನ್ನು ಭಾರತದ ಅನೇಕ ಭಾಷೆಗಳಲ್ಲಿ ಕೊಡುವುದು.  ಈಗ ಈ ಪೋರ್ಟಲ್ ಅನ್ನು ಇಂಗ್ಲೀಷ್ ಭಾಷೆಯಲ್ಲಲ್ಲದೆ ಇನ್ನೂ ನಾಲ್ಕು ಪ್ರಮುಖ ಭಾರತೀಯ ಭಾಷೆಗಳಲ್ಲಿ ಕೊಡಲಾಗುತ್ತಿದೆ.  ಕ್ರಮೇಣ ಈ ಪೋರ್ಟಲ್ ಇತರೆ ಭಾಷೆಗಳಲ್ಲೂ ಲಭ್ಯವಾಗಲಿದೆ.

ಶಿಕ್ಷಕರಿಂದ (ಬಳಕೆದಾರರೇ ತಯಾರಿಸಿದ ವಿಷಯಗಳು) : ಮುಖ್ಯ ತತ್ವ

www.teachersofIndia.org ಶಿಕ್ಷಕರು ಪರಸ್ಪರ ಸಂವಾದ, ಚಿಂತನಮಂಥನ ನಡೆಸಿ ಕೊಳ್ಕೊಡೆ ನೀಡಲು ಹಾಗೂ ತಮ್ಮ ಸಂಪನ್ಮೂಲಗಳನ್ನು ರಚಿಸಿ ಹಂಚಿಕೊಳ್ಳಲು ಸಿದ್ಧಪಡಿಸಿದ ವೇದಿಕೆಯಾಗಿದೆ.  ಈ ಪೋರ್ಟಲ್ ನಲ್ಲಿ ಇರುವ ಎರಡು ವಿಷಯ ವಿಭಾಗಗಳೆಂದರೆ ಶಿಕ್ಷಕ ಸಮುದಾಯ  ಮತ್ತು ಸಂಪನ್ಮೂಲಗಳು.  ಶಿಕ್ಷಕ ಸಮುದಾಯ ಎಂಬುದು ಶಿಕ್ಷಕರ ನಡುವೆ  ಮುಕ್ತ ಕೊಳ್ಕೊಡೆ ನಡೆಯಲು ರಚಿಸಲಾದ  ಬಹಿರಂಗ ವೇದಿಕೆ.  ಇದರ ಒಳ ವಿಷಯಗಳನ್ನೆಲ್ಲಾ ಬಳಕೆದಾರರು, ಸಹಭಾಗಿ ಸಂಸ್ಥೆಗಳು, ಆಂತರಿಕ ವಿಷಯ ತಜ್ಞರು ಮುಂತಾದವರು ತಯಾರಿಸುತ್ತಾರೆ.  ಈ ವಿಭಾಗಗಳಲ್ಲಿ ಅದರ ಒಳಾಂಶಗಳ ಮತ್ತು ಭಾಷಾ ಔಚಿತ್ಯದ ದೃಷ್ಟಿಯಿಂದ ತೀರ ಕಡಿಮೆ ಸಂಪಾದನಾ ಕಾರ್ಯವನ್ನು ಮಾಡಲಾಗುವುದು.  ಶಿಕ್ಷಣ ಮತ್ತು ಅಭಿವೃದ್ಧಿ ಕುರಿತ ವಿಷಯಗಳಲ್ಲಿ ವಿಚಾರಗಳ ಬಗ್ಗೆ ಪ್ರಬುದ್ಧ  ಸಂವಾದವನ್ನು ಉತ್ತೇಜಿಸಲು ಟೀಚರ್ಸ್ ಪೋರ್ಟಲ್ ಉದ್ದೇಶಿಸುತ್ತದೆ.  ಆದ್ದರಿಂದ ದಯವಿಟ್ಟು  ವಿವೇಕಯುತ ವಿಚಾರ ವಿನಿಮಯಕ್ಕೆ ಅನುವುಮಾಡಿಕೊಡಿ.  ಆದಷ್ಟು ಹೆಸರಿಟ್ಟು  ದೂಷಿಸುವುದು, ಅಶ್ಲೀಲತೆ ಮತ್ತು ನಿಂದನೆ ಇವುಗಳಿಗೆ ಎಡೆಇಲ್ಲದೆ ಸಂವಾದ ನಡೆಸಿ.  ಹಾಸ್ಯ ಪ್ರಜ್ಞೆಗೆ ಸದಾ ಸ್ವಾಗತವಿದೆ.

