ಸೆಸಮೆ ವರ್ಕ್ ಶಾಪ್ ಇಂಡಿಯಾ

ಗಲಿ ಗಲಿ ಸಿಮ್ ಸಿಮ್ ಮತ್ತು ಇಂತಹವೇ ಅನೇಕ ಕಾರ್ಯಕ್ರಮಗಳ  ಹಿಂದೆ ಇರುವ ಸಂಸ್ಥೆಯಾದ ಸೆಸಮೆ ವರ್ಕ್ಷಾಪ್ ಇಂಡಿಯಾ,  ಮಕ್ಕಳು ತಮ್ಮ ಅತ್ಯುನ್ನತ ಸಾಮರ್ಥ್ಯ  ತಲುಪಲು ಮತ್ತು ಶಾಲಾ ಮತ್ತು ಜೀವನದ ತಯಾರಿಗೆ ಸಹಾಯ ಮಾಡಲು ಮಾಧ್ಯಮದ ಶಕ್ತಿಯನ್ನು ಬಳಸುತ್ತದೆ. 0-8 ವಯಸ್ಸಿನ ಮಕ್ಕಳನ್ನು ತಲುಪಲು ದೂರದರ್ಶನ, ರೇಡಿಯೋ, ಸಮುದಾಯ ರೇಡಿಯೋ, ಮುದ್ರಣ, ಡಿಜಿಟಲ್ ಮತ್ತು ಮನೆಬಾಗಲಿಗೇ ಸೇವೆ (ಔಟ್ರೀಚ್ )ಮೂಲಕ ಉತ್ತಮ ಗುಣಮಟ್ಟದ ಮತ್ತು ಆಕರ್ಷಕವಾದ,  ವಿಷಯ ಅಭಿವೃದ್ಧಿ ಮಾಡಿ ಪ್ರಸಾರ ಮಾಡುತ್ತಾರೆ.

ತಮ್ಮ ಕಾರ್ಯಕ್ರಮವನ್ನು ಮಕ್ಕಳ ಒಟ್ಟಾರೆ ವಿಷಯ ಗ್ರಹಣೆ ಸಾಮರ್ಥ್ಯ, ಸಾಮಾಜಿಕ-ಭಾವನಾತ್ಮಕ ಮತ್ತು ದೈಹಿಕ ಬೆಳವಣಿಗೆ ಉತ್ತೇಜಿಸುವ  ಸಲುವಾಗಿ  ಹಾಗೆಯೇ ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ ಬೆಳಗುವ ಸದುದ್ದೇಶದೊಂದಿಗೆ ಭಾರತೀಯ ಮಕ್ಕಳ  ಮೂಲ ಶೈಕ್ಷಣಿಕ ಮತ್ತು ಜೀವನ ಕೌಶಲ್ಯ ಬೆಳವಣಿಗೆಗೆ ಸಹಾಯ ಮಾಡುವ  ಗುರಿ ಹೊಂದಿದ್ದಾರೆ. ಗಲಿ ಗಲಿ ಸಿಮ್ ಸಿಮ್, ಎಂಬ ಅವರ ದೂರದರ್ಶನ ಸರಣಿ ಯನ್ನು, 2006 ರಲ್ಲಿ ಅದರ ಚೊಚ್ಚಲ ಪ್ರದರ್ಶನದಿಂದ ಆರಂಭಗೊಂಡು ರಾಷ್ಟ್ರೀಯ ಕೇಬಲ್ ಚಾನಲ್-ಪೊಗೊ ಮತ್ತು ಕಾರ್ಟೂನ್ ನೆಟ್ವರ್ಕ್ ಹಾಗು ರಾಷ್ಟ್ರೀಯ ಸಾರ್ವಜನಿಕ ಕ ದೂರದರ್ಶನ ಪ್ರಸಾರ ದಲ್ಲಿ  ಪ್ರತಿ ವರ್ಷ 10 ದಶಲಕ್ಷ ಮಕ್ಕಳು ವೀಕ್ಷಿಸಿದ್ದಾರೆ . ಅದರ ಶೈಕ್ಷಣಿಕ ಸಂದೇಶಗಳನ್ನು ಆಕಾಶವಾಣಿ ಮತ್ತು ಸಮುದಾಯ ರೇಡಿಯೋ ಕೇಂದ್ರಗಳು, ವ್ಯಾಪಕ ಸಮುದಾಯದ ಔಟ್ರೀಚ್ ಮೂಲಕ , ಮತ್ತು ಸೆಲ್ ಫೋನ್ ಹಾಗು ಇಂಟರ್ನೆಟ್ ಹೊಸ ಮತ್ತು ಉದಯೋನ್ಮುಖ ಮಾಧ್ಯಮ ಅ್ಯಪ್ ಮೂಲಕ ಪ್ರಸಾರಮಾಡಲಾಗುವುದು. ಇತ್ತೀಚೆಗೆ ಅವರು  ಶಾಲಾ ಶಿಕ್ಷಣ ರಂಗಕ್ಕೆ ಹೆಜ್ಜೆ ಇಟ್ಟಿದ್ದಾರೆ  ಇದೇ ಸೆಸೇಮ್  ಬೀದೀ ಪುಟಾಣಿ ಮಕ್ಕಳ ಶಿಕ್ಷಣ.  ತಮ್ಮ  ಪಠ್ಯಕ್ರಮ ಮತ್ತು  ಬೋಧನಾ ವಿಧಾನದಲ್ಲಿ ಕೈಗಳಿಂದ ಮಾಡಿಕಲಿಯುವ ಯೋಜನೆ ಆಧಾರಿತ ಕಲಿಕೆ, ನಿರ್ಣಾಯಕ ಚಿಂತನೆ ಮತ್ತು ಸಮಸ್ಯೆ ಪರಿಹರಿಸುವ ಸೃಜನಾತ್ಮಕ ವಿಧಾನಗಳನ್ನು ಬಳಸುತ್ತಾರೆ, ಹೀಗೆ  ಜೀವನಪರ್ಯಂತ ಕಲಿಕೆಯನ್ನು  ಉತ್ತೇಜಿಸುತ್ತಾರೆ. ಹೆಚ್ಚಿನ ವಿವರಗಳಿಗಾಗಿ, ಭೇಟಿ ನೀಡಿ

 

http://www.sesameworkshopindia.org/ ಅಥವಾ www.galliga

18938 ನೊಂದಾಯಿತ ಬಳಕೆದಾರರು
7394 ಸಂಪನ್ಮೂಲಗಳು