ಹುಟ್ಟುವ ಮೊದಲೇ ಕೂಸಿಗೆ ಇಂಗ್ಲಿಷ್ ಪಾಠವೇ? ಯಾಕಾಗಬಾರದು?

ಪುಟ್ಟ ಮಕ್ಕಳ ಶಿಕ್ಷಣದಲ್ಲಿ ಮಾತೃ ಭಾಷೆ ವಿರುದ್ಧ ಇಂಗ್ಲೀಷ್ ಭಾಷೆ- ಒಂದು ವಿವೇಚನೆ.
 
                   ಓರಿಸ್ಸಾದ ಗಜಪತಿ  ಜಿಲ್ಲೆಯ  ತುಮುಲೋ ಎಂಬ ಹಳ್ಳಿಯಲ್ಲಿ ಸೌರಾ ಎಂಬ ಬುಡಕಟ್ಟು ಜನಾಂಗದಲ್ಲಿ ಹೆಣ್ಣು ಮಗು ಪಿಂಕಿ ಜನಿಸಿದಾಗ, ಅವಳ ತಂದೆ ತಾಯಿಗೆ ಹಿಗ್ಗಿನೌತಣ.   ನನ್ನ ಪಿಂಕಿ ಶಾಲೆಗೆ ಹೋಗ್ತಾಳೆ, ಚೆನ್ನಾಗಿ ಓದ್ತಾಳೆ - ಎಂದು ಅವಳ ತಂದೆ ಸಂಭ್ರಮಿಸಿದ. ಇದನ್ನು ಕೇಳಿ ಪಿಂಕಿಯ ತಾಯಿಯೂ ಸಂತಸಪಟ್ಟಳು.  "ಅಷ್ಟಾದರೆ ತುಂಬಾ ಒಳ್ಳೆಯದು, ನಮಗಂತೂ ಆ ಸೌಭಾಗ್ಯ ಇರಲಿಲ್ಲ, ಪಿಂಕಿ ಓದಿ ದೊಡ್ಡವಳಾಗಬೇಕು" ಎಂದಳು. ಪಿಂಕಿ ಬೆಳೆದಳು, ನಡೆದಾಡಲು ಪ್ರಾರಂಭಿಸಿದಳು ಮತ್ತು ತನ್ನ ತಂದೆಯ ಬೆರಳನ್ನು ಹಿಡಿದು ಹಳ್ಳಿಯ ಸಂತೆಗೆ ಹೋಗಲಾರಂಭಿಸಿದಳು. ಆಡುತ್ತಾ ನಲಿಯುತ್ತಾ ಹುಸಿನಗೆ ಬೀರಿ ಕೆಲವು ತೊದಲು ನುಡಿಗಳನ್ನು ಆಡುತ್ತಿದ್ದಳು. ಅವಳ ತೊದಲುನುಡಿ ಅರ್ಥ ಆಗದಿದ್ದರೂ ಆ ಬಾಲ ಭಾಷೆ ಕೇಳಿದವರು ಸಂತೋಷ ಪಡುತ್ತಿದ್ದರು.  ಬಹು ಬೇಗನೇ ಅವಳು ತನ್ನ ಸೌರಾ ಭಾಷೆಯಲ್ಲಿ ಹರುಕು ಮುರುಕು ವಾಕ್ಯಗಳನ್ನು ತನ್ನ ಪಾಲಕರೊಂದಿಗೆ, ಹಳ್ಳಿಗರೊಂದಿಗೆ ಮತ್ತು ಬೇರೆ ಇತರ ಮಕ್ಕಳೊಂದಿಗೆ ಮಾತನಾಡತೊಡಗಿದಳು. ಅವಳು ತನ್ನ ಸೌರಾ ಭಾಷೆಯಲ್ಲಿ ಅಪ್ಪ ಅಮ್ಮನನ್ನು ಕರೆಯುತಿದ್ದಳು. ತನ್ನ ಹಳ್ಳಿಯ ಸುತ್ತಮುತ್ತಲಿನ ಗಿಡ-ಮರಗಳ, ಹೂವು-ಹಣ್ಣುಗಳ ಮತ್ತು ಪ್ರಾಣಿಗಳ ಹೆಸರನ್ನು ಹೇಳುವಂತಾದಳು. ತನ್ನ ತಂದೆಯ ಹೆಗಲ ಮೇಲೆ ಕುಳಿತು, ಬಗಡಾಕ್ಕೆ (ಓಡಿಸ್ಸಾದ ಗಿರಿಜನರ ಸಾಗುವಳಿ ಭೂಮಿ) ಹೋಗುವ ದಾರಿಯಲ್ಲಿ ಕಂಡ ಎಲ್ಲಾ ಚಿಟ್ಟೆಗಳನ್ನು ತನ್ನ ತಂದೆಯೊಂದಿಗೆ ಎಣಿಸುತ್ತಾ ಹೋಗುತ್ತಿದ್ದಳು. ಹಳ್ಳಿಗರು ಪಿಂಕಿಯ ನಡೆನುಡಿಗಳಿಂದ ಅವಳನ್ನು ಇಷ್ಟ ಪಡುತ್ತಿದ್ದರು.  ಪಿಂಕಿ ತುಂಬಾ ಜಾಣೆ!  ಎನ್ನುತ್ತಿದ್ದರು. ಒಂದು ದಿನ ಹಳ್ಳಿಯ ಶಾಲಾ ಶಿಕ್ಷಕಿ ಬಂದು "ಪಿಂಕಿಗೆ ಆರು ವರ್ಷ ಆಯ್ತಲ್ಲಾ. ಅವಳನ್ನು ಶಾಲೆಗೆ ಕಳುಹಿಸಿ" ಎಂದರು. ಪಿಂಕಿಯ ಅಪ್ಪ ಅಮ್ಮ ಅವಳನ್ನು ಶಾಲೆಗೆ ಸೇರಿಸಲು ತುಂಬಾ ಖುಷಿಯಿಂದ ಕರೆದುಕೊಂಡುಹೋದರು. ಪಿಂಕಿಯೂ ಸಹ ಬಹಳ ಸಂತೋಷ ಪಟ್ಟಳು. ಅವಳಿಗೆ ಶಾಲೆಯಿಂದ ಹೊಸ ಪುಸ್ತಕ ಮತ್ತು ಬರಹದ ಪುಸ್ತಕ ದೊರೆಯಿತು. ಅವಳು ಅವುಗಳನ್ನು ತನ್ನ ತಾಯಿಗೆ ಹೆಮ್ಮೆಯಿಂದ ತೋರಿಸಿದಳು. ಆಗ ಅವಳ ತಾಯಿ " ಈ ಪುಸ್ತಕಗಳನ್ನು ಹೇಗೆ ಓದಬೇಕೆಂಬುದನ್ನು ನಿನ್ನ ಶಿಕ್ಷಕರು ನಿನಗೆ ಹೇಳಿಕೊಡುತ್ತಾರೆ. ನಾನಂತೂ ಓದಲು ಕಲಿಲೇ ಇಲ್ಲ." ಎಂದಳು.