ತರಗತಿ ಸಂಪನ್ಮೂಲಗಳು:  ಸಂಪನ್ಮೂಲದ ಗುಣಮಟ್ಟ, ಸುಸಂಗತತೆ, ಮತ್ತು ಸೂಕ್ತತೆ ಕಾಯ್ದುಕೊಳ್ಳಲು ಈ  ವಿಭಾಗದಲ್ಲಿ ಸಂಪಾದನಾ ಕಾರ್ಯವನ್ನು ಬಹಳ ಕಟ್ಟುನಿಟ್ಟಾಗಿ ಮಾಡಲಾಗುವುದು.  ವಿಷಯ ತಜ್ಞರು, ಭಾಷಾ ತಜ್ಞರು ಮತ್ತು ಅಂತರ್ಜಾಲದ ಸಹ ವಿಮರ್ಶಕರ ಜೊತೆಯಲ್ಲಿ ನಮ್ಮ ಸಂಪಾದಕರು ಈ ಕಾರ್ಯನಿರ್ವಹಿಸುತ್ತಾರೆ.  (ವಿಮರ್ಶಾ ವಿಧಾನ ನೋಡಿ).  ಈ ಸಂಪನ್ಮೂಲಗಳ ಬಹಳಷ್ಟು ಭಾಗವನ್ನು ವಿವಿಧ ಪ್ರದೇಶಗಳು ಮತ್ತು ಭಾಷೆಗಳ ಶಿಕ್ಷಕರು ತಯಾರಿಸಬೇಕೆಂದು ನಿರೀಕ್ಷಿಸಲಾಗಿದೆ. ಏಕೆಂದರೆ ಇಲ್ಲಿನ ವಸ್ತು ವಿಷಯಗಳು  ಪ್ರತಿಯೊಂದು ಪ್ರದೇಶದ ಮಣ್ಣಿನ ವಾಸನೆಯುಳ್ಳ ವಾಸ್ತವಾಂಶಗಳು, ಅದರ ಸಂಸ್ಕೃತಿ ಮತ್ತು ಶೈಕ್ಷಣಿಕ ಅವಶ್ಯಕತೆಗಳಿಗೆ ಸೂಕ್ತವಾದಂತಹ ವಸ್ತು ವಿಷಯಗಳಾಗಿ ಹೊರ ಬರಬೇಕೆಂಬುದು ನಮ್ಮ ಆಶಯ.  ಇಂತರ ಸಂಪನ್ಮೂಲಗಳನ್ನು ಪೋರ್ಟಲ್ಲಿಗೆ  ಅಂತರ್ಜಾಲ ಮೂಲಕ(ಆನ್ಲೈನ್ ಆಗಿ) ಪೋರ್ಟಲ್ ತಂಡದ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಕೊರಿಯರ್ ಮೂಲಕ ಕಳುಹಿಸಿಕೊಡಬಹುದು (ನೋಡಿ ಲೇಖನ ಸಲ್ಲಿಸಲು ಮಾರ್ಗಸೂತ್ರಗಳು).

