ಸ್ವಯಂ ಸಂಪರ್ಕಿಸುವುದು.. ಸಮಾವೇಶನದ ಒಂದು ವಿಭಿನ್ನ ಮಾರ್ಗ - ಸರಳಾ ಮೋಹನ ರಾಜ್

ಸ್ವಯಂ ಸಂಪರ್ಕಿಸುವುದು.. ಸಮಾವೇಶನದ ಒಂದು ವಿಭಿನ್ನ ಮಾರ್ಗ - ಸರಳಾ ಮೋಹನ ರಾಜ್

ನಾವು ಕಲಿಸುವ ರೀತಿಯಿಂದ ಮಗುವಿಗೆ ಕಲಿಯುವುದು ಸಾಧ್ಯವಿಲ್ಲವಾದರೆ, ಬಹುಶ: ನಾವು ಕಲಿಸುವ ವಿಧಾನವನ್ನೇ ಬದಲಿಸಬೇಕಾಗುತ್ತದೆ. ಬಹು ಮಟ್ಟಿಗೆ ಇಗ್ನಾಸಿಯೋ ಎಸ್ಟ್ರಾಡಾ ನ ಈ ಮೇಲಿನ ಮಾತುಗಳು ಕಲಿಯುವುದು ಕಷ್ಟವೆಂದು ಪರದಾಡುವ ಮತ್ತು ಮುಖ್ಯವಾಹಿನಿ ಶಿಕ್ಷಣದ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗದ ವಿದ್ಯಾರ್ಥಿಗಳನ್ನು ತಲುಪುವುದಕ್ಕೆ ನಮಗೆ ಮಾರ್ಗದರ್ಶಿಯಾಗಿದೆ. ಶಿಕ್ಷಣದಲ್ಲಿ ಆಗಾಗ್ಗೆ ತಮ್ಮ ತರಗತಿಯ ಇತರ ಸಹಪಾಠಿಗಳ ಸಮಸಮಕ್ಕೆ ಕಲಿಯಲಾಗದವರು ತಮ್ಮ ಸಾಮರ್ಥ್ಯದ ಬಗ್ಗೆ ಕೀಳರಿಮೆ ಬೆಳಸಿಕೊಂಡು  ಆತ್ಮವಿಶ್ವಾಸ ಮತ್ತು ಆತ್ಮಗೌರವವನ್ನು ಕಳೆದುಕೊಳ್ಳುತ್ತಾರೆ.

ಈ ರೀತಿ ಕಲಿಯಲು ಕಷ್ಟಪಡುವ ೧೨ ರಿಂದ ೧೫ನೇ ವಯಸ್ಸಿನ (೭ರಿಂದ ೧೦ನೇ ತರಗತಿ) ವಿದ್ಯಾರ್ಥಿಗಳಿಗೆ ನೆರವಾಗುವುದಕ್ಕಾಗಿ ವಿದ್ಯಾನಿಕೇತನ ಶಾಲೆ  ಒಂದು ಪರ್ಯಾಯ ಅಧ್ಯಯನ ಒಂದು ವಿಭಾಗವನ್ನು ಒಂದು ಪರಿಹಾರವಾಗಿ ಪ್ರಾರಂಭಿಸಿದೆ - ಇದು ನಾವೆ ಸಮಾಜ ದೆಡೆಗೆ ಹೋಗಿ ಸಮಾಜಕ್ಕೆ ಕೊಡುಗೆ ನೀಡಲು ರೂಪಿಸಿದ ದಾರಿ. ಈ ನವ ಕಾರ್ಯಕ್ರಮವು ಕಳೆದ ೧೨ ವರ್ಷಗಳಿಂದ ನಮ್ಮ ಶಾಲೆಯ ಒಂದು ಭಾಗವಾಗಿದೆ.