        ಪಿಂಕಿ ಪ್ರತೀ ದಿನ ಶಾಲೆಗೆ ಹೋಗುತ್ತಿದ್ದಳು. ಆದರೆ, ಕ್ರಮೇಣ ಅವಳು ಮೌನಿಯಾದಳು. ಅವಳ ತಾಯಿ  ನೀನು ಶಾಲೆಯಲ್ಲಿ ಏನು ಮಾಡುತ್ತೀಯಾ? ಎಂದು ಕೇಳುತಿದ್ದರೆ, ಅದಕ್ಕೆ ಪಿಂಕಿ ಏನನ್ನೂ ಹೇಳುತ್ತಿರಲಿಲ್ಲ.  ಅವಳ ತಂದೆ  ನಿನ್ನ ಶಿಕ್ಷಕರು ನಿನಗೆ ಈ ಪುಸ್ತಕವನ್ನು ಓದಲು ತಿಳಿಸಿ ಕೊಟ್ಟರೇ? ನನಗೊಂದು ಕತೆ ಓದಿ ಹೇಳು ಎಂದರೂ ಪಿಂಕಿ ಏನೂ ಹೇಳದೇ ಮೌನಿಯಾಗಿರುತ್ತಿದ್ದಳು. ಕ್ರಮೇಣ ಅವಳು ಹೆಚ್ಚು ಹೆಚ್ಚು ಮೌನಿಯಾಗುವುದರೊಂದಿಗೆ ನಿರುತ್ಸಾಹದಿಂದಿರುತ್ತಿದ್ದಳು. ಅವಳು ಶಾಲೆಗೆ ಪ್ರತಿದಿನ ಹೋಗದೇ ಬಿಟ್ಟು ಬಿಟ್ಟು ಹೋಗುತ್ತಿದ್ದಳು. ಒಂದು ದಿನ ಶಾಲಾ ಶಿಕ್ಷಕಿ ಮತ್ತು ಪಿಂಕಿಯ ತಂದೆ ಹಳ್ಳಿಯ ಮಾರುಕಟ್ಟೆಯಲ್ಲಿ ಮುಖಾಮುಖಿಯಾದರು. ಪಿಂಕಿ ಶಾಲೆಗೆ ನಿರಂತರವಾಗಿ ಬರುತ್ತಿಲ್ಲ; ಏನಾದರೂ ಪ್ರಶ್ನೆಗಳನ್ನು ಕೇಳಿದರೆ ತಲೆಯನ್ನು ತಗ್ಗಿಸಿ ಮೌನವಾಗಿರುತ್ತಾಳೆ. ಎಂದರು.  ಅವಳ ತಂದೆಗೆ ಈ ಮಾತನ್ನು ಕೇಳಿ ಬೇಸರವಾಯಿತು. "ಯಾಕೆ ಪುಟ್ಟಿ ನೀನು ಶಾಲೆಗೆ ಹೋಗುವುದಿಲ್ಲ? ಶಿಕ್ಷಕರು ಏನಾದರೂ ಕೇಳಿದರೆ   ಏಕೆ ಉತ್ತರಿಸುವುದಿಲ್ಲ? ಯಾಕಮ್ಮಾ ಏನಾಯ್ತು ?" ಎಂದು ಪಿಂಕಿಯನ್ನು ಕೇಳಿದರು. "ಮೇಡಂ ಹೇಳುವುದು ನನಗೆ ಅರ್ಥವಾಗುವುದಿಲ್ಲ; ನಾನು ಪುಸ್ತಕದಲ್ಲಿರುವ ಚಿತ್ರಗಳನ್ನು ಮಾತ್ರ ನೋಡುತ್ತಿರುತ್ತೇನೆ, ಮೇಡಂ ಪುಸ್ತಕ ಓದಿದರೆ  ನನಗೆ ಏನೂ ಅರ್ಥವಾಗುತ್ತಿಲ್ಲ. " ಎಂದಳು ಪಿಂಕಿ. ಅವಳ ತಂದೆಗೆ ಅರ್ಥವಾಯಿತು. ಶಿಕ್ಷಕರು ಶಾಲೆಯಲ್ಲಿ ಒರಿಯಾ ಭಾಷೆಯನ್ನು ಮಾತನಾಡುತ್ತಾರೆ ಅದು ನನ್ನ ಪಿಂಕಿಗೆ ಅರ್ಥವಾಗುತ್ತಿಲ್ಲ. ಪಿಂಕಿಯ ತಂದೆಗೆ ತನ್ನ ಶಾಲಾದಿನಗಳು ನೆನಪಾದವು; ಅವನು ಸಹ ಶಾಲೆಯಲ್ಲಿರುವ ಬೋಧನಾ ಭಾಷೆಯ ಅದೇ ಕಾರಣಗಳಿಂದ ಶಾಲೆಯನ್ನು ಬಿಟ್ಟಿದನು. ಶಾಲೆಯಲ್ಲಿ ಬಳಸುತ್ತಿರುವ ಭಾಷೆ ಸೌರಾ ಆಗಿರಲಿಲ್ಲ. ಕೆಲವು ದಿನಗಳ ನಂತರ ಪಿಂಕಿಯೂ  ಶಾಲೆಗೆ ಹೋಗುವುದನ್ನು ಬಿಟ್ಟಳು.