     ನಾವು ಮುಂದಿಟ್ಟುಕೊಂಡಿರುವ ಇನ್ನೊಂದು ದೊಡ್ಡ ಆದ್ಯತೆ ಎಂದರೆ ಇತರೆ ಸಂಸ್ಥೆಗಳು ತಯಾರಿಸಿದ ಗುಣಮಟ್ಟದ  ಸಂಪನ್ಮೂಲಗಳನ್ನು  ಪ್ರಸಾರ ಮಾಡುವುದು.  ದೇಶದ ವಿವಿಧ ಭಾಗಗಳಲ್ಲಿ  ಇರುವ ಅನೇಕ ಸಂಘ ಸಂಸ್ಥೆಗಳು  ಉತ್ತಮವಾದ ಲೇಖನ ಇತ್ಯಾದಿಗಳನ್ನು ಬೇರೆ ಬೇರೆ ಭಾಷೆಗಳಲ್ಲಿ ತಯಾರಿಸುತ್ತಿದ್ದಾರೆ.  ಆದರೆ ಅವನ್ನು ವಿಶಾಲವಾಗಿ ಪ್ರಸಾರ ಮಾಡಲು ಸೂಕ್ತ ಸಾಧನವನ್ನು ಹೊಂದಿರುವುದಿಲ್ಲ.  ಈ ಪೋರ್ಟಲ್ ಅನ್ನು ಹೀಗೆ ಪ್ರಸಾರ ಮಾಡಲು ಒಂದು ವಾಹಿನಿಯಾಗಿ ಬಳಸಿ ಕೊಳ್ಳಬಹುದು.  ಇಂಥ ಸಂಸ್ಥೆಗಳು  ನಮ್ಮ ವಿಷಯ ಸಹಭಾಗಿಗಳಾಗಬಹುದು. (ನಮ್ಮ ವಿಷಯ ಸಹಭಾಗಿಗಳು ವಿಭಾಗವನ್ನು ನೋಡಿರಿ.  ನಮ್ಮ ವಿಷಯ ಸಹಭಾಗಿಯಾಗಿ ಹೇಗೆ ಸೇರಿಕೊಳ್ಳಬಹುದೆಂದು ಓದಿ ನೋಡಿರಿ).

     ಉತ್ತಮ ಗುಣಮಟ್ಟದ ಸಂಪನ್ಮೂಲಗಳು ವಿಶಾಲ ಪರಿಧಿಯ ಬಳಕೆದಾರರಿಗೆ ತಲುಪುವಂತೆ ನೋಡಿಕೊಳ್ಳಲು ನಾವು ಇದನ್ನು ಭಾಷಾಂತರಿಸಿ ವಿವಿಧ ಭಾಷೆಗಳಲ್ಲಿ ಪ್ರಕಟಿಸುತ್ತಿದ್ದೇವೆ.  ಕೆಲವಾರು ಸಂಪನ್ಮೂಲಗಳನ್ನು ನಮ್ಮ ತಂಡದ ವಿಷಯ ತಜ್ಞರು ತಯಾರಿಸುತ್ತಾರೆ.

ನಮ್ಮ ಪೋರ್ಟಲ್ಲಿ ಲ್ಲಿ ಪ್ರಕಟವಾಗುವ ವಿವಿಧ ಬಗೆಯ ಸಂಪನ್ಮೂಲಗಳು

 www.teachersof India.org ಸಂಪನ್ಮೂಲಗಳು ಸ್ಥೂಲವಾಗಿ ಈ ಎರಡು ಪ್ರವರ್ಗಗಳಲ್ಲಿ ಬರುತ್ತದೆ.

1.  ತರಗತಿ ಸಂಪನ್ಮೂಲಗಳು:  ಇವನ್ನು ಶಿಕ್ಷಕರು ತಮ್ಮ ತರಗತಿಗಳಲ್ಲಿ ಪಾಠ ಮಾಡಲು ಬಳಸಿಕೊಳ್ಳಬಹುದು.  ಇವುಗಳಲ್ಲಿ ಪಾಠ ಯೋಜನೆಗಳು, ಕಲಿಕೆ ಚಟುವಟಿಕೆಗಳು, ಕಾರ್ಯಪತ್ರಗಳು, ಪಟ ನಿರೂಪಣೆಗಳು, ಆಟಗಳು, ದೃಶ್ಯ ನಿರೂಪಣೆಗಳು, ಇ- ಪುಸ್ತಕಗಳು ಇತ್ಯಾದಿ ಇವೆ.

