ಹೆಣ್ಣು ಭ್ರೂಣಹತ್ಯೆ –ಪಾತಕ ಪಿಡುಗು

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಪ್ರಗತಿಯನ್ನು ಈಗ ಬಲು ಕೆಟ್ಟ ಕೆಲಸಗಳಿಗಾಗಿ ಬಳಸಲಾಗುತ್ತದೆ .
ಅಲ್ಟ್ರಾಸೊನೋಗ್ರಫಿ ಎಂಬುದು
ಅತೀತ ಶಬ್ದ ಅಲೆಗಳನ್ನು ಬಳಸಿ  ಮಾನವ ದೇಹದ ನ್ಯೂನತೆಗಳನ್ನು ನಿರ್ಧರಿಸುವ ವಿಧಾನ , ಈಗ ಅದನ್ನು ತಾಯಿಯ ಗರ್ಭದ ಒಳಗೆ  ಇರುವ ಭ್ರೂಣದ ಲಿಂಗವನ್ನು ಕಂಡುಹಿಡಿಯಲು ತಪ್ಪಾಗಿ ಬಳಸಲಾಗುತ್ತದೆ . ತಂದೆ ತಾಯಿಗಳು ಇನ್ನೂ ಹುಟ್ಟದೇ ಇರುವ ಮಗುವಿನ ಲಿಂಗವನ್ನು ಈ ರೀತಿಯಲ್ಲಿ ಕಂಡುಹಿಡಿದು ಅದು ಹೆಣ್ಣಾಗಿದ್ದ್ದರೆ ಆ ಗರ್ಭವನ್ನೇ ತೆಗೆಸಿಹಾಕಿಬಿಡುತ್ತಾರೆ. ಇದು ದೇಶದ ಜನಸಂಖ್ಯೆಯಲ್ಲಿ ಲಿಂಗದ ಅನುಪಾತವನ್ನು ಏರುಪೇರು ಮಾಡಿರುವುದೇ ಅಲ್ಲದೆ ಸಮಾಜದಲ್ಲಿ ಅನೇಕ ಸಮಸ್ಯೆಗಳನ್ನು ಸೃಷ್ಟಿಸಿದೆ .ಏಕೆ  ಇಂಥ ಬರ್ಬರ ಕ್ರೌರ್ಯ  ನಡೆಸಲಾಗುತ್ತಿದೆ ? ಈ ಪ್ರಶ್ನೆಗೆ ಉತ್ತರವನ್ನು ಸಮಾಜವೇ ಕೊಡಬೇಕು .
ಭಾರತೀಯ ಸಮಾಜದಲ್ಲಿ , ಮಹಿಳೆಯರಿಗೆ ಸ್ವಾತಂತ್ರ್ಯಇಲ್ಲದೇ ಇರುವುದು ಅವರು ಜೀವನವಿಡೀ ಬೇರೊಬ್ಬರನ್ನು ಅವಲಂಬಿಸಿಯೇ ಬಾಳಬೇಕಾದದ್ದು,ಪುರುಷರಿಗೆ ಒಂದು ಪ್ರಾಮುಖ್ಯತೆಯನ್ನು ಒದಗಿಸಿದೆ. ಆದರೆ ತಂದೆತಾಯಿಗಳು  ಹೆಣ್ಣುಮಗು ಎಂದರೆ ಭಯ ಪಡುವ ಹಾಗೆ ಮಾಡಿದೆ. ಬಹಳ ಹಿಂದಿನ ಕಾಲದಿಂದಲೂ ತಂದೆತಾಯಿಗಳು, ಹೆಣ್ಣು ಮಕ್ಕಳು ಎಂದರೆ ಹೊರೆ ಎಂದು ಪರಿಗಣಿಸುತ್ತಿದ್ದಾರೆ.ಚಿಕ್ಕ ವಯಸ್ಸಿನಲ್ಲಿಯೇ ಅವರಿಗೆ ಒಂದು ಒಳ್ಳೆಯ ಗಂಡನ್ನು ಹುಡುಕಿ ಹುಡುಗಿಯರಿಗೆ ಮದುವೆ ಮಾಡುವುದು ಶ್ರೇಷ್ಠ ಎಂಬ ನಂಬಿಕೆ ಬೆಳೆದು ಬಂದಿದೆ.