ಕಲಿಕೆಯ ಸಮಸ್ಯೆಯನ್ನು ಹೊಂದಿರುವ ಹದಿಹರೆಯದ ವಿದ್ಯಾರ್ಥಿಗಳ ಅಗತ್ಯಗಳನ್ನು ಮನಗಂಡು ಅವರ ಸರ್ವತೋಮುಖ ಬೆಳವಣಿಗೆ, ಸಾಮಾಜಿಕ ಭಾವನಾತ್ಮಕ ಕಲಿಕೆ ಮತ್ತು ಆಧ್ಯಾತ್ಮಿಕ ಮತ್ತು ಮಾನಸಿಕ ಯೊಗಕ್ಷೇಮದ ಕಡೆಗೆ ಗಮನ ಕೊಡುತ್ತೇವೆ. ಯಾವುದೇ ಹದಿಹರೆಯದ ವಿದ್ಯಾರ್ಥಿಯೂ ತನಗೆ ಶೈಕ್ಷಣಿಕ ಪಠ್ಯಕ್ರಮವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ ಎಂಬ ಕಾರಣ ಮಾತ್ರದಿಂದಲೆ ಶಾಲಾ ಜೀವನದಿಂದ ವಂಚಿತರಾಗಬಾರದು. ಶಿಕ್ಷಕರಾದ ನಮಗೆ ವಿದ್ಯಾರ್ಥಿಗಳಿಂದ ನಿರೀಕ್ಷಿಸುವ ಶೈಕ್ಷಣಿಕ ಜ್ಞಾವನ್ನೂ ಮೀರಿ ಕೇವಲ ಶಾಲಾ ವಾತಾವರಣದ ಮೂಲಕ ಗಳಿಸುವ ಕಲಿಕೆಯ ಆಳವು  ಚೆನ್ನಾಗಿ ತಿಳಿದಿದೆ.

ಮುಖ್ಯವಾಹಿನಿ ಶೈಕ್ಷಣಿಕ ಪಠ್ಯಕ್ರಮಗಳ ನಿರೀಕ್ಷೆಗಳನ್ನು  ಪೂರೈಸಲು ಸಾಧ್ಯವಾಗದಂತಹ, ಅನ್ಯಥಾ ಶಾಲೆಯನ್ನು ಮಧ್ಯೆದಲ್ಲಿಯೇ ಬಿಡುವ ಅಥವಾ ಪದೇ ಪದೇ ಶೈಕ್ಷಣಿಕವಾಗಿ ನಪಾಸು ಆಗುವ ವಿದ್ಯಾರ್ಥಿಗಳಿಗೆ ಶಾಲಾ ವಾತಾವರಣವನ್ನು ಒದಗಿಸುವುದೇ ನಮ್ಮ ಉದ್ದೇಶ. ಅವರು ಎಂದಿನಂತೆಯೇ ಶಾಲೆಗೆ ಹೋಗುವಾಗಲೇ, ಮುಕ್ತ ಶಾಲಾ ವಿಷಯಗಳನ್ನು ಅಭ್ಯಸಿಸುತ್ತಾರೆ  ಜೊತೆಗೆ  ವಿವಿಧ ವಯೋಮಾನದವರೊಡನೆ ವ್ಯವಹರಿಸಲು ಅಗತ್ಯವಿರುವ ಸಾಮಾಜಿಕ ಕೌಶಲ್ಯಗಳನ್ನು ಕಲಿಯುತ್ತಾರೆ, ಸಮಾಲೋಚನೆಯ ಕೌಶಲ್ಯಗಳನ್ನು ಕಲಿಯುತ್ತಾರೆ, ಸಾಮಾಜಿಕ ವ್ಯತ್ಯಾಸಗಳು ಮತ್ತು ನಿರೀಕ್ಷೆಗಳನ್ನು ಕಲಿತು ಅರ್ಥಮಾಡಿಕೊಂಡು ಒಬ್ಬ ಜವಾಬ್ದಾರಿಯುಳ್ಳ ನಾಗರಿಕರಾಗುತ್ತಾರೆ. ಇಂತಹ ಕಲಿಕೆ ಬಹು ಮಟ್ಟಿಗೆ ಕೇವಲ ಬಹುಮುಖ ಕಲಿಕಾ ವಿಧಾನಗಳನ್ನೊಳಗೊಂಡಂಥ ಶಾಲಾ ವಾತಾವರಣದಲ್ಲಿ ಮಾತ್ರ ಸಾಧ್ಯವಾಗುತ್ತದೆ.