              ಇದು ಕೇವಲ ಪಿಂಕಿ ಮತ್ತು ಅವಳ ತಂದೆಗೆ ಸಂಬಂಧಪಟ್ಟ ಸಮಸ್ಯೆ ಅಲ್ಲ. ಮಿಲಿಯಾಂತರ ಮಕ್ಕಳು ಶಾಲೆಗಳಲ್ಲಿ ತಾವು ಮಾತನಾಡಬಲ್ಲ, ಪ್ರಾಣಿ ಪಕ್ಷಿಗಳನ್ನು ಹೆಸರಿನಿಂದ ಗುರುತಿಸಬಲ್ಲ, ತನ್ನ ಸಮುದಾಯದವರೊಂದಿಗೆ ಮಾತನಾಡಬಲ್ಲ ಭಾಷೆಯನ್ನು ಕಡೆಗಣಿಸಿ ತಮಗೆ ಗೊತ್ತಿಲ್ಲದ ಭಾಷೆಯನ್ನು ಅವರ ಕಲಿಕೆಯಲ್ಲಿ ಒತ್ತಾಯದಿಂದ ಹೇರುವುದರಿಂದ ಬೇಸತ್ತು ಶಾಲೆಯಿಂದ ಹೊರಬಂದಿರುತ್ತಾರೆ. ಮಗುವಿನ ಮೊದಲ ಭಾಷೆ ಅವಳ ಮೊತ್ತ ಮೊದಲ ಸ್ವಸ್ವರೂಪ  ಅಥವಾ ಸ್ವವ್ಯಕ್ತಿತ್ವವಾಗಿರುತ್ತದೆ. ಅದು ಅವಳ ಬಾಲ್ಯದ ಎಲ್ಲಾ ಅನುಭವಗಳು, ಕಲಿಕೆಗಳು, ತನ್ನ ಗೆಳತಿಯರು, ಹಿರಿಯರೊಂದಿಗಿನ ಅವಳ ಸಂಬಂಧ, ಅವಳ ತಿಳಿವಳಿಕೆ ಮತ್ತು ತನ್ನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವಿಧಾನವಾಗಿರುತ್ತದೆ. ಈ ಭಾಷೆ ಅವಳಿಗೆ ತನ್ನ ಮನೆ, ಕುಟುಂಬ, ಸಮುದಾಯ ಮತ್ತು ಸಾಮಾಜಿಕ ಜಗತ್ತಿನಲ್ಲಿ ವ್ಯವಹರಿಸಲು ಬೇಕಾದ ಸಾಮರ್ಥ್ಯವನ್ನು ಅವಳಿಗೆ ಕೊಡುತ್ತದೆ. ಆದರೆ, ಒಮ್ಮೆ ಅವಳು ಶಾಲೆಗೆ ಸೇರಿದರೆ ಎಲ್ಲವೂ ಬದಲಾಗುತ್ತದೆ. ಶಾಲೆಯೇನೋ ಅವಳಿಗೋಸ್ಕರ ತನ್ನ ಬಾಗಿಲನ್ನು ತೆರೆದರೂ ಅವಳ ಮತ್ತು ಶಾಲಾ ತರಗತಿಯ ನಡುವೆ ಕಣ್ಣಿಗೆ ಕಾಣದ  ಹಾಗೂ ದಾಟಿಹೋಗಲಾಗದ ಕೋಟೆಯೊಂದು ಇರುತ್ತದೆ. ಇದ್ದಕ್ಕಿಂದ್ದಂತೆ ಅವಳ ಆಡು ಭಾಷೆಯು  ಶಾಲಾ ಬೋಧನಾ ಭಾಷೆಯ ಮುಂದೆ ಏನೂ ಪ್ರಯೋಜನವಿಲ್ಲ ಎನಿಸಿಕೊಂಡು ಅವಮಾನಕ್ಕೆ ಈಡಾಗುತ್ತದೆ. ಇದರಿಂದ ಇದ್ದಕ್ಕಿದ್ದಂತೆ ಅವಳಲ್ಲಿರುವ ಜ್ಞಾನ, ಅನುಭವಗಳು, ಸಂಪನ್ಮೂಲಗಳು ಮೌಲ್ಯಹೀನವಾಗುತ್ತವೆ. ಇದರ ಪರಿಣಾಮವಾಗಿ ತಾನು ಸಂಪತ್ತು ಎಂದುಕೊಂಡಿದ್ದ ಅವಳ ಮಾತೃಭಾಷೆ ಅವಳಿಗೊಂದು ಹೊರೆಯಾಗಿ ಬಿಡುತ್ತದೆ. ಶಾಲೆಯ ಶಿಕ್ಷಣ ಮಾಧ್ಯಮದ ಭಾಷೆ ಅವಳಿಗೆ ಅಪರಿಚಿತ ಭಾಷೆ, ಅದಕ್ಕೂ ಅವಳ ಅನುಭವ, ಜ್ಞಾನ ಮತ್ತು ಸಾಮಾಜಿಕ ಜೀವನಕ್ಕೂ ಏನೇನೂ ಸಂಬಂಧ ಇರುವುದಿಲ್ಲ. ಅವಳ ಸ್ವಂತ ವ್ಯಕ್ತಿತ್ವವನ್ನು ಕಡೆಗಣಿಸುವ ಅವಳ ಅನುಭವದಿಂದ ಆವಳನ್ನು ದೂರ ಮಾಡುವ ಹೊಸ ಭಾಷೆಯನ್ನು ಆಕೆ ಹೇಗೆ ನಿಭಾಯಿಸಬಲ್ಲಳು., ಇಂತಹ ಹಲವಾರು ಮಕ್ಕಳು ಶಾಲೆಯಲ್ಲಿರುವ ಅಪರಿಚಿತ ಭಾಷೆಯ ಹೊರೆಯಿಂದ ಶಾಲೆಯಿಂದ ದೂರವಿದ್ದಾರೆ. ಇದರಲ್ಲಿ ಆಶ್ಚರ್ಯಪಡುವ ಸಂಗತಿಯೇನಿಲ್ಲ.