ಹೆಣ್ಣು ಮಗುವಿನ ಜನನದ ನಂತರ ಒಂದು ಗಂಡು ಮಗು ಆದರೆ ಸಾಕಪ್ಪಾ ಎಂದು ತಂದೆ ತಾಯಿಗಳು ತಹತಹಿಸುತ್ತಿರುತ್ತಾರೆ,   ಈ ನಂಬಿಕೆ ಇಲ್ಲಿಯವರೆಗೆ ಎಷ್ಟು ಆಳವಾಗಿ ಹುಡುಗಿಯ ಮನಸ್ಸಿನಲ್ಲಿ ಬೇರೂರಿರುತ್ತದೆ ಎಂದರೆ ಅವರು ಒಮ್ಮೆ ಮದುವೆಯಾದ ತರುವಾಯ  ತುಂಬಾ ಸುಲಭವಾಗಿ ಪತಿ ಮತ್ತು ಆತನ ಕುಟುಂಬಕ್ಕೆ ತನ್ನ ಎಲ್ಲಾ ಗಮನವನ್ನು ಕೊಡಲಾರಂಭಿಸುತ್ತಾರೆ. ಹುಡುಗಿಯ ಕುಟುಂಬದವರು ಮಗಳ ಮದುವೆಯ ಕಾಲಕ್ಕೆ ಬೀಗರಿಗೆ ಭಾರಿ ವರದಕ್ಷಿಣೆ ಹಣ ಕೊಡಬೇಕಾಗುತ್ತದೆ
.

ತಮ್ಮ ಬದುಕಿನ ಉಳಿದ ಭಾಗವನ್ನು ಅವರ ಬೇಡಿಕೆ ಆಶೋತ್ತರವನ್ನು ಪೂರೈಸಲು ವಿನಿಯೋಗಿಸಬೇಕಾಗುತ್ತದೆ.ಮಗಳಿಗೆ ಬೀಗರು ಕಿರುಕುಳ ಕೊಡಬಾರದು  ಎಂಬುದಕ್ಕಾಗಿ ಇದೆಲ್ಲಾ ಅವರು ಮಾಡಬೇಕಾಗುತ್ತದೆ. ಆದರೆ,ಈ ಎಲ್ಲಾ ಕೋಟಲೆಗಳು ಗಂಡುಮಗುವಿಗೆ ಅನ್ವಯಿಸುವುದಿಲ್ಲ . ಅವನನ್ನು ಎಂದೂ ಒಂದು ಹೊರೆ ಎಂದು ಭಾವಿಸುವುದಿಲ್ಲ ಅಥವಾ ವಧುದಕ್ಷಿಣೆ ಶುಲ್ಕವಿಲ್ಲ. ವಧುವಿನ ಕುಟುಂಬದ ಕಡೆಗೆ ತಮ್ಮ ಗಮನವನ್ನು ವರ್ಗಾಯಿಸ ಬೇಕಾದ ಪ್ರಮೇಯವಿಲ್ಲ.ನಮ್ಮ ಸಮಾಜವು ಒಂದು ಹುಡುಗಿ ಹಾಗೂ ಒಂದು ಹುಡುಗನ ನಡುವೆ ದೊಡ್ಡ ವ್ಯತ್ಯಾಸವನ್ನು ಸೃಷ್ಟಿಸಿದೆ . ಮಹಿಳೆಯರ ಉದ್ಧಾರದ  ಕಡೆಗೆ ಶ್ರಮಿಸುವ ಆಶಯದೊಂದಿಗೆ ಹೊರಟ ಸಮಾಜವು ಕಾಲಾಂತರದಲ್ಲಿ ಅವಳ ವಿರುದ್ಧವೇ ಕೆಲಸ ಮಾಡಿದೆ. ಹೀಗಿರುವಾಗ  ಪೋಷಕರು ಹೆಣ್ಣು ಮಗು  ಬೇಕು ಎಂದು ಏಕೆ ಬಯಸುತ್ತಾರೆ  ಹೇಳಿ?
