ಸ್ವಯಂ ಕಲಿಕೆಯ ಕಡೆಗೆ

ಸ್ವಯಂ-ವಿದ್ಯಾಭ್ಯಾಸ ಎಂದರೆ  ಯಾರೇ ಶಿಕ್ಷಕರಿಲ್ಲದೆ  ಅಥವಾ ಯಾವುದೇ ವಿದ್ಯಾಸಂಸ್ಥೆಯ ಮಾರ್ಗದರ್ಶನವಿಲ್ಲದೆ ವಿದ್ಯೆಕಲಿಯುವುದು. ಹಾಗೆಂದಾಕ್ಷಣ ಎಲ್ಲರಿಂದ ದೂರವಾಗಿ ಉಳಿದು ಎಲ್ಲಾ ವಿದ್ಯಾಭ್ಯಾಸವನ್ನು ಮಾಡಬೇಕು ಎಂದಲ್ಲ. ಸ್ವಯಂ-ಕಲಿಕೆಯ ಪ್ರಕ್ರಿಯೆಯು ಚಿಂತನಾಶೀಲ  ಬರವಣಿಗೆ ಚಟುವಟಿಕೆಗಳು, ಅಧ್ಯಯನದ ಗುಂಪುಗಳಲ್ಲಿ ಪಾಲ್ಗೊಳ್ಳುವಿಕೆ ಮತ್ತು ಅಗತ್ಯವಿರುವ ಮತ್ತು ಯಾವಾಗ ಬೇಕಾದರೂ ವಿವಿಧ ಸಂಪನ್ಮೂಲಗಳನ್ನು ಒಳಗೊಂಡಿರುವ ಇತರ ಸಂಭವನೀಯ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ವಿದ್ಯನ್ಮಾನ ಸಂವಾದ ಸಂಭಾಷಣೆಗಳಂತಹ  ವಿವಿಧ ಚಟುವಟಿಕೆಗಳನ್ನು ಒಳಗೊಂಡಿದೆ.

ಸ್ವಯಂ ವಿದ್ಯಾಭಾಸದ ಅಂಗವಾಗಿ‘ಕೆಲವಂ ಬಲ್ಲವರಿಂದ ಕಲ್ತು ‘ ಎಂಬಂತೆ  ಕಲಿಯುವ ವ್ಯಕ್ತಿಯು ಶಿಕ್ಷಕರು ಅಥವಾ ವಿಷಯ ತಿಳಿದ ವ್ಯಕ್ತಿಗಳೊಡನೆ ಕೇಳಿ ತಿಳಿದು ಕೊಳ್ಳುವುದು ಒಂದು ಅವಿಭಾಜ್ಯ ಭಾಗವೆಂದು ಪರಿಗಣಿಸಬಹುದು. ಕಲಿಯುವವರೊಂದಿಗೆ ಚರ್ಚೆಗಳ ಮೂಲಕ, ವಿಮರ್ಶಾತ್ಮಕ ಚಿಂತನೆಗೆ ಉತ್ತೇಜನ  ಮತ್ತು ಫಲಿತಾಂಶಗಳ ಮೌಲ್ಯಮಾಪನ, ಸಂಪನ್ಮೂಲಗಳನ್ನು ಪಡೆದುಕೊಳ್ಳಲು ಸಹಾಯ ಮಾಡುವುದು ಮತ್ತು ಇತರ ಸಂಭಾವ್ಯ ಮಾರ್ಗಗಳ ಮೂಲಕ  ಈ ಕೊಳ್ಕೊಡೆ ನಡೆಯಬಹುದು. ಸ್ವಯಂ ಕಲಿಕೆಯ ಪ್ರಮುಖ ಅಗತ್ಯತೆಗಳೆಂದರೆ , ವಿವಿಧ ಸಂದರ್ಭಗಳಲ್ಲಿ ನಿರ್ದಿಷ್ಟ ಅಗತ್ಯಗಳನ್ನು ಹೇಗೆ ಪೂರೈಸುವುದು ಎಂದು ತಿಳಿಯುವುದು, ಬಾಹ್ಯ ನೆರವು ಇಲ್ಲದೆಯೇ ಕಲಿಯುವುದು, ಮತ್ತು ಭವಿಷ್ಯಕ್ಕಾಗಿ ಸಿದ್ಧವಾಗುವುದು. ಸ್ವಯಂ-ಕಲಿಕೆಯ ಪ್ರಮುಖ ಪ್ರಯೋಜನವೆಂದರೆ ಅದುಕಲಿತ ಜ್ಞಾನ ಮತ್ತು ಕೌಶಲ್ಯಗಳೆರಡನ್ನು , ಒಂದು ಸನ್ನಿವೇಶದಿಂದ ಮತ್ತೊಂದಕ್ಕೆ ಹೆಚ್ಚು ಸ್ವತಂತ್ರವಾಗಿ ಮತ್ತು ಸಮರ್ಥವಾಗಿ ವರ್ಗಾಯಿಸಲು ಸಹಾಯ ಮಾಡುತ್ತದೆ. ಸ್ವಯಂ-ಕಲಿಕೆಗೆ ಬಾಲ್ಯದ ದಿನಗಳಿಂದ ವಿವಿಧ ಮುಕ್ತ ಕಲಿಕೆ ಕಾರ್ಯಕ್ರಮಗಳು, ಸಾಂಪ್ರದಾಯಿಕೇತರ ಶಿಕ್ಷಣ ಮತ್ತು ನಿರ್ದಿಷ್ಟ ಕಲಿಕೆಯ ಅಗತ್ಯತೆಗಳಿಗೆ ಮತ್ತು ಪರಿಸರಗಳಿಗೆ ಅನುಗುಣವಾಗಿರುವ ಇತರ ನವೀನ ಕಾರ್ಯಕ್ರಮಗಳ ಮೂಲಕ ಸೂಕ್ತವಾದ ಜನಪ್ರಿಯತೆ ಪಡೆಯಲು ಹೆಚ್ಚು ಮಹತ್ವ ನೀಡಬೇಕು.