2.ಶಿಕ್ಷಕಾಭಿವೃದ್ಧಿ ಸಂಪನ್ಮೂಲಗಳು:  ಇವು  ಶಿಕ್ಷಕರು ವೃತ್ತೀಯವಾಗಿ ಬೆಳೆಯಲು ಸಹಾಯ ಮಾಡುತ್ತವೆ.  ಇದರಲ್ಲಿ ಲೇಖನಗಳು, ಚಟುವಟಿಕೆಗಳಿವೆ, ಸಂದರ್ಶನಗಳಿವೆ, ಚರ್ಚೆಗಳು, ಚಲನ ಚಿತ್ರಗಳು ಇತ್ಯಾದಿ ಇರುತ್ತವೆ.  ಇವು ಬೋಧನಾ ಶಾಸ್ತ್ರದಲ್ಲಿ ಇರುವ ಇತ್ತೀಚೆಗಿನ ಪ್ರವೃತ್ತಿಗಳನ್ನು ತಿಳಿಸುತ್ತವೆ.  ಶೈಕ್ಷಣಿಕ ಮನ:ಶಾಸ್ತ್ರದಲ್ಲಿ  ರಾಷ್ಟ್ರ ಮತ್ತು ಪ್ರಪಂಚದ ಇತರ ಭಾಗಗಳಲ್ಲಿ ಇರುವ ಯಶಸ್ವಿ ಅಭ್ಯಾಸಗಳ ಬಗ್ಗೆ, ವಿಷಯಾಧ್ಯಯನದ ಬಗ್ಗೆ ತಿಳಿಸುತ್ತವೆ.

ಇಲ್ಲಿ ಪ್ರಕಟಿತ ವಿಷಯಗಳು ಎಷ್ಟು ಉಚಿತ? ಕಾಪಿ ರೈಟ್ ನೀತಿ

www.teachersofIndia.org ತಾನು ದೊರಕಿಸಿ ಕೊಡುವ ಸಂಪನ್ಮೂಲಗಳನ್ನು ಭಾರತದ ಎಲ್ಲಾ ಭಾಷೆಗಳು ಮತ್ತು  ಪ್ರದೇಶಗಳಲ್ಲಿ ಉಪಾಧ್ಯಾಯರು ಶೈಕ್ಷಣಿಕ ಉದ್ದೇಶಕ್ಕಾಗಿ ಮುಕ್ತವಾಗಿ ಬಳಸ ಬೇಕೆಂದು ಇಚ್ಛಿಸುತ್ತದೆ.  ಆದ್ದರಿಂದ ಜವಾಬ್ದಾರಿಯುತ ಬಳಕೆಗಾಗಿ ಬಹಳ ಉದಾರವಾದ ಹಾಗೂ ಅತಿ ಕಡಿಮೆ ನಿರ್ಬಂಧಗಳನ್ನುಳ್ಳ ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸುಗಳನ್ನು ನಾವು ಪಾಲಿಸುತ್ತಿದ್ದೇವೆ.  ಈ ಪೋರ್ಟಲ್ನ ಪ್ರತಿಯೊಂದು ಸಂಪನ್ಮೂಲವೂ ಈ ಕೆಳಗಿನ ಲೋಗೋಗಳಲ್ಲಿ ಒಂದನ್ನು ಹೊಂದಿರುತ್ತದೆ.  ಇವುಗಳ ಅರ್ಥ ಏನು ಎಂಬುದನ್ನು ಮನದಟ್ಟು ಮಾಡಿಕೋಳ್ಳಲು ಸ್ವಲ್ಪ ಸಮಯ ವಿನಿಯೋಗಿಸಿ.

 ಅಟ್ರ್ರಿಬ್ಯೂಷನ್- ನಾನ್ ಕಮರ್ಷಿಯಲ್ ಶೇರ್ ಅಲೈಕ್- CC BY-NC-SA

     ಈ ಲೈಸೆನ್ಸು ಬಳಕೆದಾರರು ಸಂಪನ್ಮೂಲವನ್ನು ಪ್ರತಿ ಮಾಡಿಕೊಳ್ಳಲು ಮರು ವಿತರಣೆ ಮಾಡಲು, ಮರು ಮಿಶ್ರಣ (ರಿಮಿಕ್ಸ್) ಮಾಡಲು, ತಿದ್ದಲು ಮತ್ತು ಈ ಸಂಪನ್ಮೂಲವನ್ನು ವಾಣಿಜ್ಯೇತರವಾಗಿ ಬೆಳಸಲು ಅವಕಾಶ ಕೊಡುತ್ತದೆ.  ಆದರೆ ಮೂಲಕ್ಕೆ ಪೂರ್ಣ ಮನ್ನಣೆ ನೀಡಬೇಕು.