 
      ಇಂದಿನ ಜಗತ್ತಿನಲ್ಲಿ ಅದರಲ್ಲೂ ಬಹುಭಾಷಾ ದೇಶಗಳಾದ ಅಂದರೆ ನಮ್ಮಂತಹ ದೇಶಗಳಲ್ಲಿ, ಒಂದು ಭಾಷೆ ಕಲಿಕೆ ಸಾಕಾಗುವುದಿಲ್ಲ ಎಂಬುದೇನೋ ನಿಜ; ಶಾಲಾ ಕಲಿಕೆಯು ಬಹು ಭಾಷೆಗಳನ್ನು ಒಳಗೊಂಡಿರಲೇ ಬೇಕು. ಮಾತೃ ಭಾಷೆ, ಪ್ರಾಂತೀಯ ಭಾಷೆ ಅಂದರೆ, ತಮಿಳ್, ಪಂಜಾಬಿ ಮತ್ತು ಬಂಗಾಲಿಯಂತಹ ಪ್ರಾಂತೀಯ ಭಾಷೆಗಳು, ರಾಷ್ಟ್ರ ಮಟ್ಟದ ಸಂಪರ್ಕ ಭಾಷೆ ಅಂದರೆ ಹಿಂದಿ ಮತ್ತು ಅಂತಾರಾಷ್ಟ್ರೀಯ ಭಾಷೆ ಇಂಗ್ಲೀಷ್. ಆದರೆ, ಶಾಲೆಗಳಲ್ಲಿ ಮಕ್ಕಳು ತನಗೆ ಈಗಾಗಲೇ ಗೊತ್ತಿರುವ ಭಾಷೆಯನ್ನು ಏಕೆ ಕಲಿಯಬೇಕು? ಬಾಲ್ಯದಲ್ಲಿಯೇ ಇನ್ನೊಂದು ಪ್ರಮುಖ ಭಾಷೆಯನ್ನು ಏಕೆ ಕಲಿಯಬಾರದು? ಮಕ್ಕಳಿಗೆ ಮಾತೃ ಭಾಷೆಯು ಬೇಕೇ ಬೇಕು ಏಕೆಂದರೆ ಶಾಲೆಯಲ್ಲಿ ಚೆನ್ನಾಗಿ ಕಲಿಯಲು ಬೇಕಾದ ಬುನಾದಿ ಜ್ಞಾನವನ್ನು ಅದರಲ್ಲಿ ಸಂಗ್ರಹಿಸಿಡಲಾಗಿರುತ್ತದೆ. ಈ ಭಾಷೆ ಅವರನ್ನು ಶಾಲೆಗೆ ಹೋಗಿ ಕಲಿಯಲು ಸಿದ್ಧ ಪಡಿಸುತ್ತದೆ. ಆದರೆ ಅದೇ ಸಮಯದಲ್ಲಿ, ಅವರು  ತಮ್ಮ  ಭಾಷಾ ಕೌಶಲ್ಯಗಳನ್ನು ಇನ್ನೂ ಅಭಿವೃದ್ಧಿ ಪಡಿಸಿಕೊಳ್ಳಬೇಕು. ಮಕ್ಕಳೇನೋ ತಮ್ಮ ಆಡು ಭಾಷೆಯಲ್ಲಿ ಚೆನ್ನಾಗಿ ಮಾತಾಡ ಬಲ್ಲವರಾದರೂ, ಅದು ಪ್ರಾಥಮಿಕ ಹಂತದಲ್ಲಿ ತನ್ನ ಮನೆ ಮತ್ತು ಸಮುದಾಯದ  ನಿಕಟ ಪರಿಸರಗಳಲ್ಲಿ ಸಾಮಾಜಿಕ ಮತ್ತು ವ್ಯಕ್ತಿಗತ ಮಾತುಕತೆಗೆ ಉಪಯೋಗವಾಗುವಂತದ್ದು.
 
ಆದರೆ  ಶಾಲಾ ಕಲಿಕೆ, , ಸಂಕೀರ್ಣ ಮತ್ತು ಅಮೂರ್ತವಾದ ಪರಿಕಲ್ಪನೆಯನ್ನು ಒಳಗೊಂಡಿರುತ್ತದೆ, ಮತ್ತು ಭಾಷೆಯನ್ನು ಈ ಪರಿಕಲ್ಪನೆಗಳಲ್ಲಿ ಪ್ರಭುತ್ವವನ್ನು ಗಳಿಸುವುದಕ್ಕಾಗಿ, ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವುದಕ್ಕಾಗಿ, ತನ್ನದೇ ಚಿಂತನಾಶಕ್ತಿಯನ್ನು  ಕ್ರಮಗೊಳಿಸುವುದಕ್ಕಾಗಿ ಮತ್ತು ಚಿಂತನಾವಸ್ತುವಾಗಿ ಭಾಷೆ ಕುರಿತು ಚಿಂತಿಸುವುದಕ್ಕಾಗಿ ಬಳಸಲಾಗುತ್ತದೆ. ಶಾಲಾಶಿಕ್ಷಣ ಮತ್ತು ಪ್ರಾಥಮಿಕ ಅಕ್ಷರಾಭ್ಯಾಸ ಮಕ್ಕಳ ಭಾಷಾ ಬಳಕೆಯನ್ನು  ಸಾಮಾಜಿಕವಾಗಿ ಮತ್ತು ಸಮಯಸಂದರ್ಭಗಳಲ್ಲಿ ಬಳಸುವುದರಿಂದ ಮುಂದಕ್ಕೆ   ಹೆಚ್ಚಿನ ಕ್ರಮಬದ್ಧವಾದ  ಆಲೋಚನೆ ,ವಿಷಯ ಗ್ರಹಣೆ ಮತ್ತು ಶೈಕ್ಷಣಿಕ ಕಲಿಕೆಯ ಕಡೆಗೆ ಕೊಂಡೊಯ್ಯುತ್ತದೆ.  ಮಕ್ಕಳ  ಮೊದಲ ಆಡು ಭಾಷೆ ಈ ವಿಷಯ ಗ್ರಹಣಾ  ಮತ್ತು ಶೈಕ್ಷಣಿಕ ಕಲಿಕೆಯ ಹಂತಕ್ಕೆ ಏರಬೇಕು. ಶೈಕ್ಷಣಿಕ ಸಾಧನೆಯನ್ನು ಮಾಡಲು ಅದೂ ಅಲ್ಲದೇ ಬೇರೆ ಭಾಷೆಯನ್ನು ಕಲಿಯಲು ಬೇಕಾದ  ಭಾಷೆಯನ್ನು ಕುರಿತು ಚಿಂತಿಸುವ ಸಾಮರ್ಥ್ಯ ಬೆಳೆಯಲೇಬೇಕು.