ಸ್ವಯಂಶಿಕ್ಷಿತ ವ್ಯಕ್ತಿಯು ಔಪಚಾರಿಕ ಶಿಕ್ಷಣವನ್ನು ಹೊಂದಿರಬಹುದು ಅಥವಾ ಹೊಂದಿಲ್ಲದೇ ಇರಬಹುದು. ಒಬ್ಬ ಸ್ವಯಂಶಿಕ್ಷಿತ ವ್ಯಕ್ತಿಯು ತನ್ನ ಇಚ್ಛಾನುಸಾರ ವಿಷಯ, ಅಧ್ಯಯನ ಸಾಮಗ್ರಿಗಳು ಮತ್ತು ಅಧ್ಯಯನ ಮಾದರಿ ಮತ್ತು ಸಮಯವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಅವರ ಅಧ್ಯಯನವು ಔಪಚಾರಿಕ ಶಿಕ್ಷಣ ವ್ಯವಸ್ಥೆಗೆ ಪೂರಕ ಅಥವಾ ಪರ್ಯಾಯವಾಗಿರುತ್ತದೆ. ಇಂಥ ಸ್ವಯಂಶಿಕ್ಷಿತವ್ಯಕ್ತಿಗಳು ಅಥವಾ ಏಕಲವ್ಯಾಭ್ಯಾಸಿಗಳು  ಜಗತ್ತಿಗೆ ಹಲವಾರು ಗಮನಾರ್ಹ ಕೊಡುಗೆಗಳನ್ನು ಕೊಟ್ಟಿದ್ದಾರೆ. ನಾವು ಸ್ವಯಂ ಕಲಿಕೆಯ ಬಗ್ಗೆ ಮಾತನಾಡುವಾಗ, ಲಿಯೊನಾರ್ಡೊ ಡಾ ವಿನ್ಸಿ, ಚಾರ್ಲ್ಸ್ ಡಾರ್ವಿನ್, ಥಾಮಸ್ ಎಡಿಸನ್, ಮತ್ತು ಶ್ರೀನಿವಾಸ ರಾಮಾನುಜನ್  ಮಹಾ ಭಾರತದ  ಏಕಲವ್ಯ ಮೊದಲಾದ ಕೆಲವು ಪ್ರಸಿದ್ಧ ಸ್ವಯಂಶಿಕ್ಷಿತರ ಹೆಸರುಗಳು ನೆನಪಿಗೆ ಬರುತ್ತವೆ ಮತ್ತು ಮನುಕುಲಕ್ಕೆ ಅವರ ಅಪಾರ ಕೊಡುಗೆಗಳನ್ನು ಸ್ಮರಿಸುತ್ತೇವೆ. ಇಂದಿನ ಸಮಾಜದಲ್ಲಿ ಅನೇಕ ಸ್ವಯಂ-ಶಿಕ್ಷಿತರು  ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮೂಲಕ ,ಸಾಂಸ್ಕೃತಿಕ ಸಮೃದ್ಧೀಕರಣ ಮತ್ತು ಅನೇಕ ಇತರ ವಿಧಾನಗಳಲ್ಲಿ ಗಮನಾರ್ಹವಾಗಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ.