ಒಂದು ಮಗು ಆಂತರ್ಯದಲ್ಲಿ ತಾನು ಸುಭದ್ರ ವೆಂದುಕೊಂಡಾಗ, ತನಗೆ ಎಲ್ಲರೂ ಬೆಲೆ ಕೊಡುತ್ತಾರೆ ಮತ್ತು ತನ್ನನ್ನು ಇಷ್ಟಪಡುತ್ತಾರೆ ಎಂದುಕೊಂಡಾಗ ಮತ್ತು ಆತ್ಮವಿಶ್ವಾಸ  ಹಾಗು ಸ್ವಹಿರಿಮೆಯನ್ನು ಬೆಳೆಸಿಕೊಂಡಾಗ ಅದು ತಾನು ಅಂದುಕೊಂಡಿದ್ದುದಕ್ಕಿಂತ ಹೆಚ್ಚು ಸಾದಿಸಬಹುದು ಎನ್ನುವುದು ಸರ್ವ ಸಮ್ಮತ ಸತ್ಯ. ಇದನ್ನೇ ಮಕ್ಕಳು ಸಾಧಿಸಲು ನಾವು ನೆರವಾಗುತ್ತೇವೆ. ನಮ್ಮ ಶಾಲೆಯ ವಾತಾವರಣ ಅವರಿಗೆ ಸಾಮಾಜಿಕ ವರ್ತನೆ, ಭಾವನಾತ್ಮಕ ಬೆಳವಣಿಗೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಹಲವಾರು ಅವಕಾಶಗಳನ್ನು ಖಾತ್ರಿಗೊಳಿಸುತ್ತದೆ. ಅವರಲ್ಲಿ ಪ್ರತಿಯೊಬ್ಬರು ಅನನ್ಯರು ಮತ್ತು ವಿಶಿಷ್ಟ ಅಂತಃ ಸತ್ವವನ್ನುಳ್ಳವರಾಗಿದ್ದು ಅದನ್ನು ಬಹಿರಂಗಪಡಿಸಬೇಕಾಗಿದೆ ಎಂದು ನಾವು ನಂಬುತ್ತೇವೆ. ಅವರನ್ನು ತಮ್ಮ ಇಚ್ಚೆಯ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೋತ್ಸಾಹಿಸಲಾಗುತ್ತದೆ. ನಮ್ಮ ವಿದ್ಯಾರ್ಥಿಗಳನ್ನು ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಬಲವಾದ ಮತ್ತು ಸಮರ್ಥ ವ್ಯಕ್ತಿಯನ್ನಾಗಿಸುವ ದಿಶೆಯಲ್ಲ್ಲಿನಾವು ಕೆಲಸ ಮಾಡುತ್ತೇವೆ.

ಮುಖ್ಯವಾಹಿನಿ ವಿದ್ಯಾರ್ಥಿಗಳೊಂದಿಗೆ ಬೆಳಗ್ಗಿನ ಸಭೆ, ಸಾಮಾನ್ಯ ಆಟದ ಅವಧಿ, ಕ್ರೀಡಾ ದಿನ, ವಾರ್ಷಿಕೋತ್ಸವ ದಿನ, ಪದವಿ ಪ್ರದಾನ ದಿನಗಳಂತಹ ಸಮಯದಲ್ಲಿ ಇವರ ಸಂಭಾಷಣೆ ಮತ್ತು ಒಡನಾಟ ನಡೆಯುತ್ತದೆ. ಆದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅವರು ಖಂಡಿತವಾಗಿ ಕಿರಿದಾದ ತರಗತಿಯ ವಾತಾವರಣದಲ್ಲಿ, ಮುಕ್ತ ಶಾಲಾ ಪರೀಕ್ಷೆಗಳಿಗೆ ತಯಾರುಮಾಡುವಲ್ಲಿ ಮತ್ತು ತರಬೇತಿ ಕೊಡುವಲ್ಲಿ, ವ್ಯಕ್ತಿಗತ ಕಲಿಕೆಯ ಮುಂದುವರಿಕೆಯ ಅನುಕೂಲ ಪಡೆಯುತ್ತಾರೆ. ಮೂಲಸೌಕರ್ಯ ಅಥವಾ ಪಠ್ಯೇತರ ಚಟುವಟಿಕೆ ಅಥವಾ ಸಾಮಾಜಿಕ ಜೀವನದಂತಹ ಶಾಲಾ ವಾತಾವರಣದ ಎಲ್ಲಾ ಸೌಲಭ್ಯಗಳನ್ನು ಅನುಭವಿಸುವಂತೆ ಮಾಡುವುದರ ಜೊತೆ ಜೊತೆಗೆ ಅವರ ಪ್ರೌಢ ಶಿಕ್ಷಣವನ್ನು ಪೂರ್ತಿಗೊಳಿಸುವಂತೆ ಮಾಡುವುದು ನಮ್ಮ ಗುರಿಯಾಗಿರುತ್ತದೆ.
ಸಾಂಪ್ರದಾಯಿಕ ಶೈಕ್ಷಣಿಕ ಕಲಿಕೆಯ ಸಮಸ್ಯೆಯನ್ನು ಹೊಂದಿರುವಂತಹ ಮಕ್ಕಳ ತಂದೆ ತಾಯಂದರ ತಿಳುವಳಿಕೆಗಳು ಮತ್ತು ಅವರು ಅದನ್ನು ಅಂಗೀಕರಿಸುವುದು ಹೆಚ್ಚುತ್ತಿದ್ದಂತೆ ನಾವು ೭ನೇ ತರಗತಿಯನ್ನು ೧೨ ವರ್ಷದ ಮಕ್ಕಳಿಗಾಗಿ ಸೇರಿಸಿದ್ದೇವೆ. ನಾವು ಸದಾ ನಮ್ಮ ಮಕ್ಕಳು ಎದುರಿಸಬಹುದಾದ ಪ್ರಾಯೋಗಿಕ ಸಮಸ್ಯೆಗಳನ್ನು ಬಗೆಹರಿಸಲು ಹೊಸ ವಿಧಾನಗಳು ಮತ್ತು ಪರಿಹಾರದತ್ತ ಗಮನ ಹರಿಸುತ್ತೇವೆ. ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು ಶಿಕ್ಷಕರು/ಶಾಲೆಗಳನ್ನೊಳಗೊಂಡಂತಹ ಒಗ್ಗಟ್ಟಿನ ಕೆಲಸದಿಂದ ನಮ್ಮ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ತಲುಪಲು ಸಾಧ್ಯ ಎಂಬುದನ್ನು ನಾವು ಚೆನ್ನಾಗಿ ಮನಗಂಡಿದ್ದೇವೆ ಮತ್ತು ನಾವು ನಮ್ಮೊಂದಿಗಿದ್ದ ಶಾಲಾ ಅವಧಿಯಲ್ಲಿ ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಯ ಪ್ರತಿ ಹಂತದಲ್ಲೂ ಪೋಷಕರನ್ನೂ ಜೊತೆಗೆ ಸೇರಿಸಿಕೊಳ್ಳುತ್ತೇವೆ.