ಭಾರತೀಯ ಸಮಾಜದಲ್ಲಿ ಹೆಣ್ಣಾಗಿ ಹುಟ್ಟುವುದೇ ಒಂದು ಶಾಪ  . ಹೆಣ್ಣು ಮಗುವಿನ ಮರಣ ಪ್ರಮಾಣ ಕೂಡಾ ಹೆಚ್ಚಾಗುತ್ತದೆ . ಇದಕ್ಕೆ ಕಾರಣ ಆರೋಗ್ಯ ಮತ್ತು ಪೌಷ್ಟಿಕತೆಯ ವಿಚಾರದಲ್ಲಿ ಹೆಣ್ಣು ಮಗುವಿಗೆ ತಂದೆತಾಯಿಯರು ತೋರುವ ತಾರತಮ್ಯ . ಪುರುಷ ಪ್ರಧಾನತೆ ಒಂದು ಪಿಡುಗಾಗಿ ಬೆಳೆದಿದೆ ಮತ್ತು  ಬಡವ ಬಲ್ಲಿದ, ವಿದ್ಯಾವಂತ ಅಥವಾ ಅಶಿಕ್ಷಿತ  ಎಂಬ ಭೇದ ವಿಲ್ಲದೆ ಎಲ್ಲರ ಮೇಲೂ ಪ್ರಭಾವ ಬೀರಿದೆ . ಮಗನಿಗೆ ಎಷ್ಟೊಂದು ಪ್ರಾಮುಖ್ಯತೆ ಎಂದರೆ ಎರಡು ಅಥವಾ ಹೆಚ್ಚು ಹೆಣ್ಣು ಮಕ್ಕಳನ್ನು ಹೊಂದಿರುವ ತಂದೆತಾಯಂದಿರು ಮುಂದಿನ ಮಗುವಾದರೂ ಗಂಡು ಮಗುವಾಗಲಿ ಎಂದು ಕಾತರಿಸುವುದು  ಅಸಾಮಾನ್ಯವೇನಲ್ಲ. ಇದೇ  ಭಾರತದ ಜನಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಿದೆ.

2001 ರ ಜನಗಣತಿಯ ಪ್ರಕಾರ , ಪ್ರತಿ 1000 ಪುರುಷರಿಗೆ 933 ಸ್ತ್ರೀಯರಿದ್ದಾರೆ. 1981 ರಿಂದ 1991 ರವರೆಗೆ ಹದಿನೆಂಟು ಪಾಯಿಂಟ್ ಇಳಿಕೆ ನಂತರ ಒಂದು ಅಭಿವೃದ್ಧಿ ಇದು 1991 ರಿಂದ 2001 ರಲ್ಲಿ ಪುರುಷ-ಸ್ತ್ರೀ ಅನುಪಾತ ದಲ್ಲಿ ಆರು ಪಾಯಿಂಟ್ ಸುಧಾರಣೆ, ಕಂಡುಬಂದಿರುವುದು ಪ್ರೋತ್ಸಾಹದಾಯಕ. ಈ ಎಲ್ಲಾ ಅಂಕಿ ಅಂಶಗಳು ಭಾರತದಲ್ಲಿ ವ್ಯಾಪಕ ಸ್ತ್ರೀ ಭ್ರೂಣಹತ್ಯೆಯ ಸಾಕ್ಷಿಯಾಗಿವೆ. ಮಹಾರಾಷ್ಟ್ರ , ದೆಹಲಿ , ಪಂಜಾಬ್ , ಹರಿಯಾಣ ಮತ್ತು ಗುಜರಾತ್ ಮೊದಲಾದ ಬಹುತೇಕ ಉತ್ತರ ಭಾರತದ ರಾಜ್ಯಗಳಲ್ಲಿ ಈ ಅನುಪಾತ ಕಡಿದಾದ ಕುಸಿತ ಕಂಡಿವೆ . ಪಂಜಾಬ್ , ಹರಿಯಾಣ ಮತ್ತು ಗುಜರಾತ್ ನಲ್ಲಿ ಮಹಿಳೆಯರ ಸಂಖ್ಯೆ  ಪ್ರತಿ ಸಾವಿರ ಗಂಡಿಗೆ ಕ್ರಮವಾಗಿ ಕೇವಲ 874 , 861 ಮತ್ತು 921 ತಲುಪುತ್ತದೆ . ಭಾರತದಲ್ಲಿ ಪ್ರತಿ 1000 ಪುರುಷರಿಗೆ 1058 ಮಹಿಳೆಯರನ್ನು ಹೊಂದಿರುವ ಏಕೈಕ ರಾಜ್ಯ ಕೇರಳ. ಕೇರಳದಲ್ಲಿ , ಕುಟುಂಬದ ಮಗಳು ಪಿತ್ರಾರ್ಜಿತ ಆಸ್ತಿಯ ಉತ್ತರಾಧಿಕಾರ ಪಡೆಯುವ ಕಾರಣ ಮತ್ತು ಹೀಗೆ ಹುಡುಗಿಯರು ಆರ್ಥಿಕವಾಗಿ ಸ್ವತಂತ್ರ ವಾಗಿರುವ ಕಾರಣ ಇದು ಸಾಧ್ಯವಾಗಿದೆ ಎಂದು  ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ  .

 ವಿಶ್ವಸಂಸ್ಥೆ ಮಕ‍್ಕಳ ನಿಧಿಯ ಇತ್ತೀಚಿನ ವರದಿಯೊಂದರ ಪ್ರಕಾರ, ವ್ಯವಸ್ಥಿತ ಲಿಂಗ ತಾರತಮ್ಯದ ಪರಿಣಾಮವಾಗಿ ಭಾರತದ ಜನಸಂಖ್ಯೆಯಿಂದ 50 ಮಿಲಿಯನ್ ಹುಡುಗಿಯರು ಮತ್ತು ಮಹಿಳೆಯರು ಕಾಣೆಯಾಗಿರುತ್ತಾರೆ.  ಜನಿಸಿ ಒಂದು ದಿನವಾಗಿರುವ ಹೆಣ್ಣು ಮಕ್ಕಳನ್ನು ದೇವಾಲಯಗಳ, ಚರ್ಚ್ ಗಳ ಬಾಗಿಲು ಬಳಿಬಿಟ್ಟು ಏನೂ ಅರಿಯದ ಹಸುಕಂದನ ಭವಿಷ್ಯವನ್ನು ದೇವರ ಕೈಯಲ್ಲಿ ಬಿಡುತ್ತಿರುವ ಅನೇಕ ಪ್ರಕರಣಗಳಿವೆ.  ಮಕ್ಕಳಿಲ್ಲದವರಿಗೆ  ಹೆಣ್ಣು ಮಗುವಿನ ಮಾರಾಟ ಮತ್ತೊಂದು ಹೇಯ ಪ್ರಕರಣವಾಗಿದೆ .