ಸ್ವಯಂ-ನಿರ್ದೇಶಿತ ಕಲಿಕೆಯು ಒಂದು ವಿಧದ ಶಿಕ್ಷಣ ಕಾರ್ಯ ತಂತ್ರ ಅಥವಾ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಪ್ರಕ್ರಿಯೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಪ್ರಕ್ರಿಯೆಯಾಗಿದೆ. ಶಿಕ್ಷಕರಿಂದ ಮಾರ್ಗದರ್ಶನದೊಂದಿಗೆ, ಈ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಅಥವಾ ಗುಂಪಿನಲ್ಲಿ ತಾವು ಏನನ್ನು ಮತ್ತು ಹೇಗೆ ಕಲಿಯಬೇಕು  ಎಂಬುದನ್ನು ನಿರ್ಧರಿಸುತ್ತಾರೆ, ಅಂದರೆ ಇಲ್ಲಿನ  ಒಟ್ಟಾರೆ ಪರಿಕಲ್ಪನೆಯು ವಿದ್ಯಾರ್ಥಿಗಳ  ಈ ಕಲಿಕೆಯು  ತಮ್ಮದ್ದು ಎಂಬ ಮಮತೆ ಬೆಳಸಿಕೊಳ್ಳುವುದಾಗಿದೆ.

ಸ್ವಯಂ ಕಲಿಕೆಯಲ್ಲಿ, ವಿದ್ಯಾರ್ಥಿಗಳು ತಮ್ಮ ಕಲಿಕೆಯ ಜವಾಬ್ದಾರಿ ಯನ್ನು ತಾವೇ ತೆಗೆದುಕೊಳ್ಳುತ್ತಾರೆ.

ವಾಸ್ತವವಾಗಿ, ವಿದ್ಯಾರ್ಥಿಗಳು  ತಾವೇನೇನು ಕಲಿಯಬೇಕಾಗಿದೆ ಎಂಬುದನ್ನು ಕಂಡುಕೊಳ್ಳುತ್ತಾರೆ, ತಮ್ಮ ಕಲಿಕೆಯ ಗುರಿಗಳನ್ನು ರೂಪಿಸಲು, ಕಲಿಕೆಯ ಸಂಪನ್ಮೂಲಗಳನ್ನು ಗುರುತಿಸಲು, ಪರಿಣಾಮಕಾರಿ ಕಲಿಕೆಯ ತಂತ್ರಗಳನ್ನು ಆಯ್ಕೆಮಾಡಿ ಕಾರ್ಯಗತಗೊಳಿಸಲು ಮತ್ತು ಸ್ವಯಂ-ನಿರ್ದೇಶಿತ ಕಲಿಕೆಯ ಪರಿಸರದಲ್ಲಿ ಕಲಿಕೆಯ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡಲು ಉದ್ಯುಕ್ತರಾಗುತ್ತಾರೆ. ಸ್ವಯಂ-ನಿರ್ದೇಶಿತ ಕಲಿಕೆಯ ಪ್ರಕ್ರಿಯೆಯಲ್ಲಿ ಹಲವಾರು ಪ್ರಯೋಜನಗಳಿರುವುದರಿಂದ ಸ್ವಯಂ-ನಿರ್ದೇಶಿತ ಕಲಿಕೆಗೆ ಬೆಂಬಲ ನೀಡಲು ಸಕಾಲಿಕ ಮತ್ತು ಪರಿಣಾಮಕಾರಿ ವಿಧಾನಗಳನ್ನು ಕಂಡುಕೊಳ್ಳಲು ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ಯಾವಾಗಲೂ ಪ್ರಯತ್ನಿಸಬೇಕು. ಇಂತಹ ಪ್ರಕ್ರಿಯೆಯ ಮೂಲಕ, ಕಲಿಕೆಯ ಪ್ರಯತ್ನಕ್ಕೆ ಸಂಬಂಧಿಸಿದ ಹಲವಾರು ನಿರ್ಧಾರಗಳ ಬಗ್ಗೆ ಹೆಚ್ಚು ಹೆಚ್ಚಿನ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ವಿದ್ಯಾರ್ಥಿಗಳು ಸಶಕ್ತರಾಗುತ್ತಾರೆ