ನಮ್ಮ ವಿದ್ಯಾರ್ಥಿಗಳು ಹೇಗೆ ಆತ್ಮ ವಿಶ್ವಾಸ ಮತ್ತು ಸ್ವ-ಮೌಲ್ಯಮನಗಂಡು ಬೆಳೆಯುತ್ತಾರೆ?
ಪ್ರತಿ ಟರ್ಮ್‌ನಲ್ಲಿ ಒಮ್ಮೆ ನಮ್ಮ ವಿದ್ಯಾರ್ಥಿಗಳನ್ನು ೧೨೦೦ ವಿದ್ಯಾರ್ಥಿಗಳು ಮತ್ತು ೧೦೦ ಶಿಕ್ಷರನ್ನು ಒಳಗೊಂಡಂತಹ ಶಾಲಾ ಸಭೆಯಲ್ಲಿ ಪ್ರತಿಭೆಯನ್ನು ಪ್ರಸ್ತುತಪಡಿಸುವಂತೆ ಪ್ರೋತ್ಸಾಹಿಸಲಾಗುತ್ತದೆ. ಅವರಿಗೆ ಇಡೀ ಶಾಲೆಯ ಮುಂದೆ ತಮ್ಮ ಪ್ರತಿಭೆಯನ್ನು ತೋರಿಸಲು ಮತ್ತು ಸ್ವಾತಂತ್ರ ದಿನಾಚರಣೆಯ ಮತ್ತು ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯವಾಹಿನಿಯ ಸಹಪಾಠಿವಿದ್ಯಾರ್ಥಿಗಳೊಂದಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿಯೊಂದು ಪ್ರದರ್ಶನದ ನಂತರದ ತಾವೇನೋ ಸಾಧಿಸಿದೆವೆಂಬ ತೃಪ್ತಿ ಅವರಲ್ಲಿ ತಮ್ಮ ಸಾಮರ್ಥ್ಯದ ಬಗೆಗೆ ಹೆಮ್ಮೆಯನ್ನು ತುಂಬುತ್ತದೆ ಮತ್ತು ಇದು ಅವರ ಭಾವನಾತ್ಮಕ, ಸಾಮಾಜಿಕ ಮತ್ತು ಮಾನಸಿಕ ಮಟ್ಟದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಶೈಕ್ಷಣಿಕವಾಗಿ, ಸಾಂಪ್ರದಾಯಿಕ ಕಲಿಕೆಯ ತೊಂದರೆಯನ್ನು ಹೊಂದಿದಂತಹ ತಮ್ಮ ಸಹಪಾಠಿಗಳ ಜೊತೆಗೆ ಮುಕ್ತ ಶಾಲಾ ಪಠ್ಯಕ್ರಮವನ್ನು ಮುಂದುವರಿಸುವುದರಿಂದ ಅವರಿಗೆ ಸಮಾನ ಸ್ಫರ್ಧಾಕ್ಷೇತ್ರದಲ್ಲಿ ಕಾರ‍್ಯನಿರ್ವಹಿಸುತ್ತಿದ್ದೇವೆ ಎಂಬ ಭಾವನೆಯನ್ನು ನೀಡುತ್ತದೆ.
ನಮ್ಮ ಶಾಲಾ ವಾತಾವರಣ ಅವರ ಯಶಸ್ಸಿನ ಮೆಟ್ಟಿಲಾಗಿದ್ದು, ಇದು ಅವರಿಗೆ ಮಾಧ್ಯಮಿಕ ಶಿಕ್ಷಣವನ್ನು ಮುಗಿಸುವಲ್ಲಿ ಸಹಕರಿಸುತ್ತದೆ. ನಮ್ಮ ತೃಪ್ತಿ ಎಂದರೆ, ಸುಮಾರು ಶೇ. ೯೯ ವಿದ್ಯಾರ್ಥಿಗಳು ಮುಕ್ತ ಶಾಲಾ ಪದ್ಧತಿಯ ಮೂಲಕ ತಮ್ಮ ಹತ್ತನೇ ತರಗತಿಯನ್ನು ಮುಗಿಸುವ ಹೊತ್ತಿಗೆ ಶಿಕ್ಷಣದ ಮುಖ್ಯ ವಾಹಿನಿಗೆ ಮರಳುತ್ತಾರೆ. ನಮ್ಮಲ್ಲಿ ಬಂದ ನಂತರ ವಿದ್ಯಾರ್ಥಿಗಳು ಮುಂದಿಟ್ಟಂತಹ ಪ್ರತಿ ಹೆಜ್ಜೆ ಅವರ ಜೀವನದ ಮುಂದುವರಿಕೆಯಾಗಿದ್ದು ಇದು ನಮಗೆ ಸಂತೋಷ ಮತ್ತು ಹೆಮ್ಮೆಯನ್ನು ತಂದುಕೊಡುತ್ತದೆ.