ಕಾಲಕ್ರಮದಲ್ಲಿ ಭಾರತೀಯ ಸಮಾಜ ಬದಲಾಗಿದೆ , ಆದರೆ ಇದು ಮಹಿಳೆಯರ ಸುಧಾರಣೆಯ ದಿಶೆಯಲ್ಲಿ  ಸಾಗುತ್ತಿರುವ ಗತಿ  ತುಂಬಾ ನಿಧಾನ . ನಾವು ಇದರ  ವೇಗವನ್ನು ತ್ವರಿತಗೊಳಿಸಬೇಕಾದ ಅಗತ್ಯವಿದೆ. ಭಾರತದಲ್ಲಿ ಮಹಿಳೆಯರ ಪರಿಸ್ಥಿತಿ ಸುಧಾರಣೆಗೆ ಮತ್ತು ಕುಸಿದಿರುವ ಲಿಂಗ ಅನುಪಾತವನ್ನು ಹೆಚ್ಚಿಸುವುದಕ್ಕೆ ಭಾರತ ಸರ್ಕಾರವು ಹಲವಾರು ಯೋಜನೆಗಳನ್ನುಪ್ರಾರಂಭಿಸಿದೆ . ಪ್ರಸ್ತುತ ಅಸ್ತಿತ್ವದಲ್ಲಿರುವ ಪ್ರವೃತ್ತಿಯು ಮಾನವ ಹಕ್ಕು ಸಂಘಟನೆಗಳು , ಸರ್ಕಾರ , ಸರ್ಕಾರೇತರ ಸಂಸ್ಥೆಗಳು , ಬುದ್ಧಿಜೀವಿಗಳು , ಧಾರ್ಮಿಕ ಸಂಸ್ಥೆಗಳು ಮತ್ತು ಇತರರಿಂದ ಆಕ್ರೋಶದ ಫಲಶ್ರುತಿಯಾಗಿದೆ. ಸರ್ಕಾರ  ಪ್ರಸವಪೂರ್ವ ಲಿಂಗ ನಿರ್ಣಯವನ್ನು ನಿಷೇಧಿಸಿದೆ .ಭಾರತ ದಂಡ ಸಂಹಿತೆಯ ಕಲಂ 23( 3 ),ರ ಪ್ರಕಾರ ಯಾರಾದರೂ ವ್ಯಕ್ತಿಯು ಗರ್ಭಿಣಿ ಮಹಿಳೆಯರ ಮೇಲೆ ಪ್ರಸವಪೂರ್ವ ಲಿಂಗ ನಿರ್ಣಯವನ್ನು ಮಾಡಬೇಕೆಂದು ಒಂದು ಆನುವಂಶಿಕ ಸಮಾಲೋಚನೆ ಕೇಂದ್ರದ , ರೋಗ ನಿಧಾನ ಲ್ಯಾಬ್, ಮತ್ತು ಸ್ತ್ರೀರೋಗತಜ್ಞರ ನೆರವು ಬೇಡಿದರೆ  3 ವರ್ಷಗಳ ಕಾಲ ಸೆರೆವಾಸ ಶಿಕ್ಷೆ ಜೊತೆಗೆ 10,000 ರೂಪಾಯಿ ಜುಲ್ಮಾನೆ ಸಂದಾಯಮಾಡಲು ಹೊಣೆಯಾಗುತ್ತಾನೆ.