 
ಶಾಲೆಗೆ ಪ್ರವೇಶಿಸಿದ ನಂತರ, ಬುಡಕಟ್ಟು ಸಮುದಾಯದ ಮತ್ತು ಭಾಷಾ ಅಲ್ಪಸಂಖ್ಯಾತರ ಮಕ್ಕಳು ತಮಗೆ ಎನೇನೂ ಪರಿಚಯವಿರದ ಪ್ರಬಲ ಬೋಧನಾ ಭಾಷೆಯ ಹೊರೆ ಹೊರಬೇಕಾಗುತ್ತದೆ. ಇದಲ್ಲದೆ ಅವರಿಗೆ ಪಾಠ ಮಾಡಿದ ವಿಷಯ ಅರ್ಥವಾಗುವುದಿಲ್ಲ ಪರಿಣಾಮವಾಗಿ ನಪಾಸಾಗುತ್ತಾರೆ.  ಶಾಲೆಯಲ್ಲಿ ಬಳಸುವ  ಪ್ರಬಲ ಭಾಷೆ ಮಗುವಿಗೆ  ಭಾಷಾ ಸಾಮರ್ಥ್ಯವನ್ನು ಸಾಮಾನ್ಯ ವ್ಯಕ್ತಿಗತ ಸಂಭಾಷಣೆಗಿಂತ ಹೆಚ್ಚೇನೂ ಬೆಳಸುವುದಿಲ್ಲ ಅಗತ್ಯವಿರುವ ಸಾಮಾನ್ಯ  ಭಾಷಾ ಕೌಶಲ ಮತ್ತು ಮಾತೃ ಭಾಷೆಯ ಮೇಲೆಯೂ ಇದು ದುಷ್ಪರಿಣಾಮ ಬೀರುತ್ತದೆ ಅಥವಾ ಕಲಿತದ್ದನ್ನು ಮರೆಸುತ್ತದೆ; ಮಗು ಶಾಲೆಯಲ್ಲಿ ಬಳಸುವ ಪ್ರಬಲ ಭಾಷೆಯನ್ನು ಕಲಿಯುವುದರಿಂದ ಮಗುವಿನಲ್ಲಿರುವ ಮಾತೃ ಭಾಷಾ ಕೌಶಲ್ಯಗಳು ದಿನೇದಿನೇ ನಶಿಸಿ ಹೋಗುತ್ತವೆ. ಒಂದು ಭಾಷೆಯಲ್ಲಿ ಮೂಲಭೂತ  ಪರಸ್ಪರ ಸಂಭಾಷಣಾ  ಕೌಶಲ್ಯಗಳು  ಬೆಳೆಯಲು ಎರಡರಿಂದ ಮೂರು ವರ್ಷಗಳು ಬೇಕಾಗುತ್ತವೆ, ಇನ್ನು ವಿಷಯ ಗ್ರಹಣಾ ಮತ್ತು ಶೈಕ್ಷಣಿಕ ಭಾಷಾ ಕೌಶಲ್ಯಗಳು ಬೆಳೆಯಲು  ನಿಧಾನವಾಗಿ ಅಂದರೆ ಆರರಿಂದ ಎಂಟು ವರ್ಷಗಳು ಬೇಕಾಗುತ್ತವೆ. ಆದುದರಿಂದ, ಮಕ್ಕಳು ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದಕ್ಕೆ ಸಹಾಯ ಮಾಡುವುದಕ್ಕೆ ಮಾತ್ರವಲ್ಲದೆ  ಭಾಷೆಯನ್ನು  ಉನ್ನತ ಮಟ್ಟದ ಚಿಂತನೆಗೆ ಬಳಸಲು, ಸಮಸ್ಯಾ ಪರಿಹಾರ ಮಾಡಿಕೊಳ್ಳಲು, ಬಹು ಭಾಷಾ ಕುಶಲತೆ ಗಳಿಸಲು ಅನುವಾಗುವಂತೆ ಮಕ್ಕಳಿಗೆ ಅವರವರ ಮಾತೃ ಭಾಷೆಯನ್ನು ಬಾಲ್ಯದ ಶಿಕ್ಷಣ ಮತ್ತು ಔಪಚಾರಿಕ ಶಿಕ್ಷಣವನ್ನು ನೀಡಲು ಶಿಕ್ಷಣದಲ್ಲಿ  ಕನಿಷ್ಠ ಆರು ವರ್ಷ ಉಪಯೋಗಿಸಲೇಬೇಕು. ವಾಸ್ತವವಾಗಿ ಮಾತೃಭಾಷಾ ಶಿಕ್ಷಣವು ಮುಂದೆ ಕಲಿಯುವ ಭಾಷೆಗಳಿಗೆ ಯಾವುದೇ ಹೊರೆಯಾಗದಂತೆ ನಡೆದುಹೋಗುತ್ತದೆ. ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಸಂಭಾಷಣೆ ಮತ್ತು ಸಾಮಾಜಿಕ ಮಾತುಕತೆಗಳನ್ನು ಅನೇಕ ಭಾಷೆಗಳಲ್ಲಿ ಬಲು ಬೇಗ ಕಲಿತುಕೊಳ್ಳುತ್ತಾರಾದರೂ ಅವರ ಮಾತೃಭಾಷೆಯಲ್ಲಿ ಪ್ರಾರಂಭಿಕ ಸಾಮಾಜಿಕ ಬಳಕೆಯನ್ನೂ ಮೀರಿದ ಕೌಶಲ್ಯವನ್ನು ಕಲಿತಿದ್ದರೆ ಬಲು ಬೇಗನೆ ಇತರ ಭಾಷೆಗಳಲ್ಲೂ ಉನ್ನತಮಟ್ಟದ ಓದುಬರಹ ಮತ್ತು ಶೈಕ್ಷಣಿಕ ಕೌಶಲ್ಯಗಳನ್ನು ಕಲಿತುಕೊಳ್ಳುತ್ತಾರೆ.ಇದೇ ಮಾತೃಭಾಷೆ ಆಧಾರಿತ ಶಿಕ್ಷಣಕ್ಕೆ ಮೂಲಭೂತ ತತ್ವ.