ನಮ್ಮಲ್ಲಿ ಅಳವಡಿಸಿಕೊಂಡಿರುವಂತಹ ಸಮಾವೇಶಿ ಶಿಕ್ಷಣ ವ್ಯವಸ್ಥೆ ನಿಜ ಅರ್ಥದಲ್ಲಿ ಅಥವಾ ಬೇರೆಡೆ ಅಭ್ಯಾಸದಲ್ಲಿರುವಂತೆ ಭಿನ್ನವಾಗಿದ್ದರೂ ಸಹ ಇದು ನಮ್ಮ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಶಿಕ್ಷಕರಿಗೆ ಪಾರಿತೋಷಕದಂತಿದೆ. ಕಳೆದ ಹಲವಾರು ವರ್ಷಗಳಲ್ಲಿ ನಮ್ಮ ವಿದ್ಯಾರ್ಥಿಗಳನ್ನು ಪೋಷಿಸುವಲ್ಲಿ, ಬೆಂಬಲಿಸುವಲ್ಲಿ, ಮಾರ್ಗದರ್ಶನ ಮತ್ತು ತರಬೇತಿ ನೀಡುವಲ್ಲಿ ನಮ್ಮ ಅನುಭವ ಮತ್ತು ಕಲಿಕೆಯಿಂದ ತಿಳಿಯುವದೆಂದರೆ ಈ ತೆರನಾದ ಸಮಾವೇಶನ ಬಹುಷಃ ಅವರ ಸಾಮರ್ಥ್ಯವನ್ನು ಹೊರಬರುವಂತೆ ಮಾಡಬಲ್ಲದು.

ಸರಳಾ ಇವರು ಬೆಂಗಳೂರಿನ ವಿದ್ಯಾನಿಕೇತನ ಶಾಲೆಯ ಪರ್ಯಾಯ ಶಿಕ್ಷಣ ಪದ್ಧತಿಯ ಮುಖ್ಯ ಶಿಕ್ಷಕಿ ಮತ್ತು ಮಾರ್ಗದರ್ಶಕಿ. ಇವರನ್ನು saralamohanraj@yahoo.com ನಲ್ಲಿ ಸಂಪರ್ಕಿಸಬಹುದಾಗಿದೆ.

 

17903 ನೊಂದಾಯಿತ ಬಳಕೆದಾರರು
6745 ಸಂಪನ್ಮೂಲಗಳು