ಈ ಕಾನೂನುಗಳನ್ನು ರಚಿಸಿದ್ದರೂ ಅವನ್ನು  ಜಾರಿಗೊಳಿಸುತ್ತಿಲ್ಲ ಎಂಬುದು ದುರದೃಷ್ಟಕರ ವಿಷಯ . ಸ್ತ್ರೀ ಭ್ರೂಣಹತ್ಯೆಯ ದುರಾಚಾರ ಇನ್ನೂ ನಡೆಯುತ್ತಲೇ ಇದೆ.  ಸ್ತ್ರೀ ಭ್ರೂಣಹತ್ಯೆಯ ಕ್ರೂರ ಕಾರ್ಯವನ್ನು ಸಜ್ಜನರು ಬಹಿರಂಗವಾಗಿ ಮಾಡುವಂತಿಲ್ಲವಾದ ಕಾರಣ ಇದನ್ನು  , ಕೈಪಳಗಿರದ , ಕಸುಬಿಗೆ ನಿಷ್ಠೆಯಿಲ್ಲದ ವೈದ್ಯರು ಮತ್ತು ಕೆಲವೊಮ್ಮೆ ಕಾಂಪೌಂಡರ್ ಗಳು ರಹಸ್ಯವಾಗಿ ಮಾಡುತ್ತಿದ್ದಾರೆ. ಇದು ಅನೇಕ ರೀತಿಯ ರೋಗಗಳಿಗೆ ಕಾರಣವಾಗುತ್ತದೆ . ಪದೇ ಪದೇ ಗರ್ಭಪಾತವಾದ ಮಹಿಳೆಯ ಶರೀರ ಮತ್ತು ಹೃದಯದ ಕಾರ್ಯಗಳು ಕುಂಠಿತವಾಗುತ್ತವೆ. ಇದು ಅಪಾಯಕಾರಿ ಮಾನಸಿಕ ಪರಿಣಾಮಗಳನ್ನು ಹೊಂದಿದೆ . ಸ್ವಯಂ ಗರ್ಭಪಾತ ಮಾನಸಿಕವಾಗಿ ತಾಯಿಗೆ ಒಂದು ಆಘಾತಕಾರಿ ಘಟನೆಯಾಗಿದೆ .  ಇದರ ಪರಿಣಾಮವಾಗಿ , ಮಹಿಳೆಯರಿಗಾಗಿಯೇ ಬೇಟೆ ಸಾಮಾನ್ಯವಾಗಿಹೋಗಿದೆ . ಇದು ಮಹಿಳೆಯರ ಪರಿಪಾಟನ್ನು ಇನ್ನೂ ಹೆಚ್ಚಿಸಿದೆ.

1998 ರಲ್ಲಿ ಮಾನವ ಹಕ್ಕುಗಳ ಘೋಷಣೆಯ 50 ನೇ ವಾರ್ಷಿಕೋತ್ಸವದ ಅಂಗವಾಗಿ ವಿಶ್ವಸಂಸ್ಥೆಯು ಲಿಂಗ ಆಧಾರಿತ ಹಿಂಸಾಚಾರ ಹೋಗಲಾಡಿಸುವ ಜಾಗತಿಕ ಅಭಿಯಾನವನ್ನು ಆರಂಭಿಸಿತು .ಇದರ ಉದ್ದೇಶ ಈ ಸಮಸ್ಯೆಯನ್ನು ಕಡೆಗೆ ಸಾರ್ವಜನಿಕ ವರ್ತನೆಯನ್ನು ಪರಿವರ್ತಿಸುವುದು.ಹೆಣ್ಣು ಮಗುವಿನ ಭ್ರೂಣಹತ್ಯೆಯು ಹೆಂಗಸರ ವಿರುದ್ಧ ನಡೆಯುತ್ತಿರುವ ಹಿಂಸೆಯ ಪರಮಾವಧಿ. ಇದು ದೇಶಾದ್ಯಂತ ಅಡೆತಡೆ ಇಲ್ಲದೆ ಹಬ್ಬಿ ಹರಡುತ್ತಿರುವ ಸಾಮಾಜಿಕ ಸಮಸ್ಯೆ. ಹೆಣ್ಣು ಮಗುವಿನ  ಭ್ರೂಣಹತ್ಯೆಯು ಎಲ್ಲಾ ಜೀವಿಗಳ ಮೊತ್ತ ಮೊದಲ ಜನ್ಮಸಿದ್ಧ ಮೂಲಭೂತ ಹಕ್ಕಾದ"ಜೀವಿಸುವ ಹಕ್ಕನ್ನು" ಕಸಿದುಕೊಳ್ಳುತ್ತದೆ.