  ಅಟ್ರ್ರಿಬ್ಯೂಷನ್:  ನಾನ್ ಕಮರ್ಷಿಯಲ್-ನೋಡಿರೈವ್ಸ್  - CC BY-NC-ND

     ಈ ಲೈಸನ್ಸಿನಲ್ಲಿ ಮೂಲಕ್ಕೆ ಮನ್ನಣೆ ತಪ್ಪದೆ ನೀಡಿ ಸದರಿ ಸಂಪನ್ಮೂಲವನ್ನು ಇಳಿ ನಕಲು (ಡೌನ್ ಲೋಡ್) ಮಾಡಿಕೊಳ್ಳಬಹುದು ಮತ್ತು ಇತರರೊಡನೆ ಹಂಚಿಕೊಳ್ಳಬಹುದು.  ಆದರೆ ಅವರು ಅದನ್ನು ಯಾವ ರೀತಿಯಲ್ಲೂ ತಿದ್ದುವುದಾಗಲಿ ಬದಲಾಯಿಸುವುದಾಗಲಿ ಮಾಡುವಂತಿಲ್ಲ ಅಥವಾ ಅದನ್ನು ವಾಣಿಜ್ಯ ದೃಷ್ಟಿಯಿಂದ ಬಳಸುವಂತಿಲ್ಲ.

  ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ: All rights reserved

      ಇದರಲ್ಲಿ ಕಾಪಿ ರೈಟ್ ಕಾನೂನಿನ ಅಡಿಯ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿರುತ್ತದೆ.  ಅಂದರೆ  ಸದರಿ ಸಂಪನ್ಮೂಲದ  ಕಾಪಿರೈಟ್ ದಾರರಿಂದ ಅನುಮತಿ ಪಡೆದ ಹೊರತು ಬಳಕೆದಾರರು ಅದರ ಪ್ರತಿ ಮಾಡುವಂತಿಲ್ಲ, ವಿತರಿಸುವಂತಿಲ್ಲ ಮತ್ತು ಯಾವುದೇ ರೂಪದಲ್ಲಿ ಅದನ್ನು ಬದಲಾಯಿಸುವಂತಿಲ್ಲ.

 ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್ ಬಗ್ಗೆ ಹೆಚ್ಚು ತಿಳಿದು ಕೊಳ್ಳಲು ಇಲ್ಲಿ  ಕ್ಲಿಕ್ ಮಾಡಿ

ಸ್ಟಾಂಡರ್ಡ್ ಯೂ ಟ್ಯೂಬ್ ಲೈಸೆನ್ಸ್:

ಯೂ ಟ್ಯೂಬ್ ಲೈಸೆನ್ಸು ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ ಎಂಬ ಲೈಸೆನ್ಸಿಗೆ ಸಮನಾದದ್ದು. ಯೂ ಟ್ಯೂಬ್ ಲೈಸೆನ್ಸ್ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಈಗಾಗಲೇ ಪ್ರಕಟಿತ ಲೇಖನಗಳ ಮರು ಪ್ರಕಟಣೆ:

ಈಗಾಗಲೇ ಪ್ರಕಟಿತ ಲೇಖನಗಳನ್ನು ಕಾಪಿರೈಟ್ ದಾರನ ಅನುಮತಿ ಪಡೆದು ಪೋರ್ಟಲ್ಲಿನಲ್ಲಿ ಪ್ರಕಟಿಸಬಹುದು.  ಲೇಖನದ ಅಂತ್ಯದಲ್ಲಿ  " ಲೇಖಕರ ಟಿಪ್ಪಣಿ " ಬರೆದು ಹಿಂದೆ ಪ್ರಕಟವಾಗಿರುವುದನ್ನು ಒಪ್ಪಿಕೊಳ್ಳಬೇಕು ಮತ್ತು ಪ್ರಕಟಣೆಯ ಹೆಸರು ಮತ್ತು ಸಂಚಿಕೆ ಸಂಖ್ಯೆಯನ್ನು ನಿರ್ದಿಷ್ಟವಾಗಿ ತಿಳಿಸಬೇಕು.  ಸದರಿ ಸಂಪನ್ಮೂಲದ ಜೊತೆಯಲ್ಲಿ  ಮೂಲ ಕಾಪಿ ರೈಟ್ ಹೊಂದಿರುವಾತನು ನೀಡಿದ ಅನುಮತಿ ಪತ್ರದ ಒಂದು ಪ್ರತಿಯನ್ನು ಇರಿಸಿ ಪೋರ್ಟಲ್ ತಂಡಕ್ಕೆ ಕಳುಹಿಸಿಕೊಡಬೇಕು.  www.teachersofIndia.org ನಲ್ಲಿ ಮೊದಲು ಪ್ರಕಟಿಸಲಾದ ತಮ್ಮ ಲೇಖನವನ್ನು ಮತ್ತೆ ಪ್ರಕಟಿಸಲು ಲೇಖಕರಿಗೆ ಅವಕಾಶವಿದೆ.  ಅವರು ತಪ್ಪದೇ ಈ ಲೇಖನವು ಮೊದಲು www.teachersofIndia.org ನಲ್ಲಿ ಪ್ರಕಟವಾಗಿತ್ತು ಎಂಬುದನ್ನು ಒಪ್ಪಿಕೊಳ್ಳಬೇಕು.