ಸ್ವಯಂ-ಕಲಿಕೆ ಕೌಶಲ್ಯಗಳು ಔಪಚಾರಿಕ ಶಿಕ್ಷಣದ ನಂತರವೂ ಯಶಸ್ವಿಯಾಗಿ ಸಾಧನೆಗಳನ್ನು ಮಾಡಲು ನೆರವಾಗುತ್ತದೆ, ಇದು ವ್ಯಕ್ತಿಗಳು ವಿಭಿನ್ನ ಮಾರ್ಗಗಳ ಚಿಂತನೆಗಳನ್ನು ನಡೆಸಲು ಮತ್ತು ಯಾರ ಸಹಾಯವಿಲ್ಲದೆಯೇ ತಮ್ಮ ಕಷ್ಟಕರ ಸಂದರ್ಭಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಇದು ಆತ್ಮ ವಿಶ್ವಾಸವನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತದೆ, ವ್ಯಕ್ತಿಯು ಹೆಚ್ಚು ಜವಾಬ್ದಾರಿ ಯಿಂದ ಮತ್ತು ಸ್ವಯಂ-ಶಿಸ್ತಿನಿಂದ ರುವುದನ್ನು ಕಲಿಸುತ್ತದೆ ಮತ್ತು ಸಮಸ್ಯೆಗಳನ್ನು ಸ್ವಯಂ-ಸಾಮರ್ಥ್ಯಗಳಿಂದ ನಿವಾರಿಸಲು ಕಲಿಸುತ್ತದೆ. ನಾವು ಇಂದು ಪ್ರಜೆಗಳ ಅರ್ಹತೆಯನ್ನು ಅವಲಂಬಿಸಿರುವ ಸಮಾಜದಲ್ಲಿ ವಾಸಿಸುತ್ತಿದ್ದೇವೆ.  ವ್ಯಕ್ತಿಯೊಬ್ಬಶ್ರೀಮಂತ ಜ್ಞಾನ ಪಡೆಯಲು ಬಯಸಿದರೆ, ಅವಶ್ಯಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಮತ್ತು ಸಮಾಜಕ್ಕೆ ಮಹತ್ತರವಾದ ಕೊಡುಗೆ ನೀಡಬೇಕೆಂದು ಬಯಸಿದರೆ ಸ್ವಯಂ-ಕಲಿಕೆಯು ಹಾಗು ಸಮಾಜದ ಗಣ್ಯ ಪ್ರಜೆಯಾಗಲು ಬಯಸಿದರೆ ಗಮನಾರ್ಹವಾಗಿ ಸಹಾಯ ಮಾಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

ಹೇಮೆನ್ ದತ್ತಾ, ಜನವರಿ 10, 2018

18461 ನೊಂದಾಯಿತ ಬಳಕೆದಾರರು
7223 ಸಂಪನ್ಮೂಲಗಳು