ನಮ್ಮ ನವ ಪೀಳಿಗೆಯು ಈ ಗಂಭೀರ ಸಮಸ್ಯೆಯನ್ನು ಹೋಗಲಾಡಿಸಲು ಶ್ರಮಿಸಬೇಕು. ಈಗಾಗಲೇ ನಿಷೇಧಿಸಲ್ಪಟ್ಟಿರುವ ವರದಕ್ಷಿಣೆ ವಸೂಲಿ ನಿಷೇಧಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು . ಮಹಿಳೆಯರಿಗೆ ವೃತ್ತಿಪರ ತರಬೇತಿಯನ್ನು ನೀಡಬೇಕು, ಬಡ ಜನತೆಗೆ ಉಚಿತ ಸಲಹೆ ನೀಡಬೇಕು . ಬಾಲಕಿಯರಿಗಾಗಿಯೇ ಉಚಿತ  ಮತ್ತು ಉನ್ನತ ಗುಣಮಟ್ಟದ ಶಿಶುವಿಹಾರಗಳನ್ನು ಮತ್ತು ಅಂಗನವಾಡಿ ಶಾಲೆಗಳನ್ನು ವ್ಯಾಪಕವಾಗಿ ಸ್ಥಾಪಿಸಬೇಕು . ಇದು ಮಹಿಳೆಯರಿಗೂ ಉದ್ಯೋಗಾವಕಾಶ ನೀಡುತ್ತದೆ . ಮಹಿಳೆಯರಿಗೆ ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ವ್ಯಾಪಕ ತಿಳಿವಳಿಕೆ ಕೊಡಬೇಕು . ಕೇವಲ ವೈದ್ಯಕೀಯ ಕಾರಣಗಳಿಗಾಗಿ ಗರ್ಭಪಾತ ಮಾಡುವಂತೆ ಕಾಯಿದೆ ಮಾಡಬೇಕು . ಇದರ ಜೊತೆಗೆ ಜನನ ನಿಯಂತ್ರಣ ಕ್ರಮಗಳನ್ನು ವ್ಯಾಪಕವಾಗಿ ದೊರೆಯುವಂತೆ ಮಾಡಬೇಕು. ಇಲ್ಲದಿದ್ದರೆ, ಹೊಸ ಕಾನೂನಿನ ಜಾರಿಯಿಂದ ಅನಗತ್ಯ ಹೆಣ್ಣುಮಗುವಿನ ಬಗ್ಗೆ ಪೋಷಕರು ಹೆಚ್ಚಿನ ಸಂಕಷ್ಟ ಪಡಲು ಕಾರಣವಾಗುತ್ತದೆ .  ಹೆಣ್ಣು ಭ್ರೂಣಹತ್ಯೆ ಮತ್ತು ಹೆಣ್ಣು ಮಗುವಿನ ಬದುಕುಳಿಯುವ ಪ್ರಮಾಣವನ್ನು ನಿಕಟವಾಗಿ ಗಮನಿಸುವ ಉದ್ದೇಶದಿಂದ ಭಾರತದ ರಿಜಿಸ್ಟ್ರಾರ್ ಜನರಲ್ಅವರು , ಪ್ರತಿ ತಿಂಗಳು ದಾಖಲಾಗುವ  ಜನನಗಳಲ್ಲಿ ಲಿಂಗ ಅನುಪಾತವು ಎಷ್ಟಿದೆ ಎಂದು ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕೆಂದು ಜನನ-ಮರಣಗಳ  ಎಲ್ಲಾ ಮುಖ್ಯ ನೋಂದಣಿ ಅಧಿಕಾರಿಗಳಿಗೆ  ಕಡ್ಡಾಯವಾಗಿ ಮಾಡಿದ್ದಾರೆ .