 ಮಕ್ಕಳು ಪ್ರಾಥಮಿಕ ಶಾಲಾ ಹಂತಕ್ಕೆ ಸೇರುವಾಗ  ಅವರ ಮನಸ್ಸು ಕಾಲಿ ಸ್ಲೇಟಿನಂತಿರುವುದಿಲ್ಲ, ಬದಲಿಗೆ  ಶ್ರೀಮಂತ ಜ್ಞಾನ ಭಂಡಾರ, ಮಾತೃ ಭಾಷಾ ಜ್ಞಾನ, ಬಾಲ್ಯದ ಅನುಭವ ಮತ್ತು ತಿಳಿವಳಿಕೆಯನ್ನು ಹೊಂದಿರುತ್ತಾರೆ.ಇವೇ ಪ್ರಾಥಮಿಕ ಶಾಲೆಯಲ್ಲಿ ಅವರ  ಭಾಷೆ ಬೆಳವಣಿಗೆ, ಓದುಬರಹದ ಬೆಳವಣಿಗೆ  ಮತ್ತು ಲೆಕ್ಕದ ಪರಿಕಲ್ಪನೆ ಗ್ರಹಿಸಲು ಮತ್ತು  ಪರಿಸರದ ಅರಿವಿನ ಬೆಳವಣಿಗೆಗೆ ಅಗತ್ಯವಿರುವ   ಮೂಲ ಸಂಪನ್ಮೂಲ. ಅನೌಪಚಾರಿಕ ಸಂಸ್ಕೃತಿಯ ಅನುಭವದೊಂದಿಗೆ ತನ್ನ ಬಾಲ್ಯ ವ್ಯವಸ್ಥೆಯಿಂದ ಔಪಚಾರಿಕ ಶಿಕ್ಷಣ ವ್ಯವಸ್ಥೆಯ ಕಡೆಗೆ ಪದಾರ್ಪಣ ಮಾಡುವುದು ಪ್ರತಿಯೊಂದು ಮಗುವಿಗೂ ದೊಡ್ಡ ಸವಾಲು. ಶಾಲೆ ಮತ್ತು ಮನೆಯ ನಡುವಿನ ಅಂತರ ಕೇವಲ ದೈಹಿಕವಾಗಿ ಕ್ರಮಿಸುವ ದೂರವಲ್ಲ. ಅದು ಶಾಲಾ ಕಲಿಕೆಗೆ ಅಗತ್ಯವಿರುವ ಗ್ರಹಣ ಶಕ್ತಿಯ, ಸಂಕಲ್ಪ ಶಕ್ತಿಯ ಮತ್ತು ಸಾಮಾಜಿಕ ಸಿದ್ಧತೆಯ ಮನೋವೈಜ್ಞಾನಿಕ ಅಂತರವಾಗಿದೆ.  ಆದ್ದರಿಂದ, ಪದ್ಧತಿ ಶಿಕ್ಷಣದ ಪ್ರಯೋಜನಗಳು ದೊರಕಬೇಕಾದರೆ ಶಾಲೆಗೆ ಸೇರುವ ಮೊದಲ; ಅಂದರೆ, ಎರಡರಿಂದ ಆರನೇ ವಯಸ್ಸಿನ ಮಕ್ಕಳಿಗೆ ಮನೋವೈಜ್ಞಾನಿಕ, ದೈಹಿಕ, ಸಾಮಾಜಿಕ ಮತ್ತು ಬೌದ್ಧಿಕ ಸನ್ನದ್ದತೆ ಅಗತ್ಯವಿರುತ್ತದೆ.  ಪುಟಾಣಿ ಮಕ್ಕಳ ಶಿಕ್ಷಣದ ಉದ್ದೇಶವೇ  ಇಂತಹ ಒಂದು  ಸನ್ನದ್ಧತೆಯನ್ನು ಬೆಳಸುವುದು. ಇದರಲ್ಲಿ ಭಾಷೆ ಪ್ರಮುಖ ಪಾತ್ರವನ್ನು ವಹಿಸುತ್ತದೆ.
 
ಪುಟಾಣಿ ಮಕ್ಕಳ ಶಿಕ್ಷಣವು ಮಕ್ಕಳ ಭಾಷೆಯನ್ನು ಸಾಮಾಜಿಕ ಮಾತುಕತೆಯ ಕೌಶಲ್ಯದಿಂದ ಆಲೋಚನೆ ಮಾಡುವ ಮತ್ತು ಪರಿಣಾಮಕಾರಿಯಾಗಿ ತರಗತಿಯಲ್ಲಿ ಪಾಠ ಕಲಿಯುವ ಹಂತಕ್ಕೆ ಬೆಳಸುವುದಕ್ಕೆ ಒಂದು ಸಂಪರ್ಕ ಸೇತುವಾಗಿರುತ್ತದೆ. 