ವೈಚಾರಿಕ ಪ್ರಾಮಾಣಿಕತೆ (ಕಾಪಿರೈಟು ಮತ್ತು  ಕೃತಿಚೌರ್ಯ)

     ಟೀಚರ್ಸ್ ಪೋರ್ಟಲ್ ಬೌದ್ಧಿಕ ಸಂಪತ್ತಿನ ಹಕ್ಕುಗಳಿಗೆ ಮನ್ನಣೆ ನೀಡುತ್ತದೆ.  ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ.  ಆದ್ದರಿಂದ ನಮಗೆ ಲೇಖನವನ್ನು ಕಳುಹಿಸುವವರೂ ಇದನ್ನು ತಪ್ಪದೇ ಪಾಲಿಸಬೇಕೆಂದು ವಿನಂತಿಸಲಾಗಿದೆ.  ನಮಗೆ ನೀವು ಒಂದು ಲೇಖನವನ್ನು ಕಳುಹಿಸಿ ಕೊಟ್ಟಾಗ  (ವ್ಯಕ್ತವಾಗಿ ಅನ್ಯಥಾ ಒಪ್ಪಿಕೊಂಡ ಹೊರತು) ಅದೊಂದು ಮೂಲ ಲೇಖನ ಮತ್ತು ಅದರಲ್ಲಿ  ಯಾವುದೇ ಕೃತಿಚೌರ್ಯ  ಇಲ್ಲ ಎಂದು ಘೋಷಿಸಿದಂತೆ.

    ಪೋರ್ಟಲ್ಲಿಗೆ ಒಮ್ಮೆ ಕಳುಹಿಸಿ ಕೊಟ್ಟ ಸಂಪನ್ಮೂಲಗಳನ್ನು ಅದನ್ನು ಪೋರ್ಟಲ್ಲಿಗೆ ಶಾಶ್ವತವಾಗಿ ಕಳುಹಿಸಿಕೊಟ್ಟಂತೆ ಪರಿಗಣಿಸಲಾಗುವುದು.  ಅದನ್ನು ಪೋರ್ಟಲ್ಲಿಗೆ ಹೋಗಿ ಹಿಂತಿರುಗಿ ಪಡೆಯಲು ಅಥವಾ ಅಲ್ಲಿಂದ ತೆಗೆದು ಹಾಕಲು ಯಾವುದೇ ಹಕ್ಕನ್ನು ಲೇಖಕರು ಹೊಂದಿರುವುದಿಲ್ಲ.  ಯಾವುದೇ ಕಾರಣದಿಂದ ಯಾರಾದರೂ ಆ ಸಂಪನ್ಮೂಲವನ್ನು ಹಿಂತೆಗೆದುಕೊಳ್ಳಲು ಇಚ್ಚಿಸಿದರೆ ಅವರು ಆ ಬಗ್ಗೆ ಪೋರ್ಟಲ್ಲಿನ ಸಂಪಾದಕರಿಗೆ ಪತ್ರ ಬರೆಯ ಬಹುದು.