ಹೆಣ್ಣು ಭ್ರೂಣಹತ್ಯೆ ನಮ್ಮ ಸಮಾಜದಲ್ಲೇ ನಡೆಯುತ್ತಿದೆ ಅದನ್ನು ಮಾಡುವವರು ನಮ್ಮ ನಡುವೆಯೇ  ವಾಸಿಸುತ್ತಿದ್ದಾರೆ. ಆದರೆ ಈ ಪಿಡುಗಿನ ಮೂಲ ಕಾರಣ ಗಂಡು ಮಕ್ಕಳೇ ಮೇಲು  ಹೆಣ್ಣುಮಕ್ಕಳು ಒಂದು ಹೊಣೆಗಾರಿಕೆ ಎಂಬಂತೆ ಮಾಡಿದ ನಮ್ಮ ಇದು ಸಾಮಾಜಿಕ ವ್ಯವಸ್ಥೆ ಯಾಗಿದೆ.ನಾವು , ನಮ್ಮನ್ನು ಮತ್ತು ಹೆಣ್ಣು- ಗಂಡುಗಳಬಗ್ಗೆ ನಮ್ಮಭೇದ ಭಾವವನ್ನು ಬದಲಾಯಿಸಿಕೊಳ್ಳಲು ನಾವು ಶ್ರಮಿಸಬೇಕಾಗಿದೆ. ನಾವು ಹೆಣ್ಣು ಮತ್ತು ಗಂಡು ಮಕ್ಕಳಿಗೆ ಅಂದರೆ  ಪುರುಷ ಮತ್ತು ಮಹಿಳೆಯರಿಗೆ ಎಲ್ಲಿಯವರೆಗೆ ಸಮಾನ ಪ್ರಾಮುಖ್ಯತೆಯನ್ನು ಅಲ್ಲಿಯವರೆಗೆ ಹೆಣ್ಣು ಭ್ರೂಣಹತ್ಯೆ ನಮ್ಮ ಸಮಾಜದಲ್ಲಿ ಮುಂದುವರಿಯುತ್ತಲೇ ಇರುತ್ತವೆ . ಈ ಹುಟ್ಟಲಿರುವ ಮತ್ತು ಜೀವ ಕಳೆದುಕೊಂಡ ಹುಡುಗಿಯರು ಬದುಕ್ಕಿದ್ದರೆ ನಿಮಗೆ ಮತ್ತು ರಾಷ್ಟ್ರಕ್ಕೆ ಆನಂದ ಮತ್ತು ಸಂಭ್ರಮಕ್ಕೆ ಎಡೆಮಾಡಿಕೊಡಬಹುದಿತ್ತು. ಅವರು ವೈದ್ಯರು , ಎಂಜಿನಿಯರ್ ಗಳು ಮತ್ತು ವಿಮಾನ ಚಾಲಕರು ಆಗಬಹುದಿತ್ತು ಬಲ್ಲವರಾರು? . ಅದೇ ಸಮಯದಲ್ಲಿ , ಅವರು ಒಳ್ಳೆಯ ಹೆಂಡತಿ ಮತ್ತು ಉತ್ತಮ ತಾಯಂದಿರು ಆಗುತ್ತಿದ್ದರು. .

ಆದ್ದರಿಂದ, ನಾವು ಹೇಳುವುದೇನೆಂದರೆ ಹೆಣ್ನು ಭ್ರೂಣಹತ್ಯೆ ನಮ್ಮ ನಡುವೆ ವಾಸಿಸುತ್ತಿರುವ ಭಯಂಕರ ಭೂತ ಮತ್ತು ನಮ್ಮ ಸುತ್ತಮುತ್ತಲ ಜನರ ಜೀವನವನ್ನು  ಯಾತನಾಮಯವನ್ನಾಗಿಸುತ್ತಿದೆ. ಆದ್ದರಿಂದ ಬನ್ನಿ! ಈ ಪಿಡುಗಿನ ವಿರುದ್ಧ ಒಟ್ಟಾಗಿ ನಿಂತು ನಾವೆಲ್ಲರೂ ಹೋರಾಡೋಣ. ಆ ಮಕ್ಕಳಿಗೆ ಬದುಕಲು ಅವಕಾಶ ನೀಡಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವಕಾಶ ನೀಡೋಣ .

ನಿಮಗೆ ನೆರವಾಗಲು ನಮಗೆ ಸಹಾಯ ನೀಡಿರಿ

 

18938 ನೊಂದಾಯಿತ ಬಳಕೆದಾರರು
7394 ಸಂಪನ್ಮೂಲಗಳು