ಕೇಂದ್ರ ಸರ್ಕಾರದ ಸಚಿವ ಸಂಪುಟವು ೨೦ ಸೆಪ್ಟಂಬರ್ ೨೦೧೩ ರಲ್ಲಿ ರಾಷ್ಟ್ರೀಯ ಪುಟ್ಟ ಮಕ್ಕಳ ಪಾಲನೆ ಮತ್ತು ಶಿಕ್ಷಣ (National Early Childhood Care And Education (ECCE))(National Early Childhood Care And Education (ECCE)) ಕಾರ್ಯನೀತಿಯನ್ನು ಅನುಮೋದಿಸಿತು. ಮಗುವಿನ ಸಂಪೂರ್ಣ ಬೆಳವಣಿಗೆ ಮತ್ತು ಗುಣಾತ್ಮಕ ಶಿಕ್ಷಣದಲ್ಲಿ ಸಮಾನ ಅವಕಾಶ ಕಲ್ಪಿಸಲು ಸೂಕ್ತ ಸಿದ್ಧತೆಯಾಗಿ ಶಿಕ್ಷಣದಲ್ಲಿ ಮಾತೃ ಭಾಷೆಯನ್ನು ಕಡ್ಡಾಯಗೊಳಿಸಿತು. ಆರು ವರ್ಷದ ಒಳಗಿನ ಸುಮಾರು ೧೬೦ ದಶಲಕ್ಷ ಮಕ್ಕಳಲ್ಲಿ,  ಹಣ ನೀಡಬಲ್ಲ ತಂದೆತಾಯಿಯರ ೪೫ ದಶಲಕ್ಷ ಮಕ್ಕಳು ಖಾಸಗೀ ಶಿಕ್ಷಣ ಸಂಸ್ಥೆಯಡಿಯಲ್ಲಿ ಶಿಶುವಿಹಾರ ಶಿಕ್ಷಣ ಪಡೆಯುತ್ತಿದ್ದಾರೆ. ೭೫ ದಶಲಕ್ಷ ಮಕ್ಕಳು ರಾಷ್ಟ್ರೀಯ ಪುಟ್ಟ ಮಕ್ಕಳ ಪಾಲನೆ ಮತ್ತು ಶಿಕ್ಷಣ (National Early Childhood Care And Education (ECCE))ನೀತಿಯಡಿ ಸರಕಾರ ಯೋಜನೆಯಾದ ಮಕ್ಕಳ ಸಮಗ್ರ  ಬೆಳೆವಣಿಗೆ ಕಾರ್ಯಕ್ರಮದ  ಅಡಿ ಅಂಗನವಾಡಿಯಂತಹ ಸಂಸ್ಥೆಗಳಲ್ಲಿ  ಶಿಕ್ಷಣ ಪಡೆಯುತ್ತಿದ್ದಾರೆ. ಉಳಿದ ೪೦ ದಶಲಕ್ಷ ಮಕ್ಕಳಿಗೆ ರಾಷ್ಟ್ರೀಯ ಪುಟ್ಟ ಮಕ್ಕಳ ಪಾಲನೆ ಮತ್ತು ಶಿಕ್ಷಣ (National Early Childhood Care And Education (ECCE))ಅಡಿಯಲ್ಲಿ ಯಾವುದೇ ಅವಕಾಶಗಳು ದೊರೆಯುತ್ತಿಲ್ಲ. ಹೀಗೆ, ಪುಟ್ಟ ಮಕ್ಕಳಾಗಿರುವಾಗಲೇ ಮಾನವ ಸಂಪನ್ಮೂಲ ಮತ್ತು ಸಾಮರ್ಥ್ಯದ ಬೆಳವಣಿಗೆಯ ಅವಕಾಶ ಕಲ್ಪಿಸುವುದರಲ್ಲೇ ಅನ್ಯಾಯವಾದ ತಾರತಮ್ಯ ನಡೆಯುತ್ತಿದೆ. ಆಶಾದಾಯಕವೆಂದರೆ, ರಾಷ್ಟ್ರೀಯ ಪುಟ್ಟ ಮಕ್ಕಳ ಪಾಲನೆ ಮತ್ತು ಶಿಕ್ಷಣ (National Early Childhood Care And Education (ECCE))ರ ಕರಡು ನಿಯಮಾವಳಿಯು ಕನಿಷ್ಠ ಪ್ರಮಾಣದಲ್ಲಾದರೂ ಅಂಥ ತಾರತಮ್ಯವನ್ನು ಪರಿಣಾಮಕಾರಿಯಾಗಿ ಬಗೆಹರಿಸುವ ಸಾಧ್ಯತೆಗಳಿವೆ. ಕರಡು ಕಾರ್ಯನೀತಿಯ  ಕಲಂ ೫.೨.೪  ಹೇಳುವುದೇನೆಂದರೆ, (ECCE)  ಈ ಕಾರ್ಯಕ್ರಮದ ಅಡಿಯಲ್ಲಿ ಮಗುವಿನ ಮಾತೃ ಭಾಷೆ ಮತ್ತು ಮನೆಯ ಭಾಷೆ ಇಲ್ಲಿನ  ಸಂಭಾಷಣೆ ಮತ್ತು ಪರಸ್ಪರದ ಮಾತುಕತೆಯ ಪ್ರಾಥಮಿಕ ಭಾಷೆಯಾಗಿರುತ್ತದೆ. ಅಲ್ಲದೇ ಮಕ್ಕಳಿಗೆ ಈ ಪುಟ್ಟ ವಯಸ್ಸಿನಲ್ಲಿ ಅನೇಕ ಭಾಷೆಯನ್ನು ಕಲಿಯುವ ಸಾಮರ್ಥ್ಯವು ಇರುವುದನ್ನು ಗಮನದಲ್ಲಿಟ್ಟುಕೊಂಡು ; ರಾಷ್ಟ್ರೀಯ, ಪ್ರಾಂತೀಯ ಮತ್ತು ಇಂಗ್ಲೀಷ್ ಭಾಷೆಯ ಪರಿಚಯವನ್ನು ಮಾತುಕತೆಗಳ ಮೂಲಕ  ಅವರಿಗೆ ಒದಗಿಸುವ ಬಗ್ಗೆ ಸಹ ಆಲೋಚನೆ ನಡೆಸಲಾಗುವುದು.  ಆದ್ದುದರಿಂದ ರಾಷ್ಟ್ರೀಯ ಪುಟ್ಟ ಮಕ್ಕಳ ಪಾಲನೆ ಮತ್ತು ಶಿಕ್ಷಣ (National Early Childhood Care And Education (ECCE))ಕಾರ್ಯನೀತಿಯು ಮಕ್ಕಳಲ್ಲಿ ವಿಚಾರ ಶಕ್ತಿ, ತಾರ್ಕಿಕ ಶಕ್ತಿ ಮತ್ತು ವಿಷಯ ಗ್ರಹಣೆ ಮತ್ತು ಪಾಠಪ್ರವಚನ ಕಲಿಕೆಯ ಬೆಳವಣಿಗೆಯಲ್ಲಿ ಮಾತೃ ಭಾಷೆಯ ಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ಸ್ವೀಕರಿಸುತ್ತದೆ.