     ಲೇಖನಗಳ ವಿಷಯದಲ್ಲಿ ನಾವು ಇಷ್ಟೆಲ್ಲಾ ಮುಕ್ತವಾಗಿದ್ದರೂ ನಮ್ಮ ಸಂಪಾದಕ ಮಂಡಳಿಯು ಯಾವುದೇ ಸಂಪನ್ಮೂಲವನ್ನು ಇದು ಪೋರ್ಟಲ್ಲಿನ ಪ್ರಾಥಮಿಕ ಓದುಗರಿಗೆ ಉತ್ತಮ ಅಭಿರುಚಿಯದ್ದಲ್ಲ ಅಥವಾ ಅವರಿಗೆ ಸೂಕ್ತವಾದದ್ದಲ್ಲ ಎಂದು ಪರಿಗಣಿಸಿದರೆ ಅದನ್ನು ಪ್ರಕಟಿಸದೇ ಇರಲು ತನ್ನ ಹಕ್ಕನ್ನು ಕಾಯ್ದಿರಿಸುತ್ತದೆ.  ಯಾವುದೇ ಟೀಕೆ ಅಥವಾ ಲೇಖನವನ್ನು ಅದರ ಲೇಖಕರಿಗೆ ಯಾವುದೇ ಕಾರಣವನ್ನು ಕೊಡದೇ ಅಥವಾ ಅವರಿಗೆ ಪೂರ್ವಮಾಹಿತಿ ನೀಡದೆ ತೆಗೆದು ಹಾಕುವ ಹಕ್ಕನ್ನು ಟೀಚರ್ಸ್ ಪೋರ್ಟಲ್ ಕಾಯ್ದಿರಿಸುತ್ತದೆ.

ನಿರ್ಬಾಧ್ಯತೆ: ಟೀಚರ್ಸ್ ಆಫ್ ಇಂಡಿಯಾ ಪೋರ್ಟಲ್ ಶಿಕ್ಷಕರು, ಶಿಕ್ಷಕರ ಬೋಧಕರು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇತರರಿಗಾಗಿ ಅವರು ತಮಗೆ ಸಂಬಂಧಪಟ್ಟ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಒಂದು ಸಂವಾದ ವೇದಿಕೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಅಲ್ಲದೆ ಟೀಚರ್ಸ್ ಆಫ್ ಇಂಡಿಯಾ ಶಿಕ್ಷಣಕ್ಕೆ ಸಂಬಂಧಪಟ್ಟ ಅನೇಕ ವೆಬ್ ಸೈಟುಗಳಿಗೂ ಲಿಂಕು (ಕೊಂಡಿ)ಗಳನ್ನು ಒದಗಿಸುತ್ತದೆ. ಹಾಗೆಂದ ಮಾತ್ರಕ್ಕೆ ತನ್ನ ಬಳಕೆದಾರರು/ ವೆಬ್ ಸೈಟುಗಳು ವ್ಯಕ್ತ ಪಡಿಸಿದ ಅಭಿಪ್ರಾಯಗಳನ್ನೆಲ್ಲಾ ಈ ಪೋರ್ಟಲ್ ಅನುಮೋದಿಸುತ್ತದೆ ಎಂದು ಅರ್ಥಮಾಡಬಾರದು ಹಾಗೂ ಅಂಥ ಮಾಹಿತಿಗಳ ಯಥಾರ್ಥತೆಯನ್ನು ಪರಿಶೀಲಿಸಿ ನೋಡಲು ನಮ್ಮ ಬಳಿ ಯಾವ ಸಾಧನವೂ ಇರುವುದಿಲ್ಲ. ಟೀಚರ್ಸ್ ಆಫ್ ಇಂಡಿಯಾ ಪೋರ್ಟಲ್ನಲ್ಲಿ ಪ್ರಕಟವಾದ ಮಾಹಿತಿ,ವ್ಯಾಖ್ಯಾನ ಮತ್ತು ತೀರ್ಮಾನಗಳನ್ನು ಬಳಸಿಕೊಂಡದ್ದರಿಂದ ಅಥವಾ ಅವು ಲಭ್ಯವಾದದ್ದರಿಂದ ಉಂಟಾದ ಯಾವುದೇ ಬಗೆಯ ಪ್ರತ್ಯಕ್ಷ/ಪರೋಕ್ಷ ನಷ್ಟ ಅಥವಾ ಹಾನಿಗೆ ಟೀಚರ್ಸ್ ಆಫ್ ಇಂಡಿಯಾ ಪೋರ್ಟಲ್ ಹೊಣೆಗಾರರಲ್ಲ.

 

19821 ನೊಂದಾಯಿತ ಬಳಕೆದಾರರು
7791 ಸಂಪನ್ಮೂಲಗಳು