 
ಹೀಗೆಯೇ ಒಂದು ಸಿದ್ಧ ಸಂಶೋಧನೆಯ ಪ್ರಕಾರ ಅನೇಕ ಭಾಷೆ ಕಲಿತ ಮಕ್ಕಳು ಒಂದೇ ಭಾಷೆ ಕಲಿತ ಮಕ್ಕಳಿಗಿಂತ ಬುದ್ದಿವಂತಿಕೆಯಲ್ಲಿ ಮತ್ತು ಸೃಜನಾತ್ಮಕತೆಯಲ್ಲಿ ಮುಂದುವರಿದಿರುತ್ತಾರೆ ಎಂಬುದನ್ನೂ ಗುರುತಿಸುತ್ತದೆ. ಆದರೆ, ಇಲ್ಲಿ ಸಮಸ್ಯೆಯಿರುವುದು ಬಹುಭಾಷೆಯನ್ನು ಬಳೆಸುವುದರಲ್ಲಲ್ಲ; ಬದಲಿಗೆ ಪುಟ್ಟ ಮಕ್ಕಳ ಶಿಕ್ಷಣವನ್ನು ಮಾತೃ ಭಾಷೆಯ ಬದಲಿಗೆ ಅನ್ಯ-ಅಪರಿಚಿತ ಭಾಷೆಯಲ್ಲಿ ನೀಡುವುದು. 
ದುರದುಷ್ಟವಶಾತ್, ಆಧುನಿಕ ತಂದೆತಾಯಿಯರ ಸಮಸ್ಯೆಯೇನೆಂದರೆ, ತಂದೆ-ತಾಯಂದಿರು ಮಗುವಿಗೆ ಚಿಕ್ಕ ವಯಸ್ಸಿನಲ್ಲೇ ಇಂಗ್ಲೀಷನ್ನು ಪರಿಚಯಿಸುವುದಕ್ಕೆ ಅತಿ ಉತ್ಸುಕರಾಗಿರುವುದು. ಇಂಗ್ಲೀಷ್    ಭಾಷೆ ಅವರ ಪಾಲಿಗೆ ಅಧಿಕಾರ ಶಕ್ತಿಯಿರುವ ಭಾಷೆ, ಪ್ರಗತಿ ಮತ್ತು ಆರ್ಥಿಕ ಸದವಕಾಶಗಳಿಗೆ ಹೆಬ್ಬಾಗಿಲು. ಹೀಗಾಗಿ ಆದಷ್ಟು ಚಿಕ್ಕ ವಯಸ್ಸಿನಲ್ಲೇ ಮನೆಯ ವಾತವರಣದಲ್ಲಿಯೇ ಮತ್ತು ಶಾಲಾ ಶಿಕ್ಷಣದಲ್ಲಿ ಇಂಗ್ಲೀಷ ಶಿಕ್ಷಣವನ್ನು ತರಬೇಕೆನ್ನುವ ಗೀಳಿಗೆ ಬಲಿಯಾಗಿದ್ದಾರೆ. ಈ ಗೀಳು ಎಷ್ಟು ಅತಿರೇಕಕ್ಕೆ ಹೋಗಿದೆಯೆಂದರೆ ಪುರಾಣದ ಅಭಿಮನ್ಯು ತನ್ನ ತಾಯಿಯ ಗರ್ಭದಲ್ಲಿರುವಾಗಲೇ ಯುದ್ಧನೀತಿಯನ್ನು ಕಲಿತಂತೆ; ಮಗುವಿಗೆ ತನ್ನ ತಾಯಿಯ ಗರ್ಭದಲ್ಲಿರುವಾಗಲೇ ಇಂಗ್ಲೀಷ ಭಾಷೆಯಲ್ಲಿ ಶಿಕ್ಷಣವನ್ನು ನಾವು ನೀಡುತ್ತೇವೆಂದು ಯಾರಾದರೂ ಜಾಹಿರಾತು ಹಾಕಿದರೆ ತಾಯಂದಿರು ಕ್ಯೂ ನಿಂತರೂ ನಿಂತರೇ. ಇಂಗ್ಲೀಷನ ಮೇಲಿರುವ  ಈ ಅತಿಯಾದ ವ್ಯಾಮೋಹ ಅಸಮಂಜಸ ಮತ್ತು ಆಧಾರಹೀನ ಅಂಶವಾಗಿದೆ. ಗುಣಾತ್ಮಕ ಶಿಕ್ಷಣ ನೀಡುವುದಕ್ಕೆ ಮತ್ತು ಇಂಗ್ಲೀಷ್ ಸೇರಿದಂತೆ ಇತರ ಅನ್ಯ ಭಾಷೆಯನ್ನು ಕಲಿಯುವುದಕ್ಕೆ ಮಾತೃಭಾಷೆಯು ರಾಜಮಾರ್ಗವಿದ್ದಂತೆ ಎಂಬ ಶೈಕ್ಷಣಿಕ ತತ್ವಕ್ಕೆ ತದ್ವಿರುದ್ಧವಾಗಿದೆ. ಆಧುನಿಕ ಅಭಿಮನ್ಯುಗಳಿಗೆ ಎಳೆಯ ವಯಸ್ಸಿನಲ್ಲೇ ಇಂಗ್ಲೀಷಿನ ಅಗತ್ಯವಿಲ್ಲ. ಅವರಿಗೆ ಬೇಕಾಗಿರುವುದು ಒಳ್ಳೆಯ ಲಾಲನೆ ಪಾಲನೆ, ಸಂಸ್ಕೃತಿ ಮತ್ತು ಮಾತೃಭಾಷಾಧಾರಿತ ಉತ್ತಮ ಗುಣಮಟ್ಟದ ಶಿಕ್ಷಣ ಮಾತ್ರ.
 
ಅಜಿತ್ ಮೊಹಿಂತೆ
 
18939 ನೊಂದಾಯಿತ ಬಳಕೆದಾರರು
7398 ಸಂಪನ್ಮೂಲಗಳು